Jaaji Album Song: ಜಾಜಿ ಹಾಡಿಗೆ ಜತೆಯಾದ ದರ್ಶನ್;‌ ಕೈ ನೋವಿನ ನಡುವೆಯೂ ಹೊಸಬರಿಗೆ ಸಾಥ್‌ ನೀಡಿದ ದಾಸ
ಕನ್ನಡ ಸುದ್ದಿ  /  ಮನರಂಜನೆ  /  Jaaji Album Song: ಜಾಜಿ ಹಾಡಿಗೆ ಜತೆಯಾದ ದರ್ಶನ್;‌ ಕೈ ನೋವಿನ ನಡುವೆಯೂ ಹೊಸಬರಿಗೆ ಸಾಥ್‌ ನೀಡಿದ ದಾಸ

Jaaji Album Song: ಜಾಜಿ ಹಾಡಿಗೆ ಜತೆಯಾದ ದರ್ಶನ್;‌ ಕೈ ನೋವಿನ ನಡುವೆಯೂ ಹೊಸಬರಿಗೆ ಸಾಥ್‌ ನೀಡಿದ ದಾಸ

ಜಾಜಿ ಹೆಸರಿನ ಆಲ್ಬಂ ಹಾಡನ್ನು ಸ್ಯಾಂಡಲ್‌ವುಡ್‌ ನಟ ದರ್ಶನ್‌ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಹಾರೈಸಿದ್ದಾರೆ.

Jaaji Album Song: ಜಾಜಿ ಹಾಡಿಗೆ ಜತೆಯಾದ ದರ್ಶನ್;‌ ಕೈ ನೋವಿನ ನಡುವೆಯೂ ಹೊಸಬರಿಗೆ ಸಾಥ್‌ ನೀಡಿದ ದಾಸ
Jaaji Album Song: ಜಾಜಿ ಹಾಡಿಗೆ ಜತೆಯಾದ ದರ್ಶನ್;‌ ಕೈ ನೋವಿನ ನಡುವೆಯೂ ಹೊಸಬರಿಗೆ ಸಾಥ್‌ ನೀಡಿದ ದಾಸ

Jaaji Album Song: ನಟ ದರ್ಶನ್, ಈಗ ಜಾಜಿ ಹೆಸರಿನ ಆಲ್ಬಂ ಹಾಡಿಗೆ ಸಾಥ್‌ ನೀಡಿದ್ದಾರೆ. ಶೂಟಿಂಗ್‌ ಸಂದರ್ಭದಲ್ಲಿ ಕೈ ನೋವಾಗಿದ್ದರೂ, ಅದನ್ನು ಲೆಕ್ಕಿಸದೇ, ಹೊಸ ಪ್ರತಿಭೆಗಳ ಶ್ರಮವನ್ನು ಪ್ರೋತ್ಸಾಹಿಸಲು ಆಲ್ಬಂ ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಾಸಕ ಸತೀಶ್ ರೆಡ್ಡಿ, ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸೇರಿ ಹಲವರು ಈ ಸಮಾರಂಭದಲ್ಲಿದ್ದರು.

ಅಂದಹಾಗೆ, ಜಾಜಿ ಹೆಸರಿನ ಈ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಮಾಜಿ ಉಪ ಮೇಯರ್‌ ಆಗಿದ್ದ ಮೋಹನ್‌ ರಾಜು ಮತ್ತು ಸುನೀತಾ ಮೋಹನ್‌ರಾಜು ಅವರ ಪುತ್ರಿ. ಹಾಡಿನ ಹೆಸರೂ ಜಾಜಿ, ಮಗಳ ಹೆಸರೂ ಜಾಜಿ ಎಂಬುದು ವಿಶೇಷ. ಈ ಹಾಡಿನ ಮೂಲಕ ಮಗಳನ್ನು ಬಣ್ಣದ ಲೋಕಕ್ಕೆ ಇಂಟ್ರಡ್ಯೂಸ್‌ ಮಾಡಿದ್ದಾರೆ ಮೋಹನ್‌ ರಾಜು ದಂಪತಿ.

ಸುಮೋ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುನೀತಾ ಮೋಹನ್ ರಾಜು ಜಾಜಿ ಮ್ಯೂಸಿಕ್ ಹಾಡನ್ನು ನಿರ್ಮಿಸಿದ್ದು, ಹರ್ಷಿತ್ ಗೌಡ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ಕುಮಾರ್ ಛಾಯಾಗ್ರಹಣ, ಮೋಹನ್ ನೃತ್ಯ ನಿರ್ದೇಶನ, ಐಶ್ವರ್ಯ ರಂಗರಾಜನ್ ಗಾಯನ ಹಾಗೂ ಜಾಜಿ ಅವರು ಅಭಿನಯಿಸಿರುವ ಈ ಹಾಡು ಡಿ ಬಿಟ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.

ಜಾಜಿ ಮೂಲಕ ಬಣ್ಣದ ಲೋಕಕ್ಕೆ

ನನ್ನ ಮಗಳು ಜಾಜಿ ದೊಡ್ಡ ಕಲಾವಿದೆಯಾಗಬೇಕೆಂಬುದು ನನ್ನ ತಂದೆ ರಂಗಭೂಮಿ ಕಲಾವಿದ ಬೋರೇಗೌಡ ಅವರ ಕನಸು. ಅಂದಿನ ಕನಸು ಈಗ ನನಸಾಗಿದೆ. ಜಾಜಿ ಮೂಲಕ ಮಗಳು ಸ್ಯಾಂಡಲ್‌ವುಡ್‌ಗೆ ಆಗಮಿಸುತ್ತಿದ್ದಾಳೆ. ನನ್ನ ಮಗಳಿಗೆ ದರ್ಶನ್‌ ಅವರ ಪ್ರೋತ್ಸಾಹ ಸಿಕ್ಕಿದ್ದು ಇನ್ನೂ ಖುಷಿಯಾಗಿದೆ. ಜತೆಗೆ ಅವಳ ಜವಾಬ್ದಾರಿಯೂ ಹೆಚ್ಚಾಗಿದೆ. ಹಾಡಿಗಾಗಿ ಶ್ರಮ ಹಾಕಿದ ಎಲ್ಲರಿಗೂ ಧನ್ಯವಾದಗಳು ಎಂದರು ಮೋಹನ್‌ ರಾಜು.

ಜಾಜಿ ಹೆಸರೇ ಚೆಂದ ಎಂದ ದರ್ಶನ್

ಹಾಡು ಬಿಡುಗಡೆ ಮಾಡಿ ಮಾತನಾಡಿದ ದರ್ಶನ್, ಈ ಹಾಡು ಬಿಡುಗಡೆ ಮಾಡುವುದಕ್ಕೂ ಮುಂಚೆ ಕೆಲವು ವಿಷಯ ಹೇಳುತ್ತೇನೆ. ಮೋಹನ್‌ ರಾಜ್‌ ಮಾತಿಗೆ ಸಿಕ್ಕಾಗ, ಮಗಳು ಡಾನ್ಸ್‌ ಕಲಿಯುತ್ತಿರುವ ಬಗ್ಗೆ ಹೇಳಿದ್ದರು. ಮಗಳ ಹೆಸರು ಜಾಜಿ ಎಂದಿದ್ದರು. ಈಗಿನ ಟ್ರೆಂಡ್‌ನಲ್ಲಿ ಜಾಜಿ ಎನ್ನುವ ಹೆಸರು‌ ಕೇಳಿ ಆಶ್ಚರ್ಯವಾಯಿತು. ಅವರ ಮಗನ ಹೆಸರು ಜಾಣ ಅಂತ ತಿಳಿದು ಇನ್ನೂ ಆಶ್ಚರ್ಯವಾಯಿತು. ಜಾಜಿ ಅವರ ನೃತ್ಯ ಎಷ್ಟು ಚೆನ್ನಾಗಿದೆ ಎಂದು ಈ ಜಾಜಿ ಹಾಡೇ ಹೇಳುತ್ತದೆ. ಡಿ ಬಿಟ್ಸ್ ಮೂಲಕ ಶೈಲಜಾ ನಾಗ್ ಹಾಗೂ ವಿ.ಹರಿಕೃಷ್ಣ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಮಗುವಿಗೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.‌

ಇದಕ್ಕೆಲ್ಲ ನನ್ನ ತಾತನೇ ಸ್ಫೂರ್ತಿ

ಈ ಹಾಡಿನ ಬಗ್ಗೆ ಮಾತನಾಡಿದ ಜಾಜಿ, ನಾನು ಎರಡೂವರೆ ವರ್ಷದವಳಿದ್ದಾಗ ನನ್ನ ತಾತನ ಪ್ರೋತ್ಸಾಹದಿಂದ ಮೊದಲ ಸಲ ನೃತ್ಯ ಪ್ರದರ್ಶನ ನೀಡಿದ್ದೆ. ಅವರ ಆಸೆಯಂತೆ ಭರತನಾಟ್ಯದ ಜತೆಗೆ ಇನ್ನೂ ಹಲವು ಪ್ರಕಾರದ ನೃತ್ಯಗಳನ್ನು ಕಲಿತಿದ್ದೀನಿ. ಈ ಹಾಡಲ್ಲೂ ಹೊಸ ಪ್ರಕಾರದ ಡಾನ್ಸ್‌ ಪ್ರಯತ್ನಿಸಿದ್ದೇನೆ. ನನ್ನ ಮೊದಲ ಹಾಡನ್ನು ದರ್ಶನ್ ಸರ್ ಬಿಡುಗಡೆ ಮಾಡುತ್ತಾರೆ ಎಂದು ಕನಸಲ್ಲೂ ನೆನಸಿರಲಿಲ್ಲ. ಅವರಿಗೆ, ನನ್ನ ತಂದೆ ತಾಯಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ಜಾಜಿ. ಹಾಡಿಗೆ ಸಂಗೀತ ನೀಡಿ, ಸಾಹಿತ್ಯ ಬರೆದಿರುವ ಹರ್ಷಿತ್ ಗೌಡ, ನೃತ್ಯ ನಿರ್ದೇಶಕ ಮೋಹನ್ ಹಾಗೂ ಡಿ ಬಿಟ್ಸ್ ಸಂಸ್ಥೆಯ ಶೈಲಜಾ ನಾಗ್ ಹಾಗೂ ವಿ.ಹರಿಕೃಷ್ಣ ಜಾಜಿ ಕುರಿತು ಮಾತನಾಡಿದರು.

Whats_app_banner