ಕನ್ನಡ ಸುದ್ದಿ  /  ಮನರಂಜನೆ  /  ಕಾರ್ತಿಕ್‌ ಜಯರಾಮ್‌ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಉಡುಗೊರೆ; ರಿಲೀಸ್‌ ಆಯ್ತು ಜೆಕೆ ನಟನೆಯ ದಿ ವೀರ್‌ ಸಿನಿಮಾದ ಫಸ್ಟ್‌ ಲುಕ್‌

ಕಾರ್ತಿಕ್‌ ಜಯರಾಮ್‌ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಉಡುಗೊರೆ; ರಿಲೀಸ್‌ ಆಯ್ತು ಜೆಕೆ ನಟನೆಯ ದಿ ವೀರ್‌ ಸಿನಿಮಾದ ಫಸ್ಟ್‌ ಲುಕ್‌

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜೆಕೆ ಎಂದೇ ಖ್ಯಾತಿ ಪಡೆದಿರುವ ನಟ ಕಾರ್ತಿಕ್‌ ಜಯರಾಮ್‌ ನಟನೆಯ ದಿ ವೀರ್‌ ಸಿನಿಮಾಆದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಈ ಫಸ್ಟ್‌ ಲುಕ್‌ ವಿಡಿಯೋದಲ್ಲಿ ಕಾರ್ತಿಕ್‌ ಜಯರಾಮ್‌ ಅವರು ಬಾರ್‌ಟೆಂಡರ್‌ ಆಗಿ ಸ್ಟೈಲಿಶ್‌ ಲುಕ್‌ ನೀಡಿದ್ದಾರೆ.

ಜೆಕೆ ನಟನೆಯ ದಿ ವೀರ್‌ ಸಿನಿಮಾದ ಫಸ್ಟ್‌ ಲುಕ್‌
ಜೆಕೆ ನಟನೆಯ ದಿ ವೀರ್‌ ಸಿನಿಮಾದ ಫಸ್ಟ್‌ ಲುಕ್‌

ಕನ್ನಡ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಜೆಕೆ ಎಂದೇ ಖ್ಯಾತಿ ಪಡೆದಿರುವ ಕಾರ್ತಿಕ್‌ ಜಯರಾಮ್‌ ನಟನೆಯ ಮುಂಬರುವ ಚಿತ್ರ "ದಿ ವೀರ್‌" ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ನಿನ್ನೆ (ಮೇ 1)ರಂದು ಜೆಕೆ ಹುಟ್ಟುಹಬ್ಬದಂದು ದಿ ವೀರ್‌ ಸಿನಿಮಾದ ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಮೋಷನ್‌ ಪೋಸ್ಟರ್‌ ವಿಡಿಯೋದಲ್ಲಿ ಕಾರ್ತಿಕ್‌ ಜಯರಾಮ್‌ ಅವರು ಬಾರ್‌ಟೆಂಡರ್‌ ಆಗಿ ಸ್ಟೈಲಿಶ್‌ ಲುಕ್‌ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಾರ್ತಿಕ್‌ ಜಯರಾಮ್‌ ಸಿನಿಮಾ

ಕಾರ್ತಿಕ್‌ ಜಯರಾಮ್‌ ನಾಯಕ ನಟನಾಗಿ ನಟಿಸುತ್ತಿರುವ ದಿ ವೀರ್‌ ಸಿನಿಮಾಕ್ಕೆ ಆರ್‌. ಲೋಹಿತ್‌ ನಾಯಕ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಂದಹಾಗೆ ಡೈರೆಕ್ಟರ್‌ ಆಗಿ ಈ ಮೂಲಕ ಲೋಹಿತ್‌ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ಕಾರ್ತಿಕ್‌ ಜಯರಾಮ್‌ ನಟಿಸಿದ್ದ ಐರಾವನ್‌ ಚಿತ್ರತಂಡದಲ್ಲೂ ಲೋಹಿತ್‌ ನಾಯಕ್‌ ಕೆಲಸ ಮಾಡಿದ್ದರು.

ದಿ ವೀರ್‌ ಸಿನಿಮಾದ ತಾರಾಗಣ

ದಿ ವೀರ್‌ ಸಿನಿಮಾದಲ್ಲಿ ಕನ್ನಡದ ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ಕಾರ್ತಿಕ್‌ ಜಯರಾಮ್‌ಗೆ ನಾಯಕಿಯಾಗಿ ಪ್ರಣಿತಾ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಹೊಸ ನಟಿಯೊಬ್ಬರ ಪರಿಚಯವಾಗುತ್ತಿದೆ. ವಿಲನ್‌ ಪಾತ್ರದಲ್ಲಿ ರೋಚಿತ್‌ ಮಿಂಚಲಿದ್ದಾರೆ. ಮುಂಜು ಪಾವಗಡ ಸೇರಿದಂತೆ ಹಲವು ಕಲಾವಿದರು ದಿ ವೀರ್‌ನಲ್ಲಿ ಇರಲಿದ್ದಾರೆ. ಧ್ರುವ ಎಂಬಿ ಸಂಗೀತ ಇರಲಿದೆ. ಈ ಸಿನಿಮಾ ಸಸ್ಪೆನ್ಷ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರಲಿದೆ ಎನ್ನಲಾಗಿದೆ.

ದಿ ವೀರ್‌ ಸಿನಿಮಾದ ಫಸ್ಟ್‌ ಲುಕ್‌

ಬಾರ್‌ಟೆಂಡರ್‌ ಲುಕ್‌ನಲ್ಲಿ ಜೆಕೆ ಫಸ್ಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆ ಧ್ವನಿ ಮತ್ತು ಎಡಿಟಿಂಗ್‌ ಮೂಲಕ ಫಸ್ಟ್‌ ಲುಕ್‌ ಕೌತುಕ ಹೆಚ್ಚಿಸಿದೆ. ಈ ಮೋಷನ್‌ ಪೋಸ್ಟರ್‌ಗೆ ನೆಟ್ಟಿಗರು ಫಿದಾ ಆಗಿದ್ದು ಜೆಕೆಗೆ ಅಭಿನಂದನೆಗಳ ಮಹಾಪೂರವೇ ಬಂದಿದೆ. "ಮ್ಯೂಸಿಕ್‌ ಮತ್ತು ಟಿಒಪಿ ಅದ್ಭುತವಾಗಿದೆ. ಈ ಥ್ರಿಲ್ಲರ್‌ ಸಿನಿಮಾ ತುಂಬಾ ಉತ್ತಮವಾಗಿರುವ ಸಾಧ್ಯತೆಯಿದೆ" ಎಂದೆಲ್ಲ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಕಾರ್ತಿಕ್‌ ಜಯರಾಮ್‌ ಬಗ್ಗೆ

ಸ್ಯಾಂಡಲ್‌ವುಡ್‌ನಲ್ಲಿ ಕಾರ್ತಿಕ್‌ ಜಯರಾಮ್‌ ಜೆಕೆ ಎಂದೇ ಪರಿಚಿತರಾಗಿದೆ. ಅಶ್ವಿನಿ ನಕ್ಷತ್ರ ಸೀರಿಯಲ್‌ನಲ್ಲಿ ಜೆ ಕೃಷ್ಣ ಎಂಬ ಸೂಪರ್‌ಸ್ಟಾರ್‌ ಪಾತ್ರದಲ್ಲಿ ಮಿಂಚಿದರು. ಇದಾದ ಬಳಿಕ ಕಿರುತೆರೆ ಪ್ರೇಕ್ಷಕರಿಗೆ ಜೆಕೆ ಎಂದೇ ಹತ್ತಿರವಾದರು. ಅಶ್ವಿನಿ ನಕ್ಷತ್ರ ಧಾರಾವಾಹಿಯು ಕಲರ್ಸ್‌ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿತ್ತು. 2014ರಲ್ಲಿ ಜಸ್ಟ್‌ ಲವ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಟನಾಗಿ ಎಂಟ್ರಿ ನೀಡಿದರು. ಸ್ಟಾರ್‌ಪ್ಲಸ್‌ನ ಸಿಯಾ ಕೆ ರಾಮ್‌ ಸೀರಿಯಲ್‌ನಲ್ಲಿ ರಾವಣನಾಗಿಯೂ ಮಿಂಚಿದ್ದಾರೆ. ಕೆಂಪೇಗೌಡ, ವಿಷ್ಣುವರ್ಧನ್‌, ಈಗ, ವರದನಾಯಕ, ಚಂದ್ರಿಕಾ, ಬೆಂಗಳುರು 560023, ಕೇರ್‌ ಆಫ್‌ ಫುಟ್‌ಪಾತ್‌ 2 ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕುಚಿಕು ಕುಚಿಕು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಆ ಸಿನಿಮಾ ಇನ್ನೂ ತೆರೆಕಂಡಿಲ್ಲ. ಮತ್ತೊಮ್ಮೆ ಶ್‌ ಸಿನಿಮಾದಲ್ಲೂ ನಟಿಸಿದ್ದಾರೆ.

ಸಂಜು-ಗೀತಾ ಹಾಡಿನ ಅಪ್‌ಡೇಟ್‌

ಬೆಂಗಳೂರು: ಒಂದು ಪ್ರೇಮಕಥೆ ಎಂದರೆ ಅಲ್ಲಿ ಖುಷಿ, ತ್ಯಾಗದ ಜೊತೆಗೆ ಕಾಡುವ ಕಥೆ ಇರಬೇಕು. ಇದನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದವರು ನಿರ್ದೇಶಕ ನಾಗಶೇಖರ್. ಅದಕ್ಕೆ ಮೈನಾ, ಸಂಜು ವೆಡ್ಸ್ ಗೀತಾಗಿಂತ ಉದಾಹರಣೆ ಬೇಕಿಲ್ಲ. ಈಗ ಹೊಸ ಸಂಜು ಹಾಗೂ ಗೀತಾರ ನವೀನ ಪ್ರೇಮಕಥೆಯನ್ನು ನಾಗಶೇಖರ್ ಹೇಳಹೊರಟಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ರಮ್ಯಾ ಬದಲು ರಚಿತಾರಾಮ್ ಬಂದಿದ್ದಾರೆ. ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಾವ್ಯವಿದು.

ಸದ್ಯ ಚಿತ್ರದ ಬಹುತೇಕ ಚಿತ್ರೀಕರಣ, ಎಡಿಟಿಂಗ್ ಮುಗಿದಿದ್ದು ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆದಿದೆ. ಈಗಾಗಲೇ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ ಮೂರನೇ ಹಂತದ ಚಿತ್ರೀಕರಣ ಮುಗಿಸಿದ್ದು, ಈಗ ನಾಲ್ಕನೇ ಹಂತದ ಚಿತ್ರೀಕರಣ ಶುರುವಾಗಿದೆ. ಕುಣಿಗಲ್ ನಲ್ಲಿ ಅದ್ದೂರಿ ಹಾಡೊಂದರ ಶೂಟಿಂಗ್ ನಡೆದಿದೆ.

ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point