Dhruva Sarja Daughter: ಧ್ರುವ ಸರ್ಜಾ ಪ್ರೇರಣಾ ದಂಪತಿ ಮಗಳು ಪುಟಾಣಿ ರುದ್ರಾಕ್ಷಿ ಕ್ಯೂಟ್ ವಿಡಿಯೋ ವೈರಲ್
Dhruva Sarja Daughter: ಸ್ಯಾಂಡಲ್‌ವುಡ್‌ನ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಮಗಳು ರುದ್ರಾಕ್ಷಿಯ ಕ್ಯೂಟ್ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ದಿವಂಗತ ಚಿರಂಜೀವಿ ಸರ್ಜಾರ ಸಸಮಾಧಿಗೆ ಪೂಜೆ ಮಾಡುವ ಸಂದರ್ಭದ ಪುಟಾಣಿ ರುದ್ರಾಕ್ಷಿಯ ಕ್ಯೂಟ್ ವಿಡಿಯೋವನ್ನು ಧ್ರುವ ಸರ್ಜಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Dhruva Sarja Daughter: ಸ್ಯಾಂಡಲ್‌ವುಡ್‌ನ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಮಗಳ ಹೆಸರೇನು ಎಂದು ಸಾಕಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಕೆಲವರಿಗೆ ಆ ಪುಟಾಣಿಯ ಹೆಸರು ತಿಳಿದಿರಬಹುದು. ಧ್ರುವ ಸರ್ಜಾ ಮಗಳ ಹೆಸರು ರುದ್ರಾಕ್ಷಿ. ಇತ್ತೀಚೆಗೆ ಚಿರಂಜೀವಿ ಸರ್ಜಾ ಅವರ ವಾರ್ಷಿಕ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಅವರು ಸಮಾಧಿಗೆ ಪೂಜೆ ಸಲ್ಲಿಸುವ ಸಮಯದಲ್ಲಿ ಒಂದು ಕೈಯಲ್ಲಿ ಮುದ್ದಿನ ಮಗಳನ್ನು ಹಿಡಿದುಕೊಂಡಿದ್ದರು. ಆ ಪುಟಾಣಿಯ ನಗು, ಮುಗ್ಧ ಮುಖಕ್ಕೆ ನೆಟ್ಟಿಗರು ಮನ ಸೋತಿದ್ದಾರೆ. ಇದೀಗ ಈ ಕ್ಯೂಟ್ ವಿಡಿಯೋವನ್ನು ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಧ್ರುವ ಸರ್ಜಾ ಮಗಳು ರುದ್ರಾಕ್ಷಿಯ ಕ್ಯೂಟ್ ವಿಡಿಯೋ
ನನ್ನ ಜಗತ್ತು, ನನ್ನ ಮಗಳು ಎಂಬ ಕ್ಯಾಪ್ಷನ್‌ನಡಿ ಧ್ರುವ ಸರ್ಜಾ ಈ ವಿಡಿಯೋ ಹಂಚಿಕೊಂಡಿದ್ದಾರೆ. ಚಿರಂಜೀವಿ ಸರ್ಜಾರ ಸಮಾಧಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಪುಟಾಣಿ ರುದ್ರಾಕ್ಷಿ ಅಪ್ಪನ ಕೈಯಲ್ಲಿರುವ ಅಗರಬತ್ತಿಯ ಹೊಗೆಯನ್ನು ಕಣ್ಣರಳಿಸಿ ನೋಡುವುದು, ಅಪ್ಪನ ಕೈಯಲ್ಲಿರುವ ಅಗರಬತ್ತಿಗೆ ಕೈ ಹಾಕುವುದು, ಅಪ್ಪನ ಮುಖ ನೋಡಿ ಮಲ್ಲಿಗೆ ಬಿರಿದ್ದಾಂಗೆ ನಗುವುದು ಇತ್ಯಾದಿ ಕ್ಷಣಗಳು ಈ ವಿಡಿಯೋದಲ್ಲಿದೆ. ಈ ವಿಡಿಯೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಕ್ಯೂಟ್ ವಿಡಿಯೋ, ಕ್ಯೂಟ್ ಓವರ್‌ಲೋಡೆಡ್ "ಸರ್ಜಾ ವಂಶದ ಪುಟ್ಟ ರಾಜಕುಮಾರಿ ರುದ್ರಾಕ್ಷಿ ಪುಟಾಣಿ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಧ್ರುವ ಸರ್ಜಾ ಮಗಳ ಕ್ಯೂಟ್ ವಿಡಿಯೋ ಈ ಕೆಳಗಿದೆ ನೋಡಿ.
ಧುವ ಸರ್ಜಾ ಮಗಳ ಬಗ್ಗೆ
ಕನ್ನಡದ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾರ ಮಗಳ ಹೆಸರು ಇತ್ತೀಚಿನವರೆಗೆ ಯಾರಿಗೂ ತಿಳಿದಿರಲಿಲ್ಲ. ಕಳೆದ ವರ್ಷ ಅಕ್ಟೋಬರ್ 5ರಂದು ಧ್ರುವ ಸರ್ಜಾರ ಮಗಳಿಗೆ ಒಂದು ವರ್ಷ ತುಂಬಿತ್ತು. ಈ ವರ್ಷ ಅಕ್ಟೋಬರ್ 5, 2024ಕ್ಕೆ ಎರಡು ವರ್ಷವಾಗಲಿದೆ. ಈಗ 1 ವರ್ಷ ಏಳು ತಿಂಗಳಾಗಿದೆ. ಈ ಮಗಳ ವಿಡಿಯೋ ನೋಡಿ ಎಲ್ಲರೂ ಖುಷಿಗೊಂಡಿದ್ದಾರೆ. ಧ್ರವ ಸರ್ಜಾ ಮತ್ತು ಪ್ರೇರಣಾ ದಂಪತಿಗೆ ಈಗ ಇನ್ನೊಂದು ಮಗುವೂ ಆಗಿದೆ. ಗಂಡು ಮಗುವೂ ಇದೆ.
ದಿವಂಗತ ಚಿರಂಜೀವಿ ಸರ್ಜಾರ ಸಮಾಧಿಗೆ ಪೂಜೆ
ಇತ್ತೀಚೆಗೆ ಅಂದರೆ ಜೂನ್ 5ರಂದು ದಿವಂಗತ ಚಿರಂಜೀವಿ ಸರ್ಜಾರ ಸಮಾದಿಗೆ ವರ್ಷದ ಕಾರ್ಯಕ್ರಮಗಳನ್ನು ನೆರವೇರಿಸುವ ಸಂದರ್ಭದಲ್ಲಿ ಈ ವಿಡಿಯೋ ಮಾಡಲಾಗಿದೆ. ಧ್ರುವ ಸರ್ಜಾ ಒಂದು ಕೈಯಲ್ಲಿ ಅಗರಬತ್ತಿಯಿಂದ ಸಮಾದಿಗೆ ಪೂಜೆ ಮಾಡುತ್ತಿದ್ದಾರೆ. ಇನ್ನೊಂದು ಕೈಯಲ್ಲಿ ಪುಟಾಣಿ ರುದ್ರಾಕ್ಷಿ ಅಪ್ಪನ ಜತೆ ಖುಷಿಖುಷಿಯಾಗಿದ್ದಾಳೆ. ಕನ್ನಡ ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ಹೃದಯಾಘಾತದಿಂದ 2020ರ ಜೂನ್ 2ರಂದು ಮೃತಪಟ್ಟಿದ್ದರು. ತನ್ನ 36ನೇ ವಯಸ್ಸಿನಲ್ಲಿ ಮರಣ ಹೊಂದಿ ಸ್ಯಾಂಡಲ್‌ವುಡ್‌ಗೆ ಆಘಾತ ನೀಡಿದ್ದರು.
ಧ್ರುವ ಸರ್ಜಾ ಸಿನಿಮಾಗಳು
ಕನ್ನಡ ನಟ ಧ್ರುವ ಸರ್ಜಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದ್ಧೂರಿ, ಬಹದ್ಧೂರ್, ಭರ್ಜರಿ. ಪ್ರೇಮ ಬರಹ, ಪೊಗರು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಡಿ ದಿ ಡೆವಿಲ್ ಸಿನಿಮಾ ಧ್ರುವ ಸರ್ಜಾರ ಬಹುನಿರೀಕ್ಷಿತ ಮುಂದಿನ ಚಿತ್ರವಾಗಿದೆ. ಈ ಸಿನಿಮಾ ಈ ವರ್ಷ ಬಿಡುಗಡೆಯಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಧ್ರುವ ಸರ್ಜಾ ಮಾತ್ರವಲ್ಲದೆ ಭಾರತದ ಚಿತ್ರರಂಗದ ಹಲವು ಜನಪ್ರಿಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ವಿಭಾಗ