ಕನ್ನಡ ಸುದ್ದಿ  /  ಮನರಂಜನೆ  /  ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಳಿಕ ಅಭಿಮಾನಿಗಳ ಜತೆ ಹುಟ್ಟುಹಬ್ಬ ಕ್ಯಾನ್ಸಲ್‌ ಮಾಡಿಕೊಂಡ ಪ್ರಜ್ವಲ್‌ ದೇವರಾಜ್‌; ದರ್ಶನ್‌ ಜೈಲಲ್ಲಿರೋದು ಕಾರಣನ?

ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಳಿಕ ಅಭಿಮಾನಿಗಳ ಜತೆ ಹುಟ್ಟುಹಬ್ಬ ಕ್ಯಾನ್ಸಲ್‌ ಮಾಡಿಕೊಂಡ ಪ್ರಜ್ವಲ್‌ ದೇವರಾಜ್‌; ದರ್ಶನ್‌ ಜೈಲಲ್ಲಿರೋದು ಕಾರಣನ?

Prajwal Devaraj Birthday: ಜುಲೈ 4ರಂದು ಕನ್ನಡ ನಟ, ಪ್ರಜ್ವಲ್‌ ದೇವರಾಜ್‌ ಹುಟ್ಟುಹಬ್ಬ. ಬೆಂಗಳೂರಿನಲ್ಲಿ ಇಲ್ಲದೆ ಇರುವ ಕಾರಣ ಈ ವರ್ಷ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಕೂಡ ಇದೇ ಕಾರಣ ನೀಡಿದ್ದರು. ನಟ ದರ್ಶನ್‌ ಜೈಲಲ್ಲಿ ಇದಕ್ಕೆ ಕಾರಣವೇ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಮೂಡಿದೆ.

ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಳಿಕ ಅಭಿಮಾನಿಗಳ ಜತೆ ಹುಟ್ಟುಹಬ್ಬ ಕ್ಯಾನ್ಸಲ್‌ ಮಾಡಿಕೊಂಡ ಪ್ರಜ್ವಲ್‌ ದೇವರಾಜ್‌
ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಳಿಕ ಅಭಿಮಾನಿಗಳ ಜತೆ ಹುಟ್ಟುಹಬ್ಬ ಕ್ಯಾನ್ಸಲ್‌ ಮಾಡಿಕೊಂಡ ಪ್ರಜ್ವಲ್‌ ದೇವರಾಜ್‌

ಬೆಂಗಳೂರು: ಬೆಂಗಳೂರಲ್ಲಿ ಇಲ್ಲದ ಕಾರಣ ನೀಡಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ ಎಂದು ಪ್ರಕಟಿಸಿದ್ದರು. ಇದೀಗ ಸ್ಯಾಂಡಲ್‌ವುಡ್‌ನ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಕೂಡ ಇದೇ ಕಾರಣ ನೀಡಿ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಇವರ ಈ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗೆ ಕೆಲವು ಅಭಿಮಾನಿಗಳು "ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಒಳಗಿರೋದು ಕಾರಣನ?" ಎಂದೆಲ್ಲ ಪ್ರಶ್ನಿಸಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಹುಟ್ಟುಹಬ್ಬ ಯಾವಾಗ?

ಸ್ಯಾಂಡಲ್‌ವುಡ್‌ನ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ 1987ರ ಜುಲೈ 4ರಂದು ಜನಿಸಿದರು. ಅಂದರೆ, ಇವರ ಹುಟ್ಟುಹಬ್ಬ ನಾಳೆ. ಆದರೆ, ಬೆಂಗಳೂರಲ್ಲಿ ಇಲ್ಲದ ಕಾರಣ ನೀಡಿ ಈ ವರ್ಷ ಹುಟ್ಟುಹಬ್ಬ ಆಚರಿಸದೆ ಇರಲು ನಿರ್ಧರಿಸಿದ್ದಾರೆ. ಸಿಕ್ಸರ್‌ ಸಿನಿಮಾದ ಮೂಲಕ ಇವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದದರು. ಗೆಳೆಯ, ಚೌಕ, ಜಂಟಲ್‌ಮ್ಯಾನ್‌, ಇನ್‌ಸ್ಪೆಕ್ಟರ್‌ ವಿಕ್ರಮ್‌ ಮುಂತಾದ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಪ್ರಕಟಣೆ ಏನು?

"ಜುಲೈ 4ರಂದು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ ಈ ವರ್ಷ ನನ್ನ ಹುಟ್ಟುಹಬ್ಬವನ್ನು ನಿಮ್ಮ ಜತೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ. ಪ್ರತಿಸಲ ನನ್ನ ಜತೆ ಹಾಗೂ ನಿಮ್ಮ ಊರುಗಳಲ್ಲಿ, ನಗರಗಳಲ್ಲಿ ನಿಮ್ಮ ಪ್ರೀತಿ ಅಭಿಮಾನವನ್ನು ತೋರುತ್ತ ಇದ್ದೀರಿ. ನಿಮ್ಮ ಊರುಗಳಲ್ಲಿ, ನಗರಗಳಲ್ಲಿ, ಅಭಿಮಾನವನ್ನು ಅನಾಥಾಶ್ರಮಗಳಲ್ಲಿ, ವೃದ್ಧಾಶ್ರಮಗಳಲ್ಲಿ ಅನ್ನದಾನ, ಸಿಹಿ ಹಂಚುವುದು ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ನು ಹಂಚುವುದು, ರಕ್ತದಾನ ಹೀಗೆ ಹಲವಾರು ಸಮಾಜಮುಖಿ ಕೆಲಸ ಮಾಡುತ್ತ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಾ ಬಂದಿದ್ದೀರಿ. ಈ ಪ್ರೀತಿಯ ಅಭಿಮಾನಕ್ಕೆ ನಾನು ಸದಾ ಚಿರಋಣಿ. ಈ ವರ್ಷ ನಿಮ್ಮ ಊರಿನ ನಿಮ್ಮ ಅಕ್ಕಪಕ್ಕದ ಶಾಲೆಗಳಲ್ಲಿ, ಆಶ್ರಮಗಳಲ್ಲಿ, ಬಡವರಿಗೆ, ಅಸಹಾಯಕರಿಗೆ ಸಹಾಯ ಹಸ್ತವನ್ನು ನೀಡುವ ಮುಖಾಂತರ ಆಚರಿಸಿ ಎಂದು ಈ ಮೂಲಕ ನನ್ನ ಗೆಳೆಯರಲ್ಲಿ ಮನವಿ. ಮುಂದಿನ ವರ್ಷ ಖಂಡಿತಾ ಸೇರೋಣ. ಇಂತಿ ನಿಮ್ಮ ಪ್ರೀತಿಯ ಪ್ರಜ್ವಲ್‌ ದೇವರಾಜ್‌" ಎಂದು ಇನ್‌ಸ್ಟಾಗ್ರಾಂನಲ್ಲಿ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಪೋಸ್ಟ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಕ್ಷಸ ಸಿನಿಮಾದ ಅಪ್‌ಡೇಟ್‌

ಪ್ರಜ್ವಲ್‌ ಹುಟ್ಟುಹಬ್ಬದಂದು ರಾಕ್ಷಸ ಸಿನಿಮಾಕ್ಕೆ ಸಂಬಂಧಪಟ್ಟಂತೆ ದೊಡ್ಡ ಅಪ್‌ಡೇಟ್‌ ನೀಡುವುದಾಗಿ ಪ್ರಜ್ವಲ್‌ ದೇವರಾಜ್‌ ಹೇಳಿದ್ದಾರೆ. ರಾಕ್ಷಸ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ದರ್ಶನ್‌ ಜೈಲಲ್ಲಿ ಇರೋದು ಕಾರಣವ?

ಇಂತಹ ಒಂದು ಸಂದೇಹವೂ ಅಭಿಮಾನಿಗಳಲ್ಲಿ ಮೂಡಿದೆ. ಜುಲೈ 2ರಂದು ನಟ ಗಣೇಶ್‌ ಕೂಡ ತಮ್ಮ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದರು. ಬೆಂಗಳೂರಿನಿಂದ ಹೊರಗೆ ಇರುವ ಕಾರಣ ಈ ವರ್ಷವೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದರು. ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಸಂಬಂಧಪಟ್ಟ ಕೆಲಸದಲ್ಲಿ ಬಿಝಿಯಾಗಿರಬಹುದು ಎಂದು ಊಹಿಸಲಾಗಿತ್ತು. ಇದೀಗ ಪ್ರಜ್ವಲ್‌ ದೇವರಾಜ್‌ ಕೂಡ ಇದೇ ರೀತಿಯ ಪೋಸ್ಟ್‌ ಮಾಡಿದ್ದಾರೆ. ಸಿನಿಮಾ ಉದ್ಯಮದ ಕೆಲವು ಮೂಲಗಳು "ನಟ ದರ್ಶನ್‌ ಜೈಲಿನಲ್ಲಿರುವುದು ಈ ರೀತಿ ಹುಟ್ಟುಹಬ್ಬ ಕ್ಯಾನ್ಸಲ್‌ ಮಾಡಲು ಕಾರಣವಾಗಿರಬಹುದು" ಎಂದು ಹೇಳಿವೆ. ಪ್ರಜ್ವಲ್‌ ದೇವರಾಜ್‌ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಕೆಲವರು ಇದೇ ರೀತಿ ಕಾಮೆಂಟ್‌ ಮಾಡಿದ್ದಾರೆ. ಸಾಕಷ್ಟು ಅಭಿಮಾನಿಗಳು ಪ್ರಜ್ವಲ್‌ ದೇವರಾಜ್‌ಗೆ ಸೋಷಿಯಲ್‌ ಮೀಡಿಯಾದಲ್ಲೇ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸುತ್ತಿದ್ದಾರೆ.

ಪ್ರಜ್ವಲ್‌  ದೇವರಾಜ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ
ಪ್ರಜ್ವಲ್‌ ದೇವರಾಜ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ

ಪ್ರಜ್ವಲ್‌ ದೇವರಾಜ್‌ ಬಗ್ಗೆ

ಕನ್ನಡ ನಟ ದೇವರಾಜ್‌ ಪುತ್ರ ಪ್ರಜ್ವಲ್‌ ದೇವರಾಜ್‌ ತನ್ನ ಹಲವು ಸಿನಿಮಾಗಳ ಮೂಲಕ ಡೈನಾಮಿಕ್‌ ಪ್ರಿನ್ಸ್‌ ಎಂದೇ ಖ್ಯಾತಿ ಪಡೆದಿದ್ದಾರೆ. ಬೆಂಗಳೂರಿನ ಜೈನ್‌ ಯೂನಿವರ್ಸಿಟಿಯಲ್ಲಿ ಸೆಂಟರ್‌ ಫಾರ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಪದವಿ ಪಡೆದಿರುವ ಇವರು ಸಿಕ್ಸರ್‌ ಸಿನಿಮಾದಲ್ಲಿ ರಾಹುಲ್‌ ಆಗಿ ಸಿನಿಜಗತ್ತಿಗೆ ಎಂಟ್ರಿ ನೀಡಿದ್ದರು. ಇದಾದ ಬಳಿಕ ಗೆಳೆಯ, ಗಂಗೇ ಬಾರೇ ತುಂಗೇ ಬಾರೇ, ಮೆರವಣಿಗೆ, ಜೀವ, ಗುಲಾಮ, ಕೆಂಚ, ನನ್ನವನು, ಕೋಟೆ, ಮುರಳಿ ಮೀಟ್ಸ್‌ ಮೀರಾ, ಮಿಸ್ಟರ್‌ ಡುಪ್ಲಿಕೇಟ್‌, ಬದ್ರ, ಸಾರ್‌, ಗೋಕುಲಾ ಕೃಷ್ಣ, ಸೂಪರ್‌ ಶಾಸ್ತ್ರಿ, ಗಲಾಟೆ, ಝಿದ್ದಿ, ಅಂಗಾರಕ, ಸವಾಲ್‌, ಜಂಬೂ ಸವಾರಿ, ನೀನಾದೆ ನಾ, ಮೃಗಶಿರ, ಅರ್ಜುನಾ, ಮಾದ ಮತ್ತು ಮಾನಸಿ, ಭುಜಂಗ, ಲೈಫ್‌ ಜತೆ ಒಂದು ಸೆಲ್ಫಿ, ಜಂಟಲ್‌ಮ್ಯಾನ್‌, ಇನ್‌ಸ್ಪೆಕ್ಟರ್‌ ವಿಕ್ರಮ್‌, ಅರ್ಜುನ್‌ ಗೌಡ, ಅಬ್ಬರ, ವೀರಂ, ತತ್ಸಮ ತದ್ಭವ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾಫಿಯಾ, ಗಣ ಇವರ ಮುಂಬರುವ ಸಿನಿಮಾಗಳು. ಪ್ರಜ್ವಲ್‌ ದೇವರಾಜ್‌ ನಟನೆಯ ಕರಾವಳಿ ಎಂಬ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಹುಟ್ಟುಹಬ್ಬದ ದಿನ ಕರಾವಳಿ ಸಿನಿಮಾದ ಏನಾದರೂ ವಿಡಿಯೋ, ಪೋಸ್ಟರ್‌, ಝಲಕ್‌ ಬಿಡುಗಡೆಯಾಗುವುದೇ ಎಂಬ ನಿರೀಕ್ಷೆಯಲ್ಲಿ ಪ್ರಜ್ವಲ್‌ ಫ್ಯಾನ್ಸ್‌ ಇದ್ದಾರೆ.