ಕನ್ನಡ ಸುದ್ದಿ  /  ಮನರಂಜನೆ  /  Indian 2: ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2 ಜುಲೈ 12ಕ್ಕೆ ಇಂಡಿಯನ್‌ 2 ಸಿನಿಮಾ ಬಿಡುಗಡೆ; ಕರ್ನಾಟಕದ ವಿತರಣೆ ಹಕ್ಕು ಪಡೆದ ರೋಮಿಯೊ

Indian 2: ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2 ಜುಲೈ 12ಕ್ಕೆ ಇಂಡಿಯನ್‌ 2 ಸಿನಿಮಾ ಬಿಡುಗಡೆ; ಕರ್ನಾಟಕದ ವಿತರಣೆ ಹಕ್ಕು ಪಡೆದ ರೋಮಿಯೊ

Kamal Haasan Indian 2 Movie: ಜುಲೈ 12ರಂದು ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2 ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ರೋಮಿಯೋ ಫಿಕ್ಚರ್ಸ್‌ ಕರ್ನಾಟಕದಲ್ಲಿ ವಿತರಣೆ ಮಾಡಲಿದೆ.

ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2 ಜುಲೈ 12ಕ್ಕೆ ಇಂಡಿಯನ್‌ 2 ಸಿನಿಮಾ ಬಿಡುಗಡೆ
ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2 ಜುಲೈ 12ಕ್ಕೆ ಇಂಡಿಯನ್‌ 2 ಸಿನಿಮಾ ಬಿಡುಗಡೆ

ಬೆಂಗಳೂರು: ಇದೇ ಜುಲೈ 12ರಂದು ಭಾರತದ ಚಿತ್ರಮಂದಿರಗಳಲ್ಲಿ ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2 ಸಿನಿಮಾ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿಯೂ ಈ ಪ್ಯಾನ್‌ ಇಂಡಿಯಾ ಸಿನಿಮಾ ರಿಲೀಸ್‌ ಆಗಲಿದೆ. ಈ ಸಿನಿಮಾದ ವಿತರಣೆಯ ಹಕ್ಕನ್ನು ರೋಮಿಯೊ ಫಿಕ್ಚರ್ಸ್‌ ಪಡೆದಿದೆ. ಕಮಲ್‌ ಹಾಸನ್‌ ಅಭಿಮಾನಿಗಳು ಈ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆಯಿಟ್ಟಿದ್ದಾರೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಪಡೆದಿರುವ ಇಂಡಿಯನ್‌ ಸಿನಿಮಾದ ಸರಣಿ ಭಾಗ ಇದಾಗಿದೆ.

ಟ್ರೆಂಡಿಂಗ್​ ಸುದ್ದಿ

ಇಂಡಿಯನ್‌ 2 ಜುಲೈ 12ರಂದು ರಿಲೀಸ್‌

ಕಮಲ್ ಹಾಸನ್ ನಾಯಕರಾಗಿ ನಟಿಸಿರುವ, ಆರ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಇಂಡಿಯನ್ 2 ಚಿತ್ರ ಜುಲೈ 12 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತವಾಗಿ ಪ್ರಕಟಿಸಿದೆ.. ಕರ್ನಾಟಕದಲ್ಲಿ ಈ ಚಿತ್ರ ಪ್ರತಿಷ್ಠಿತ ರೋಮಿಯೊ ಫಿಕ್ಚರಸ್‌ ಮೂಲಕ ಬಿಡುಗಡೆಯಾಗಲಿದೆ. ಹೆಸರಾಂತ ರೋಮಿಯೊ"ಇಂಡಿಯನ್ 2" ಚಿತ್ರದ ಕರ್ನಾಟಕದ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ.

ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಕಮಲ್ ಹಾಸನ್ ಅಭಿನಯದ "ಇಂಡಿಯನ್ 2" ಚಿತ್ರವನ್ನು ಕರ್ನಾಟಕದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ರೋಮಿಯೊ ಫಿಕ್ಚರ್ಸ್‌ನ ರಾಹುಲ್ ತಿಳಿಸಿದ್ದಾರೆ. ಪ್ರಖ್ಯಾತ ವಿತರಣಾ ಸಂಸ್ಥೆಯಾದ ರೋಮಿಯೊ ಫಿಕ್ಚರ್ಸ್‌ ಅಜಿತ್ ಕುಮಾರ್ ಅವರ "ನೆರ್ಕೊಂಡ ಪಾರವೈ", "ಥುನಿವು", ಉದಯನಿಧಿ ಸ್ಟಾಲಿನ್ ಅವರ "ನೆಂಜುಕು ನೀಧಿ" ಮುಂತಾದ ಜನಪ್ರಿಯ ಚಿತ್ರಗಳನ್ನು ವಿತರಣೆ ಮಾಡಿದೆ.

ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಹಾಗೂ ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಈ ಚಿತ್ರವನ್ನು ನಿರ್ಮಿಸಿದೆ. ಕಮಲ್ ಹಾಸನ್, ಸಿದ್ಧಾರ್ಥ್, ಕಾಜಲ್ ಅಗರವಾಲ್, ರಕುಲ್ ಪ್ರೀತ್ ಸಿಂಗ್ , ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಕನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು "ಇಂಡಿಯನ್ 2" ಚಿತ್ರದ ತಾರಾಬಳಗದಲ್ಲಿದ್ದಾರೆ.

ಕಮಲ್‌ ಹಾಸನ್‌ ಅವರು 2024ರಲ್ಲಿ ನಟಿಸುತ್ತಿರುವ ಸಿನಿಮಾಗಳ ಕುರಿತು ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದೇ ಸಮಯದಲ್ಲಿ ಭಾರತದ ಫ್ರಾಂಚೈಸಿಯಲ್ಲಿ ಎರಡನೇ ಮತ್ತು ಮೂರನೇ ಸರಣಿಯಲ್ಲಿ ಬರುತ್ತಿರುವ ಸಿನಿಮಾಗಳ ಕುರಿತು ಕಮಲ್‌ ಹಾಸನ್‌ ಮಾಹಿತಿ ನೀಡಿದ್ದರು. ಇಂಡಿಯನ್‌ ಸಿನಿಮಾದಲ್ಲಿ ಕಮಲ್‌ ಹಾಸನ್‌ ಸೇನಾಪತಿಯಾಗಿ ಕಾಣಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರನಾಗಿದ್ದವು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಇದು ಹೊಂದಿದೆ.

ಕಮಲ್‌ ಹಾಸನ್‌ ಭಾರತದ ಚಿತ್ರರಂಗದ ಪ್ರತಿಭಾನ್ವಿತ ನಟ. ಕನ್ನಡ, ತಮಿಳು, ತೆಲುಗು, ಬಂಗಾಳಿ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡ ಎಂದಾಗ ರಾಮ ಶಾಮ ಭಾಮ ನೆನಪಾಗಬಹುದು. ಸಿನಿಮಾ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಸಿನಿಮಾ ಬರಹಗಾರರಾಗಿ, ಹಿನ್ನೆಲೆ ಸಂಗೀತಗಾರರಾಗಿಯೂ ಕಮಲ್‌ ಹಾಸನ್‌ ಕೆಲಸ ಮಾಡಿದ್ದಾರೆ. ತನ್ನ ಹುಟ್ಟುಹಬ್ಬದ ದಿನ ಥಗ್‌ ಲೈಪ್‌ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಸುಮಾರು 36 ವರ್ಷಗಳ ಬಳಿಕ ಮಣಿರತ್ನಂ ನಿರ್ದೇಶನದಲ್ಲಿ ಕಮಲ್‌ ಹಾಸನ್‌ ನಟಿಸುವ ಸಿನಿಮಾ ಇದಾಗಿದೆ.

ಟಿ20 ವರ್ಲ್ಡ್‌ಕಪ್ 2024