ʻಕಮಲ್‌ ಶ್ರೀದೇವಿʼ ಚಿತ್ರಕ್ಕೂ ಕಮಲ್‌ ಹಾಸನ್‌ ಮತ್ತು ಶ್ರೀದೇವಿಗೇನು ಸಂಬಂಧ? ಕುತೂಹಲ ಮೂಡಿಸಿದ ಚಿತ್ರದ ಫಸ್ಟ್‌ ಲುಕ್‌
ಕನ್ನಡ ಸುದ್ದಿ  /  ಮನರಂಜನೆ  /  ʻಕಮಲ್‌ ಶ್ರೀದೇವಿʼ ಚಿತ್ರಕ್ಕೂ ಕಮಲ್‌ ಹಾಸನ್‌ ಮತ್ತು ಶ್ರೀದೇವಿಗೇನು ಸಂಬಂಧ? ಕುತೂಹಲ ಮೂಡಿಸಿದ ಚಿತ್ರದ ಫಸ್ಟ್‌ ಲುಕ್‌

ʻಕಮಲ್‌ ಶ್ರೀದೇವಿʼ ಚಿತ್ರಕ್ಕೂ ಕಮಲ್‌ ಹಾಸನ್‌ ಮತ್ತು ಶ್ರೀದೇವಿಗೇನು ಸಂಬಂಧ? ಕುತೂಹಲ ಮೂಡಿಸಿದ ಚಿತ್ರದ ಫಸ್ಟ್‌ ಲುಕ್‌

ʻಕಮಲ್ ಶ್ರೀದೇವಿʼ ಅನ್ನೋ ಲೆಜಂಡರಿ ಜೋಡಿಯ ಹೆಸರಿಟ್ಟು, ಸಾಂಕೇತಿಕವಾಗಿ ಹಲವು ಆಯಾಮವನ್ನು ಸೂಚಿಸುವ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಹಲವು ಪ್ರಶ್ನೆಗಳ‌ ಜೊತೆಗೆ ಕೌತುಕ ಹುಟ್ಟಿಸಿದೆ.‌

ʻಕಮಲ್‌ ಶ್ರೀದೇವಿʼ ಚಿತ್ರಕ್ಕೂ ಕಮಲ್‌ ಹಾಸನ್‌ ಮತ್ತು ಶ್ರೀದೇವಿಗೇನು ಸಂಬಂಧ? ಕುತೂಹಲ ಮೂಡಿಸಿದ ಚಿತ್ರದ ಫಸ್ಟ್‌ ಲುಕ್‌
ʻಕಮಲ್‌ ಶ್ರೀದೇವಿʼ ಚಿತ್ರಕ್ಕೂ ಕಮಲ್‌ ಹಾಸನ್‌ ಮತ್ತು ಶ್ರೀದೇವಿಗೇನು ಸಂಬಂಧ? ಕುತೂಹಲ ಮೂಡಿಸಿದ ಚಿತ್ರದ ಫಸ್ಟ್‌ ಲುಕ್‌

ಎನ್ ಚಲುವರಾಯ ಸ್ವಾಮಿ ಅರ್ಪಿಸುವ ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ನಿರ್ಮಾಣದ Barnswallow companyಯ ರಾಜವರ್ಧನ್ ಸಹ ನಿರ್ಮಾಣದ ಸಚಿನ್ ಚಲುವರಾಯ ಸ್ವಾಮಿ ಅಭಿನಯದ ಚಿತ್ರ ʻಕಮಲ್ ಶ್ರೀದೇವಿʼ. ಇದೀಗ ಇದೇ ಚಿತ್ರದಿಂದ ಮೊದಲ ಪೋಸ್ಟರ್‌ ಬಿಡುಗಡೆ ಆಗಿದೆ. ಕಿಶೋರ್, ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನ ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.

ʻಕಮಲ್ ಶ್ರೀದೇವಿʼ ಅನ್ನೋ ಲೆಜಂಡರಿ ಜೋಡಿಯ ಹೆಸರಿಟ್ಟು, ಸಾಂಕೇತಿಕವಾಗಿ ಹಲವು ಆಯಾಮವನ್ನು ಸೂಚಿಸುವ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಹಲವು ಪ್ರಶ್ನೆಗಳ‌ ಜೊತೆಗೆ ಕೌತುಕ ಹುಟ್ಟಿಸಿದೆ.‌ ಅಲ್ಲದೆ ಟೈಟಲ್ ಕೆಳಗೆ ಅಡಿ ಬರಹವಾಗಿ ಬರೆದಿರುವ ಕೇಸ್ ನಂಬರ್, ಇದು ನೈಜ ಘಟನೆಯನ್ನಾಧರಿಸಿದ ಸಿನಿಮಾನಾ..? ಒಂದು ಹೆಣ್ಣಿನ ತಲೆಯನ್ನ ಪಾರಿವಾಳಗಳಿಂದ ಡಿಸೈನ್ ಮಾಡಿ ಮೈಗೆ ಹಾವು, ಗೂಬೆ, ಕಾಗೆ, ಊಸರವಳ್ಳಿ, ನರಿ ಹೀಗೆ ಪ್ರಾಣಿಗಳು ಸುತ್ತಿಕೊಂಡಿರುವುದು ಕುತೂಹಲಕ್ಕೆ ಒಗ್ಗರಣೆ ಹಾಕಿವೆ.

ಎಲ್ಲದಕ್ಕಿಂತ ಹೆಚ್ಚಾಗಿ ಕಮಲ್ ಹಾಸನ್ ಹೆಸರು ಕನ್ನಡಿಗರಿಗೆ ಕೆಂಡವಾಗಿರುವ ಹೊತ್ತಲ್ಲಿ, ಈ ಟೈಟಲ್ ಯಾಕೆ ಅನ್ನೋ ಪ್ರಶ್ನೆ ಉದ್ಭವಿಸಿದೆ. ಸದ್ದಿಲ್ಲದೇ ಸೆಟ್ಟೇರಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗ್ತಿರೋ ʻಕಮಲ್ ಶ್ರೀದೇವಿʼ ಪೋಸ್ಟರ್ ಕಾನ್ಸೆಪ್ಟ್ ಮತ್ತು ಕ್ವಾಲಿಟಿ ನೋಡಿ ಕನ್ನಡ ಉದ್ಯಮದ ಹಲವರು ಹುಬ್ಬೇರಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಾಂತ್ರಿಕವಾಗಿ ಈ ಚಿತ್ರತಂಡ ದೊಡ್ಡ ಭರವಸೆಯನ್ನ ಮೂಡಿಸಿದೆ. ಕನ್ನಡ, ತೆಲುಗು, ತಮಿಳಿನಲ್ಲಿ ಬಿಡುಗಡೆ ಸಜ್ಜಾಗಿರುವ ʻಕಮಲ್ ಶ್ರೀದೇವಿʼ ಸದ್ಯ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ನಾಯಕ ಸಚಿನ್ ಚಲುವರಾಯ ಸ್ವಾಮಿ, ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ಮಾಪಕ ರಾಜವರ್ಧನ್, ಹಿರಿಯ ನಟ ಉಮೇಶ್, ಮಿತ್ರ, ರಾಘು ಶಿವಮೊಗ್ಗ, ಅಕ್ಷಿತಾ ಬೋಪಯ್ಯ ನಿರ್ದೇಶಕ ಸುನೀಲ್, ಛಾಯಾಗ್ರಹಕ ನಾಗೇಶ್ ಆಚಾರ್ಯ, ಸಂಗೀತ ನಿರ್ದೇಶಕ ಕೀರ್ತನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಇದೇ ವೇಳೆ ʻಕಮಲ್ ಶ್ರೀದೇವಿʼ ಚಿತ್ರಕ್ಕೂ ಕಮಲ್ ಹಾಸನ್, ಶ್ರೀದೇವಿ ಹೆಸರಿಗೂ ಹಾಗೂ ಇತ್ತೀಚಿನ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

ಮಮ್ಮಿ ಖ್ಯಾತಿಯ ಲೋಹಿತ್ ಕಥೆಯ ಎಳೆ ಕೊಟ್ಟರೆ, ʻಗೊಂಬೆಗಳ ಲವ್ʼ ಸಂತೋಷ್, ʻಕಮಲ್ ಶ್ರೀದೇವಿʼ ಟೈಟಲ್ ಕೊಟ್ಟಿದ್ದಾರೆ. ಇದನ್ನ ತಿಳಿಸಿದ ಕ್ರಿಯೇಟಿವ್ ಹೆಡ್ ರಾಜವರ್ಧನ್, ಎರಡು ವರ್ಷದ ಹಿಂದೆ ಶುರುವಾದ ಈ ಚಿತ್ರ ಇದೀಗ ಕೊನೆಯ ಹಂತದ ಚಿತ್ರೀಕರಣದತ್ತ ಬಂದಿದೆ. ಇದೇ ವರ್ಷ ತೆರೆಗೆ ಬರುವುದಾಗಿಯೂ ಅವರು ಹೇಳಿದರು.