ನೀನೊಬ್ಬ ಎಳೆ ನಿಂಬೆಕಾಯಿ, ಅಹಿಂಸಾ ಎಂಬ ಹೆಸರನ್ನು ಬದಲಿಸಿಕೋ; ನಟ ಚೇತನ್‌ ಅಹಿಂಸಾಗೆ ಪತ್ರಕರ್ತ ಜಗದೀಶ್‌ ಕೊಪ್ಪ ಬಹಿರಂಗ ಪತ್ರ-sandalwood news journalist jagadish koppa open letter to kannada actor chetan ahimsa facebook post rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನೀನೊಬ್ಬ ಎಳೆ ನಿಂಬೆಕಾಯಿ, ಅಹಿಂಸಾ ಎಂಬ ಹೆಸರನ್ನು ಬದಲಿಸಿಕೋ; ನಟ ಚೇತನ್‌ ಅಹಿಂಸಾಗೆ ಪತ್ರಕರ್ತ ಜಗದೀಶ್‌ ಕೊಪ್ಪ ಬಹಿರಂಗ ಪತ್ರ

ನೀನೊಬ್ಬ ಎಳೆ ನಿಂಬೆಕಾಯಿ, ಅಹಿಂಸಾ ಎಂಬ ಹೆಸರನ್ನು ಬದಲಿಸಿಕೋ; ನಟ ಚೇತನ್‌ ಅಹಿಂಸಾಗೆ ಪತ್ರಕರ್ತ ಜಗದೀಶ್‌ ಕೊಪ್ಪ ಬಹಿರಂಗ ಪತ್ರ

ನಟ ಚೇತನ್‌ ಅಹಿಂಸಾ ಗಾಂಧಿವಾದವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈ ವಿಚಾರವಾಗಿ ಬೇಸರ ವ್ಯಕ್ತಪಡಿಸಿರುವ ಹಿರಿಯ ಪತ್ರಕರ್ತ ಜಗದೀಶ್‌ ಕೊಪ್ಪ, ಚೇತನ್‌ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ನಿನ್ನ ಹೆಸರಿನ ಜೊತೆ ಇರುವ ಅಹಿಂಸಾ ಎಂಬ ಪದವನ್ನು ಕಿತ್ತು ಹಾಕು ಎಂದು ಸಲಹೆ ನೀಡಿದ್ದಾರೆ.

ನೀನೊಬ್ಬ ಎಳೆ ನಿಂಬೆಕಾಯಿ, ಅಹಿಂಸಾ ಎಂಬ ಹೆಸರನ್ನು ಬದಲಿಸಿಕೋ; ನಟ ಚೇತನ್‌ ಅಹಿಂಸಾಗೆ ಪತ್ರಕರ್ತ ಜಗದೀಶ್‌ ಕೊಪ್ಪ ಬಹಿರಂಗ ಪತ್ರ
ನೀನೊಬ್ಬ ಎಳೆ ನಿಂಬೆಕಾಯಿ, ಅಹಿಂಸಾ ಎಂಬ ಹೆಸರನ್ನು ಬದಲಿಸಿಕೋ; ನಟ ಚೇತನ್‌ ಅಹಿಂಸಾಗೆ ಪತ್ರಕರ್ತ ಜಗದೀಶ್‌ ಕೊಪ್ಪ ಬಹಿರಂಗ ಪತ್ರ (Courtesy: Jagadish Koppa, Hadimani T F)

ಆ ದಿನಗಳು ಸಿನಿಮಾ ನಟ ಚೇತನ್‌ ಅಹಿಂಸಾ, ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗಿದ್ದು ಹೆಚ್ಚು. ಸದಾ ಒಂದಲ್ಲಾ ಒಂದು ವಿಚಾರದಲ್ಲಿ ಚರ್ಚೆಯಾಗುವ ಚೇತನ್‌ ಅಹಿಂಸಾ, ಗಾಂಧಿವಾದ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಹಲವರು ಚೇತನ್‌ ಅಹಿಂಸಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಹಿರಿಯ ಪತ್ರಕರ್ತ ಜಗದೀಶ್‌ ಕೊಪ್ಪ, ಚೇತನ್‌ ಅಹಿಂಸಾ ಅವರ ನಡೆಯನ್ನು ವಿರೋಧಿಸಿದ್ದಾರೆ. ತಮ್ಮ ಫೇಸ್‌ಬುಕ್‌ನಲ್ಲಿ ಚೇತನ್‌ಗೆ ಬಹಿರಂಗ ಪತ್ರವೊಂದರನ್ನು ಬರೆದು ಬುದ್ಧಿ ಹೇಳಿದ್ದಾರೆ. ಈ ಪೋಸ್ಟನ್ನು ಬರಹಗಾರ ಹಡಿಮನಿ ಟಿಎಫ್‌ ಹಂಚಿಕೊಂಡಿದ್ದಾರೆ. ಪತ್ರದ ಸಾರಾಂಶ ಹೀಗಿದೆ.

ಚೇತನ್ ಅಂಹಿಂಸಾ ಎಂಬ ಕೂಸಿಗೊಂದು ಬಹಿರಂಗ ಪತ್ರ

ತಮ್ಮಾ ನೀನು ಒಬ್ಬ ಕನ್ನಡದ ಸೂಕ್ಷ್ಮ ಚಿಂತನೆಯುಳ್ಳ ನಟ ಎಂದು ಭಾವಿಸಿದ್ದೆ. ನಿನ್ನ ಅಭಿನಯದ ಆ ದಿನಗಳು ಸಿನಿಮಾವನ್ನು ನನ್ನ ಮಿತ್ರರಾದ ಅಗ್ನಿ ಶ್ರೀಧರ್ ಅವರ ಕಾರಣಕ್ಕಾಗಿ ನೋಡಿದ್ದೆ. ಇರಲಿ, ಇತ್ತೀಚೆಗೆ ಪಠ್ಯ ಪುಸ್ತಕ ಕುರಿತು ನೀನು ವ್ಯಕ್ತ ಪಡಿಸಿರುವ ಅಭಿಪ್ರಾಯಗಳ ಕುರಿತು ನನ್ನ ಅನೇಕ ಮಿತ್ರರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡ ಕಾರಣಕ್ಕಾಗಿ ನಿನ್ನೆ ರಾತ್ರಿ ನಿನ್ನ ಪುಟಕ್ಕೆ ಹೋಗಿ ಒಮ್ಮೆ ಕಣ್ಣಾಡಿಸಿ ಬಂದೆ. ಆ ಕ್ಷಣಕ್ಕೆ ನನಗೆ ಮೈ ಉರಿದು ಹೋಯಿತು. ಗಾಂಧಿ ಮತ್ತು ನೆಹರೂ ಕುರಿತಾಗಿ ನೀನು ವ್ಯಕ್ತಪಡಿಸಿರುವ ಅಭಿಪ್ರಾಯಗಳು ನೀನೊಬ್ಬ ಎಳೆ ನಿಂಬೆಕಾಯಿ ಎಂದು ಸಾಬೀತಾಯಿತು.

ಅಯ್ಯಾ ಕೂಸೇ ಅಮೇರಿಕಾದಲ್ಲಿ ಹುಟ್ಟಿ ಬೆಳೆದು ಅಲ್ಲಿನ ಕಾನ್ವೆಂಟ್ ಶಿಕ್ಷಣದಲ್ಲಿ ಬೆಳೆದ ನೀನು ಭಾರತದ ಇತಿಹಾಸವನ್ನು ಗ್ರಹಿಸಲು ಕನಿಷ್ಟ ಐವತ್ತು ವರ್ಷಗಳು ಬೇಕು. ಇವತ್ತಿನ ವರ್ತಮಾನದ ಭಾರತದಲ್ಲಿ ಗಾಂಧಿವಾದ , ಅಂಬೇಡ್ಕರ್ ವಾದ ಎಂಬುದಿಲ್ಲ. ಇರುವುದು ಒಂದೇ ವಾದ. ಅದು ಮನುಷತ್ವದ ವಾದ. ಗಾಂಧೀಜಿಯವರು ಅಂಬೇಡ್ಕರ್‌ಗಿಂತ 21 ವರ್ಷ ಹಿರಿಯವರಾದರೂ ಅಂಬೇಡ್ಕರ್‌ರವರಿಂದ ತುಂಬಾ ಪ್ರಭಾವಿತರಾಗಿದ್ದಾರೆ. ಹಾಗಾಗಿ ಅವರು ವರ್ಣಾಶ್ರಮದ ಬಗೆಗಿನ ಪ್ರೀತಿಯನ್ನು ಕಳಚಿ ಅಸ್ಪೃಶ್ಯತೆಯ ಬಗ್ಗೆ ಹೋರಾಡಲು ತೊಡಗಿಸಿಕೊಂಡರು. ಅವರು ಬದುಕಿರುವವರೆಗೂ ಅಂತರ್ಜಾತಿಯ ವಿವಾಹ ಹೊರತು ಪಡಿಸಿ ಇತರೆ ವಿವಾಹಗಳಲ್ಲಿ ಭಾಗವಹಿಸಲಿಲ್ಲ. ಹರಿಜರಿಗೆ ಪ್ರವೇಶವಿಲ್ಲದ ಹಿಂದೂ ದೇವಾಲಯಗಳಿಗೆ ಹೋಗಲಿಲ್ಲ. ಆ ಕಾಲಘಟ್ಟದಲ್ಲಿ ಅವರು ದಲಿತೇತರರಾಗಿ ಇಂತಹ ನಿರ್ಣಯಗಳನ್ನು ತೆಗೆದುಕೊಂಡಿದ್ದು ಮತ್ತು ತಮ್ಮ ಅನುಯಾಯಿಗಳಿಗೆ ಬೋಧಿಸಿದ್ದು ಸಣ್ಣ ಸಂಗತಿಯೇನಲ್ಲ.

ನಿನ್ನ ಹೆಸರಿನ ಹಿಂದೆ ಇರುವ ಅಹಿಂಸಾ ಹೆಸರನ್ನು ಕಿತ್ತು ಹಾಕು

ಅಂಬೇಡ್ಕರ್ ಅವರನ್ನು ಗಾಂಧೀಜಿ ಭೇಟಿ ಮಾಡಿದ ಸಂದರ್ಭದಲ್ಲಿ ಅಂಬೇಡ್ಕರ್ ಹೇಳಿದ ‘ ಬಾಪು ನಿಮಗೆಲ್ಲಾ ಒಂದು ತಾಯಿನಾಡು ಎಂಬ ನೆಲ ಇದೆ. ಆದರೆ ನನಗೆ ಮತ್ತು ನನ್ನ ಸಹೋದರರಿಗೆ ಈ ದೇಶದಲ್ಲಿ ತಾಯಿನಾಡು ಎಂಬುದಿಲ್ಲ. ನಾವು ಬದುಕಿದ್ದೂ ಪ್ರಾಣಿಗಳಂತೆ ಜೀವಿಸಬೇಕಾಗಿದೆ’ ಎಂಬ ಮಾತು ಮಹಾತ್ಮನನ್ನು ಇನ್ನಿಲ್ಲದಂತೆ ಅಲುಗಾಡಿಸಿಬಿಟ್ಟಿತು. ಇಂತಹ ಇತಿಹಾಸದ ಗ್ರಹಿಕೆಗಳಿದ್ದರೆ ಮಾತ್ರ ನಮಗೆ ಅಂಬೇಡ್ಕರ್ ಮತ್ತು ಗಾಂಧಿ ದಕ್ಕುತ್ತಾರೆ.

ಇದನ್ನೂ ಓದಿ:

ತಮ್ಮಾ 1992 ರಲ್ಲಿ ಲಂಕೇಶರು ನನ್ನ ಎದೆಯೊಳಗೆ ಗಾಂಧಿಜಿ ಚಿಂತನೆಯ ಬೀಜವನ್ನು ಬಿತ್ತಿದ್ದರು. 30 ವರ್ಷಗಳ ಕಾಲ ನಾನು ಗಾಂಧೀಜಿ ಕುರಿತು ಓದಿದ್ದು ಮತ್ತು ಚಿಂತಿಸಿದ ಫಲವಾಗಿ ನನಗೆ ಅವರು ಶೇಕಡ ಇಪ್ಪತ್ತೈದರಷ್ಟು ಭಾಗ ಮಾತ್ರ ದಕ್ಕಿದ್ದಾರೆ. ಜೀವನ ಪೂರ್ತಿ ಓದಿದರೂ ಅವರದು ದಕ್ಕಲಾರದ ವ್ಯಕ್ತಿತ್ವ. ಏಕೆಂದರೆ ಗಾಂಧೀಜಿ ಮಾತುಗಳಿಗೆ ಮತ್ತು ಓದಿಗೆ ದಕ್ಕುವ ವ್ಯಕ್ತಿಯಲ್ಲ ಅವರನ್ನು ಎದೆಗೆ ಇಳಿಸಿಕೊಂಡು ಚಿಂತಿಸಿದಾಗ ಮಾತ್ರ ಒಂದಿಷ್ಟು ದಕ್ಕಬಹುದು. ಇರಲಿ ನಿನ್ನ ಓದಿಗೆ ಈ ಕೆಳಗಿನ ಪುಸ್ತಕಗಳನ್ನು ಸೂಚಿಸಿದ್ದೀನಿ. ಮೊದಲು ಇವುಗಳನ್ನು ಓದಿ ನಂತರ ಗಾಂಧಿ ಮತ್ತು ನೆಹರೂ ಬಗ್ಗೆ ಮಾತನಾಡು. ಎಲ್ಲಕಿಂತ ಮೊದಲು ನಿನ್ನ ಹೆಸರಿನ ಹಿಂದೆ ಇರುವ ಅಹಿಂಸಾ ಹೆಸರನ್ನು ಕಿತ್ತು ಹಾಕು. ಈ ಜಗತ್ತಿಗೆ ಅಹಿಂಸೆಯ ಪರಿಕಲ್ಪನೆಯನ್ನು ನೀಡಿದ ಗಾಂಧೀಜಿ ಬಗ್ಗೆ ನಿನಗೆ ಗೌರವ ಇಲ್ಲದಿದ್ದ ಮೇಲೆ ಅಂಹಿಂಸೆಯ ಶಬ್ದ ಬಳಸುವ ಯೋಗ್ಯತೆ ಮತ್ತು ನೈತಿಕತೆ ಎರಡೂ ನಿನಗಿಲ್ಲ.

ಪುಸ್ತಕಗಳ ಪಟ್ಟಿ ಹೀಗಿದೆ ನೋಡು

MohanDas, The story Of a Man, his people and the empire by RajMohan Gandhi

The Price of Partition By Rafiq Zakaria

The Thept Of india By Roy Moxham

My Gandhi By Narayan Desai

India wins Freedom By Maulana Azad

Partition By Barney White Spunner

Freedom at Midnight By Dominique Lapiere and LarryCollind

R.S.S. School Texts anf Murder of Mahathma Gandhi Edited by Adithya Mukherjee, Mridula Mukherjee and Suchetha Mhajan

Gandhi at First Sight By Thomas weber

iIndia After Gandhi By Ramachandra Guha

Gandhi Edition- An Autobiography M.K. Gandhi: Introdused and notes by Tridip Suhard

ಈ ಮೇಲಿನ ಕೃತಿಗಳು ನನ್ನ ಬಳಿ ಇವೆ. ಮೈಸೂರಿನಲ್ಲಿ ಯಾವೊದೋ ಟ್ರಸ್ಟ್ ಮಾಡಿದ್ದೀಯಾ ಎಂದು ಕೇಳಿದ್ದೀನಿ. ಮೈಸೂರಿಗೆ ಬಂದಾಗ ಮನೆಗೆ ಬಾ, ಆರು ತಿಂಗಳ ಅವಧಿಯಲ್ಲಿ ವಾಪಸ್ ತಂದು ಕೊಡಬೇಕು ಎಂಬ ಷರತ್ತಿನ ಮೇಲೆ ನಿನಗೆ ಕೊಡಲು ಸಿದ್ಧನಿದ್ದೀನಿ. ಮೊದಲು ಓದು ಆನಂತರ ಈ ಭಾರತದ ಇತಿಹಾಸದ ಬಗ್ಗೆ ಮಾತನಾಡುವುದನ್ನು ಕಲಿಯುವುದು ಒಳ್ಳೆಯದು ತಮ್ಮಾ. ನೀನು ಇನ್ನೊಬ್ಬ ವಕ್ರತೀರ್ಥ ಅಥವಾ ಚಕ್ರತೀರ್ಥ ಚೂಲಿಬೆಲೆ ಆಗುವುದು ಬೇಡ.

-ಜಗದೀಶ್ ಕೊಪ್ಪ

Jagadish Koppa

ಈ ಪೋಸ್ಟ್‌ಗೆ ಹಡಿಮನಿ ಅವರು ನಟ ಚೇತನ್ ಅಂಹಿಸಾ ಅವರ ಬಗ್ಗೆ ,ಅವರು ಪ್ರತಿರೋಧಿಸುವ ಹಲವು ಘಟನೆಗಳ ಬಗ್ಗೆ ಅಭಿಮಾನವಿರುವ ನನಗೆ,ಚೇತನ್ ಅವರಿಗೆ ಎಚ್ಚರಿಸುವ, ತಿಳಿ ಹೇಳುವ ರೀತಿಯ ಈ ಬರಹ ಇಷ್ಟವಾಗಿತ್ತು.ಈ ಟಿಪ್ಪಣಿಯನ್ನು ಹಲವರು ನಿನ್ನೆಯೇ ಹಂಚಿಕೊಂಡಿದ್ದರು.ಈ ಟಿಪ್ಪಣಿಯ ಮೂಲ ಬರಹಗಾರರು ಯಾರಿರಬಹುದು ಎನ್ನುತ್ತಿರುವಾಗ ಗೊತ್ತಾಯಿತು;ಜಗದೀಶ್ ಕೊಪ್ಪ ಅವರೆಂದು. ಅತ್ಯುತ್ತಮ ಬರಹ ಸರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

mysore-dasara_Entry_Point