Raj b Shetty: ಅವ್ರ ಹೆಸರು ಬೇಡ, ಅಷ್ಟು ದೊಡ್ಡವರಲ್ಲ, ಅವರಿಗಿಂತ ಸಿನಿಮಾ ದೊಡ್ಡದು; ರಶ್ಮಿಕಾಗೆ ಪರೋಕ್ಷವಾಗಿ ತಿವಿದ್ರಾ ರಾಜ್‌ ಶೆಟ್ಟಿ?
ಕನ್ನಡ ಸುದ್ದಿ  /  ಮನರಂಜನೆ  /  Raj B Shetty: ಅವ್ರ ಹೆಸರು ಬೇಡ, ಅಷ್ಟು ದೊಡ್ಡವರಲ್ಲ, ಅವರಿಗಿಂತ ಸಿನಿಮಾ ದೊಡ್ಡದು; ರಶ್ಮಿಕಾಗೆ ಪರೋಕ್ಷವಾಗಿ ತಿವಿದ್ರಾ ರಾಜ್‌ ಶೆಟ್ಟಿ?

Raj b Shetty: ಅವ್ರ ಹೆಸರು ಬೇಡ, ಅಷ್ಟು ದೊಡ್ಡವರಲ್ಲ, ಅವರಿಗಿಂತ ಸಿನಿಮಾ ದೊಡ್ಡದು; ರಶ್ಮಿಕಾಗೆ ಪರೋಕ್ಷವಾಗಿ ತಿವಿದ್ರಾ ರಾಜ್‌ ಶೆಟ್ಟಿ?

ಟೋಬಿ ಸಿನಿಮಾ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಸ್ಯದ ಮಳೆ ಸುರಿದಿದೆ. ಇದೆಲ್ಲದರ ನಡುವೆ ನಟ ರಾಜ್‌ ಬಿ ಶೆಟ್ಟಿ ಪರೋಕ್ಷವಾಗಿಯೇ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ಎಲ್ಲಿಯೂ ಅವರ ಹೆಸರೆತ್ತದೆ ಟಕ್ಕರ್‌ ಕೊಟ್ಟಿದ್ದಾರೆ.

ಅವ್ರ ಹೆಸರು ಬೇಡ, ಅವ್ರು ಅಷ್ಟು ದೊಡ್ಡವರಲ್ಲ, ಅವರಿಗಿಂತ ಸಿನಿಮಾ ದೊಡ್ಡದು; ರಶ್ಮಿಕಾಗೆ ಪರೋಕ್ಷವಾಗಿ ತಿವಿದ್ರಾ ರಾಜ್‌ ಶೆಟ್ಟಿ?
ಅವ್ರ ಹೆಸರು ಬೇಡ, ಅವ್ರು ಅಷ್ಟು ದೊಡ್ಡವರಲ್ಲ, ಅವರಿಗಿಂತ ಸಿನಿಮಾ ದೊಡ್ಡದು; ರಶ್ಮಿಕಾಗೆ ಪರೋಕ್ಷವಾಗಿ ತಿವಿದ್ರಾ ರಾಜ್‌ ಶೆಟ್ಟಿ?

Raj b Shetty: ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಇಬ್ಬರ ನಡುವೆ ಏನೆಲ್ಲ ಘಟಿಸಿತು, ಮುಂದೆ ಅದು ಯಾವ ಹಂತಕ್ಕೆ ಹೋಯಿತು ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಆ ನೋವಿನಿಂದ ಹೊರಬರಲು ರಕ್ಷಿತ್‌ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಅವತಾರ ಎತ್ತಬೇಕಾಯಿತು. ಅದಾದ ಮೇಲೆ ಸಿನಿಮಾ ಕೆಲಸದ ಕಡೆಗೆ ಹೆಚ್ಚು ಗಮನಹರಿಸಿದ ರಕ್ಷಿತ್‌, ಸಿನಿಮಾಗಳಲ್ಲಿಯೇ ಸಕ್ರಿಯರಾದರು. ಹಲವು ಸ್ಕ್ರಿಪ್ಟ್‌ಗಳಲ್ಲಿ ತೊಡಗಿಸಿಕೊಂಡರು. ಮತ್ತೆ ನಿರ್ದೇಶಕನ ಕ್ಯಾಪ್‌ ಧರಿಸಿ ರಿಚರ್ಡ್‌ ಆಂಟನಿ ಸಿನಿಮಾ ನಿರ್ದೇಶನಕ್ಕೂ ಇಳಿದಿದ್ದಾರೆ. ಎಲ್ಲವೂ ತಣ್ಣಗಿದ್ದರೂ, ಆಗಾಗ ಈ ಜೋಡಿಯ ಒಂದಲ್ಲ ಒಂದು ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಆದರೆ, ರಕ್ಷಿತ್‌ ಮಾತ್ರ ಯಾವುದಕ್ಕೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ.‌

ಹೀಗಿರುವಾಗಲೇ ನಟಿ ರಶ್ಮಿಕಾ ಮಾತ್ರ ಒಳ್ಳೆಯ ವಿಚಾರಕ್ಕಿಂತ ಟ್ರೋಲ್‌ ಆಗಿದ್ದೇ ಹೆಚ್ಚು. ಆಡುವ ಮಾತಿನಿಂದಲೋ, ಅವರ ವರ್ತನೆಗೋ.. ಹೀಗೆ ಹಲವು ವಿಚಾರಕ್ಕೆ ಟ್ರೋಲ್‌ ಆಗುತ್ತಲೇ ಇರುತ್ತಾರೆ. ಈ ನಡುವೆ ಕಾಂತಾರ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾದಾಗಲೂ ರಶ್ಮಿಕಾ ಸಿನಿಮಾ ನೋಡಿಲ್ಲ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು. ಸಂದರ್ಶನಗಳಲ್ಲಿ ಮೊದಲ ಸಿನಿಮಾ ಮತ್ತು ಚಿತ್ರ ನಿರ್ಮಾಣ ಸಂಸ್ಥೆಯ ಹೆಸರನ್ನೂ ಪ್ರಸ್ತಾಪಿಸದೇ ಇದ್ದಾಗಲೂ ಟ್ರೋಲ್‌ ಆಗಿದ್ದರು. ಹೀಗಿರುವಾಗ ನಟ ರಿಷಬ್‌ ಶೆಟ್ಟಿ ಸಹ ಪರೋಕ್ಷವಾಗಿ ರಶ್ಮಿಕಾಗೆ ಟಾಂಗ್‌ ಕೊಟ್ಟಿದ್ದರು. ಇದೀಗ ಆ ಕೆಲಸವನ್ನು ರಾಜ್‌ ಬಿ ಶೆಟ್ಟಿ ಮಾಡಿದ್ದಾರೆ. ಟೋಬಿ ಟ್ರೇಲರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಎಲ್ಲಿಯೂ ರಶ್ಮಿಕಾ ಮಂದಣ್ಣ ಹೆಸರೆತ್ತದೆ ಪರೋಕ್ಷವಾಗಿ ಟಕ್ಕರ್‌ ಕೊಟ್ಟಿದ್ದಾರೆ.

ರಶ್ಮಿಕಾಗೆ ತಿವಿದ್ರಾ ರಾಜ್‌ ಬಿ ಶೆಟ್ಟಿ?

ಈ ಸಿನಿಮಾ ಶುರು ಮಾಡಬೇಕಾದರೆ. ನಾನು ಒಂದು ಗುಂಡಿಯಲ್ಲಿದ್ದೆ. ಗುಂಡಿಯಲ್ಲಿ ಸಾಕಷ್ಟು ದಿನ ರೆಸ್ಟ್‌ ತೆಗೆದುಕೊಂಡಿರುವ ಜೀವಕ್ಕೆ ಮೇಲೆ ಬರುವ ಸಾಮರ್ಥ್ಯ ಮತ್ತು ಶಕ್ತಿ ಜಾಸ್ತಿ ಇರುತ್ತೆ. ನಾನು ಗುಂಡಿಯಲ್ಲಿದ್ದಾಗ ನನ್ನ ಸುತ್ತ ಇದ್ದ ತಂಡ ಯಾವಾಗ್ಲೂ ಹೇಳುತ್ತಿತ್ತು. ಇಲ್ಲ ಏನಾದ್ರೂ ಮಾಡೋಣ. ಆಗ ನಾನು ಹೇಳಿದೆ, ಇಲ್ಲ ಸೋತಾಗ ಸೋಲೊಪ್ಪಿಕೊಳ್ಳಬೇಕು, ಆದರೆ ಸಾವನ್ನು ಒಪ್ಪಿಕೊಳ್ಳಲ್ಲ. ಆಗ ಶುರುವಾಯ್ತು ಈ ಸಿನಿಮಾ.

ಏನೇ ಮಾತನಾಡಬಹುದು, ಪ್ರತಿಕ್ರಿಯೆ ಕೊಡಬಹುದು ಆದರೆ ಅವೆಲ್ಲವೂ ಸತ್ತೋಗುತ್ತೆ. ಆದರೆ ಸಿನಿಮಾ ಯಾವತ್ತೂ ಸಾಯಲ್ಲ. ಹಾಗಾಗಿ ಯಾರು ಏನೇ ಮಾಡಲಿ, ಆಕ್ಚುವಲಿ ಅವರ ಹೆಸರು ಬೇಡ. ಅವ್ರು ಅಷ್ಟೊಂದು ದೊಡ್ಡವರಲ್ಲ. ಯಾಕಂದ್ರೆ ಅವರಿಗಿಂತ ಸಿನಿಮಾ ದೊಡ್ಡದು. ಅವರಿಗೆ ಉತ್ತರವಾಗಿ ಈ ಟೋಬಿ. ಕುರಿಯನ್ನ ಕೆಣಕಲು ಹೋಗಬೇಡಿ. ಮಾರಿ ಮಾರಿ ಮಾರಿಗೆ ದಾರಿ" ಎಂದು ಪರೋಕ್ಷವಾಗಿ ರಶ್ಮಿಕಾಗೆ ಟಾಂಗ್‌ ಕೊಟ್ಟಿದ್ದಾರಾ ರಾಜ್‌ ಶೆಟ್ಟಿ ಎಂದೇ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ನೆಟ್ಟಿಗರು.

ಮನರಂಜನೆ ಕುರಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner