Kaiva Song Lyrics: ಕೈವ ಸಿನಿಮಾದ ಸಂಕ್ರಾಂತಿ ಸಂಜೇಲಿ ಹಚ್ಚಿಟ್ಟ ದೀಪ ಹಾಡಿನ ಲಿರಿಕ್ಸ್ ಇಲ್ಲಿದೆ ನೋಡಿ; ಓ ದೇವರೆ ನೀನಿದ್ದರೆ ನೋಡು
Kaiva Sankranti sanjeli song lyrics: ಧನ್ವೀರ್ ಮತ್ತು ಮೇಘಾ ಶೆಟ್ಟಿ ನಟನೆಯ ಕೈವ ಸಿನಿಮಾದ ಮೊದಲ ಹಾಡು ಸಂಕ್ರಾಂತಿ ಸಂಜೇಲಿ ಹಚ್ಚಿಟ್ಟ ದೀಪ ಇದೀಗ ಬಿಡುಗಡೆಯಾಗಿದೆ. ಈ ಹಾಡಿನ ವಿಡಿಯೋ ಮತ್ತು ಕನ್ನಡ ಲಿರಿಕ್ಸ್ ಇಲ್ಲಿದೆ. ಬಿ ಅಜನೀಶ್ ಲೋಕನಾಥ್ ಸಂಗೀತದಲ್ಲಿ, ಅಜನೀಶ್ ಮತ್ತು ಐಶ್ವರ್ಯಾ ರಂಗರಾಜನ್ ಮಧುರ ಕಂಠದಲ್ಲಿ ಮೂಡಿ ಬಂದ ಹಾಡು ಕೇಳಿ, ಓದಿ, ಹಾಡಿ.

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಕರಗದಲ್ಲಿ ಹುಟ್ಟಿದ ಪ್ರೇಮಕಥೆ ಆಧರಿತ ಕೈವ ಸಿನಿಮಾದ ಮೊದಲ ಮಧರ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಅಜನೀಶ್ ಲೋಕನಾಥ್ ಸಂಗೀತದ ಈ ಹಾಡು ಕನ್ನಡ ಸಿನಿಮಾ ಹಾಡು ಕೇಳುಗರಲ್ಲಿ ಹೊಸ ಮಧುರ ಭಾವ ಮೂಡಿಸಿದೆ. ಅಜನೀಶ್ ಮತ್ತು ಐಶ್ವರ್ಯಾ ರಂಗರಾಜನ್ ಮಧುರ ಕಂಠದಲ್ಲಿ ಮೂಡಿ ಬಂದ ಹಾಡಿನ ವಿಡಿಯೋ ಮತ್ತು ಕನ್ನಡ ಲಿರಿಕ್ಸ್ ಇಲ್ಲಿ ನೀಡಲಾಗಿದೆ.
ಓ ದೇವರೇ ನೀನಿದ್ದರೆ ನೋಡು ಕೈ ಸನ್ನೆ ಕಣ್ ಸನ್ನೆಯ ಪಾಡು ಒಂಚೂರು ನೀನಿತ್ತ ಗಮನಾ ಕೊಡು ಎಂದು ಆರಂಭವಾಗುವ ಈ ಹಾಡು ಕೇಳಲು ಹಿತವಾಗಿದೆ. ಹಿನ್ನೆಲೆ ಸಂಗೀತವೂ ಹೃದಯಕ್ಕೆ, ಮನಸ್ಸಿಗೆ ಆಪ್ಯಾಯಮಾನವಾಗಿದೆ. ಇದನ್ನೂ ಓದಿ: ತಂಗಾಳಿಯ ಆಲಾಪವೇ ಪಿಸುಮಾತಿನ ಶೃಂಗಾರವೇ, ಇದು ಯಾವ ಸಿನಿಮಾದ ಹಾಡು ಹೇಳಿನೋಡೋಣ, ಇಲ್ಲಿದೆ ಒಲವೇ ಒಲವೇ ಕನ್ನಡ ಸಾಂಗ್ ಲಿರಿಕ್ಸ್
ಕೈವ ಸಿನಿಮಾದ ಸಂಕ್ರಾಂತಿ ಸಂಜೇಲಿ ಹಚ್ಚಿಟ್ಟ ದೀಪ ಹಾಡಿನ ಲಿರಿಕ್ಸ್ (Kaiva sankranti sanjeli song lyrics)
ಓ ದೇವರೇ ನೀನಿದ್ದರೆ ನೋಡು
ಕೈ ಸನ್ನೆ ಕಣ್ ಸನ್ನೆಯ ಪಾಡು
ಒಂಚೂರು ನೀನಿತ್ತ ಗಮನಾ ಕೊಡು
ಸಂಕ್ರಾಂತಿ ಸಂಜೇಲಿ ಹಚ್ಚಿಟ್ಟ ದೀಪ
ಚೆಲುವೆ ನಿನ್ನ ಕಣ್ಣು... ಚೆಲುವೆ ನಿನ್ನ ಕಣ್ಣು
ಆ ಚಂದ್ರ ನಕ್ಷತ್ರ ಒಂದಾದ ರೂಪ
ನನಗೆ ನೀ ಮಜನು ನನಗೆ ನೀ ಮಜನು
ಪ್ರೇಮ ಆರಂಭವಾದಗಲೇ
ಕಣ್ಣಾ ತುಂಬಾ ಕನಸ ರಂಗೋಲಿ
ಇಷ್ಟ ಆಗೋಯ್ತು ಆವಾಗಲೇ
ನಿನ್ನ ಪ್ರೀತಿ ಸಲಿಗೆ ಸುವ್ವಾಲಿ
ಓ ದೇವರೇ ನೀನಿದ್ದರೆ ನೋಡು
ಕೈ ಸನ್ನೆ ಕಣ್ ಸನ್ನೆಯ ಪಾಡು
ಒಂಚೂರು ನೀನಿತ್ತ ಗಮನಾ ಕೊಡು
ಬೇಟೆ ಗರಡಿಲಿ ಬೆಳೆದೆನು
ಹೀಗೆ ಒರಟಾಗಿ ಉಳಿದೆನು
ನಿನ್ನ ನೋಡಿ ಹೃದಯ ಕರಗೋ ಸಮಯ
ಕರಗ ಹೊರ ತಲೆ ಮೇಲೆ ಒಲವ ಹೊರೆಸಿದೆಯಾ
ಜೀವನ ಬದಲಾಗೋ ಶಕುನಾ...
ನೀನು ಬಂದಾಗಲೇ
ಗೀಚದೆ ಪಡಿಮೂಡೋ ಕವನ....
ಆಹಾ ಸಿಹಿಯಾದ ಪ್ರೀತಿ ಅಲ್ಲೇ...
ಕೋಣೆ ಕಿಟಕಿಲೇ ಜಗವನು
ನೋಡಿ ಮನಸಾರೆ ಮರೆವೆನು
ನಿನ್ನ ನೋಡಿ ಒಲಿದೆ ಜೀವ ಬೆಸೆದೆ
ಸವಿ ಮಾತಿನ ಸಂಭಾಷಣೆ ಹೃದಯ ಅರಳಿಸಿದೆ
ಗೋಡೆಗೆ ಗಡಿಯಾರವೇ ಗೆಳತಿ
ಗೋಡೆ ನೀನಾಗಿರು
ಕಾಲಕ್ಕೂ ಅನುಗಾಲಕ್ಕೂ ನಮ್ಮ....
ದೂರ ಸರಿಸೋರೆ ಇಲ್ಲಾ ಯಾರೂ...
ಸಂಕ್ರಾಂತಿ ಸಂಜೇಲಿ ಹಾಡಿನ ಲಿರಿಕಲ್ ವಿಡಿಯೋ ಇಲ್ಲಿದೆ
ರವೀಂದ್ರಕುಮಾರ್ ನಿರ್ಮಾಣದ, ಜಯತೀರ್ಥ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ " ಕೈವ" ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರವು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ದಿನಕರ್ ತೂಗುದೀಪ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ವೇತಪ್ರಿಯ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಈ ಚಿತ್ರದ ಲಿರಿಕ್ಸ್ ನೋಡುತ್ತ, ಹಾಡು ಕೇಳೋಣ.
