ಕನ್ನಡ ಸುದ್ದಿ  /  ಮನರಂಜನೆ  /  ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡ ದರ್ಶನ್‌ ಅಭಿಮಾನಿ; 2-3 ದಿನದಿಂದ ಅನ್ನ ನೀರು ಬಿಟ್ಟಿದ್ರಂತೆ ಭೈರೇಶ್‌

ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡ ದರ್ಶನ್‌ ಅಭಿಮಾನಿ; 2-3 ದಿನದಿಂದ ಅನ್ನ ನೀರು ಬಿಟ್ಟಿದ್ರಂತೆ ಭೈರೇಶ್‌

ಕನ್ನಡ ನಟ ದರ್ಶನ್‌ ಬಂಧನದಿಂದ ಮನನೊಂದ ಅಭಿಮಾನಿಯೊಬ್ಬರು ಮೃತಪಟ್ಟ ಕುರಿತು ವರದಿಯಾಗಿದೆ. ಈತ ದರ್ಶನ್‌ ಬಂಧನದ ದುಃಖದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಪ್ರಾಣ ಕಳೆದುಕೊಂಡ ಭೈರೇಶ್‌ (ಚಿತ್ರಕೃಪೆ: ಟಿವಿ9)
ಪ್ರಾಣ ಕಳೆದುಕೊಂಡ ಭೈರೇಶ್‌ (ಚಿತ್ರಕೃಪೆ: ಟಿವಿ9)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಬಂಧನವಾಗಿರುವುದರಿಂದ ಡಿಬಾಸ್‌ ಅಭಿಮಾನಿಗಳು ಆತಂಕದಲ್ಲಿದ್ದಾರೆ. ಇದೇ ಸಮಯದಲ್ಲಿ ಚನ್ನಪಟ್ಟಣದ ಅಭಿಮಾನಿಯೊಬ್ಬ ಮೋರಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಟಿವಿ9 ವರದಿ ಪ್ರಕಾರ ಭೈರೇಶ್‌ ಹೆಸರಿನ ದರ್ಶನ್‌ ಅಭಿಮಾನಿ ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಳೆದೊಡ್ಡಿಯಲ್ಲಿ ಈ ಘಟನೆ ನಡೆದಿದ್ದು, ಭೈರೇಶ್‌ ಕಳೆದ 2-3 ದಿನಗಳಿಂದ ಅನ್ನ ನೀರು ಬಿಟ್ಟಿದ್ದರು. ದರ್ಶನ್‌ಗೆ ಒದಗಿದ ಪರಿಸ್ಥಿತಿ ಕುರಿತು ದುಃಖದಲ್ಲಿದ್ದರು. ಇದೀಗ ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಯೇ? ಆಕಸ್ಮಿಕ ಸಾವೇ ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ

ಟ್ರೆಂಡಿಂಗ್​ ಸುದ್ದಿ