ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಗರ್ಲ್‌ಫ್ರೆಂಡ್‌ ಜತೆ ಜೈದೇವ್‌ ಲವ್ವಿಡುವ್ವಿ ಮಲ್ಲಿಗೆ ತಿಳಿಯೋ ಸಮಯ; ಭೂಮಿಕಾ ಯುಜಮಾನಿಕೆಗೆ ಮೊದಲ ಅಗ್ನಿ ಪರೀಕ್ಷೆ

Amruthadhaare: ಗರ್ಲ್‌ಫ್ರೆಂಡ್‌ ಜತೆ ಜೈದೇವ್‌ ಲವ್ವಿಡುವ್ವಿ ಮಲ್ಲಿಗೆ ತಿಳಿಯೋ ಸಮಯ; ಭೂಮಿಕಾ ಯುಜಮಾನಿಕೆಗೆ ಮೊದಲ ಅಗ್ನಿ ಪರೀಕ್ಷೆ

Amruthadhaare serial Yesterday episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರವಾಹಿಯಲ್ಲಿ ಇಂದು ಮಲ್ಲಿಗೆ ಜೈದೇವ್‌ನ ಗರ್ಲ್‌ ಫ್ರೆಂಡ್‌ ಕುರಿತು ತಿಳಿದುಕೊಳ್ಳುವ ಸಮಯ ಬಂದಿದೆ. ಇದೇ ಸಮಯದಲ್ಲಿ ಭೂಮಿಕಾ ಯುಜಮಾನಿಕೆಗೂ ಅಗ್ನಿ ಪರೀಕ್ಷೆ ಎದುರಾಗಿದೆ.

Amruthadhaare: ಗರ್ಲ್‌ಫ್ರೆಂಡ್‌ ಜತೆ ಜೈದೇವ್‌ ಲವ್ವಿಡುವ್ವಿ ಮಲ್ಲಿಗೆ ತಿಳಿಯೋ ಸಮಯ
Amruthadhaare: ಗರ್ಲ್‌ಫ್ರೆಂಡ್‌ ಜತೆ ಜೈದೇವ್‌ ಲವ್ವಿಡುವ್ವಿ ಮಲ್ಲಿಗೆ ತಿಳಿಯೋ ಸಮಯ

Amruthadhaare serial Yesterday episode: ಮಹಿಮಾ ಸ್ಟುಡಿಯೋಗೆ ಕೆಲಸಕ್ಕೆ ಹೊರಟಾಗ ಅತ್ತೆ ಮಂದಾಕಿನಿ ಅನಾರೋಗ್ಯದಿಂದ ಮಲಗಿರುತ್ತಾರೆ. ಅತ್ತೆಗೆ ಹುಷಾರಿಲ್ಲ ಎಂದು ಮಹಿಮಾ ಮನೆಯಲ್ಲಿ ಉಳಿಯುತ್ತಾಳೆ. ಅತ್ತೆಯ ಕುರಿತು ತುಂಬಾ ಕಾಳಜಿ ವಹಿಸುತ್ತಾಳೆ. ಡಾಕ್ಟರ್‌ಗೆ ಕರೆ ಮಾಡುತ್ತಾಳೆ. ಡಾಕ್ಟರ್‌ ಬಳಿಗೆ ಹೋಗಿ ಮಾತ್ರೆ ತರುತ್ತಾಳೆ. ಬಿಸಿ ಕಾಫಿ ಕೊಡು ಸಾಕು ಎನ್ನುತ್ತಾರೆ ಮಂದಾಕಿನಿ. ಅದ್ಯಾವುದೂ ಬೇಡ, ಇಡ್ಲಿ ಮತ್ತು ಗಂಜಿ ಮಾತ್ರ ತಿನ್ನಬೇಕು ಎನ್ನುತ್ತಾರೆ ಮಹಿಮಾ. ಮಾತ್ರೆ ಬೇಡ ವಾಂತಿ ಬರುತ್ತದೆ ಎಂದರೂ ಕೇಳದ ಮಹಿಮಾ ಮಾತ್ರೆ ನೀಡುತ್ತಾಳೆ. ಜನ ಸಾವಿರ ಮಾತನಾಡುತ್ತಾರೆ. ಎಲ್ಲರ ಮುಂದೆ ನಿನ್ನ ಸೊಸೆ ಏನೆಂದು ತಿಳಿಸುವ ಅಗತ್ಯವಿಲ್ಲ ಎಂದು ಮಂದಾಕಿನಿಗೆ ಪತಿ ಬುದ್ಧಿ ಹೇಳುತ್ತಾರೆ. ಸೊಸೆಯ ಗುಣ ತಿಳಿಯಲು ಮಂದಾಕಿನಿ ಮಾಡಿದ ಟೆಸ್ಟ್‌ ಪಾಸ್‌ ಆಯ್ತು.

ಮಲ್ಲಿ ಮತ್ತು ಭೂಮಿಕಾ ಮಾತನಾಡುತ್ತ ಇರುತ್ತಾರೆ. ಜೈದೇವ್‌ ಪಾರ್ಟಿಗೆ ಹೋಗುತ್ತಾರೆ, ಅವರಿಗೆ ಊಟ ಬೇಡ ಅಂತ ಹೇಳಲು ಬಂದಾಗ ಭೂಮಿಕಾ ಸಿಗುತ್ತಾರೆ. ನೀನೂ ಕೂಡ ಪಾರ್ಟಿಗೆ ಹೋಗು, ಜೈದೇವ್‌ ಸ್ನೇಹಿತರ ಕುರಿತು ತಿಳಿದುಕೊಳ್ಳು ಎಂದು ಹೇಳುತ್ತಾಳೆ. ಈ ಮೂಲಕ ಬಾಂಡಿಂಗ್‌ ಹೆಚ್ಚುತ್ತದೆ ಎನ್ನುತ್ತಾರೆ. ಆದರೆ, ಇವರಿಗೆ ಗೊತ್ತಿರುವುದಿಲ್ಲ, ಜೈದೇವ್‌ ತನ್ನ ಗರ್ಲ್‌ ಫ್ರೆಂಡ್‌ನ ಭೇಟಿಯಾಗಲು ಹೋಗುತ್ತಾನೆ ಎಂದು. ಅದೇ ಸಮಯದಲ್ಲಿ ಜೈದೇವ್‌ ಅಲ್ಲಿಗೆ ರೆಡಿಯಾಗಿ ಬರುತ್ತಾನೆ. "ನಾನೂ ಬರ್ತಿನಿ" ಎಂದು ಹೇಳುತ್ತಾಳೆ. "ಥ್ಯಾಂಕ್‌ ಯು ಅತ್ತಿಗೆ ಅವಳು ನನ್ನ ಜತೆ ಬರೋ ಹಾಗೆ ಮಾಡಿದ್ದಕ್ಕೆ" ಎಂದು ಹೇಳುತ್ತಾನೆ. ಭೂಮಿಕಾ ಹೋದ ಬಳಿಕ ಚಡಪಡಿಸುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಪಾರ್ಟಿಗೆ ಜೈದೇವ್‌ ಬರುತ್ತಾನೆ. ಅಲ್ಲಿ ಆತನ ಗೆಳತಿ ಇರುತ್ತಾಳೆ. ಮಲ್ಲಿಯನ್ನು ನೋಡಿ ಆಕೆಗೆ ಬೇಸರವಾಗುತ್ತದೆ. ಜೈದೇವ್‌ ಆಕೆಗೆ ತನ್ನ ಪತ್ನಿಯನ್ನು ಪರಿಚಯಿಸುತ್ತಾನೆ. ಆಕೆ ಹಾಯ್‌ ಎಂದಾಗ ನಮಸ್ಕಾರ ಎಂದು ಕೈ ಮುಗಿಯುತ್ತಾಳೆ. ಆಕೆಯ ಮುಂದೆಯೇ ಜೈದೇವ್‌ನ ಕೈ ಹಿಡಿದು ಒಳಗೆ ಕರೆದುಕೊಂಡು ಹೋಗುತ್ತಾಳೆ. ಮಲ್ಲಿ ಬೇಸರದಲ್ಲಿ ಒಬ್ಬಳೇ ಹಿಂಬಾಲಿಸುತ್ತಾಳೆ. ಈ ಮೂಲಕ ಮಲ್ಲಿಗೆ ಜೈದೇವ್‌ನ ಗೆಳತಿಯ ಕುರಿತು ತಿಳಿದುಕೊಳ್ಳುವ ಸಮಯ ಬಂದಿದೆ. ಎಲ್ಲಾ ಗೆಳತಿಯರಿಗೂ ಜೈದೇವ್‌ನನ್ನು ಪರಿಚಯಿಸುತ್ತಾಳೆ. ಈ ಶೋರೂಂ ಗೊಂಬೆ ಯಾರು ಎಂದು ಕೇಳುತ್ತಾರೆ. ಎಲ್ಲರ ಮುಂದೆ ಇವಳ ಬಗ್ಗೆ ಏನೆಲ್ಲ ಕೇಳಬೇಕು ಎಂದುಕೊಳ್ಳುತ್ತಾನೆ ಜೈದೇವ್‌. ಸಾರಿ ಉಡೋದು ಕಷ್ಟ, ಇಂತಹ ಪಾರ್ಟಿಗೆ ಹೆಂಡ್ತಿಗೆ ಸಾರಿ ಉಡಿಸ್ಕೊಂಡು ಬಂದಿದ್ರ ಎಂದೆಲ್ಲ ಮಾತುಗಳು ಕೇಳುತ್ತವೆ. ಒಟ್ಟಾರೆ ಮಲ್ಲಿಗೆ ಸಾಕಷ್ಟು ಅಪಮಾನವಾಗುತ್ತದೆ.

ಗೌತಮ್‌ ಮನೆಗೆ ಬೇಗ ಬಂದಿದ್ದಾರೆ. ಭೂಮಿಕಾ ಮತ್ತು ಗೌತಮ್‌ ಮನೆಯಲ್ಲಿ ಸಮಯ ಕಳೆಯುತ್ತಾರೆ. ಜೀವನದ ಕುರಿತು ಒಂದಿಷ್ಟು ಗೌತಮ್‌ ಮಾತನಾಡುತ್ತಾರೆ. "ಮನುಷ್ಯನಿಗೆ ಅಲ್ಪ ತೃಪ್ತಿ ಇರಬಾರದು. ಇದರಿಂದ ಸಾಧನೆ ನಿಂತು ಹೋಗುತ್ತದೆ. ನಮ್ಮನ್ನು ನಂಬಿಕೊಂಡವರಿಗೆ ಕಷ್ಟ ಆಗುತ್ತದೆ" ಎಂದು ಹೇಳುತ್ತಾರೆ. ತುಂಬಾ ಹೊತ್ತು ಮಾತನಾಡುತ್ತಾರೆ. ಆಟದ ಬಳಿಕ ಉಯ್ಯಾಲೆಯಲ್ಲಿ ಕುಳಿತು ಮಾತನಾಡುತ್ತಾರೆ. ಆಗ ಅಲ್ಲಿ ಅಶ್ವಿನಿ ಬೇಸರದಿಂದ ಹೋಗುತ್ತಾಳೆ. "ನಾನು ಚೆಕ್‌ ಕೊಡಲು ಹೋಗಿದ್ದೆ. ಅವಳು ತೆಗೆದುಕೊಳ್ಳಲಿಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ಅಮ್ಮನಲ್ಲಿ ವಿಚಾರಿಸ್ತಿನಿ" ಎಂದು ಹೇಳಿ ಗೌತಮ್‌ ಹೋಗುತ್ತಾನೆ. ಭೂಮಿಕಾ ವಿಷಯ ಹೇಳಲು ಅವಕಾಶ ದೊರಕುವುದಿಲ್ಲ. ಬಳಿಕ ಕೇಕ್‌ ಕಟಟ ಮಾಡುವಾಗಲೂ ಜೈದೇವ್‌ ಕೇಕ್‌ ಕ್ಯಾಂಡಲ್‌ ಉರಿಸುತ್ತಾರೆ. ಆಕೆಯೇ ಈತನ ಬಾಯಿಗೆ ಕೇಕ್‌ ತಿನ್ನಿಸುತ್ತಾಳೆ. ಆಮೇಲೆ ಒಂದು ಹಗ್‌ ಕೂಡ ಇರುತ್ತದೆ. ಮಲ್ಲಿ ಕೂಡ ಹುಟ್ಟು ಹಬ್ಬದ ಶುಭಾಶಯಗಳು ಎಂದು ಹೇಳುತ್ತಾಳೆ. ಮಲ್ಲಿಗೆ ಸಾಕಷ್ಟು ಬೇಸರವಾಗುತ್ತದೆ.

ಗೌತಮ್‌ ಶಕುಂತಲಾ ಬಳಿಗೆ ಬರುತ್ತಾರೆ. ವಿಷಯ ಏನೆಂದು ಕೇಳುತ್ತಾರೆ. "ಅಶ್ವಿನಿ ಬೆಳಗ್ಗೆ ಚೆಕ್‌ ಕೇಳಿದ್ಲು. ಏನಾಯ್ತು ಎಂದು ಸರಿ ಗೊತ್ತಿಲ್ಲ" ಎನ್ನುತ್ತಾರೆ. ಬಳಿಕ ಅಶ್ವಿನಿಯನ್ನು ಕರೆಯುತ್ತಾರೆ. ಅಶ್ವಿನಿ ಬರುತ್ತಾಳೆ. ಏನಾಯ್ತು ಎಂದು ಕೇಳುತ್ತಾಳೆ. "ಬೆಳಗ್ಗೆ ದುಡ್ಡು ಬೇಕು ಎಂದು ಅತ್ತಿಗೆಯನ್ನು ಕೇಳಿದೆ. ಯಾಕೆ ಏನು ಪ್ರಶ್ನಿಸಿದ್ದರು. ನನಗೆ ಯಾರೂ ಹೀಗೆ ಕೇಳಿಲ್ಲ. ನನಗೆ ಸ್ವಲ್ಪ ಬೇಸರವಾಯ್ತು. ಅತ್ತಿಗೆ ಈ ಮನೆಯ ಯುಜಮಾನಿಯಾದ ಮೇಲೆ ಲೆಕ್ಕ ಕೇಳೋದು ಆಕೆಯ ಹಕ್ಕು" ಎಂದು ಹೇಳುತ್ತಾಳೆ. ಗೌತಮ್‌ ಕೋಪಗೊಳ್ಳುತ್ತಾರೆ. "ನಿಮ್ದು ಯಾರ ತಪ್ಪಿಲ್ಲ. ನಾನು ನಿಮ್ಮನ್ನೆಲ್ಲ ಸುಖದಲ್ಲಿ ಬೆಳೆಸಿ ತಪ್ಪು ಮಾಡಿದೆ" ಎಂದು ಶಕುಂತಲಾ ಹೇಳುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ. ಮುಂದೆ ಏನಾಗಲಿದೆ ಎಂಬ ವಿವರ ಮುಂದಿನ ವಿಡಿಯೋದಲ್ಲಿದೆ.

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)