ಕನ್ನಡ ಸುದ್ದಿ  /  ಮನರಂಜನೆ  /  Kalki Bujji Car: ಕುಂದಾಪುರಕ್ಕೆ ಬಂತು ಕಲ್ಕಿ 2898 ಎಡಿ ಸಿನಿಮಾದ ಬುಜ್ಜಿ ಕಾರ್‌; ಡ್ರೈವ್‌ ಮಾಡಿ ಹೀಗಂದ್ರು ಕಾಂತಾರದ ರಿಷಬ್‌ ಶೆಟ್ಟಿ

Kalki Bujji Car: ಕುಂದಾಪುರಕ್ಕೆ ಬಂತು ಕಲ್ಕಿ 2898 ಎಡಿ ಸಿನಿಮಾದ ಬುಜ್ಜಿ ಕಾರ್‌; ಡ್ರೈವ್‌ ಮಾಡಿ ಹೀಗಂದ್ರು ಕಾಂತಾರದ ರಿಷಬ್‌ ಶೆಟ್ಟಿ

Kalki 2898 ad ಸಿನಿಮಾದ ಪ್ರಮುಖ ಆಕರ್ಷಣೆಯಾದ ಬುಜ್ಜಿ ಕಾರು ನೇರವಾಗಿ ಕುಂದಾಪುರಕ್ಕೆ ಆಗಮಿಸಿದೆ. ಕುಂದಾಪುರದಲ್ಲಿ ಕಾಂತಾರ ಸಿನಿಮಾದ ಶೂಟಿಂಗ್‌ ನಡೆಯುತ್ತಿದ್ದು, ರಿಷಬ್‌ ಶೆಟ್ಟಿಯ ಊರಿಗೆ ನೇರವಾಗಿ ಕಲ್ಕಿ ಕಾರು ಆಗಮಿಸಿದೆ. ಈ ಕಾರನ್ನು ಡ್ರೈವಿಂಗ್‌ ಮಾಡಿರುವ ರಿಷಬ್‌ ಶೆಟ್ಟಿ ಅವರು ಪ್ರಭಾಸ್‌ ಸಿನಿಮಾಕ್ಕೆ ಗುಡ್‌ಲಕ್‌ ಹೇಳಿದ್ದಾರೆ.

ಕುಂದಾಪುರಕ್ಕೆ ಬಂತು ಕಲ್ಕಿ 2898 ಎಡಿ ಸಿನಿಮಾದ ಬುಜ್ಜಿ ಕಾರ್‌
ಕುಂದಾಪುರಕ್ಕೆ ಬಂತು ಕಲ್ಕಿ 2898 ಎಡಿ ಸಿನಿಮಾದ ಬುಜ್ಜಿ ಕಾರ್‌

ಬೆಂಗಳೂರು: Kalki 2898 ad ಸಿನಿಮಾದ ಪ್ರಮುಖ ಆಕರ್ಷಣೆಯಾದ ಬುಜ್ಜಿ ಕಾರು ನೇರವಾಗಿ ಕುಂದಾಪುರಕ್ಕೆ ಆಗಮಿಸಿದೆ. ಕುಂದಾಪುರದಲ್ಲಿ ಕಾಂತಾರ ಸಿನಿಮಾದ ಶೂಟಿಂಗ್‌ ನಡೆಯುತ್ತಿದ್ದು, ರಿಷಬ್‌ ಶೆಟ್ಟಿಯ ಊರಿಗೆ ನೇರವಾಗಿ ಕಲ್ಕಿ ಕಾರು ಆಗಮಿಸಿದೆ. ಈ ಶುಕ್ರವಾರ ಕಲ್ಕಿ ಸಿನಿಮಾ ರಿಲೀಸ್‌ ಆಗುತ್ತಿದ್ದು, ಚಿತ್ರದ ಪ್ರಚಾರಕ್ಕೆ ಬುಜ್ಜಿ ಕಾರನ್ನು ಬಳಸಲಾಗುತ್ತಿದೆ. ಇದೀಗ ರಿಷಬ್‌ ಶೆಟ್ಟಿ ಕೂಡ ಈ ಕಾರನ್ನು ಓಡಿಸಿ ಖುಷಿಪಟ್ಟಿದ್ದು, ಸಿನಿತಂಡಕ್ಕೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ. ಬುಜ್ಜಿ ಕಾರಿನ ಮುಂದೆ ರಿಷಬ್‌ ಶೆಟ್ಟಿ ಮಗನೂ ನಿಂತು ಪೋಸ್‌ ನೀಡಿದ್ದಾನೆ.

ಕಲ್ಕಿ ಸಿನಿಮಾದಲ್ಲಿ ಬುಜ್ಜಿ ಎಂಬ ವಿಶೇಷ ಕಾರಿದೆ. ಈ ಕಾರಿಗೆ ಧ್ವನಿ ನೀಡಿದ್ದು ನಟಿ ಕೀರ್ತಿ ಸುರೇಶ್‌. ಈಗಾಗಲೇ ಸಿನಿಮಾದ ಟ್ರೇಲರ್‌ಗಳಲ್ಲಿ, ಹಾಡುಗಳಲ್ಲಿ ಬುಜ್ಜಿ ಕಾರು ಪ್ರೇಕ್ಷಕರಿಗೆ ಮೋಡಿ ಮಾಡಿದೆ. ಈ ಕಾರನ್ನು ಈಗಾಗಲೇ ಭಾರತದ ಪ್ರಮುಖ ನಟರು ಡ್ರೈವ್‌ ಮಾಡಿ ವಾಹ್‌ ಎಂದಿದ್ದಾರೆ. ಆನಂದ್‌ ಮಹೀಂದ್ರ ಕೂಡ ಈ ಕಾರನ್ನು ಡ್ರೈವ್‌ ಮಾಡಿದ್ದಾರೆ. ದೇಶಾದ್ಯಂತ ಪ್ರಚಾರ ಕಾರ್ಯದಲ್ಲಿ ಬಿಝಿ ಇರುವ ಈ ಕಾರು ಈಗ ನೇರವಾಗಿ ಕುಂದಾಪುರಕ್ಕೆ ಬಂದಿದೆ. ಕುಂದಾಪುರದಲ್ಲಿ ಕಾಂತಾರ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಇಲ್ಲಿಗೆ ರಿಷಬ್‌ ಶೆಟ್ಟಿಯನ್ನು ಹುಡುಕಿಕೊಂಡು ಕಾರು ಬಂದಿದೆ. ಈ ಮೂರು ಚಕ್ರದ ಕಾರನ್ನು ಡ್ರೈವಿಂಗ್‌ ಮಾಡಿ ರಿಷಬ್‌ ಶೆಟ್ಟಿ ಖುಷಿಪಟ್ಟಿದ್ದಾರೆ.

ರಿಷಬ್‌ ಡ್ರೈವ್‌ ಮಾಡಿದ್ರು ಬುಜ್ಜಿ ಕಾರ್‌

ಕಾಂತಾರ ನಟ ರಿಷಬ್‌ ಶೆಟ್ಟಿ ಈ ಕುರಿತಾದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಬುಜ್ಜಿ ಕಾರಿಗೆ ರಿಷಬ್‌ ಶೆಟ್ಟಿ ವಿಶೇಷ ಸ್ವಾಗತ ನೀಡಿದ್ದಾರೆ. ಚೆಂಡೆ ಸದ್ದಿನ ಸ್ವಾಗತದ ಮೂಲಕ ರಿಷಬ್‌ ಶೆಟ್ಟಿ ಅವರು ಕಾರನ್ನು ಸುತ್ತು ಹೊಡೆದು ನೋಡಿದ್ದಾರೆ. ಬಳಿಕ ಕಾರಿನ ಗಾಜಿನ ಬಾಗಿಲನ್ನು ಎತ್ತಿ ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತು ಸ್ಟಿಯರಿಂಗ್‌ ಜೋಡಿಸಿ ಡ್ರೈವಿಂಗ್‌ ಆರಂಭಿಸಿದ್ದಾರೆ. ಕುಂದಾಪುರದ ಗ್ರೌಂಡ್‌ನಲ್ಲಿ ಕಾರನ್ನು ಸುತ್ತು ಹೊಡೆಸಿದ್ದಾರೆ. ಬಳಿಕ ಈ ಕಾರಿನ ಕುರಿತು ಮಾತನಾಡಿದ್ದಾರೆ. "ಈ ಜೂನ್‌ 22ರಂದು ಕಲ್ಕಿ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಬುಜ್ಜಿ ಕಾರನ್ನು ನೋಡಿ ಖುಷಿಯಾಯ್ತು. ಇದರ ಚಾಲನೆ ಒಳ್ಳೆಯ ಎಕ್ಸ್‌ಪಿರಿಯೆನ್ಸ್‌. ಎಲ್ಲರೂ ಈ ಸಿನಿಮಾ ನೋಡಿ. ಆಲ್‌ ದಿ ಬೆಸ್ಟ್‌ ಪ್ರಭಾಸ್‌ ಸರ್‌" ಎಂದು ರಿಷಬ್‌ ಶೆಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ. ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾದಲ್ಲಿ ಬುಜ್ಜಿ ಕಾರು ಪ್ರಮುಖ ಆಕರ್ಷಣೆಯಾಗಿದೆ. ಪ್ರಭಾಸ್‌ ಚಾಲನೆ ಮಾಡುವ ಈ ಕಾರು ಸಿನಿಮಾದಲ್ಲಿ ಸುಧಾರಿತ ತಂತ್ರಜ್ಞಾದ ಕಾರಾಗಿರಲಿದೆ. ಈ ಕಾರು ಮಾತನಾಡುತ್ತದೆ. ನಟಿ ಕೀರ್ತಿ ಸುರೇಶ್‌ ಧ್ವನಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

 

ಕಲ್ಕಿ ಸಿನಿಮಾದ ಅಡ್ವಾನ್ಸಡ್‌ ಬುಕ್ಕಿಂಗ್‌

ಈ ಗುರುವಾರದಿಂದಲೇ ಚಿತ್ರಮಂದಿರಗಳಲ್ಲಿ ಕಲ್ಕಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕಲ್ಕಿ ಸಿನಿಮಾದ ಅಡ್ವಾನ್ಸಡ್‌ ಬುಕ್ಕಿಂಗ್‌ ತೆರೆದಿದೆ. ಈಗಾಗಲೇ ಅಡ್ವಾನ್ಸಡ್‌ ಬುಕ್ಕಿಂಗ್‌ ಮೂಲಕವೇ ಹಲವು ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಇದೇ ಸಮಯದಲ್ಲಿ ಚಿತ್ರತಂಡವು ಕಲ್ಕಿ 2898 ಎಡಿ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿತ್ತು. ಈ ಟ್ರೇಲರ್‌ನಲ್ಲಿ ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಹಾಗೂ ಅವಳ ಮಗುವನ್ನು ಉಳಿಸಲು ಅಮಿತಾಬ್‌ ಬಚ್ಚನ್‌ ಹೋರಾಟ ನಡೆಸುವಂತಹ ದೃಶ್ಯಗಳು ಈ ಟ್ರೇಲರ್‌ನಲ್ಲಿದ್ದವು. ಕಮಲ್‌ ಹಾಸನ್‌ ಪಾತ್ರವು "ಮನುಷ್ಯನು ಎಷ್ಟೇ ಯುಗ ಕಳೆದರೂ ಬದಲಾಗುವುದಿಲ್ಲ" ಎಂದು ಹೇಳುವ ದೃಶ್ಯವೂ ಈ ಟ್ರೇಲರ್‌ನಲ್ಲಿತ್ತು. ಪ್ರಭಾಸ್‌ ಹೊಸ ರೋಬೋ ಸೂಟ್‌ನಲ್ಲಿ ಆಗಮಿಸಿ ಈ ಸಿನಿಮಾದಲ್ಲಿ ರೋಬೋಗಳಂತಹ ಪಾತ್ರಗಳ ಅಬ್ಬರವೂ ಇರುವ ಸೂಚನೆ ನೀಡಲಾಗಿದೆ. ಒಟ್ಟಾರೆ, ಸಲಾರ್‌ ಬಳಿಕ ಚಿತ್ರಮಂದಿರಗಳಲ್ಲಿ ಪ್ರಭಾಸ್‌ ಸಿನಿಮಾವೊಂದನ್ನು ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.