Kreem Movie: ಮಹಿಳೆಯರ ಹತ್ಯೆ, ಮಕ್ಕಳ ಕಣ್ಮರೆಯಂಥ ನೈಜ ಘಟನಾವಳಿಗಳನ್ನೇ ಆಧರಿಸಿ ಕ್ರೀಂ ಸಿನಿಮಾ ಮಾಡಿದ ಅಗ್ನಿ ಶ್ರೀಧರ್‌
ಕನ್ನಡ ಸುದ್ದಿ  /  ಮನರಂಜನೆ  /  Kreem Movie: ಮಹಿಳೆಯರ ಹತ್ಯೆ, ಮಕ್ಕಳ ಕಣ್ಮರೆಯಂಥ ನೈಜ ಘಟನಾವಳಿಗಳನ್ನೇ ಆಧರಿಸಿ ಕ್ರೀಂ ಸಿನಿಮಾ ಮಾಡಿದ ಅಗ್ನಿ ಶ್ರೀಧರ್‌

Kreem Movie: ಮಹಿಳೆಯರ ಹತ್ಯೆ, ಮಕ್ಕಳ ಕಣ್ಮರೆಯಂಥ ನೈಜ ಘಟನಾವಳಿಗಳನ್ನೇ ಆಧರಿಸಿ ಕ್ರೀಂ ಸಿನಿಮಾ ಮಾಡಿದ ಅಗ್ನಿ ಶ್ರೀಧರ್‌

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಎಳೆಯನ್ನೇ ಸಿನಿಮಾ ರೂಪದಲ್ಲಿ ನಿರ್ದೇಶನ ಮಾಡಿದ್ದಾರೆ ಅಭಿಷೇಕ್.‌ ವೇಶ್ಯೆ ಪಾತ್ರದಲ್ಲಿ ಸಂಯುಕ್ತಾ ಹೆಗ್ಡೆ (Samyuktha Hegde) ನಟಿಸಿದರೆ, ಈ ಚಿತ್ರಕ್ಕೆ ಅಗ್ನಿ ಶ್ರೀಧರ್‌ (Agni Sridhar) ಕಥೆ ಮತ್ತು ಸಂಭಾಷಣೆ ಬರೆದ್ದಾರೆ.

ಮಹಿಳೆಯರ ಹತ್ಯೆ, ಮಕ್ಕಳ ಕಣ್ಮರೆಯಂಥ ನೈಜ ಘಟನಾವಳಿಗಳನ್ನೇ ಆಧರಿಸಿ ಕ್ರೀಂ ಸಿನಿಮಾ ಮಾಡಿದ ಅಗ್ನಿ ಶ್ರೀಧರ್‌
ಮಹಿಳೆಯರ ಹತ್ಯೆ, ಮಕ್ಕಳ ಕಣ್ಮರೆಯಂಥ ನೈಜ ಘಟನಾವಳಿಗಳನ್ನೇ ಆಧರಿಸಿ ಕ್ರೀಂ ಸಿನಿಮಾ ಮಾಡಿದ ಅಗ್ನಿ ಶ್ರೀಧರ್‌

Kreem Movie: ಪತ್ರಕರ್ತ ಅಗ್ನಿ ಶ್ರೀಧರ್‌ (Agni Sridhar) ತಾವು ಕಂಡ ಘಟನೆಗಳಿಗೆ ಕಥೆ ರೂಪ ಕೊಟ್ಟು ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಡಾನ್‌ ಜಯರಾಜ್‌ ಹಿನ್ನೆಲೆಯನ್ನೇ ಆಧರಿಸಿ ಹೆಡ್‌ಬುಷ್‌ ಸಿನಿಮಾ ಮಾಡಿದ್ದರು. ಆ ಚಿತ್ರದಲ್ಲಿ ಜಯರಾಜ್‌ ಆಗಿ ಧನಂಜಯ್‌ ಅಬ್ಬರಿಸಿದ್ದರು. ಈಗ ಮತ್ತೊಂದು ಎಳೆಯೊಂದಿಗೆ ಬಂದಿದ್ದಾರೆ. ಈ ಸಲ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನೇ ಕಥಾಹಂದರವಾಗಿಸಿಕೊಂಡು ಕ್ರೀಂ (Kreem) ಹೆಸರಿನ ಚಿತ್ರದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.

ಅಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ, ಅಭಿಷೇಕ್ ಬಸಂತ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಮಹಿಳಾಪ್ರಧಾನ ಚಿತ್ರಕ್ಕೆ ಕ್ರೀಂ ಎಂದು ಶೀರ್ಷಿಕೆ ಇಡಲಾಗಿದೆ. ಸಂಯುಕ್ತಾ ಹೆಗ್ಡೆ ಈ ಚಿತ್ರದ ನಾಯಕಿಯಾಗಿದ್ದು, ಅಚ್ಯುತಕುಮಾರ್, ಅರುಣ್‌ ಸಾಗರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಡಿ.ಕೆ. ದೇವೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ನಿರ್ದೇಶಕ ಅಭಿಷೇಕ್‌ ಬಸಂತ್‌ ಮಾಹಿತಿ ನೀಡಿದ್ದು ಹೀಗೆ.

"ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಸಿನಿಮಾ ಮಾಡಲು ನನಗೆ ರೋಷನ್‌ ಸೇರಿ ಸಾಕಷ್ಟು ಜನ ಸಹಕಾರ ನೀಡಿದ್ದಾರೆ. ಅಗ್ನಿ ಶ್ರೀಧರ್ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. ಮುಖ್ಯವಾಗಿ ಕಥೆ ಬರೆದಿರುವವರಿಗೆ ನಿರ್ದೇಶನ ಇಷ್ಟವಾಗಬೇಕು. ಆ ನಿಟ್ಟಿನಲ್ಲಿ ನಾನು ಗೆದ್ದಿದ್ದೇನೆ. ಇನ್ನು ಚಿತ್ರ ಉತ್ತಮವಾಗಿ ಮೂಡಿಬರಲು ಎಲ್ಲವನ್ನು ಒದಗಿಸುತ್ತಿರುವ ನಿರ್ಮಾಪಕ ದೇವೇಂದ್ರ ಅವರಿಗೆ ಧನ್ಯವಾದ. ನಮ್ಮ ಚಿತ್ರಕ್ಕೆ ಸಂಯುಕ್ತ ಹೆಗ್ಡೆ ಅವರನ್ನು ಬಿಟ್ಟು ಬೇರೆ ಯಾರನ್ನೂ ನಾಯಕಿಯ ಪಾತ್ರಕ್ಕೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಚಿತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಸಾಹಸ ದೃಶ್ಯದಲ್ಲಿ ಅಭಿನಯಿಸುವಾಗ ಅವರ ಕಾಲಿಗೆ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೆ ಆಯಿತು. ಆನಂತರ ಕೂಡ ಅವರು ಮೊದಲಿನ ಹುಮ್ಮಸಿನಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ" ಎಂದರು ನಿರ್ದೇಶಕ ಅಭಿಷೇಕ್ ಬಸಂತ್.

ಕ್ರೀಂ ಎಂದರೆ ಬೀಜಾಕ್ಷರಿ ಮಂತ್ರ..

"ಕ್ರೀಂ" ಎಂದರೆ ಕಾಳಿ ಮಾತೆಯನ್ನು ಆರಾಧಿಸುವ ಬೀಜಾಕ್ಷರಿ ಮಂತ್ರ. ದೇಶದಲ್ಲಿ ಪ್ರತಿ ತಿಂಗಳು 400ಕ್ಕೂ ಹೆಚ್ಚು ಮಹಿಳೆಯರ ಹತ್ಯೆಯಾಗುತ್ತಿದೆ. ಜೊತೆಗೆ ಮಕ್ಕಳೂ ಕಣ್ಮರೆಯಾಗುತ್ತಿದ್ದಾರೆ. ಈ ಪ್ರಕರಣಗಳ ಹಿಂದೆ ಯಾರಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಎನ್ನುವ ಅಂಶವನ್ನಿಟ್ಟುಕೊಂಡು ಕಥೆ ಬರೆದಿದ್ದೇನೆ. ಸಂಯುಕ್ತಾ ಹೆಗ್ಡೆ ಅವರದ್ದಿಲ್ಲಿ ವೇಶ್ಯೆಯ ಪಾತ್ರ. ಈ ಚಿತ್ರದ ಬಗ್ಗೆ ಕೂಡ ಕೆಲವು ವಿವಾದಗಳು ಬರಬಹುದು. ಎದುರಿಸಲು ನಾನು ಸಿದ್ದನಿದ್ದೇನೆ" ಎಂದರು ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಅಗ್ನಿ ಶ್ರೀಧರ್.

ಚಿತ್ರಕ್ಕಾಗಿ ರಕ್ತ ಹರಿಸಿದ್ದೇನೆ..

ಈ ಸಿನಿಮಾಗಾಗಿ ನಾನು 200 ಪರ್ಸೆಂಟ್ ಎಫರ್ಟ್ ಹಾಕಿದ್ದೇನೆ. ಚಿತ್ರೀಕರಣ ಸಮಯದಲ್ಲಿ ಕಾಲಿಗೆ ತೀವ್ರವಾದ ಪೆಟ್ಟಾಯಿತು. ನಾನು ಎರಡು ತಿಂಗಳು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದಿದ್ದು ಇದೇ ಮೊದಲ ಬಾರಿ. ಫಿಸಿಯೋ ಥೆರಪಿ ಮಾಡಿಸಿಕೊಳ್ಳಬೇಕಾದರೆ ನಾನು ಪಟ್ಟ ನೋವು ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ನಾನು ಬೆವರು ಮಾತ್ರ ಹರಿಸಿಲ್ಲ. ರಕ್ತವನ್ನು ಹರಿಸಿದ್ದೇನೆ. ಇಷ್ಟೆಲ್ಲ ಶ್ರಮಪಟ್ಟರು ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ತೃಪ್ತಿಯಿದೆ ಎಂದರು ನಾಯಕಿ ಸಂಯುಕ್ತ ಹೆಗಡೆ.

Whats_app_banner