ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾಯಿಗೆ ಮತ್ತೊಂದು ಗೆಲುವು; ಬಲಿಜ ಸಂಘದ ಚುನಾವಣೆಯಲ್ಲಿ ವಿನ್ ಆದ ಮೀನಾ ತೂಗುದೀಪ ಶ್ರೀನಿವಾಸ್
ಕನ್ನಡ ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅವರ ಮೈಸೂರಿನ ಜಯನಗರದಲ್ಲಿ ನಡೆದ ಬಲಿಜ ಸಂಘದ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅವರ ಮೈಸೂರಿನ ಜಯನಗರದಲ್ಲಿ ನಡೆದ ಬಲಿಜ ಸಂಘದ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ. ಬಲಿಜ ಸಂಘದ ವತಿಯಿಂದ ನಡೆದ ಚುನಾವಣೆಯಲ್ಲಿ ಕಾಟೇರ ನಟ ದರ್ಶನ್ ತಾಯಿಗೆ ಒಟ್ಟು 375 ಮತಗಳಲ್ಲಿ 221 ಮತಗಳು ದೊರಕಿದ್ದವು. ಈ ಮೂಲಕ ಬಲಿಜ ಸಂಘಕ್ಕೆ ಮೀನಾ ತೂಗುದೀಪ ಅವರು ಆಯ್ಕೆಯಾಗಿದ್ದಾರೆ.
"ಮತ ನೀಡಿದ ಎಲ್ಲರಿಗೂ ಧನ್ಯವಾದ" ಎಂದು ಮೀನಾ ತೂಗುದೀಪ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಜಯನಗರದಲ್ಲಿ ಬಲಿಜ ಸಂಘಕ್ಕೆ ಈ ಚುನಾವಣೆ ನಡೆದಿತ್ತು.
ಕಳೆದ ವರ್ಷ ದರ್ಶನ್ ತಾಯಿಗೆ ಇನ್ನೊಂದು ಗೆಲುವು ದೊರಕಿತ್ತು. ಮೈಸೂರಿನ ತ್ಯಾಗರಸ್ತೆಯಲ್ಲಿರುವ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಯಲ್ಲಿ ಮೀನಾ ತೂಗುದೀಪ ಶ್ರೀನಿಸ್ ಗೆಲುವು ಪಡೆದಿದ್ದರು. ಬ್ಯಾಂಕ್ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರು ಗೆಲುವು ಪಡೆದಿದ್ದರು.
ಮೈಸೂರಿನ ಕೋ ಆಪರೇಟಿವ್ ಬ್ಯಾಂಕ್‌ನ ಈ ಚುನಾವಣೆಯಲ್ಲಿ ಸುಮಾರು 1200 ಸದಸ್ಯರು ಮತ ಚಲಾವಣೆ ಮಾಡಿದ್ದರು. ದರ್ಶನ್ ತಾಯಿ ಮೀನಾ ಅವರಿಗೆ 642 ಮತಗಳು ದೊರಕಿದ್ದವು. ಇದೀಗ ಬಲಿಜ ಸಂಘದ ಚುನಾವಣೆಯಲ್ಲೂ 221 ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ.
ದರ್ಶನ್ ತಾಯಿ ಅವರು ತಮ್ಮ ಕುಟುಂಬದ ಕುರಿತು ಅಪಾರ ಕಾಳಜಿ ವಹಿಸುತ್ತಿದ್ದರು. ಬಾಲ್ಯದಿಂದಲೇ ತನ್ನ ಮಕ್ಕಳನ್ನು ಇವರು ಕಣ್ರೆಪ್ಪೆಯಂತೆ ನೋಡಿಕೊಂಡಿದ್ದರು. ತಮ್ಮ ಪತಿ ತೂಗುದೀಪ ಶ್ರೀನಿವಾಸ್ ಅವರ ಎರಡು ಕಿಡ್ನಿ ವೈಫಲ್ಯವಾದಗ ತನ್ನ ಒಂದು ಕಿಡ್ನಿಯನ್ನೇ ನೀಡಿದ್ದರು. "ಈಕೆ ನನಗೆ ಪುನರ್‌ಜನ್ಮ ನೀಡಿದ ದೇವತೆ" ಎಂದು ತಮ್ಮ ಪತ್ನಿ ಕುರಿತು ಶ್ರೀನಿವಾಸ್ ತೂಗುದೀಪ ಹೇಳುತ್ತಿದ್ದರೆಂದು ವರದಿಗಳು ತಿಳಿಸಿವೆ.