ಸಿನಿಮಾ ಆಗೋಕೆ ಲಾಯಕ್ಕಲ್ಲದ ಕಥೆಯನ್ನೇ ಜಿದ್ದಿಗೆ ಬಿದ್ದು ಮಾಡಿದ್ರು ರಾಜ್‌ಕುಮಾರ್‌! ಮುಂದಾಗಿದ್ದು ಮಾತ್ರ ಇತಿಹಾಸ, ಯಾವುದಾ ಚಿತ್ರ?
ಕನ್ನಡ ಸುದ್ದಿ  /  ಮನರಂಜನೆ  /  ಸಿನಿಮಾ ಆಗೋಕೆ ಲಾಯಕ್ಕಲ್ಲದ ಕಥೆಯನ್ನೇ ಜಿದ್ದಿಗೆ ಬಿದ್ದು ಮಾಡಿದ್ರು ರಾಜ್‌ಕುಮಾರ್‌! ಮುಂದಾಗಿದ್ದು ಮಾತ್ರ ಇತಿಹಾಸ, ಯಾವುದಾ ಚಿತ್ರ?

ಸಿನಿಮಾ ಆಗೋಕೆ ಲಾಯಕ್ಕಲ್ಲದ ಕಥೆಯನ್ನೇ ಜಿದ್ದಿಗೆ ಬಿದ್ದು ಮಾಡಿದ್ರು ರಾಜ್‌ಕುಮಾರ್‌! ಮುಂದಾಗಿದ್ದು ಮಾತ್ರ ಇತಿಹಾಸ, ಯಾವುದಾ ಚಿತ್ರ?

ಆಗಿನ ಕಾಲದಲ್ಲಿ ಕಾದಂಬರಿ ಆಧರಿಸಿದ ಸಿನಿಮಾಗಳು ಹೆಚ್ಚೆಚ್ಚು ನಿರ್ಮಾಣವಾಗುತ್ತಿದ್ದವು. ಆ ಪೈಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಆಯ್ದುಕೊಂಡ ಕಥೆಗೆ ಕೆಲವರು, ಇದು ಸಿನಿಮಾ ಆಗಲು ಲಾಯಕ್ಕಿಲ್ಲ ಎಂದಿದ್ದರು. ಕೊನೆಗೆ ಅದೇ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದ ರಾಜ್‌ಕುಮಾರ್‌, ಅದೇ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿ ಗೆದ್ದಿದ್ದರು.

ಸಿನಿಮಾ ಆಗೋಕೆ ಲಾಯಕ್ಕಲ್ಲದ ಕಥೆಯನ್ನೇ ಜಿದ್ದಿಗೆ ಬಿದ್ದು ಮಾಡಿದ್ರು ರಾಜ್‌ಕುಮಾರ್‌! ಮುಂದಾಗಿದ್ದು ಮಾತ್ರ ಇತಿಹಾಸ, ಯಾವುದಾ ಚಿತ್ರ?
ಸಿನಿಮಾ ಆಗೋಕೆ ಲಾಯಕ್ಕಲ್ಲದ ಕಥೆಯನ್ನೇ ಜಿದ್ದಿಗೆ ಬಿದ್ದು ಮಾಡಿದ್ರು ರಾಜ್‌ಕುಮಾರ್‌! ಮುಂದಾಗಿದ್ದು ಮಾತ್ರ ಇತಿಹಾಸ, ಯಾವುದಾ ಚಿತ್ರ?

Dr Rajkumar: ಅಣ್ಣಾವ್ರ 100 ನೇ ಚಿತ್ರವಾದ ಭಾಗ್ಯದ ಬಾಗಿಲು ಯಶಸ್ಸಿನ ಸಂಭ್ರಮದಲ್ಲಿರುವಾಗ, ಈ ಸಿನಿಮಾದ ಸಕ್ಸಸ್‌ ಮೀಟ್‌ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸಿದವರು ಗೋಪಾಲ್‌ ಮತ್ತು ಲಕ್ಷ್ಮಣ್.‌ ಇವರ ಕೆಲಸ ಗಮನಿಸಿದ ರಾಜ್‌ಕುಮಾರ್‌, ತಮ್ಮ ಕಾಲ್‌ಶೀಟ್‌ ಕೊಟ್ಟು, ನಿಮ್ಮ ಜತೆ ಒಂದು ಸಿನಿಮಾ ಮಾಡ್ತಿನಿ ಅಂದಿರ್ತಾರೆ. ಆಗೆಲ್ಲ ರಾಜ್‌ಕುಮಾರ್‌ ಕಾಲ್‌ಶೀಟ್‌ ಸಿಗಬೇಕು ಅಂದ್ರೆ ವರ್ಷಗಟ್ಟಲೇ ಕಾಯಬೇಕಿತ್ತು. ಅದೊಂದು ರೀತಿ ಲಾಟರಿ ಹೊಡೆದ ಹಾಗೆ. ಬಯಸದೇ ಬಂದ ಭಾಗ್ಯ ಎಂದುಕೊಂಡು ಸಿಕ್ಕಿದ್ದೇ ಚಾನ್ಸ್‌ ಅಂತ ಗೋಪಾಲ್‌ ಮತ್ತು ಲಕ್ಷ್ಮಣ್‌ ಕಥೆಗಾಗಿ ಹುಡುಕಾಡುತ್ತಿರುತ್ತಾರೆ.

ಈ ಕಥೆ ಸಿನಿಮಾ ಆಗಲು ಲಾಯಕ್ಕಿಲ್ಲ..

ಇದೇ ಸಮಯದಲ್ಲಿ ಟಿ.ಕೆ ರಾಮ್‌ ಅವರ ಸಾಮಾಜಿಕ ಹಿನ್ನೆಲೆಯ ಧಾರಾವಾಹಿಯೊಂದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುತ್ತದೆ. ಇದನ್ನು ಓದಿ ತುಂಬ ಖುಷಿಯಾದ ಪಾರ್ವತಮ್ಮ ರಾಜ್‌ಕುಮಾರ್‌, ಈ ಕಥೆಯನ್ನು ಸಿನಿಮಾ ಮಾಡಬೇಕು ಅಂದುಕೊಳ್ತಾರೆ. ಈ ಧಾರಾವಾಹಿ ಜನರಿಗೂ ಇಷ್ಟ ಆಗಿರುತ್ತೆ. ಈ ಕಥೆಯನ್ನಿಟ್ಟುಕೊಂಡು ಬಹಳಷ್ಟು ನಿರ್ದೇಶಕರಿಗೂ ಕೇಳ್ತಾರೆ. ಆರಂಭದಲ್ಲಿ ನಾಲ್ಕೈದು ನಿರ್ದೇಶಕರು, ಇದು ಸಿನಿಮಾ ಮಾಡಲು ಯೋಗ್ಯ ಇಲ್ಲದ ಕಥೆ. ಸಿನಿಮಾ ರೂಪ ಪಡೆಯಲು ಈ ಕಥೆಗೆ ಲಾಯಕ್ಕಿಲ್ಲ ಎಂಬ ಮಾತು ಕೇಳಿ ಬರುತ್ತವೆ. ಕಾದಂಬರಿ ಚೆನ್ನಾಗಿದೆ, ಸಿನಿಮಾ ಆಗುವುದು ಕಷ್ಟ ಎಂದು ನೆಗೆಟಿವ್‌ ಆಗಿಯೇ ಹೇಳ್ತಾರೆ.

ಸಿದ್ದಲಿಂಗಯ್ಯ, ವರದಪ್ಪ ಮತ್ತು ರಾಜ್‌ಕುಮಾರ್‌ ಅವರಿಗೂ ಈ ಕಾದಂಬರಿಯ ಒಂದು ಕಾಪಿಯನ್ನು ಕಳಿಸಿಕೊಡ್ತಾರೆ ಪಾರ್ವತಮ್ಮ. ನೆಗೆಟಿವ್‌ ಕಾಮೆಂಟ್‌ ಬಂದ ಈ ಕಾದಂಬರಿಯನ್ನೇ ಸಿನಿಮಾ ಮಾಡಬೇಕು ಅಂತ ಸವಾಲಾಗಿ ತೆಗೆದುಕೊಳ್ತಾರೆ ಪಾರ್ವತಮ್ಮ. ಬಳಿಕ ರಾಜ್‌ಕುಮಾರ್‌ ಸಹ ಆ ಕಾದಂಬರಿಯನ್ನು ಓದಿ ಮುಗಿಸ್ತಾರೆ. ಯಾರು ಏನೇ ಹೇಳಲಿ, ಇದನ್ನು ಸಿನಿಮಾ ಮಾಡಲೇಬೇಕು ಎನ್ನುತ್ತಾರೆ. ಅವರಿಗೂ ಇದು ಒಂದು ರೀತಿ ಚಾಲೆಂಜ್‌ ಆಗಿತ್ತು. ಯಾರಿಗೆ ಈ ಸಿನಿಮಾ ಮಾಡೋಣ ಎಂದು ಯೋಚಿಸಿದಾಗ, ಒಳ್ಳೆಯ ಕಥೆಗಾಗಿ ಹುಡುಕಾಡ್ತಿದ್ದ ಗೋಪಾಲ್‌ ಮತ್ತು ಲಕ್ಷ್ಮಣ್‌ಗೆ ಕಾಲ್‌ಶೀಟ್‌ ಕೊಡ್ತಾರೆ. ಹಾಗೆ ನಿರ್ಮಾಣವಾದ ಚಿತ್ರವೇ ಬಂಗಾರದ ಮನುಷ್ಯ. 

ಆವತ್ತಿನ ದಿನಮಾನಗಳಲ್ಲಿ (1972) ಕನ್ನಡ ಚಿತ್ರೋದ್ಯಮದಲ್ಲಿ ಬಂಗಾರದ ಮನುಷ್ಯ ಸಿನಿಮಾ ಮಾಡಿದ ದಾಖಲೆ ಸಣ್ಣದೇನಲ್ಲ. ವರ್ಷಾನುಗಟ್ಟಲೇ ಚಿತ್ರಮಂದಿರದಲ್ಲಿ ಓಡಿ, ಕಲೆಕ್ಷನ್‌ ವಿಚಾರದಲ್ಲೂ ಬಂಗಾರದ ಫಸಲನ್ನೇ ತೆಗೆದಿತ್ತು ಈ ಸಿನಿಮಾ. ಸಿದ್ದಲಿಂಗಯ್ಯ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಆ ಕಾಲದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಕನ್ನಡದ ಮೊದಲ ಸಿನಿಮಾ ಆಗಿಯೂ ಹೊರಹೊಮ್ಮಿತು. ಡಾ. ರಾಜ್‌ಕುಮಾರ್‌ ಸಿನಿಮಾ ಬತ್ತಳಿಕೆಯಲ್ಲಿ ಅಚ್ಚಳಿಯದೇ, ಅಗ್ರಸ್ಥಾನಕ್ಕೂ ಈ ಸಿನಿಮಾ ಲಗ್ಗೆ ಇಟ್ಟಿತ್ತು. ಆದರೆ, ಇದು ಸಿನಿಮಾ ಆಗುವ ಮೊದಲು ಇದು ಸಿನಿಮಾ ಆಗುವ ಕಥೆಯೇ ಅಲ್ಲ, ಇದು ಸಿನಿಮಾ ಆಗೋಕೆ ಲಾಯಕ್ಕೇ ಇಲ್ಲ ಎಂಬ ಮಾತುಗಳು ಕೇಳಿಬಂದಿದ್ದವು ಎಂದರೆ ಇಂದಿಗೂ ಅಚ್ಚರಿಯೇ. 

ದಾಖಲೆಗಳು ಸೃಷ್ಟಿ

1972ರ ಮಾರ್ಚ್‌ 31ರಂದು ರಾಜ್ಯಾದ್ಯಂತ ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆ ಆಗುತ್ತದೆ. ದಾಖಲೆ ಮೇಲೆ ದಾಖಲೆಗಳು ನಿರ್ಮಾಣವಾಗುತ್ತವೆ. ಸಿದ್ದಲಿಂಗಯ್ಯನವರ ನಿರ್ದೇಶನಕ್ಕೆ ಮೆಚ್ಚುಗೆ ಸಿಗುತ್ತದೆ. ಇದು ಸಿನಿಮಾ ಆಗಲು ಲಾಯಕ್ಕಲ್ಲದ ಕಥೆ, ಇದರಲ್ಲಿ ಏನೂ ಇಲ್ಲ ಎಂದವರು ಬೆಪ್ಪಾದರು. ಬೆಂಗಳೂರಿನ ಆಗಿನ ಸ್ಟೇಟ್‌ ಥಿಯೇಟರ್‌ನಲ್ಲಿ (ಈಗಿನ ಭೂಮಿಕಾ ಚಿತ್ರಮಂದಿರ) 104 ವಾರಗಳ ಪ್ರದರ್ಶನ ಕಾಣುತ್ತದೆ ಈ ಸಿನಿಮಾ. ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ 60 ವಾರ ಪ್ರದರ್ಶನ ಕಾಣುತ್ತದೆ. ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷವಿಡೀ ಪ್ರದರ್ಶನ ಕಂಡರೆ, ಇನ್ನು ಕೆಲವೆಡೆ 25 ವಾರಗಳನ್ನು ಪೂರೈಸುತ್ತದೆ. ಆಗಿನ ಕಾಲದಲ್ಲಿ ಈ ಸಿನಿಮಾ 2.5 ಕೋಟಿ ಗಳಿಕೆ ಮಾಡಿತ್ತು. ಅದನ್ನು ಇಂದಿನ ಲೆಕ್ಕದಲ್ಲಿ ಹೇಳುವುದಾದರೆ, 88 ಕೋಟಿಗೆ ಅದು ಸಮ. 

Whats_app_banner