‘ಆ ಒಂದು ಕೆಲಸದಿಂದ ಈಶ್ವರಗೌಡ ಆಗಿದ್ದವ, ಇಂದು ನವರಸನಾಯಕ ಆಗಿದ್ದು’; ಹಳೇ ಕಥೆ ಹೇಳಿದ ಜಗ್ಗೇಶ್
ಕನ್ನಡ ಸುದ್ದಿ  /  ಮನರಂಜನೆ  /  ‘ಆ ಒಂದು ಕೆಲಸದಿಂದ ಈಶ್ವರಗೌಡ ಆಗಿದ್ದವ, ಇಂದು ನವರಸನಾಯಕ ಆಗಿದ್ದು’; ಹಳೇ ಕಥೆ ಹೇಳಿದ ಜಗ್ಗೇಶ್

‘ಆ ಒಂದು ಕೆಲಸದಿಂದ ಈಶ್ವರಗೌಡ ಆಗಿದ್ದವ, ಇಂದು ನವರಸನಾಯಕ ಆಗಿದ್ದು’; ಹಳೇ ಕಥೆ ಹೇಳಿದ ಜಗ್ಗೇಶ್

ನಟ ಜಗ್ಗೇಶ್‌, ಹಳೇ ನೆನಪಿಗೆ ಜಾರಿದ್ದಾರೆ. ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, ಅಂದು ಇಂದಿನ ವ್ಯತ್ಯಾಸಗಳನ್ನು ತಮ್ಮದೇ ಶೈಲಿಯಲ್ಲಿ ಹೇಳಿಕೊಂಡಿದ್ದಾರೆ. ಜಗ್ಗೇಶ್‌ ಆಡಿದ ಆ ಮಾತುಗಳ ಅಕ್ಷರ ರೂಪ ಇಲ್ಲಿದೆ.

Jaggesh: ‘ಆ ಒಂದು ಕೆಲಸದಿಂದ ಈಶ್ವರಗೌಡ ಆಗಿದ್ದವ, ಇಂದು ನವರಸನಾಯಕ ಆಗಿದ್ದು’; ಹಳೇ ಕಥೆ ಹೇಳಿದ ನಟ ಜಗ್ಗೇಶ್‌
Jaggesh: ‘ಆ ಒಂದು ಕೆಲಸದಿಂದ ಈಶ್ವರಗೌಡ ಆಗಿದ್ದವ, ಇಂದು ನವರಸನಾಯಕ ಆಗಿದ್ದು’; ಹಳೇ ಕಥೆ ಹೇಳಿದ ನಟ ಜಗ್ಗೇಶ್‌

Jaggesh: ನಟ ಜಗ್ಗೇಶ್‌ ಬರೀ ನಟನಷ್ಟೇ ಅಲ್ಲ. ಒಳ್ಳೆಯ ಮಾತುಗಾರ. ತಮ್ಮ ನೆನಪುಗಳನ್ನು, ಅನುಭವಗಳನ್ನು ಹೆಕ್ಕಿ ತೆಗೆದು, ಆಗಾಗ ಸೋಷಿಯಲ್‌ ಮೀಡಿಯಾ ಪುಟಕ್ಕೆ ಇಳಿಸುತ್ತಿರುತ್ತಾರೆ. ಆಗಿನ ದಿನಗಳ ಕಷ್ಟ ಸುಖ, ಬದುಕು ಬವಣೆ, ಬಣ್ಣದ ಲೋಕದ ಅಚ್ಚರಿಯ ಕಥೆಗಳು, ಅಮ್ಮನ ಕುರಿತಾಗಿ ತಮ್ಮದೇ ಧಾಟಿಯಲ್ಲಿ ಅಕ್ಷರರೂಪಕ್ಕೆ ಎಲ್ಲರ ಮುಂದಿಡುತ್ತಿರುತ್ತಾರೆ. ಇದೀಗ ಬಾಲ್ಯದ ಬಗ್ಗೆ ಮಾತನಾಡಿದ್ದಾರೆ. ಆ ದಿನಗಳನ್ನು ಮತ್ತೆ ಮೆಲುಕು ಹಾಕಿದ್ದಾರೆ. ಇಂದಿನ ಹೊಸ ತಲೆಮಾರಿಗೆ ಅಂದಿನ ಪಾಠ ಮಾಡಿದ್ದಾರೆ.

ನಟ ಜಗ್ಗೇಶ್‌ ಹಂಚಿಕೊಂಡ ನೆನಪುಗಳು ಹೀಗಿವೆ..

ಜಾಲತಾಣದಲ್ಲಿ ಈ ಪೋಸ್ಟ್ ನೋಡಿ ಭಾವುಕನಾಗಿ ನನ್ನ ಬಾಲ್ಯ ನೆನಪಾಯಿತು..!! ಹೌದು ನನ್ನ ಬಾಲ್ಯದ ಬಹುತೇಕ ಕಳೆದ ಜಾಗ ಈ ಅಡುಗೆ ಮನೆ. ಕಾರಣ; ಕರುವಿಗೆ ಶ್ರೇಷ್ಠಜಾಗ ಹಸುವಿನ ಮಡಿಲು.. ಮಕ್ಕಳಿಗೆ ಶ್ರೇಷ್ಠ ಅಮ್ಮನ ಸಾಂಗತ್ಯ. ಅವಳು ಇರುತ್ತಿದ್ದದ್ದು ಬಹುತೇಕ ಸಮಯ ಅಡುಗೆಮನೆ ಹಾಗಾಗಿ ನಾವು ಅಲ್ಲೆ.. ಅಮ್ಮನಿಗೆ ಬೇಕಾದ ತರಕಾರಿ ಹೆಚ್ಚಿ ಕೈಯಲ್ಲೆ ರುಬ್ಬಿ ಅಥವ ಅರೆದು ಸಹಾಯಮಾಡೋದು..

ವಿಶೇಷವಾಗಿ ಚಳಿಗಾಲದಲ್ಲಿ ರಾತ್ರಿಯ ಹೊತ್ತು ಅಡುಗೆ ಮನೆ ಉರಿವ ಒಲೆ ಪ್ರಯುಕ್ತ ಬೆಚ್ಚನೆಯ ಹೊದಿಕೆ ಮತ್ತೆ ಬೆಳಗಾದರೆ, ನೀರು ಒಲೆ ಹುರಿಹಾಕೋ ಕಾಯಕ. ಅಲ್ಲು ಬೆಚ್ಚಗೆ ಜೊತೆಗೆ ಅಲ್ಲಿಗೆ ಅಮ್ಮ ಕಾಫಿ ಕೊಡುತ್ತಿದ್ದಳು. 10 ಜನಕ್ಕೆ ಬಿಸಿನೀರು ಬೇಕು ಹಾಗಾಗಿ ಹಂಡೆ ಮುಂದೆ ಅರ್ಧಘಂಟೆ ಕಾಯಮು. ಅಪ್ಪ ದೂರ ಇರುವ ಪ್ರಯುಕ್ತ. ಜೇಬಿಂದ ಗಣೇಶಬೀಡಿ ಹೊರಬಂದು ಕಾಫಿ ಜೊತೆ ಒಲೆಮುಂದೆ ಸ್ವರ್ಗಕ್ಕೆ ಸಮವಾಗಿ ಚಳಿಗಾಲ ಓಡಿಹೋಗುತ್ತಿತ್ತು.

ಹೇಳಿ ಇಂದಿನ ಮಕ್ಕಳಿಗೆ ಈ ಸೌಭಾಗ್ಯ ಇದೆಯ? ನೋ ಚಾನ್ಸ್‌ ಒಲೆ ಅಡುಗೆ ಮನೆಗೆ ಕೆಲಸ ಇಲ್ಲಾ! ನೆಂಟರು ಬಂದಾಗ ಮಾತ್ರ, ನೋಡಿ ಇದು ಅಡುಗೆಮನೆ. ಇಂಪೋರ್ಟೆಡ್‌ ಚಿಮಣಿ, ಟಾಯ್ಲೆಟ್‌ ಸಂಪೂರ್ಣ ಫಾರೆನ್‌ದು ಎಂಬ ಬಿಂಕಮಾತ್ರ. ಊಟ ಬರೋದು ಆನ್‌ಲೈನ್‌. ಅದು ಚಿಕ್ಕ ಮಕ್ಕಳೆ ಮೊಬೈಲ್ ಹಿಡಿದು ಅಮ್ಮನಿಮಗೆ ಅಪ್ಪನಿಮಗೆ ಲೇ ನಿನಗೇನೋ ಲೇ ನಿನಗೇನೆ ಮ್ಯಾಟರ್‌ ಫಿನಿಶ್!!

ಈ ದಿನಗಳ ನೋಡಿ ವಿಧಿಯಿಲ್ಲದೆ ಒಪ್ಪಿ ಬದುಕಬೇಕು.. ಹಿಂದಿನ ಜೀವನ ಅದರ ಕಥೆ, ಇಂದಿನವರಿಗೆ what a funk ಎಂದು ಆಶ್ಚರ್ಯಪಟ್ಟು ಬಾಯಿ ಮೇಲೆ ಬೆರಳಿಟ್ಟು ಕಣ್ಣು ಅರಳಿಸಿ ನೋಡುತ್ತಾರೆ. Yes friends ನಾನು ಹೀಗೆ ಬೆಳೆದದ್ದು. ಅದು ಇದೆ ಅಡುಗೆಮನೆಯಲ್ಲಿ. ಅಮ್ಮನ ಕೈತುತ್ತು ತಿಂದು ಈಶ್ವರಗೌಡ ನಿಮ್ಮ ನವರಸನಾಯಕ ಆಗಿದ್ದು.

ಏನೆ ಹೇಳಿ ಇಂಥ ಪರಿಸರದಲ್ಲಿ ಬೆಳೆದ ನಮಗೆ ನಮ್ಮ ತಂದೆ ತಾಯಿ ಅಜ್ಜ ಅಜ್ಜಿ ಬಂಧು ಬಳಗ ಉಂಡ ತಣಿಗೆ (ತಟ್ಟೆ) bloody old ಅಂತ ಗುಜರಿಗೆ ಹೋಯ್ತು. ಬಂಧುಗಳು ಮಸಣದ ಮಣ್ಣಲ್ಲಿ ಕುರುಹು ಸಿಗದಂತೆ ಕರಗಿಹೋದರು.

ಚಳಿಗಾಲದ ಚಿತ್ರ ಬದುಕು ಜಗತ್ತು ಸತ್ಯ ಮಿತ್ಯ ಎಂದು ಅರಿವಾಗಲು 60ಕ್ಕೆ ಬಂದು ನಿಂತ ಅಂದಿನ ಅಡುಗೆ ಮನೆಯಲ್ಲಿ ಅಮ್ಮನ ಜೊತೆ ಆಡಿ ಬೆಳೆದ ಮಗ.. don't worry ನೀವು ಅಲ್ಲಿಗೆ ಮುಂದೆ ಬರುತ್ತೀರಿ ಪ್ರೀತಿಸಿ ಪ್ರೀತಿಗಾಗಿ ಬಾಳಿ ಅದೆ ಉಳಿಯೋದು ನೆನಪಿಗೆ ಮಿಕ್ಕದ್ದು ದುಡಿದಿದ್ದೇಲ್ಲಾ ಕಂಡವರ ಪಾಲು! ಇಂಥ ಕಥೆ ಹೇಳಲು ಕೆಲವರ್ಷಕ್ಕೆ ಯಾರು ಸಿಗರು. ಒಬ್ಬಂಟಿ ಅಲೆದಾಟ all self service ಮುಂದಿನ ಪೀಳಿಗೆಯ ಬದುಕು....ಶುಭಂ

ಜಗ್ಗೇಶ್‌ ಬರಹಕ್ಕೆ ನೆಟ್ಟಿಗರ ಮಾತು

- ಅದಕ್ಕೆ ನನಗೆ ನೀವು ಇಷ್ಟ ಆಗಬಹುದು ಜಗ್ಗಣ್ಣ ಯಾವಾಗಲೂ ಎಲ್ಲರಿಗೂ ನೆನಪು ಮಾಡುತ್ತೀರಾ ಇದೆ ಬದುಕಿನ ಸತ್ಯ ಹೀಗೆ ಇರಬೇಕು ಅಂತ ಬದುಕಿನ ಸತ್ಯವನ್ನು ಎಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದೀರಾ ತುಂಬಾ ಖುಷಿಯಾಗುತ್ತೆ ಕಾಯ್ತಾ ಇರ್ತೀನಿ ನೀವು ಏನನ್ನ ಪೋಸ್ಟ್ ಮಾಡ್ತೀರಾ ಅಂತ ನೋಡೋದಕ್ಕೆ.

- ನಿಮ್ಮಂತೆಯೇ ಈ ಮಧುರಕ್ಷಣಗಳನ್ನ ಅನುಭವಿಸಿ ಬಂದಿದೀನೆ ..ನೀವ್ ಹೇಳ್ತಾ ಇದ್ದರೆ ಕಣ್ಮುಂದೆ ಓಡುವ ಮೋಡಗಳ ಹಾಗೆ ನೆನಪಿನ ಸಂಭ್ರಮ ಮನದಲ್ಲಿ ಮೂಡುತೆ ... ನಿಮ್ಮ ಮಾತು ಸತ್ಯ ಇಂದಿನ ಪೀಳಿಗೆಗೆ ಅರಸಿ ಹಾತೊರೆದರೂ ಸಿಗದಷ್ಟು ಮುಂದೆ ಬಂದಿದಾರೆ ಆಧುನಿಕತೆಯ ಭರಾಟೆಯಲಿ .. ಹೇಳಕೊಳ್ಳೋಕು ಮುಜುಗರ ಪಡೋರೋ ಇದಾರೆ .. ನಿಮ್ಮ ಸ್ಥಾನಮಾನ ಆಕಾಶದೆತ್ತರಕ್ಕಿದ್ಥರೂ ಅಳುಕಿಲ್ಲದೆ ಕಳೆದುಬಂದ ದಿನ ಕ್ಷಣಗಳನ್ನ ಖುಷಿಯಿಂದ ಹೇಳ್ತೀರಾ.. ಜನರ ಮನಸ್ಸಿಗೆ ತುಂಬಾ ಹತ್ತಿರ ಆಗ್ತೀರಾ ..ಸರಳ ಸಜ್ಜನ ಮುಗ್ಧ ಭಾವುಕಜೀವಿಗೆ

- ನಮ್ಮ ಬಾಲ್ಯ ನಿಜಕ್ಕೂ ಸವಿ ಸವಿ, ಒಲೆ‌ ಮುಂದೆ ಕೂತು ಬೆಂಕಿಯ ಕಾವು ಚುರುಗುಟ್ಟಿಸಿದರೂ ಅಮ್ಮ ರೊಟ್ಟಿ ಮೇಲೆ ನೀರು ಹಾಕಿ ಅವನ್ನ ಹೆಬ್ಬುವುದೇ ನೋಡ್ತಾ ಚಳಿ ಹೋಗಿದ್ದ ಬೆಚ್ಚನೆಯ ನೆನಪಾಗುತ್ತೆ... ಏನೇ ಹೇಳಿ ಆ ದಿನಗಳು ಕೋಟಿ ಕೊಟ್ರೂ ಬರಲ್ಲ, ಕರೆಂಟು ಹೋದಾಗ ಆ ಒಲೆಯ ಬೆಂಕಿಯ ಬೆಳಕಿನಲ್ಲೇ ಗೋಡೆ ಮೇಲೆ‌ ಚಿತ್ತಾರ‌ ಮೂಡುತ್ತಿತ್ತು. ಕರೆಂಟು ಹೋದಾಗಂತೂ ಅದೊಂದು ಕತ್ತಲಿನಲ್ಲೇ‌ ಮಂದ ಬೆಳಕಿನ ಸಾಮ್ರಾಜ್ಯ, ಕಥೆ ಅಂತ್ಯಾಕ್ಷರಿ ಹಾಡು ಹಾಡ್ತಾ, ಸಿನಿಮಾಗಳ ಹೆಸರನ್ನೇ ಅಂತ್ಯಾಕ್ಷರ ಮಾಡಿಕೊಂಡು ಆಡಿದ ಆ ಸವಿ ಸುಂದರ ನೆನಪಿಸಿಕೊಂಡರೆ, ಬೆಳದಿಂಗಳ ಸಂಜೆಗಳಲ್ಲಿ ಹೊರಗೆ ಚಾಪೆ ದಿಂಬು ಹಾಸಿಕೊಂಡು ಕಥೆ ಕೇಳ್ತಾ, ಮಾತಾಡ್ತಾ, ಚುಕ್ಕಿಗಳನ್ನ ಎಣಿಸ್ತಾ ಕಳೆದ ಬಾಲ್ಯ ಈಗಲೂ ಮುದ ನೀಡುವ ಆ ನೆನಪುಗಳು ಈಗ ಮನೆಗಳಲ್ಲಿ ಕರೆಂಟೇ ಹೋಗಲ್ಲ.‌ ಮಕ್ಕಳು ಬೆಳದಿಂಗಳಂತ LED ಬೆಳಕನ್ನ ನೋಡಬಲ್ಲರೇ ವಿನಾಃ ಹೊರಗೆ ಚಾಪೆ ಹಾಸಿಕೊಂಡು ಬಟ್ಟಂಬಯಲ ಆಕಾಶ ನೋಡಲು ಸಾಧ್ಯವೇ ಆಗದಂತ ಸ್ಥಿತಿ. ನಿಜಕ್ಕೂ ನಾವು 90's Kids ಪುಣ್ಯವಂತರು.

Whats_app_banner