Kaatera Success: ಏಳಿಗೆ ಸಹಿಸದ ಆತ್ಮೀಯರಿಗೆ ಖಡಕ್‌ ಎಚ್ಚರಿಕೆ ರವಾನಿಸಿದ ದರ್ಶನ್‌! ಯಾರಿಗೆ ಈ ವಾರ್ನಿಂಗ್?‌
ಕನ್ನಡ ಸುದ್ದಿ  /  ಮನರಂಜನೆ  /  Kaatera Success: ಏಳಿಗೆ ಸಹಿಸದ ಆತ್ಮೀಯರಿಗೆ ಖಡಕ್‌ ಎಚ್ಚರಿಕೆ ರವಾನಿಸಿದ ದರ್ಶನ್‌! ಯಾರಿಗೆ ಈ ವಾರ್ನಿಂಗ್?‌

Kaatera Success: ಏಳಿಗೆ ಸಹಿಸದ ಆತ್ಮೀಯರಿಗೆ ಖಡಕ್‌ ಎಚ್ಚರಿಕೆ ರವಾನಿಸಿದ ದರ್ಶನ್‌! ಯಾರಿಗೆ ಈ ವಾರ್ನಿಂಗ್?‌

ನಟ ದರ್ಶನ್‌ ದುಬೈನಿಂದಲೇ ತಮ್ಮ ಆತ್ಮೀಯರಿಗೆ ಎಚ್ಚರಿಗೆ ಸಂದೇಶವನ್ನು ರವಾನಿಸಿದ್ದಾರೆ. X ವೇದಿಕೆಯಲ್ಲಿ ಪೋಸ್ಟ್‌ ಹಂಚಿಕೊಂಡ ದರ್ಶನ್, ಕಾಟೇರ ಗೆಲುವನ್ನು ಸಹಿಸಿಕೊಳ್ಳದವರಿಗೆ ನೇರವಾಗಿ ಟ್ವಿಟ್ ಚಾಟಿ ಬೀಸಿದ್ದಾರೆ.

Kaatera Success: ಈ ಏಳಿಗೆ ಸಹಿಸದ ಆತ್ಮೀಯರಿಗೆ ಖಡಕ್‌ ಎಚ್ಚರಿಕೆ ರವಾನಿಸಿದ ದರ್ಶನ್‌! ಯಾರಿಗೆ ಈ ವಾರ್ನಿಂಗ್?‌
Kaatera Success: ಈ ಏಳಿಗೆ ಸಹಿಸದ ಆತ್ಮೀಯರಿಗೆ ಖಡಕ್‌ ಎಚ್ಚರಿಕೆ ರವಾನಿಸಿದ ದರ್ಶನ್‌! ಯಾರಿಗೆ ಈ ವಾರ್ನಿಂಗ್?‌

Kaatera Success: ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಫಸಲು ತೆಗೆದ ಕಾಟೇರ ಸಿನಿಮಾ, ನೂರು ಕೋಟಿಗೂ ಅಧಿಕ ಕಮಾಯಿ ಮಾಡಿದೆ. ಕರ್ನಾಟಕದಲ್ಲಷ್ಟೇ ಅಲ್ಲದೆ, ವಿದೇಶಿ ನೆಲದಲ್ಲೂ ಕಹಳೆ ಮೊಳಗಿಸುತ್ತಿದೆ. ದೂರದ ದುಬೈನಲ್ಲೂ ಅಲ್ಲಿನ ಕನ್ನಡಿಗರ ಗಮನ ಸೆಳೆದಿದೆ ಕಾಟೇರ ಸಿನಿಮಾ. ತಾವೂ ಸಹ ತಮ್ಮ ತಂಡದ ಜತೆಗೆ ದುಬೈಗೆ ತೆರಳಿ, ಸಿನಿಮಾ ಪ್ರಮೋಷನ್‌ ಮಾಡಿದ್ದಾರೆ. ದುಬೈ ಕನ್ನಡಿಗರಿಂದ ಕರುನಾಡ ಅಧಿಪತಿ ಅನ್ನೋ ಬಿರುದನ್ನೂ ಪಡೆದುಕೊಂಡಿದ್ದಾರೆ. ಇದೀಗ ಅಲ್ಲಿಂದಲೇ ಆತ್ಮೀಯರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

ಕಾಟೇರ ಸಿನಿಮಾ ಹಿಟ್‌ ಆಗಿದ್ದೇ ತಡ, ತಮ್ಮ ಸೋಷಿಯಲ್‌ ಮೀಡಿಯಾ Xನಲ್ಲಿ ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ ದರ್ಶನ್, ಆ ಪೋಸ್ಟ್‌ನಲ್ಲಿ ಹಿತಶತ್ರುಗಳಿಗೆ ಮುಟ್ಟಿನೋಡಿಕೊಳ್ಳುವಂಥ ಟಕ್ಕರ್‌ ನೀಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಗೆಲ್ಲಿಸಿದ ತಮ್ಮ ಸೆಲೆಬ್ರಿಟಿಗಳಿಗೂ, ದುಬೈ ಕನ್ನಡಿಗರಿಗೂ ಹೃದಯಪೂರ್ವಕ ಧನ್ಯವಾದವನ್ನು ರವಾನಿಸಿದ್ದಾರೆ ದರ್ಶನ್.‌ ನಟ ದರ್ಶನ್‌ ಅವರ ಈ ಟ್ವಿಟ್‌ ಕುತೂಹಲ ಮೂಡಿಸಿದ್ದು, ಅಭಿಮಾನಿ ವಲಯದಲ್ಲೂ ಕೌತುಕ ಹೆಚ್ಚಾಗಿದೆ. ಹಾಗಾದರೆ, ದರ್ಶನ್‌ ಎಚ್ಚರಿಗೆ ಯಾರಿಗೆ? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

ದರ್ಶನ್‌ ಹೇಳಿದ್ದೇನು?

"ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ" ಎಂದು ಬರೆದುಕೊಂಡಿದ್ದಾರೆ ದರ್ಶನ್.‌

ವಿಚಾರಣೆಗೆ ಹಾಜರಾಗಲಿರುವ ದರ್ಶನ್‌

ಕಾಟೇರ ಸಿನಿಮಾ ಯಶಸ್ಸು ಕಂಡ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ ಸ್ನೇಹಿತರಿಗೆ ಕಾಟೇರ ತಂಡ ಬೆಂಗಳೂರಿನ ಜೆಟ್​ಲ್ಯಾಗ್ ಪಬ್​ನಲ್ಲಿ ಭರ್ಜರಿ ಪಾರ್ಟಿ ನೀಡಿತ್ತು. ರಾತ್ರಿ 8 ಗಂಟೆಗೆ ಆರಂಭವಾದ ಪಾರ್ಟಿ ಜ.4ರ ಮುಂಜಾನೆ 3.30ರವರೆಗೆ ನಡೆದಿತ್ತು. ಯಶವಂತಪುರದ ಒರಾಯನ್ ಮಾಲ್ ಎದುರಿನ ಜೆಟ್‌ಲ್ಯಾಗ್ ಪಬ್‌ನ ಮಾಲೀಕರಾದ ಶಶಿರೇಖಾ ಜಗದೀಶ್ ಮತ್ತು ಪಬ್‌ನ ವ್ಯವಸ್ಥಾಪಕ ಪ್ರಶಾಂತ್ ವಿರುದ್ಧವೂ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಪಾರ್ಟಿಯಲ್ಲಿ ಚಂದನವನದ ಹಲವು ಕಲಾವಿದರು ಭಾಗವಹಿಸಿದ್ದರು. ಆ ಪೈಕಿ ದರ್ಶನ್‌, ಅಭಿಷೇಕ್ ಅಂಬರೀಷ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ನಟ ಡಾಲಿ ಧನಂಜಯ್, ನಟ ಚಿಕ್ಕಣ್ಣ, ನೀನಾಸಂ ಸತೀಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಈಗಾಗಲೇ ಒಂದಷ್ಟು ಮಂದಿ ವಿಚಾರಣೆಗೆ ಹಾಜರಾಗಿದ್ದು, ದರ್ಶನ್‌ ಸದ್ಯ ದುಬೈನಲ್ಲಿದ್ದಾರೆ. ಮರಳಿದ ಬಳಿಕ ವಿಚಾರಣೆಗೆ ಹಾಜರಾಗಲಿದ್ದಾರೆ.

Whats_app_banner