ಕನ್ನಡ ಸುದ್ದಿ  /  ಮನರಂಜನೆ  /  ಚಿತ್ರದುರ್ಗದ ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌: ನಟ ದರ್ಶನ್‌, ವಿನಯ್‌, ಪ್ರದೋಷ್‌, ಧನರಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಚಿತ್ರದುರ್ಗದ ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌: ನಟ ದರ್ಶನ್‌, ವಿನಯ್‌, ಪ್ರದೋಷ್‌, ಧನರಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ

Darshan judicial custody: ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ನಟ ದರ್ಶನ್‌, ವಿನಯ್‌, ಪ್ರದೋಷ್‌, ಧನರಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌: ನಟ ದರ್ಶನ್‌ಗೆ 14 ದಿನಗಳ ನ್ಯಾಯಾಂಗ ಬಂಧನ
ಚಿತ್ರದುರ್ಗದ ರೇಣುಕಾ ಸ್ವಾಮಿ ಮರ್ಡರ್‌ ಕೇಸ್‌: ನಟ ದರ್ಶನ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ನಟ ದರ್ಶನ್‌, ವಿನಯ್‌, ಪ್ರದೋಷ್‌, ಧನರಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಎರಡು ದಿನದ ಹಿಂದೆಯೇ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇದೀಗ ನಟ ದರ್ಶನ್‌ ಮತ್ತು ಇತರರು ಕೂಡ ಇಂದಿನಿಂದ ಜೈಲು ವಾಸ ಮಾಡಬೇಕಿದೆ.

ಜುಲೈ 4ರವರೆಗೆ ದರ್ಶನ್‌ಗೆ ಜೈಲುವಾಸ

ನಟ ದರ್ಶನ್‌ ಮತ್ತು ಇತರೆ ಆರೋಪಿಗಳು ಕಳೆದ ಹನ್ನೆರಡು ದಿನಗಳಿಂದ ಪೊಲೀಸ್‌ ಕಸ್ಟಡಿಯಲ್ಲಿದ್ದರು. ಇಂದು ಇವರ ಕಸ್ಟಡಿ ಅಂತ್ಯವಾಗಿದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೇಳಿಲ್ಲವಾದ ಕಾರಣ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜುಲೈ 4ರವರೆಗೆ ದರ್ಶನ್‌ ಮತ್ತು ಇತರೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.

ವರದಿಗಳ ಪ್ರಕಾರ ಪೊಲೀಸರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿನಂತಿಸಿ ರಿಮ್ಯಾಂಡ್‌ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ನ್ಯಾಯಾಧೀಶ ಜಯಕುಮಾರ್‌ ಜಾಟ್ಲಾ ಪುರಷ್ಕರಿಸಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎಂದು ಟಿವಿ ನೈನ್‌ ವರದಿ ಮಾಡಿದೆ. ಇದೇ ಸಮಯದಲ್ಲಿ ಆರೋಪಿಗಳಿಗೆ "ಪೊಲೀಸರಿಂದ ಏನಾದರೂ ತೊಂದರೆ ಆಗಿರುವುದೇ?" ಎಂದು ನ್ಯಾಯಾಧೀಶರು ಕೇಳಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪೊಲೀಸರು ದರ್ಶನ್‌ ಮತ್ತು ಇತರೆ ಆರೋಪಿಗಳನ್ನು ಇಂದು ಪರಪ್ಪನ ಅಗ್ರಹಾರ ಜೈಲಿಗೆ ಕೊಂಡೊಯ್ಯುವ ಕಾರಣ ಜೈಲಿನ ಸುತ್ತಮುತ್ತ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ.