ಕನ್ನಡ ಸುದ್ದಿ  /  ಮನರಂಜನೆ  /  ಸ್ಯಾಂಡಲ್‌ವುಡ್‌ ನಟ ಚೇತನ್‌ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ; ಕಗ್ಗಲಿಪುರ ಸಮೀಪ ನಡೆದ ಘಟನೆ ಕುರಿತು ಇಂಚಿಂಚು ವಿವರ ನೀಡಿದ ನಟ

ಸ್ಯಾಂಡಲ್‌ವುಡ್‌ ನಟ ಚೇತನ್‌ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ; ಕಗ್ಗಲಿಪುರ ಸಮೀಪ ನಡೆದ ಘಟನೆ ಕುರಿತು ಇಂಚಿಂಚು ವಿವರ ನೀಡಿದ ನಟ

Actor Chetan Chandra: ಸ್ಯಾಂಡಲ್‌ವುಡ್‌ ನಟ ಚೇತನ್‌ ಚಂದ್ರರಿಗೆ ತಾಯಂದಿರ ದಿನದಂದು ಬೆಂಗಳೂರಿನ ಕಗ್ಗಲಿಪುರ ಸಮೀಪ 20ಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಈ ಘಟನೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಚೇತನ್‌ ಚಂದ್ರ ಮಾಹಿತಿ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ ನಟ ಚೇತನ್‌ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ
ಸ್ಯಾಂಡಲ್‌ವುಡ್‌ ನಟ ಚೇತನ್‌ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಪಿಯುಸಿ, ಪ್ರೇಮಿಸಂ, ರಾಜಧಾನಿ, ಜರಾಸಂಧ, ಕುಂಭರಾಶಿ, ಹುಚ್ಚುಡುಗರು, ಪ್ಲಸ್‌, ಜಾತ್ರೆ, ಸಂಯುಕ್ತ, ಬಜಾರ್‌ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ಸ್ಯಾಂಡಲ್‌ವುಡ್‌ ನಟ ಚೇತನ್‌ ಚಂದ್ರ ಅವರಿಗೆ ತಾಯಂದಿರ ದಿನದಂದು ಕೆಟ್ಟ ಅನುಭವವಾಗಿದೆ. ತಾಯಂದಿರ ದಿನದ ಪ್ರಯುಕ್ತ ತಾಯಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಕಾರಿನಲ್ಲಿ ವಾಪಸ್‌ ಬರುವಾಗ ಚೇತನ್‌ ಮೇಲೆ ಸುಮಾರು 20 ಜನರಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಘಟನೆ ಕುರಿತು ಕಗ್ಗಲಿಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ನಾವು ಒಂದು ಘಟನೆಯಲ್ಲಿ ಸಿಲುಕಿಕೊಂಡೆವು. ನಮ್ಮ ಗಾಡಿಯನ್ನು ಅಡ್ಡ ಹಾಕಿದರು. ಸುಮಾರು 20 ಜನರು ಸೇರಿಕೊಂಡು ನಮಗೆ ಹೊಡೆದಿದ್ದಾರೆ. ಕಗ್ಗಲಿಪುರ ಸಮೀಪ ಒಂದು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದೇನೆ. ಇವತ್ತು ಮದರ್ಸ್‌ ಡೇ ಎಂದು ಅಮ್ಮನ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆ" ಎಂದು ನಟ ಚೇತನ್‌ ಚಂದ್ರ ಅವರು ಘಟನೆಯನ್ನು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ತನ್ನ ದೇಹಕ್ಕೆ ಆಗಿರುವ ಗಾಯವನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.

"ದೇವಸ್ಥಾನಕ್ಕೆ ಬಂದು ವಾಪಸ್‌ ಬರುತ್ತಿದ್ದೆ. ಅವನು ಚೆನ್ನಾಗಿ ಕುಡಿದಿದ್ದ. ನನ್ನ ಗಾಡಿಗೆ ತಾಗಿಸಿದ. ಅಲ್ಲಿಂದ ನಾನು ಸ್ಲೋ ಮಾಡಿದೆ. ಆದರೂ ಅವನು ನಿಲ್ಲಿಸಲಿಲ್ಲ. ಅವರ ಜಾಗಕ್ಕೆ ಬಂದಾಗ ನಿಲ್ಲಿಸಿದ. ತುಂಬಾ ಜನರ ಸೇರಿದ್ದರು. ಏನೋ ರಾಬರಿ ನಡೆಯುತ್ತಿದೆ ಅಂದುಕೊಂಡೆ. ಆದರೆ, ಆ ರೀತಿ ಕಾಣಿಸಲಿಲ್ಲ. ಅವನ ತಮ್ಮನೋ, ತಂಗಿನೋ ಓಡಿ ಬಂದ್ರು. ಆಮೇಲೆ ಸುಮಾರು 20 ಜನರಷ್ಟು ಜನರು ಬಂದ್ರು ಹೊಡೆದ್ರು" ಎಂದು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರ ಸೂಚನೆಯ ಮೇರೆಗೆ ಮೊದಲು ಪ್ರಥಮ ಚಿಕಿತ್ಸೆ ಮಾಡಿಕೊಳ್ಳಲು ಆಸ್ಪತ್ರೆಗೆ ಬಂದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

"ಈ ಲೈವ್‌ ಅನ್ನು ನನ್ನ ಅಮ್ಮ, ಪಾಪು, ಹೆಂಡ್ತಿ ನೋಡ್ತಾ ಇರ್ತಾರೆ. ಫ್ರೆಂಡ್ಸ್‌ ನೋಡ್ತಾ ಇರ್ತಾರೆ. ಗಾಬರಿಯಾಗಬೇಡಿ. ನನ್ನಲ್ಲಿ ಘಟನೆಯ ಕುರಿತು ವಿಡಿಯೋ ಇದೆ. ನನಗೆ ನ್ಯಾಯ ಬೇಕು" ಎಂದು ಚೇತನ್‌ ಚಂದ್ರ ಅವರು ಘಟನೆಯ ಕುರಿತು ಇನ್ನಷ್ಟು ವಿವರಣೆ ನೀಡಿದ್ದಾರೆ. ಇವರ ವಿಡಿಯೋಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದು "ನಿಮ್ಮಂಥ ಸೆಲೆಬ್ರಿಟಿಗಳಿಗೆ ಹೀಗಾದ್ರೆ ನಮ್ಮಂಥ ಜನ ಸಾಮಾನ್ಯರ ಕಥೆ ಏನು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು" ಎಂದು ಹೇಳಿದ್ದಾರೆ. ಸಾಕಷ್ಟು ಜನರು ಜಸ್ಟಿಸ್‌ ಫಾರ್‌ ಚೇತನ್‌ ಚಂದ್ರ ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ನ್ಯಾಯ ಬಯಸಿದ್ದಾರೆ.

ನಟ ಚೇತನ್‌ ಚಂದ್ರ ಪರಿಚಯ

ಚೇತನ್‌ ಚಂದ್ರ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಬಿ ರಾಮಚಂದ್ರ ಮತ್ತು ಬಿಎನ್‌ ಅನುಸೂಯ ದಂಪತಿ ಪುತ್ರರಾದ ಚೇತನ್‌ ಚಂದ್ರ ಅವರು ಮಲೇಷ್ಯಾದಲ್ಲಿ ಮೈನಿಂಗ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್‌ಫಾರ್ಮೆಷನ್‌ ಸೈನ್ಸ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಇವರು ಇವರು 2008ರಲ್ಲಿ ನಟಿ ಹರ್ಷಿಕಾ ಪೂಣಚ್ಚ ಜತೆ ಪಿಯುಸಿ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಪ್ರೇಮಿಸಂ ಎಂಬ ಚಲನಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದರು.

ಚೇತನ್‌ ಚಂದ್ರ ಅವರು ಪಿಯುಸಿ, ಪ್ರೇಮಿಸಂ, ರಾಜಧಾನಿ, ಜರಾಸಂಧ, ಕುಂಭರಾಶಿ, ಹುಚ್ಚುಹುಡುಗರು, ಪ್ಲಸ್‌, ಜಾತ್ರೆ, ಸಂಯುಕ್ತ, ಬಜಾರ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕುಂಭರಾಶಿ ಎಂಬ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಾಕಷ್ಟು ವರ್ಕೌಟ್‌ ಮಾಡಿ ಸಿಕ್ಸ್‌ ಪ್ಯಾಕ್‌ ಅಲ್ಲ, ಎಂಟು ಪ್ಯಾಕ್‌ ಬಾಡಿ ಬೆಳೆಸಿ ಗಮನ ಸೆಳೆದಿದ್ದರು. ನಿದ್ರು ಕೊಲವನ್‌ ಎಂಬ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

IPL_Entry_Point