Kaatera Song Lyrics: ಕಾಟೇರನ ಅಂಗಳದಿಂದ ತೇಲಿ ಬಂತು ಯೋಗರಾಜ್‌ ಭಟ್ರ ಮೆಲೋಡಿ ಗೀತೆ; ಅನುರಾಗವ ಕಲಿಸಲು ನೀ ಬಂದೆಯ ಹೇಳು ಹಾಡಿನ ಲಿರಿಕ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  Kaatera Song Lyrics: ಕಾಟೇರನ ಅಂಗಳದಿಂದ ತೇಲಿ ಬಂತು ಯೋಗರಾಜ್‌ ಭಟ್ರ ಮೆಲೋಡಿ ಗೀತೆ; ಅನುರಾಗವ ಕಲಿಸಲು ನೀ ಬಂದೆಯ ಹೇಳು ಹಾಡಿನ ಲಿರಿಕ್ಸ್‌

Kaatera Song Lyrics: ಕಾಟೇರನ ಅಂಗಳದಿಂದ ತೇಲಿ ಬಂತು ಯೋಗರಾಜ್‌ ಭಟ್ರ ಮೆಲೋಡಿ ಗೀತೆ; ಅನುರಾಗವ ಕಲಿಸಲು ನೀ ಬಂದೆಯ ಹೇಳು ಹಾಡಿನ ಲಿರಿಕ್ಸ್‌

Kaatera Anuraagava Kalisalu Song Lyrics: ಕಾಟೇರ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ದರ್ಶನ್‌ ಸಿನಿಮಾದ ಇನ್ನೊಂದು ಹಾಡು "ಅನುರಾಗವ ಕಲಿಸಲು ನೀ ಬಂದೆಯ ಹೇಳು" ಬಿಡುಗಡೆಯಾಗಿದೆ. ಯೋಗರಾಜ್‌ ಭಟ್‌ ರಚಿಸಿದ ಈ ಪ್ರೇಮಗೀತೆಯನ್ನು ಹೃದಯ ತಟ್ಟುವಂತೆ ಹಾಡಿದ್ದಾರೆ ವಾಣಿ ಹರಿಕೃಷ್ಣ. ಈ ಹಾಡಿನ ಲಿರಿಕ್ಸ್‌ ಇಲ್ಲಿದೆ.

Kaatera Song Lyrics: ಕಾಟೇರನ ಅಂಗಳದಿಂದ ತೇಲಿ ಬಂತು ಯೋಗರಾಜ್‌ ಭಟ್ರ ಮೆಲೋಡಿ ಗೀತೆ
Kaatera Song Lyrics: ಕಾಟೇರನ ಅಂಗಳದಿಂದ ತೇಲಿ ಬಂತು ಯೋಗರಾಜ್‌ ಭಟ್ರ ಮೆಲೋಡಿ ಗೀತೆ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಯಾಗುವ ಮುನ್ನ ಹೃದಯಕ್ಕೆ ಆಪ್ತವಾಗುವಂತಹ ಪ್ರೇಮಗೀತೆಯೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಯೋಗರಾಜ್‌ ಭಟ್‌ ರಚನೆಯ "ಅನುರಾಗವ ಕಲಿಸಲು ನೀ ಬಂದೆಯ ಹೇಳು, ಜನು ಜನುಮದ ನಂಟಿಗೆ ನೀ ಕಂಡೆಯಾ ಹೇಳು" ಎಂಬ ಸುಂದರ ಸಾಹಿತ್ಯದ ಗೀತೆಯನ್ನು ಪ್ರೇಮಿಗಳ ಹೃದಯ ತಟ್ಟುವಂತೆ ಹಾಡಿದ್ದಾರೆ ವಾಣಿ ಹರಿಕೃಷ್ಣ. ಸಾಹಿತ್ಯ ಮತ್ತು ಗಾಯನದ ನಡುವೆ ಹಾಡಿನ ಮೋಡಿ ಹೆಚ್ಚಿಸಿದೆ ಹರಿಕೃಷ್ಣ ಸಂಗೀತ.

ಈ ಹಾಡಿನ ಲಿರಿಕಲ್‌ ವಿಡಿಯೋದಲ್ಲಿ ದರ್ಶನ್‌ ಮತ್ತು ಆರಾಧನಾ ಅವರ ಬಾಲ್ಯದ ಪಾತ್ರಗಳನ್ನು ತೋರಿಸಲಾಗಿದೆ. ದರ್ಶನ್‌ ಅಕ್ಕನ ಮಗ ಚಂದು ಈ ಲಿರಿಕಲ್‌ ವಿಡಿಯೋದಲ್ಲಿ ಕಾಣಿಸಿದ್ದಾರೆ. ಜತೆಗೆ ದರ್ಶನ್‌ ಮತ್ತು ಆರಾಧನಾರನ್ನು ತೋರಿಸಲಾಗಿದೆ. ಯೋಗರಾಜ್‌ ಭಟ್‌ ಅವರ ಲೇಖನಿಯಿಂದ ಬಂದ ಇತ್ತೀಚಿನ ಅತ್ಯುತ್ತಮ ಅಪ್ಪಟ್ಟ ಕನ್ನಡ ಹಾಡೆಂದು ಫ್ಯಾನ್ಸ್‌ ಹೇಳುತ್ತಿದ್ದಾರೆ. "ಒಂದು ಒಳ್ಳೆ ಅಪ್ಪಟ ಕನ್ನಡ ಪದಗಳ ಜೋಡಣೆಯ ಹಾಡಿನ ಸಾಲುಗಳನ್ನು ಕೇಳಿ ತುಂಬಾ ಸಂತೋಷವಾಯಿತು. ಇತ್ತೀಚಿನ ದಿನಗಳಲ್ಲಿ ಕನ್ನಡ ಪದಗಳ ಬಳಕೆ ಹಾಡುಗಳಲ್ಲಿ ಕಡಿಮೆ ಆಗಿದವೆ ಅನ್ನಿಸುತಿತ್ತು" ಎಂದು ಯೂಟ್ಯೂಬ್‌ನಲ್ಲಿ ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಅಹಾ ಅದ್ಭುತ ಗೀತೆ ತುಂಬಾ ಸೊಗಸಾಗಿದೆ ಶುಭವಾಗಲಿ ನಮ್ಮ ಕನ್ನಡ ಕಾಟೇರ ಚಿತ್ರಕ್ಕೆ ಬಾಸ್ ಅವರ ಅಕ್ಕನ ಮಗ ಕೂಡ ಅಭಿನಯಿಸಿದ್ದಾರೆ ಅವರಿಗೂ ಕೂಡ ಶುಭವಾಗಲಿ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ ವಾಣಿ ಹರಿಕೃಷ್ಣ ಹಾಡು ಎರಡೂ ಚೆನ್ನಾಗಿ ಮೂಡಿ ಬಂದಿದೆ ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ.

ಕಾಟೇರ ಸಿನಿಮಾದ ಅನುರಾಗವ ಕಲಿಸಲು ಹಾಡಿನ ಲಿರಿಕ್ಸ್‌

ಅನುರಾಗವ ಕಲಿಸಲು

ನೀ ಬಂದೆಯ ಹೇಳು

ಜನು ಜನುಮದ ನಂಟಿಗೆ

ನೀ ಕಂಡೆಯಾ ಹೇಳು

ನೀ ಹೇಳಬೇಕು ನಿನ್ನನ್ನು ನಾನು ಹೇಗೆ ಕರೆಯಲಿ

ಎಲ್ಲರ ಕಾಯುವ ದೇವರ ಕಣ್ಣು ನಿನ್ನ ಕಣ್ಣಲ್ಲಿ

ಹೇಗೆ ತೀರಿಸಲಿ ನಿನ್ನ ಋಣ

ಹೇಳು ನೀನೇ.. ನೀನೇ.. ಹೇಳು...

ನಾನೇತಕೆ ನಿನ್ನನ್ನು ಬಯಸುವೆನು ಹೇಳು

ಮನದಾಳಾವು ನಾಚಿದೆ ಇದು ಪ್ರೀತಿ ಹೇಳು

ನಗುವುದು ತನು ಮನ

ನಿನ್ನನ್ನು ಕಂಡಾಕ್ಷಣ

ಸಿಗುವನು ದಿನ,

ತುಸು ದೂರ ನಡೆಯುವ

ಚೆಲುವನೆ ನನ್ನೇ ನೋಡು

ಕನಸಿಗೆ ಬಂದು ಕಾಡು

ನಲುಮೆಯ ಹಾಡು

ಜತೆ ಸೇರಿ ನುಡಿಯುವ

ಎಲ್ಲೋ ನೋಡುತ್ತ ಮೆಲ್ಲಗೆ ಅಪ್ಪಿಕೋ

ನನ್ನ ನಲ್ಮೆಯ ನಲ್ಲನೇ ಒಪ್ಪಿಕೋ

ಊಹಿಸಲಾರೆ ನೀನಿಲ್ಲದೆ ಹೇಗೆ ಬಾಳಲ್ಲಿ

ನನ್ನ ಮುಂದಿನ ಜೀವನವೆಲ್ಲ ನಿನ್ನ ತೋಳಲ್ಲಿ

ಹೇಗೆ ತೀರಿಸಲಿ ನಿನ್ನ ಋಣ ಹೇಳು ನೀನೇ ನೀನೇ ಹೇಳು

ಅನುರಾಗವ ಕಲಿಸಲು

ನೀ ಬಂದೆಯ ಹೇಳು

ಜನುಜನುಮದ ನಂಟಿಗೆ

ನೀ ಕಂಡೆಯಾ ಹೇಳು

 

ಕಾಟೇರ ಸಿನಿಮಾದ ಅನುರಾಗವ ಕಲಿಸಲು ಹಾಡಿನ ಲಿರಿಕಲ್‌ ವಿಡಿಯೋ

ಕಾಟೇರ ಸಿನಿಮಾದ ಮೊದಲ ಹಾಡು

ಕನ್ನಡ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾದ ಮೊದಲ ಹಾಡು ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿತ್ತು. ಈ ಹಾಡಿನ ಲಿರಿಕಲ್‌ ಸಾಂಗ್‌ಗೆ ಫ್ಯಾನ್ಸ್‌ ಖುಷಿಯಾಗಿದ್ದಾರೆ. ಪಸದಾಂಗವ್ನೆ ಸ್ಯಾನೆ ಪಸದಾಂಗವ್ವೆ ಹಾಡಿನ ಸಾಹಿತ್ಯ ಮಾತ್ರವಲ್ಲದೆ ಹಿನ್ನೆಲೆ ಮ್ಯೂಸಿಕ್‌ ಸಖತ್ತಾಗಿದ್ದು, ಒಳ್ಳೆಯ ಡ್ಯಾನ್ಸ್‌ ಸ್ಟೆಪ್‌ಗೆ ಹೇಳಿ ಮಾಡಿಸಿದಂತೆ ಇದೆ. ಈ ಹಾಡಿನಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ಅವರ ಡ್ಯಾನ್ಸ್‌ಗೆ ಸಾಕಷ್ಟು ಜನರು ವಾಹ್‌ ಎಂದಿದ್ದಾರೆ. ವಿ. ಹರಿಕೃಷ್ಣನ್‌ ಸಂಗೀತ ಮೋಡಿ ಮಾಡುವಂತೆ ಇದೆ. "ನೋಡ್ತ ನೋಡ್ತ ಆಗೋಗಯ್ತೇ ಸ್ಯಾನೆ ಪಿರುತಿ, ನೋಡ್ತ ನಿನ್ನ ಆಗೋಗಯ್ತೇ ಸ್ಯಾನೇ ಪಿರುತಿ, ಪಕ್ಕದಲ್ಲಿ ನಿಂತ್ರೆ ಸಿವ ನೀನೇ ನಾನೇ ಪಾರ್ವತಿ, ಪಸದಾಂಗವ್ನೆ ಸ್ಯಾನೆ ಪಸದಾಂಗವ್ವೆ" ಹಾಡಿನ ಸಂಪೂರ್ಣ ಲಿರಿಕ್ಸ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner