IMDb: ಈ ವರ್ಷದ ಜನಪ್ರಿಯ, ಬಹುನಿರೀಕ್ಷಿತ ಸಿನಿಮಾಗಳು ಯಾವುವು? ಅಗ್ರ ಪಟ್ಟಿಯಲ್ಲಿ ಕನ್ನಡ ಸಿನಿಮಾಗಳಿವೆಯೇ ನೋಡಿ
IMDb ranks: ಜಗತ್ತಿನ ಪ್ರಮುಖ ಸಿನಿಮಾ ಡೈರೆಕ್ಟರಿ ಐಎಂಡಿಬಿಯು 2024ರ ಜನಪ್ರಿಯ ಸಿನಿಮಾಗಳು ಮತ್ತು ಮುಂಬರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸಿದೆ. ಪುಷ್ಪ 2, ಕಲ್ಕಿ 2898 ಎಡಿ ಸೇರಿದಂತೆ ಹಲವು ಸಿನಿಮಾಗಳು ಲಿಸ್ಟ್‌ನಲ್ಲಿವೆ.

ಬೆಂಗಳೂರು: 2014ರಲ್ಲಿ ಭಾರತದ ಹಲವು ಸಿನಿಮಾಗಳು ವಾಣಿಜ್ಯವಾಗಿ ದೊಡ್ಡಮಟ್ಟದ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್‌ನ ದಾಖಲೆಯನ್ನೂ ಮಾಡಿವೆ. ಈ ವರ್ಷದ ಜನಪ್ರಿಯ ಸಿನಿಮಾಗಳಲ್ಲಿ ಪುಷ್ಪ ದಿ ರೂಲ್ ಪಾರ್ಟ್ 2 ಇದೆ. ಇದು 2024ರ ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಐಎಂಡಿಬಿ ಗ್ರಾಹಕರು ನೀಡಿರುವ ರೇಟಿಂಗ್ ಆಧಾರದಲ್ಲಿ ಕಲ್ಕಿ 2898 ಎಡಿಯು ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿತ್ತು.
ಭಾರತೀಯ ಸಿನಿಮಾಗಳಿಗೆ ಐಎಂಡಿಬಿ ರೇಟಿಂಗ್
ಇಂಟರ್‌ನೆಟ್ ಮೂವಿ ಡೇಟಾಬೇಸ್ ತಾಣವಾದ ಐಎಂಡಿಬಿಯಲ್ಲಿ ಸಿನಿಮಾಗಳು, ಟಿವಿಶೋಗಳು ಮತ್ತು ಸೆಲೆಬ್ರಿಟಿಗಳ ಕುರಿತು ಸಾಕಷ್ಟು ಮಾಹಿತಿ ದೊರಕುತ್ತದೆ. ಇದೀಗ ಇಲ್ಲಿಯವರೆಗಿನ 2024ರ ಜನಪ್ರಿಯ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೇ ಸಮಯದಲ್ಲಿ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಈ ಸಿನಿಮಾಗಳಿಗೆ ಸಂಬಂಧಪಟ್ಟ ಪುಟಗಳಿಗೆ ಹೆಚ್ಚು ಪೇಜ್‌ವ್ಯೂಸ್ ಬಂದಿರುವ ಆಧಾರದಲ್ಲಿ ಈ ರೇಟಿಂಗ್ ಬಿಡುಗಡೆ ಮಾಡಲಾಗಿದೆ.
ನಾಗ್ ಅಶ್ವಿನಿ ಅವರ ಕಲ್ಕಿ ಸಿನಿಮಾ
ಕಲ್ಕಿ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ಅವರು ಐಎಂಡಿಬಿ ರೇಟಿಂಗ್‌ಗೆ ಖುಷಿ ವ್ಯಕ್ತಪಡಿಸಿದ್ದಾರೆ. "ಐಎಂಡಿಬಿ ಪಟ್ಟಿಯಲ್ಲಿ ಕಲ್ಕಿ 2898 ಎಡಿ ಸಿನಿಮಾ ಸ್ಥಾನ ಪಡೆದಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಜಗತ್ತಿನಾದ್ಯಂತ ಇರುವ ವೀಕ್ಷಕರ ಪ್ರೀತಿಯನ್ನು ಇದು ಸೂಚಿಸುತ್ತದೆ. ಬೌಂಡರಿಯಾಚೆ ಆಲೋಚಿಸಲು ನಮಗಿದು ಪ್ರೇರೇಪಣೆ ನೀಡುತ್ತದೆ" ಎಂದು ನಾಗ್ ಅಶ್ವಿನ್ ಹೇಳಿದ್ದಾರೆ.
ಮಂಜುಮ್ಮೆಲ್ ಬಾಯ್ಸ್ ಬಾಯ್ಸ್ ನಿರ್ದೇಶಕರಿಗೂ ಖುಷಿ
ಈ ವರ್ಷದ ಜನಪ್ರಿಯ ಚಿತ್ರಗಳಲ್ಲಿ ಎರಡನೇ ಸ್ಥಾನ ಪಡೆದ ಮಂಜುಮ್ಮೇಲ್ ಬಾಯ್ಸ್ ಕುರಿತು ನಿರ್ದೇಶಕ ಚಿದಂಬರಂಗೂ ಖುಷಿಯಾಗಿದೆ. ಐಎಂಡಿಬಿ ಸಂದರ್ಶನಲ್ಲಿ ಅವರು ಹೀಗೆ ಹೇಳಿದ್ದಾರೆ. "ಮಂಜುಮ್ಮೆಲ್ ಬಾಯ್ಸ್ ಸ್ನೇಹದ ಕಥೆ ಮತ್ತು ಬದುಕುಳಿಯುವ ಥ್ರಿಲ್ಲರ್ ಕಥೆಯಾಗಿದೆ. ಈ ಚಿತ್ರವು ಭಾಷೆಯ ಅಡೆತಡೆಗಳು ಇಲ್ಲದೆ ಎಲ್ಲರಿಗೂ ತಲುಪುತ್ತದೆ. ಇದು ಜಾಗತಿಕ ಪ್ರೇಕ್ಷಕರಿಗೂ ಇಷ್ಟವಾಗಿದೆ. ಈ ಚಿತ್ರವು ನನ್ನ ಹೃದಯಕ್ಕೆ ಹತ್ತಿರವಾಗಿದೆ. ಇದೀಗ ಐಎಂಡಿಬಿ ರಾಂಕಿಂಗ್‌ನಲ್ಲಿ ಸ್ಥಾನ ಪಡೆದಿರುವುದಕ್ಕೆ ಖುಷಿಯಾಗಿದೆ. ಈ ಚಿತ್ರದ ಮ್ಯಾಜಿಕ್‌ಗೆ ಜೀವ ತುಂಬಿರುವ ಚಿತ್ರತಂಡದ ಶ್ರಮಕ್ಕೆ ಈ ಸಾಧನೆ ಸಾಕ್ಷಿಯಾಗಿದೆ" ಎಂದು ಅವರು ಹೇಳಿದ್ದಾರೆ.
2024ರ ಜನಪ್ರಿಯ ಭಾರತೀಯ ಸಿನಿಮಾಗಳು (ಇಲ್ಲಿಯವರೆಗೆ)
ಕಲ್ಕಿ 2898 ಎಡಿ
ಫೈಟರ್
ಹನು ಮಾನ್
ಶೈತಾನ್
ಲಾಪತಾ ಲೇಡಿಸ್
ಆರ್ಟಿಕಲ್ 370
ಪ್ರೇಮಲು
ಆವೇಶಮ್
ಮುಂಜ್ಯ
ಈ ಎಲ್ಲಾ ಸಿನಿಮಾಗಳು ಜನವರಿ 1, 2024ರಿಂದ ಜುಲೈ 10, 2024ರ ನಡುವೆ ಬಿಡುಗಡೆಯಾಗಿರುವವು. ಐಎಂಡಿಬಿಯ ಗ್ರಾಹಕರು ನೀಡಿರುವ ಓಟ್ ಅಥವಾ ಪೇಜ್‌ವ್ಯೂಸ್ ಆಧಾರದಲ್ಲಿ ಈ ರಾಂಕಿಂಗ್ ಪಟ್ಟಿ ತಯಾರಿಸಲಾಗಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳು
ಪುಷ್ಪಾ: ರೂಲ್- ಭಾಗ 2
ದೇವರ ಭಾಗ 1
ವೆಲ್ ಕಂ ಟು ಜಂಗಲ್
ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್
ಕಂಗುವ
ಸಿಂಗಮ್ ಅಗೈನ್
ಭೂಲ್ ಭುಲೈಯಾ 3
ಅರೋನ್ ಮೇನ್ ಕಹನ್ ದುಮ್ ಥಾ
ಸ್ತ್ರೀ 2
ಈ ವರ್ಷದ ಜನಪ್ರಿಯ ಮತ್ತು ಬಹುನಿರೀಕ್ಷಿತ ಅಗ್ರ 10 ಸಿನಿಮಾಗಳಲ್ಲಿ ಯಾವುದೇ ಕನ್ನಡ ಸಿನಿಮಾಗಳು ಸ್ಥಾನ ಪಡೆದಿಲ್ಲ.