ಕನ್ನಡ ಸುದ್ದಿ  /  ಮನರಂಜನೆ  /  Darshan Arrest: ಮಹಿಳಾ ಪೀಡಕ, ಬೇಟೆಗಾರ, ಇದೀಗ ರೌಡಿ ಆಫ್‌ ಸ್ಯಾಂಡಲ್‌ವುಡ್‌; ದರ್ಶನ್‌ ಬಂಧನದ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ

Darshan Arrest: ಮಹಿಳಾ ಪೀಡಕ, ಬೇಟೆಗಾರ, ಇದೀಗ ರೌಡಿ ಆಫ್‌ ಸ್ಯಾಂಡಲ್‌ವುಡ್‌; ದರ್ಶನ್‌ ಬಂಧನದ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ

Darshan Arrest: ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದಡಿ ಕಾಟೇರ ನಟ ದರ್ಶನ್‌ ಬಂಧನವಾಗಿದೆ. ಇದೇ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಂಧನ
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಂಧನ

ಬೆಂಗಳೂರು: ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕನ್ನಡ ನಟ ದರ್ಶನ್‌ ಬಂಧನಕ್ಕೆ ಈಡಾಗಿದ್ದು, ದರ್ಶನ್‌ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ಸಮಯದಲ್ಲಿ ದರ್ಶನ್‌ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ಹೆಚ್ಚಾಗಿದ್ದು, ಇಲ್ಲಿಯವರೆಗೆ ಮಹಿಳಾ ಪೀಡನೆ, ಆರ್ಥಿಕ ವಂಚನೆ, ಅಕ್ರಮ ಬೇಟೆ, ಕೌಟುಂಬಕ ಕಲಹಗಳಂತಹ ಪ್ರಕರಣಗಳಲ್ಲಿ ದರ್ಶನ್‌ ಹೆಸರಿತ್ತು. ಇದೀಗ ಕೊಲೆಗಾರ, ರೌಡಿ ಆಫ್‌ ಸ್ಯಾಂಡಲ್‌ವುಡ್‌ ಆಗಿದ್ದಾನೆ ಎಂದೆಲ್ಲ ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಟ ದರ್ಶನ್‌ ಬಂಧನ

ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೆಜ್‌ ಮಾಡಿದ ರೇಣುಕಾಸ್ವಾಮಿ ಎಂಬ ವ್ಯಕ್ತಿಗೆ ದರ್ಶನ್‌ ಮತ್ತು ಇತರರು ಹಲ್ಲೆ ನಡೆಸಿದ್ದರು. ಇದರಿಂದ ರೇಣುಕಸ್ವಾಮಿ ಮೃತಪಟ್ಟಿದ್ದರು. ರೇಣುಕಾಸ್ವಾಮಿ ಮರ್ಮಾಂಗಕ್ಕೆ ಹಲ್ಲೆ ನಡೆಸಲಾಗಿತ್ತು. ಕೊಲೆ ನಡೆಸಿದ ಆರೋಪಿಗಳು ಬಳಿಕ ಪೊಲೀಸರಿಗೆ ಈ ಪ್ರಕರಣದಲ್ಲಿ ದರ್ಶನ್‌ ಸಹಕಾರ ಇದ್ದ ಮಾಹಿತಿ ನೀಡಿದ್ದರು. ಇದೀಗ ಪೊಲೀಸರು ಮೈಸೂರಿನ ತೋಟದ ಮನೆಯಲ್ಲಿ ದರ್ಶನ್‌ರನ್ನು ಬಂಧಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ವಿರುದ್ಧ ಆಕ್ರೋಶ

ಮಹಿಳಾ ಪೀಡಕ, ಹಣಕಾಸು ವಂಚಕ, ಕೌಟುಂಬಿಕ ಹಿಂಸೆ, ಮಾಧ್ಯಮಗಳಿಂದ ನಿಷೇಧಕ್ಕೆ ಒಳಗಾದ ವ್ಯಕ್ತಿ, ಅಕ್ರಮ ಬೇಟಿ, ಇದೀಗ ಈ ಸಾಲಿಗೆ ಕೊಲೆಗಾರ ಎಂಬ ಬಿರುದೂ ದೊರಕಿದೆ ಎಂದು ಸೋಷಿಯಲ್‌ ಮೀಡಿಯಾ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದಾರೆ.

 

 

ರೌಡಿ ಆಫ್‌ ಸ್ಯಾಂಡಲ್‌ವುಡ್‌

"ಸ್ಯಾಂಡಲ್‌ವುಡ್‌ನ ರೌಡಿ" ಎಂದು ಪ್ರಸಿದ್ಧವಾಗಿರುವ ಕರ್ನಾಟಕದ ನಟ ಮತ್ತು ಕನ್ನಡ ಚಲನಚಿತ್ರೋದ್ಯಮದಲ್ಲಿ ಇದುವರೆಗೆ ಇದ್ದ ಅತ್ಯಂತ ನೀಚ ಮತ್ತು ಅಸಹ್ಯ ವ್ಯಕ್ತಿ ಎಂದು ಅಂಕಿತ್‌ ಎಂಬ ಸೋಷಿಯಲ್‌ ಮೀಡಿಯಾ ಬಳಕೆದಾರರು ಪೋಸ್ಟ್‌ ಮಾಡಿದ್ದಾರೆ.

 

 

"ಪಾಪ, ಈ ನಟನ ಮೇಲೆ ಚಿತ್ರಗಳಲ್ಲಿ invest ಮಾಡಿರೊ producers ನ ಪರಿಸ್ಥಿತಿ ಏನಾಗಬಹುದು. ಒಳ್ಳೆಯ ಪಾಠ ಇದು ಆಗಲಿ" ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ. "

ಕನ್ನಡ ಸಿನಿಮಾ ಉದ್ಯಮಕ್ಕೆ ಮತ್ತೊಂದು ಡ್ಯಾಮೇಜ್‌

ನಟ ದರ್ಶನ್‌ ಬಂಧನದಿಂದ ಕನ್ನಡ ಸಿನಿಮಾ ಉದ್ಯಮಕ್ಕೆ ಮತ್ತೆ ಡ್ಯಾಮೇಜ್‌ ಆಗಿದೆ ಎಂದು ಸಾಕಷ್ಟು ಜನರು ಸೋಷಿಯಲ್‌ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ರೀತಿ ನೂರಾರು ಪೋಸ್ಟ್‌ಗಳು ದರ್ಶನ್‌ ಬಂಧನದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗುತ್ತಿದೆ. ಸ್ಯಾಂಡಲ್‌ವುಡ್‌ಗೆ ಇದು ಎಂಥ ವಾರ. ಚಂದನ್‌ ಶೆಟ್ಟಿ ಡಿವೋರ್ಸ್‌, ಯುವ ರಾಜ್‌ಕುಮಾರ್‌ ಡಿವೋರ್ಸ್‌, ಇದೀಗ ದರ್ಶನ್‌ ಬಂಧನ ಎಂದು ಸಾಕಷ್ಟು ಜನರು ಟ್ವೀಟ್‌ ಮಾಡಿದ್ದಾರೆ.

ಟಿ20 ವರ್ಲ್ಡ್‌ಕಪ್ 2024