ಇದು ಇಂದು ನಿನ್ನೆಯ ಸಮಸ್ಯೆಯಲ್ಲ‌, ಕಾಟೇರ ನೋಡಿ ಕಣ್ತುಂಬಿ ಬಂತು; ದರ್ಶನ್‌ ಚಿತ್ರಕ್ಕೆ ಗಿರಿಜಾ ಲೋಕೇಶ್ ಹೀಗಂದ್ರು
ಕನ್ನಡ ಸುದ್ದಿ  /  ಮನರಂಜನೆ  /  ಇದು ಇಂದು ನಿನ್ನೆಯ ಸಮಸ್ಯೆಯಲ್ಲ‌, ಕಾಟೇರ ನೋಡಿ ಕಣ್ತುಂಬಿ ಬಂತು; ದರ್ಶನ್‌ ಚಿತ್ರಕ್ಕೆ ಗಿರಿಜಾ ಲೋಕೇಶ್ ಹೀಗಂದ್ರು

ಇದು ಇಂದು ನಿನ್ನೆಯ ಸಮಸ್ಯೆಯಲ್ಲ‌, ಕಾಟೇರ ನೋಡಿ ಕಣ್ತುಂಬಿ ಬಂತು; ದರ್ಶನ್‌ ಚಿತ್ರಕ್ಕೆ ಗಿರಿಜಾ ಲೋಕೇಶ್ ಹೀಗಂದ್ರು

ದರ್ಶನ್‌ ನಟನೆಯ ಕಾಟೇರ ಸಿನಿಮಾ ಜೀ5 ಒಟಿಟಿಗೆ ಆಗಮಿಸಿದೆ. ಈ ನಡುವೆ ಇದೇ ಚಿತ್ರದ ಬಗ್ಗೆ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಗಿರಿಜಾ ಲೋಕೇಶ್‌ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡಿ, ಎಲ್ಲ ಕಲಾವಿದರ ನಟನೆ, ಸಿನಿಮಾ ಮೂಡಿಬಂದ ರೀತಿ, ತಾಂತ್ರಿಕತೆಯ ಬಗ್ಗೆಯೂ ಮಾತನಾಡಿದ್ದಾರೆ. ನಮ್ಮ ನೆಲದ ಸಿನಿಮಾ ಎಂಬ ವಿಚಾರವನ್ನೂ ಹೇಳಿಕೊಂಡಿದ್ದಾರೆ.

ಇದು ಇಂದು ನಿನ್ನೆಯ ಸಮಸ್ಯೆಯಲ್ಲ‌, ಕಾಟೇರ ನೋಡಿ ಕಣ್ತುಂಬಿ ಬಂತು; ದರ್ಶನ್‌ ಚಿತ್ರಕ್ಕೆ ಗಿರಿಜಾ ಲೋಕೇಶ್ ಹೀಗಂದ್ರು
ಇದು ಇಂದು ನಿನ್ನೆಯ ಸಮಸ್ಯೆಯಲ್ಲ‌, ಕಾಟೇರ ನೋಡಿ ಕಣ್ತುಂಬಿ ಬಂತು; ದರ್ಶನ್‌ ಚಿತ್ರಕ್ಕೆ ಗಿರಿಜಾ ಲೋಕೇಶ್ ಹೀಗಂದ್ರು

Girija Lokesh about Kaatera: ಕರ್ನಾಟಕದಲ್ಲಷ್ಟೇ ಬಿಡುಗಡೆ ಆಗಿದ್ದ ಕಾಟೇರ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ನೋಡುಗರಿಂದ ಅಭೂತಪೂರ್ವ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದ್ದ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲೂ ದಾಖಲೆ ಬರೆದಿತ್ತು. ಒಂದೇ ವಾರದಲ್ಲಿ 100 ಕೋಟಿ ಗಳಿಸಿ, ಅದಾಗಿ ಮೂರನೇ ವಾರಕ್ಕೆ 200 ಕೋಟಿಯ ಗಡಿ ದಾಟಿತ್ತು ಕಾಟೇರ. ಇದೀಗ ಇಂದಿನಿಂದ (ಫೆ. 9) ಜೀ 5 ಒಟಿಟಿಯಲ್ಲೂ ಸ್ಟ್ರೀಮಿಂಗ್‌ ಆರಂಭಿಸಿದೆ ಕಾಟೇರ.

ಸಿನಿಮಾ ಪ್ರೇಕ್ಷಕರ ಜತೆಗೆ ಚಿತ್ರೋದ್ಯಮದ ಮಂದಿಯೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಮೂಡಿ ಬಂದ ರೀತಿ, ನಿರ್ದೇಶಕರು ಮತ್ತು ತಂಡದ ಶ್ರಮದ ಬಗ್ಗೆಯೂ ಒಳ್ಳೇ ಮಾತುಗಳು ಕೇಳಿಬಂದಿವೆ. ಈಗ ದರ್ಶನ್‌ ಅವರ ಕಾಟೇರ ಚಿತ್ರವನ್ನು ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್‌ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ವೀಕ್ಷಿಸಿ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿದ್ದಾರೆ.

ಕಾಟೇರ ನೋಡಿ ಗಿರಿಜಾ ಲೋಕೇಶ್‌ ಏನಂದ್ರು?

"ನಾನು ನೋಡಿದ ಕಾಟೇರ ಚಿತ್ರ ಮೊದಲನೇದಾಗಿ ನಿರ್ದೇಶಕರಿಗೆ ನನ್ನ ಅಭಿನಂದನೆಗಳು. ಹಾಗೆ ನಿರ್ದೇಶಕರ ಬೇಕು ಬೇಡಗಳನ್ನು ಹಾಗೂ ಮಾಡಿಕೊಟ್ಟ ನಿರ್ಮಾಪಕರಿಗೆ ನನ್ನ ನಮನಗಳು. ಯಾಕೆಂದರೆ ಇಂಥ ಒಳ್ಳೆ ಕಥೆನಾ ಸಿನಿಮಾ ಮಾಡಿದ್ದೀರಾ. ಒಂದು ದೃಶ್ಯ ಕಾವ್ಯವನ್ನು ನೋಡಿದ ಹಾಗಾಯಿತು. ಇದು ಇಂದು ನೆನ್ನೆಯದಲ್ಲ ಸಮಸ್ಯೆ. ನಮ್ಮನ್ನು ಕಾಡುತ್ತಿರುವ ಸಮಸ್ಯೆ. ಕಥೆಗೆ ತಕ್ಕ ಪಾತ್ರಗಳ ಆಯ್ಕೆ. ಯಾವ ಪಾತ್ರದ ಬಗ್ಗೆ ಹೇಳುವುದು? ದರ್ಶನ್ ಪಾತ್ರದ ಬಗ್ಗೆ ಹೇಳುವುದಾದರೆ, ಆ ಪಾತ್ರದ ಬೇಕಾದ ನಿಲುವು ಎತ್ತರ ಮೈ ಕಟ್ಟು ಅವರ ಅಭಿನಯ ಎಂಥವರಿಗೂ ದಂಗು ಪಡಿಸುತ್ತೆ"

"ಸಾಮಾನ್ಯವಾಗಿ ನನ್ನಂಥ ವಯಸ್ಸಾದವರಿಗೆ ಫೈಟಿಂಗ್ ಇಷ್ಟವಾಗುವುದಿಲ್ಲ. ಆದರೆ ಈ ಸಿನಿಮಾದಲ್ಲಿ ಪ್ರತಿಯೊಂದು ಫೈಟಿಗೂ ನಾನು ಕೂಡ ವಿಸಿಲ್ ಹೊಡೆಯುತ್ತಿದ್ದೆ. ಸಿನಿಮಾದಲ್ಲಿ ಬರುವ ಬಾವಿಯ ದೃಶ್ಯವಂತೂ ನಿರ್ದೇಶಕನ ಕಲ್ಪನೆ ಏನು ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು. ಶ್ರುತಿ ಅವರು ಮಗುವಿಗೆ ಹಾಲು ಕುಡಿಸಲು ಬರುವ ದೃಶ್ಯ ಕಣ್ಣಲ್ಲಿ ನೀರು ತರಿಸುತ್ತಿತ್ತು. ಆ ದೃಶ್ಯದಲ್ಲಿ ಚೈತನ್‌ ಎಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ"

"ಮತ್ತೆ ಕಾಟೇರ ಸಣ್ಣವನಿದ್ದಾಗ ಬರುವ ಪಾತ್ರ ಚಂದುದು. ಅವನದು ಕೂಡ ಸಣ್ಣ ಪಾತ್ರವಾದರೂ ನೆನಪಿಟ್ಟುಕೊಳ್ಳುವ ಪಾತ್ರ ಮಾಮನ ಹಾಗೆ ಮೈಮಟವನ್ನು ಎಷ್ಟು ಚಂದ ಮಾಡಿಕೊಂಡಿದ್ದಾನೆ. ಅವನ ಗೆಳತಿಯಾಗಿ ಅಂಕಿತ ಗೌಡ ಕೂಡ ಎಂಥ ಮುದ್ದಾಗಿ ಕಾಣುತ್ತೆ. ಮತ್ತೆ ಬಿರಾದರ್ ಅವರದಂತೂ ಮರೆಯಲಾಗದ ಪಾತ್ರ. ಅವರ ಕೈಯಲ್ಲಿ ಹಿರಣ್ಯ ಕಶ್ಯಪುವಿನ ಪಾತ್ರ ಮಾಡಿಸಿದ್ದು ಹಿಂದೆ ಕಾಟೇರಾ ದನಿ ಕೊಟ್ಟಿದ್ದು ಅದ್ಭುತವಾಗಿತ್ತು"

"ಮತ್ತೆ ನಮ್ಮ ನಾಯಕಿಯನ್ನು ಮರೆಯುವುದು ಹೇಗೆ? ತಾಯಿ ಹಾಗೆ ಸುಂದರ ಮುಖ ನೃತ್ಯ ಎಲ್ಲವೂ ಎಲ್ಲವೂ ಚೆಂದ. ಕಳಶ ಪ್ರಾಯವಾಗಿರುವ ದರ್ಶನ್ ಒಳ್ಳೆಯ ಅಭಿನಯ ಚಿತ್ರ ನೋಡಿ ಬರುವಾಗ ಮನಸ್ಸು ತುಂಬಿ ಬಂತು ಎಂಥ ಒಳ್ಳೆ ಚಿತ್ರವನ್ನ ಕೊಟ್ಟಿದ್ದಾರೆ. ಪ್ರತಿಯೊಬ್ಬರ ಪಾತ್ರ ಪ್ರತಿಯೊಂದು ಪಾತ್ರ ಎಷ್ಟು ಮುಖ್ಯವಾದದ್ದು. ಎಲ್ಲರೂ ತುಂಬಾ ಚೆಂದವಾಗಿ ಅಭಿನಯಿಸಿದ್ದಾರೆ. ನಮ್ಮ ನಿರ್ದೇಶಕರಿಗೆ ನಿಜವಾಗಿ ಹ್ಯಾಟ್ಸಾಫ್ ಹೇಳಲೇಬೇಕು ಹಾಗೆ ನಿರ್ಮಾಪಕರಿಗೂ ನನ್ನ ಅಭಿನಂದನೆಗಳು ಹೀಗೆ ಒಳ್ಳೆಯ ಚಿತ್ರಗಳನ್ನು ಕೊಡುತ್ತಾ ಹೋಗಿ ನಮನೆಗಳು" ಎಂದಿದ್ದಾರೆ.

ಪರಭಾಷೆಗಳಿಗೆ ಡಬ್‌ ಆಗಿ ಬಿಡುಗಡೆ ಆಗಲಿಲ್ಲ ಕಾಟೇರ!

ಕಾಟೇರ ಸಿನಿಮಾ ಬರೀ ಕನ್ನಡದಲ್ಲಷ್ಟೇ ಬಿಡುಗಡೆ ಆಗಿತ್ತು. ಸಿನಿಮಾ ಯಶಸ್ಸು ಕಂಡ ಬಳಿಕ ವಿದೇಶಗಳಲ್ಲೂ ಕಾಟೇರ ಚಿತ್ರ ಅಬ್ಬರಿಸಿ ಬೊಬ್ಬಿರಿದಿತ್ತು. ಸ್ವತಃ ದರ್ಶನ್‌ ಮತ್ತವರ ಟೀಮ್‌ ದುಬೈಗೆ ತೆರಳಿ ಸಿನಿಮಾ ಪ್ರಚಾರ ಮಾಡಿತ್ತು. ಅಲ್ಲಿನ ಕನ್ನಡ ಸಂಘಗಳಿಂದಲೂ ಕೆಂಪುಹಾಸಿನ ಸ್ವಾಗತವನ್ನೇ ಪಡೆದುಕೊಂಡಿತ್ತು. ಈ ನಡುವೆ ಈ ಸಿನಿಮಾ ಪರಭಾಷೆಗಳಿಗೆ ಡಬ್‌ ಆಗಿ ಬಿಡುಗಡೆ ಆಗುವುದು ಯಾವಾಗ? ಎಂಬ ಪ್ರಶ್ನೆಯೂ ಮೂಡಿತ್ತು. ಆದರೆ, ಆ ವಿಚಾರವನ್ನು ಚಿತ್ರತಂಡ ಸದ್ಯ ಕೈಬಿಟ್ಟಿದೆ. ಸದ್ಯ ಜೀ5 ಒಟಿಟಿಯಲ್ಲಿ ಈ ಸಿನಿಮಾ ಇಂದಿನಿಂದ ಸ್ಟ್ರೀಮಿಂಗ್‌ ಆರಂಭಿಸಿದೆ.

Whats_app_banner