Celebrity Love Story: ಕಾಲೇಜು ಫೆಸ್ಟ್‌ನಲ್ಲಿ ರಮೇಶ್‌ ಅರವಿಂದ್‌ಗೆ ಸಿಗ್ತು ಫಸ್ಟ್‌ ಲವ್‌; ರಮೇಶ್‌ - ಅರ್ಚನಾ ಕಾಲೇಜು ಪ್ರೇಮಕಥೆ ಓದಿ
ಕನ್ನಡ ಸುದ್ದಿ  /  ಮನರಂಜನೆ  /  Celebrity Love Story: ಕಾಲೇಜು ಫೆಸ್ಟ್‌ನಲ್ಲಿ ರಮೇಶ್‌ ಅರವಿಂದ್‌ಗೆ ಸಿಗ್ತು ಫಸ್ಟ್‌ ಲವ್‌; ರಮೇಶ್‌ - ಅರ್ಚನಾ ಕಾಲೇಜು ಪ್ರೇಮಕಥೆ ಓದಿ

Celebrity Love Story: ಕಾಲೇಜು ಫೆಸ್ಟ್‌ನಲ್ಲಿ ರಮೇಶ್‌ ಅರವಿಂದ್‌ಗೆ ಸಿಗ್ತು ಫಸ್ಟ್‌ ಲವ್‌; ರಮೇಶ್‌ - ಅರ್ಚನಾ ಕಾಲೇಜು ಪ್ರೇಮಕಥೆ ಓದಿ

Kannada Actor Ramesh Aravind Life Story: ಸ್ಯಾಂಡಲ್‌ವುಡ್‌ನ ನಗುಮುಖದ ಸುಂದರ ನಟ ರಮೇಶ್‌ ಅರವಿಂದ್‌ ಅವರು ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಕಂಡ ಸುಂದರ ವಿದ್ಯಾರ್ಥಿನಿಯ ಗೆಳೆತನ ಮಾಡಿಕೊಂಡಿದ್ದರು. ಈ ಗೆಳೆತನ ಪ್ರೀತಿಗೆ ತಿರುಗಿ ಇವರಿಬ್ಬರೂ ವಿವಾಹವಾಗಿದ್ದರು.

ರಮೇಶ್‌ ಅರವಿಂದ್‌ ಕಾಲೇಜು ಲವ್‌ ಸ್ಟೋರಿ
ರಮೇಶ್‌ ಅರವಿಂದ್‌ ಕಾಲೇಜು ಲವ್‌ ಸ್ಟೋರಿ (Photos: Facebook- Ramesh Aravind)

Kannada Actor Ramesh Aravind: ಕನ್ನಡ ಸಿನಿಮಾರಂಗದ ನಟರಲ್ಲಿ ಎಲ್ಲರೂ ಇಷ್ಟಪಡುವ ನಟರೆಂದರೆ ರಮೇಶ್‌ ಅರವಿಂದ್.‌ ಅವರ ನಟನೆಯ ಚಿತ್ರಗಳು, ಸೂಜಿಗಲ್ಲಿನಂತೆ ಸೆಳೆಯುವ ಅವರ ಸ್ಪೂರ್ತಿದಾಯಕ ಮಾತುಗಳು ಎಲ್ಲರಿಗೂ ಇಷ್ಟವಾಗುತ್ತದೆ. ಯುವ ಜನತೆಗೆ ಸ್ಪೂರ್ತಿದಾಯಕವಾಗಿ ಮಾತನಾಡುವ ಇವರ ಮಾತುಗಳು ಎಷ್ಟೋ ಜನರ ಬದುಕು ಬದಲಿಸುವ ಶಕ್ತಿಯನ್ನೂ ಹೊಂದಿವೆ. ಸದಾ ನಗುಮುಖದ ಈ ಸುಂದರಾಂಗ ನಟ ಈಗಲೂ ಚಿರಯುವಕನಂತೆ ಕಾಣಿಸುತ್ತಾರೆ. ಹಾಗಾದರೆ, ಅವರು ತನ್ನ ಯೌವನದಲ್ಲಿ ಇನ್ನೆಷ್ಟು ಸುಂದರವಾಗಿದ್ದಿರಬಹುದು ಎಂಬ ಸಂದೇಹ ಎಲ್ಲರಲ್ಲಿಯೂ ಇರಬಹುದು.

ಪಿಯುಸಿ ಓದುತ್ತಿರುವಾಗಲೇ ನೋಡಲು ಸುಂದರವಾಗಿದ್ದ ಇವರಿಗೆ ಆ ಪಿಯುಸಿ ದಿನಗಳಲ್ಲಿಯೇ ಒಬ್ಬರು ವಿದ್ಯಾರ್ಥಿನಿ ಇಷ್ಟವಾಗಿದ್ದರು. ಅವರ ಆ ಸುಂದರ ಪ್ರೇಮಕಥೆಯ ಸಂಕ್ಷಿಪ್ತ ವಿವರ ಇಲ್ಲಿ ನೀಡಲಾಗಿದೆ. ಅಂದಹಾಗೆ, ಈ ಲವ್‌ ಸ್ಟೋರಿಗೆ ಆಧಾರ ರಮೇಶ್‌ ಅರವಿಂದ್‌ ಅವರು ಬರೆದ "ಪ್ರೀತಿಯಿಂದ ರಮೇಶ್‌- ಯಶಸ್ಸಿನ ಸರಳ ಸೂತ್ರಗಳು" ಎಂಬ ಸ್ಫೂರ್ತಿದಾಯಕ ಪುಸ್ತಕ. ಈ ಪುಸ್ತಕದಲ್ಲಿ ಹಲವು ಸ್ಫೂರ್ತಿದಾಯಕ ಕಥೆಗಳಿವೆ. ತಪ್ಪದೇ ಓದಿ.

ರಮೇಶ್‌ ಅರವಿಂದ್‌ ಪ್ರೇಮಕಥೆ

ರಮೇಶ್‌ ಅರವಿಂದ್‌ ಅವರು ಪಿಯುಸಿ ಓದಿದ್ದು ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ. ಇದಾದ ಬಳಿಕ ಇವರು ವಿಶ್ವಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿದ್ದರು. ಈ ಕಾಲೇಜು ಜೀವನ ಆರಂಭದಲ್ಲಿ ಇವರಿಗೆ ಇಷ್ಟವಾಗಿರಲಿಲ್ಲ. ನಾಟಕ ಮಾಡಲು ಅವಕಾಶ ದೊರಕಿದ ಬಳಿಕ ಇವರಿಗೆ ಆ ಕಾಲೇಜು ಇಷ್ಟವಾಯಿತು. ಈ ಕಾಲೇಜನ್ನು ಇನ್ನಷ್ಟು ಪ್ರಿಯವಾಗಿಸಿದ್ದು ಅರ್ಚನಾ ಎಂಬ ವಿದ್ಯಾರ್ಥಿನಿ.

ಇವರು ಬಿಎಂಎಸ್‌ ಕಾಲೇಜಿನ ಇಂಟರ್‌ ಕಾಲೇಜ್‌ ಫೆಸ್ಟ್‌ಗೆ ಹೋಗಿದ್ದ ಸಂದರ್ಭ ಅಲ್ಲೊಂದು ಸುಂದರವಾದ ಹುಡುಗಿಯನ್ನು ಕಂಡರು. ಇವರು ಫೆಸ್ಟ್‌ನಲ್ಲಿ ತನ್ನ ಶೋ ಮುಗಿಸಿ ನೇರವಾಗಿ ಹುಡುಗಿಯಲ್ಲಿಗೆ ಬಂದರು. ಇವರಿಗೆ ಪರಿಚಯದ ಗೆಳತಿಯರು ಅಲ್ಲಿದ್ದರಿಂದ ಧೈರ್ಯವಾಗಿ ಬಂದಿದ್ದರು. ಎಲ್ಲರಿಗೆ ಹಾಯ್‌ ಹೇಳಿದ ಬಳಿ ಇವರು ಆ ಹುಡುಗಿಗೂ ಹಲೋ ಎಂದ್ರಂತೆ. ಆಕೆಯೂ ಹಲೋ ಎಂದ್ರಂತೆ. ಇದಾದ ಬಳಿಕ ನಿಮ್ಮ ಹೆಸರು ಏನು ಎಂದು ಕೇಳಿದ್ರಂತೆ. ಅದಕ್ಕೆ ಆ ಹುಡುಗಿ "ಯಾಕೆ?" ಎಂದು ಕೇಳಿದ್ರಂತೆ. ಹಾಗೇ ಸುಮ್ಮನೆ ಎಂದು ರಮೇಶ್‌ ಅರವಿಂದ್‌ ಹೇಳಿದ್ರಂತೆ. ಇದನ್ನೂ ಓದಿ: ಲಾಂಗ್‌ ಹಿಡಿದ ಕನ್ನಡ ನಟ ರಮೇಶ್‌ ಅರವಿಂದ್‌; ರಜನಿಕಾಂತ್‌ ಅಂದ್ಕೊಂಡ್ವಿ ಅಂದ್ರು ಫ್ಯಾನ್ಸ್‌

ಅವರು ತನ್ನ ಹೆಸರು ಹೇಳಿದರು. ಇದಾದ ಬಳಿಕ ನಿಮ್ಮ ಫೋನ್‌ ನಂಬರ್‌ ಏನು ಎಂದು ಕೇಳಿದ್ರಂತೆ. ಮೊದಲ ಪರಿಚಯಕ್ಕೆ ಫೋನ್‌ ನಂಬರ್‌ ಕೇಳಿದ ಧೈರ್ಯ ಮೆಚ್ಚಬೇಕು. ಇವರು ಫೋನ್‌ ನಂಬರ್‌ ಕೇಳಿದಾಗ ಏಕೆ ಎಂದು ಆ ಹುಡುಗಿ ಕೇಳಿದ್ರಂತೆ. ಹಾಗೆ ಸುಮ್ಮನೆ ಎಂದ್ರಂತೆ. ಅವರು ಫೋನ್‌ ನಂಬರ್‌ ಹೇಳಿದ್ರು. ಫೌಂಟೇನ್‌ ಪೆನ್‌ನಲ್ಲಿ ಅಂಗೈನಲ್ಲಿ ಫೋನ್‌ ನಂಬರ್‌ ಬರೆದುಕೊಂಡ್ರು. ಆ ಹುಡುಗಿ ಜತೆ ಇವರು ಧೈರ್ಯವಾಗಿ ಮಾತನಾಡುತ್ತಿದ್ದರೂ ಒಳಗೊಳಗೆ ತುಂಬಾ ಭಯಪಟ್ಟಿದ್ದರು. ಅದಕ್ಕೆ ಸಾಕ್ಷಿಯಾಗಿ ಇವರು ಬೆವರುತ್ತಿದ್ದರು. ಎಷ್ಟು ಬೆವರುತ್ತಿದ್ದರೆಂದರೆ ಇವರು ಕೈಯಲ್ಲಿ ಬರೆದ ಫೋನ್‌ ನಂಬರೇ ಅಳಿಸಿ ಹೋಗಿತ್ತಂತೆ.

ಕೈ ಬೆವರಿತ್ತು, ಫೋನ್‌ ನಂಬರ್‌ ಅಳಿಸಿತ್ತು

ಹೀಗೆ ಆ ಹುಡುಗಿಯ ಫೋನ್‌ ನಂಬರ್‌ ತೆಗೆದುಕೊಂಡು ಮನೆಗೆ ಬಂದು ನೋಡಿದಾಗ ಅಂಗೈನಲ್ಲಿ ಬರೆದಿದ್ದ ಫೋನ್‌ ನಂಬರ್‌ಗಳಲ್ಲಿ ಎರಡು ನಂಬರ್‌ ಅಳಿಸಿ ಹೋಗಿತ್ತಂತೆ. ಆ ಉಳಿದ ಎರಡು ನಂಬರ್‌ ಅನ್ನು ಕಂಡುಹಿಡಿಯಲು ಇರೋಬರೋ ಸಂಖ್ಯೆ ಎಲ್ಲಾ ಲೆಕ್ಕಾಚಾರ ಮಾಡಿ ಫೋನ್‌ ಮಾಡಿದ್ರು. ಕೊನೆಗೊಂದು ನಂಬರ್‌ ಆಕೆಗೆ ಕನೆಕ್ಟ್‌ ಆಗಿತ್ತು. ಏನು ಫೋನ್‌ ಮಾಡಿದ್ದು ಎಂದು ಅರ್ಚನಾ ಕೇಳಿದಾಗ "ಹಾಗೆ ಸುಮ್ಮನೆ" ಎಂದು ಹೇಳಿದ್ರಂತೆ. ಹೀಗೆ ಹಾಗೆ ಸುಮ್ಮನೆ ಎಂದು ಹೇಳಿ ಇವರ ಫ್ರೆಂಡ್‌ಶಿಪ್‌ ಡೀಪ್‌ ಆಯ್ತಂತೆ. ಇದನ್ನು ಓದಿದ್ದೀರಾ: Movie Therapy: ಈ 10 ಕನ್ನಡ ಸಿನಿಮಾಗಳನ್ನು ನೋಡಿದ್ರೆ ಚಿಂತೆಯೆಲ್ಲ ಮಾಯ; ನಿಮಗೆ ಖುಷಿ ಕೊಟ್ಟ ಚಲನಚಿತ್ರ ಯಾವುದು ನೆನಪಿಸಿಕೊಳ್ಳಿ

ಆರು ವರ್ಷದ ಗೆಳೆತನ ಪ್ರೇಮಕ್ಕೆ ತಿರುಗಿತ್ತು

ಹೀಗೆ ಇವರು ಆರು ವರ್ಷಗಳ ಕಾಲ ಒಳ್ಳೆ ಫ್ರೆಂಡ್ಸ್‌ ಆಗಿದ್ರು. ಆ ಹುಡುಗಿಯ ತಾಯಿ ಹಾರ್ಟ್‌ ಅಟ್ಯಾಕ್‌ನಿಂದ ತೀರಿಕೊಂಡರು. ಇದಾದ ಬಳಿಕ ಅವರ ಕಷ್ಟ ಹೆಚ್ಚಾಯಿತು. ಮನೆಯಲ್ಲಿ ಅಡುಗೆ, ಅಪ್ಪನನ್ನು ಕಚೇರಿಗೆ ಕಳುಹಿಸುವುದು, ತಮ್ಮನ ಸ್ಕೂಲ್‌ ಜವಾಬ್ದಾರಿ ಹೀಗೆ ಈ 18-19 ವರ್ಷದ ಯುವತಿ ತುಂಬಾ ಕಷ್ಟಪಡ್ತಾ ಇದ್ರು. ಇವರಿಗೆ ರಮೇಶ್‌ ಅರವಿಂದ್‌ ಬೆಂಬಲ ನೀಡಿದರು. ಈ ಸ್ನೇಹ ಇನ್ನಷ್ಟು ಆಳವಾಯಿತು. ಪ್ರೀತಿಗೆ ತಿರುಗಿತು. ಮುಂದೆ ಇವರನ್ನು ವಿವಾಹವಾದರು. ಈಗ ನಿಹಾರಿಕಾ ಮತ್ತು ಅರ್ಜುನ್‌ ಎಂಬ ಇಬ್ಬರು ಮಕ್ಕಳಿದ್ದಾರೆ ಎಂದು ರಮೇಶ್‌ ಅರವಿಂದ್‌ ಅವರು ನೆನಪಿಸಿಕೊಂಡಿದ್ದಾರೆ.

ಪೂರಕ ಮಾಹಿತಿ- ಕನ್ನಡ ಪುಸ್ತಕ: ಪ್ರೀತಿಯಿಂದ ರಮೇಶ್‌- ಯಶಸ್ಸಿನ ಸರಳ ಸೂತ್ರಗಳು. ಲೇಖಕರು: ರಮೇಶ್‌ ಅರವಿಂದ್‌. ಪ್ರಕಾಶಕರು: ಸಾವಣ್ಣ ಎಂಟರ್‌ಪ್ರೈಸಸ್‌.

Whats_app_banner