Darshan: ಕಾಟೇರ ಟೈಟಲ್‌ ಕೊಟ್ಟದ್ದು ನಾನೇ ಎಂದವರಿಗೆ ಅಯ್ಯೋ ತಗಡೇ ಎಂದು ಗುಮ್ಮಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌
ಕನ್ನಡ ಸುದ್ದಿ  /  ಮನರಂಜನೆ  /  Darshan: ಕಾಟೇರ ಟೈಟಲ್‌ ಕೊಟ್ಟದ್ದು ನಾನೇ ಎಂದವರಿಗೆ ಅಯ್ಯೋ ತಗಡೇ ಎಂದು ಗುಮ್ಮಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌

Darshan: ಕಾಟೇರ ಟೈಟಲ್‌ ಕೊಟ್ಟದ್ದು ನಾನೇ ಎಂದವರಿಗೆ ಅಯ್ಯೋ ತಗಡೇ ಎಂದು ಗುಮ್ಮಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌

Challenging star Darshan: ಪ್ರಸನ್ನ ಥಿಯೇಟರ್‌ಗೆ 50 ವರ್ಷ ಮತ್ತು ಕಾಟೇರ ಸಿನಿಮಾಕ್ಕೆ 50 ದಿನ ಪೂರೈಸಿದ ಸಂದರ್ಭದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಕಾಟೇರ ಟೈಟಲ್‌ಗೆ ಸಂಬಂಧಪಟ್ಟಂತೆ ಮಾತನಾಡಿದ್ದಾರೆ.

ಕಾಟೇರ ಟೈಟಲ್‌ ವಿವಾದ ಕುರಿತು ದರ್ಶನ್‌ ಸ್ಪಷ್ಟನೆ
ಕಾಟೇರ ಟೈಟಲ್‌ ವಿವಾದ ಕುರಿತು ದರ್ಶನ್‌ ಸ್ಪಷ್ಟನೆ

ಬೆಂಗಳೂರು: ಉದ್ಯಾನಗರಿಯ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾದ ಪ್ರಸನ್ನ ಥಿಯೇಟರ್‌ಗೆ 50 ವರ್ಷವಾಗಿದ್ದು, ಇದೇ ಸಮಯದಲ್ಲಿ ಕಾಟೇರ ಸಿನಿಮಾ 50 ದಿನ ಪೂರೈಸಿದೆ. ಈ ಎರಡು ಸಂಭ್ರಮವನ್ನು ಒಟ್ಟಿಗೆ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳ ಮುಂದೆ ದರ್ಶನ್‌ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕಾಟೇರ ಟೈಟಲ್‌ ಕುರಿತು ಕ್ಲಾರಿಟಿ ನೀಡಿದ್ದಾರೆ. ಕ್ಲಾರಿಟಿ ಅಥವಾ ಸಮಜಾಯಿಷಿ ನೆಪದಲ್ಲಿ ಟೈಟಲ್‌ ನಾನೇ ನೀಡಿದ್ದು ಎಂದವರಿಗೆ ತಿರುಗೇಟು ನೀಡಿದ್ದಾರೆ.

ಕಾಟೇರ ಟೈಟಲ್‌ ಕುರಿತು ದರ್ಶನ್‌ ಏನಂದ್ರು?

"ಕಾಟೇರ ಸಿನಿಮಾದ ಯಶಸ್ಸಿನ ಬಗ್ಗೆ ಏನೂ ಹೇಳುವುದಿಲ್ಲ. ಈಗಾಗಲೇ ಮಾತನಾಡಿದ್ದೇವೆ. ಈ ಸಂದರ್ಭದಲ್ಲಿ ಕೆಲವು ಕ್ಲಾರಿಫಿಕೇಷನ್‌ ಕೊಟ್ಟು ಬಿಡುತ್ತೇನೆ. ಕಾಟೇರ ಚಿತ್ರದ ಕಥೆ ನಾನು ಮಾಡಿಸ್ಧೆ, ಟೈಟಲ್‌ ನಾನು ಮಾಡಿಸ್ದೆ, ನಾ...ನೇ.... ಮಾಡಿಸ್ದೆ ಟೈಟಲ್‌ ಇಟ್ಟಿದ್ದೇ ನಾನು.. ಎಂದೆಲ್ಲ ಹೇಳ್ತಾರೆ. ಅಯ್ಯೋ ತಗಡೇ... ನಿನಗೆ ರಾಬರ್ಟ್‌ ಟೈಟಲ್‌ ಕೊಡಿಸಿರೋದೇ ನಾನು. ನೀನೇ ಟೈಟಲ್‌ ಮಾಡಿಸ್ದೆ ಎಂದಾದರೆ ಇಂತಹ ಒಳ್ಳೆಯ ಕಥೆ ಯಾಕೆ ಬಿಟ್ಟೆ ನೀನು? ನಿನ್ನ ಜಡ್ಜ್‌ಮೆಂಟ್‌ ಅಷ್ಟು ಚೆನ್ನಾಗಿದ್ದರೆ ನೀನೇ ಮಾಡಬಹುದಿತ್ತಲ್ವ?" ಎಂದು ವೇದಿಕೆಯಲ್ಲಿ ದರ್ಶನ್‌ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಚಿತ್ರತಂಡಕ್ಕೆ ಸಂಬಂಧಪಟ್ಟವರನ್ನು ಕರೆದು ಕ್ಲಾರಿಟಿ ಕೊಟ್ಟಿದ್ದಾರೆ. ಟೈಟಲ್‌ದು ಕಥೆ ನೀವು ಸ್ವಲ್ಪ ಹೇಳಿ ಸ್ವಾಮಿ ಎಂದು ಸಂಬಂಧಪಟ್ಟವರ ಬಾಯಿಯಿಂದಲೇ ಹೇಳಿಸಿದ್ದಾರೆ. "ಮದಗಜ ಸಿನಿಮಾದ ಟೈಟಲ್‌ ರಾಮಮೂರ್ತಿ ಸರ್‌ ಬಳಿ ಇತ್ತು. ತೆಗೆದುಕೊಳ್ಳಬೇಕಾದರೆ ಕಾಟೇರ ಟೈಟಲ್‌ ಅನ್ನ ಉಮಾಪತಿ ಸರ್‌ಗೆ ಕೊಟ್ರು. ಮದಗಜ ಟೈಟಲ್‌ ಅನ್ನು ನನಗೆ ಬಾಸ್‌ ಹೇಳಿದಾಕ್ಷಣ ನಮಗೆ ಕೊಟ್ರು" ಎಂದು ಮದಗಜ ಚಿತ್ರದ ನಿರ್ದೇಶಕ ಮಹೇಶ್‌ ಹೇಳಿದ್ದಾರೆ.ಸ

ಇದೇ ಸಂದರ್ಭದಲ್ಲಿ ತರುಣ್‌ ಸುಧೀರ್‌ ಕಡೆಯಿಂದಲೂ ಈ ಅಭಿಪ್ರಾಯವನ್ನು ದರ್ಶನ್‌ ಪಡೆದರು. ನಮ್ಮಲ್ಲಿ ಬ್ಯಾನರ್‌ ಇದ್ದರೂ ಕೂಡ ನಾವು ಬೇರೆ ಕಡೆ ಏಕೆ ಟೈಟಲ್‌ ರಿಜಿಸ್ಟ್ರೇಷನ್‌ ಮಾಡಿದ್ವಿ ಅನ್ನೋ ವಿಚಾರದ ಕುರಿತು ಮಾತನಾಡಿದ್ದಾರೆ. "ಆ ಟೈಟಲು ಎಲ್ಲಿ ರಿಜಿಸ್ಟ್ರಾರ್‌ ಮಾಡೋಕ್ಕೆ ಹೇಳಿದ್ವಿ ಚಿನ್ನ ಹೇಳು ಫಸ್ಟ್‌" ಎಂದು ದರ್ಶನ್‌. ಅದಕ್ಕೆ ತರುಣ್‌ "ನಮ್ಮ ಬ್ಯಾನರ್‌ನಲ್ಲೇ ರಿಜಿಸ್ಟ್ರೇಷನ್‌ ಮಾಡೋಕ್ಕೆ ಹೇಳಿದ್ರಿ. ನಮ್ಮಲ್ಲಿ ಜಾಗ ಇರಲಿಲ್ಲ. ನಮ್ಮ ಬ್ಯಾನರ್‌ನಲ್ಲಿ ಜಾಗ ಇರಲಿಲ್ಲವಾದ ಕಾರಣ ಅಲ್ಲಿ ರಿಜಿಸ್ಟ್ರೇಷನ್‌ ಮಾಡಿದ್ವಿ. ಅದು ಕೂಡ ನಮ್ಮ ಬ್ಯಾನರ್‌ ಇದ್ದ ಹಾಗೆ ಎಂದು ಅಲ್ಲಿ ಮಾಡಿದ್ವಿ. ಟೈಟಲ್‌ ಕೊಟ್ಟಿದ್ದು ನೀವೇ" ಎಂದು ತರುಣ್‌ ಸುಧೀರ್‌ ಸ್ಪಷ್ಟನೆ ನೀಡಿದರು.

ಏನಿದು ಕಾಟೇರ ಟೈಟಲ್‌ ವಿವಾದ?

ಕಾಟೇರ ಸಿನಿಮಾದ ಟೈಟಲ್‌ ಅನ್ನು ತಾನು ನೀಡಿರುವುದಾಗಿ ಉಮಾಪತಿ ಶ್ರೀನಿವಾಸ್‌ ಗೌಡ ಹೇಳಿದ್ದರು. ಇವರ ಜತೆ ಈ ಹಿಂದೆ ರಾಬರ್ಟ್‌ ಸಿನಿಮಾವನ್ನು ಮಾಡಿದ್ದರು. ಕಾಟೇರ ಸಕ್ಸಸ್‌ ಸಂದರ್ಭದಲ್ಲಿ ಉಮಾಪತಿಯವರು "ಕಾಟೇರ ಟೈಟಲ್‌ ನೀಡಿದ್ದು ನಾನು" ಇತ್ಯಾದಿ ಹಲವು ವಿಚಾರಗಳನ್ನು ಮಾತನಾಡಿದ್ದರು. ಇದಕ್ಕೆ ಇಂದು ಪ್ರಸನ್ನ ಥಿಯೇಟರ್‌ ವೇದಿಕೆಯಲ್ಲಿ ದರ್ಶನ್‌ ಮಾರುತ್ತರ ನೀಡಿದ್ದಾರೆ.

Whats_app_banner