ಕರ್ಪೂರದ ಗೊಂಬೆ ಸಿನಿಮಾದ ನಟಿ ಶ್ವೇತಾ ಜತೆಗಿನ ಸ್ನೇಹ ನೆನಪಿಸಿಕೊಂಡ ನಟ ಶರಣ್‌; ನೀವೆಲ್ಲ ಇಲ್ಲದೆ ಇದ್ದರೆ ಇಂದಿನ ಶರಣ ಇರುತ್ತಿರಲಿಲ್ಲ!
ಕನ್ನಡ ಸುದ್ದಿ  /  ಮನರಂಜನೆ  /  ಕರ್ಪೂರದ ಗೊಂಬೆ ಸಿನಿಮಾದ ನಟಿ ಶ್ವೇತಾ ಜತೆಗಿನ ಸ್ನೇಹ ನೆನಪಿಸಿಕೊಂಡ ನಟ ಶರಣ್‌; ನೀವೆಲ್ಲ ಇಲ್ಲದೆ ಇದ್ದರೆ ಇಂದಿನ ಶರಣ ಇರುತ್ತಿರಲಿಲ್ಲ!

ಕರ್ಪೂರದ ಗೊಂಬೆ ಸಿನಿಮಾದ ನಟಿ ಶ್ವೇತಾ ಜತೆಗಿನ ಸ್ನೇಹ ನೆನಪಿಸಿಕೊಂಡ ನಟ ಶರಣ್‌; ನೀವೆಲ್ಲ ಇಲ್ಲದೆ ಇದ್ದರೆ ಇಂದಿನ ಶರಣ ಇರುತ್ತಿರಲಿಲ್ಲ!

Karpoorada Gombe Movie: ಮೇಶ್‌ ಅರವಿಂದ್‌, ಶ್ರುತಿ, ಶ್ವೇತಾ, ಶರಣ್‌, ಲೋಕೇಶ್‌, ಶ್ರೀನಿವಾಸ್‌ ಮೂರ್ತಿ, ದೊಡ್ಡಣ್ಣ ಮುಂತಾದವರು ನಟಿಸಿದ ಕರ್ಪೂರದ ಗೊಂಬೆ ಸಿನಿಮಾವನ್ನು ಕನ್ನಡ ನಟ 27 ವರ್ಷಗಳ ಬಳಿಕ ಮತ್ತೆ ನೆನಪಿಸಿಕೊಂಡಿದ್ದಾರೆ.

ಕರ್ಪೂರದ ಗೊಂಬೆ ಸಿನಿಮಾದ ನಟಿ ಶ್ವೇತಾ ಜತೆ ಶರಣ್‌
ಕರ್ಪೂರದ ಗೊಂಬೆ ಸಿನಿಮಾದ ನಟಿ ಶ್ವೇತಾ ಜತೆ ಶರಣ್‌

ಬೆಂಗಳೂರು: ಕರ್ಪೂರದ ಗೊಂಬೆ ಸಿನಿಮಾ ಸಾಕಷ್ಟು ಜನರಿಗೆ ನೆನಪಿರಬಹುದು. ರಮೇಶ್‌ ಅರವಿಂದ್‌, ಶ್ರುತಿ, ಶ್ವೇತಾ, ಶರಣ್‌, ಲೋಕೇಶ್‌, ಶ್ರೀನಿವಾಸ್‌ ಮೂರ್ತಿ, ದೊಡ್ಡಣ್ಣ ಮುಂತಾದವರು ನಟಿಸಿದ ಸಿನಿಮಾ ಆ ಕಾಲದಲ್ಲಿ ಸೂಪರ್‌ಹಿಟ್‌ ಆಗಿತ್ತು. ಈ ಸಿನಿಮಾದಲ್ಲಿ ಶ್ರುತಿ ಕಣ್ಣೀರು ಸುರಿಸಿದಾಗ ಮನೆಯ ಹೆಂಗಳೆಯರು, ಗಂಡಸರು ಎಲ್ಲರೂ ಕಣ್ಣೀರು ಸುರಿಸುತ್ತಿದ್ದಾರೆ. ಅಂದಹಾಗೆ, ಕರ್ಪೂರದ ಗೊಂಬೆ ಸಿನಿಮಾ ಬಿಡುಗಡೆಯಾಗಿ ಇದೇ ವರ್ಷ ಜೂನ್‌ ತಿಂಗಳಿಗೆ 27 ವರ್ಷವಾಗಿದೆ. ಈ 27 ವರ್ಷಗಳ ಬಳಿಕ ನಟ ಶರಣ್‌ ಕರ್ಪೂರದ ಗೊಂಬೆಯನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.

ಕರ್ಪೂರದ ಗೊಂಬೆಯನ್ನು ನೆನಪಿಸಿಕೊಂಡ ಶರಣ್‌

"ಕರ್ಪೂರದ ಗೊಂಬೆ' ಇಂದ ಶುರುವಾದ ಸ್ನೇಹ, ಪರಸ್ಪರ ಗೌರವ 27 ವರ್ಷಗಳ ನಂತರವೂ ಹಾಗೆಯೇ ಉಳಿದಿದೆ. ನನ್ನ ಮೊದಲ ಸಿನಿಮಾ, ಹೊಸಬನಾಗಿದ್ದರು, ಹಳೆಯ ಸ್ನೇಹತನೇನೋ ಎಂಬಷ್ಟು ಕಾಳಜಿ ತೋರುತ್ತಿದ್ದ ಸಮಯ. ಶ್ವೇತಾರಂತೆ ಆಗ ಎಲ್ಲರೂ ನನ್ನ ಬೆನ್ನ ಹಿಂದೆ ನಿಂತು ಧೈರ್ಯತುಂಬಿರದಿದ್ದರೆ, ನಿಮ್ಮ ಶರಣ ಇಂದಿನ ಶರಣ ಆಗುತ್ತಿರಲಿಲ್ಲವೇನೋ ಅನಿಸುತ್ತದೆ. ಹಳೆಯ ಸ್ನೇಹಿತರ ಜೊತೆ ಇಡೀ ಕುಟುಂಬ ಕಳೆಯುವ ಸಮಯ ಎಷ್ಟು ಸಂತೋಷ ನೀಡುತ್ತದೆಯಲ್ಲವೇ" ಎಂದು ನಟ ಶರಣ್‌ ಪೋಸ್ಟ್‌ ಮಾಡಿದ್ದಾರೆ.

ಶರಣ್‌ ಪೋಸ್ಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ಹಳೆಯ ಕರ್ಪೂರದ ಗೊಂಬೆ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. "ಹೌದು ಸರ್ ಹಳೆಯ ಸ್ನೇಹಿತರು ಮರಳಿ ಸಿಕ್ಕಾಗ ಬಹಳ ಖುಷಿಯಾಗುತ್ತದೆ" ಎಂದು ಕೆಲವರು ಪೋಸ್ಟ್‌ ಮಾಡಿದ್ದಾರೆ.

ಕರ್ಪೂರದ ಗೊಂಬೆ ಸಿನಿಮಾದ ಕುರಿತು

1996ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ. ಈ ಸಿನಿಮಾವನ್ನು ಎಸ್‌ ಮಹೇಂದರ್‌ ನಿರ್ದೇಶಿಸಿದ್ದರು. ರಮೇಶ್‌ ಅರವಿಂದ್‌, ಶ್ರುತಿ, ಶ್ವೇತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಂಸಲೇಖ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರ ತಮಿಳಿನಲ್ಲಿ ಅಕ್ಕ ಹೆಸರಿನಲ್ಲಿ ಡಬ್‌ ಆಗಿತ್ತು. ತೆಲುಗಿನಲ್ಲಿ ಸೀತಕ್ಕ ಎಂದು ಮರುನಿರ್ಮಾಣವಾಗಿತ್ತು. ಒಟ್ಟಾರೆ, ಆ ಕಾಲದಲ್ಲಿಯೇ ಈ ಸಿನಿಮಾದ ಕಥೆ ದಕ್ಷಿಣ ಭಾರತದಲ್ಲಿ ಜನಪ್ರಿಯವಾಯಿತು.

ಸದ್ಯ ಶರಣ್‌ ಹಂಚಿಕೊಂಡಿರುವ ಶ್ವೇತಾ ಅವರು ಕರ್ಪೂರದ ಗೊಂಬೆ ಸಿನಿಮಾದಲ್ಲಿ ಶ್ವೇತಾ ಆಗಿ ನಟಿಸಿದ್ದರು. ಸೀತೆಯಾಗಿ ಶ್ರುತಿ ನಟಿಸಿದ್ದರು. ರಮೇಶ್‌ ಅರವಿಂದ್‌ ತನ್ನದೇ ಹೆಸರು ರಮೇಶ್‌ ಹೊಂದಿದ್ದರು. ಪುಟ್ಟರಂಗನಾಗಿ ದೊಡ್ಡಣ್ಣ, ಅವರ ಪತ್ನಿಯಾಗಿ ರೇಖಾ ದಾಸ್‌ ನಟಿಸಿದ್ದರು. ಮಾಸ್ಟರ್‌ ಆನಂದ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಕರ್ಪೂರದ ಗೊಂಬೆ ಸಿನಿಮಾದ ಹಾಡುಗಳು

ಹಂಸಲೇಖ ಸಂಗೀತದ ಈ ಸಿನಿಮಾದ ಎಲ್ಲಾ ಹಾಡುಗಳು ಸೂಪರ್‌ಹಿಟ್‌ ಎನ್ನಬಹುದು. ತಬ್ಬಲಿಗೆ ಈ ತಬ್ಬಲಿಯ ಎಂಬ ಹಾಡು ನಿಮಗೆ ನೆನಪಿರಬಹುದು. ಓ ಮಲ್ಲಿಗೆಯೇ ಎಂಬ ಹಾಡು ಈಗಲೂ ಎಫ್‌ಎಂನಲ್ಲಿ ಕೇಳಿಸಬಹುದು. ಕರ್ಪೂರದ ಗೊಂಬೆ, ಓ ಮಲೆಬಿಲ್ಲೆ, ಬಂಧು ಓ ಪ್ರೇಮದಾ ಹಾಡುಗಳು ಕೂಡ ಜನಪ್ರಿಯವಾಗಿದ್ದವು. ಬಹುತೇಕ ಹಾಡುಗಳಿಗೆ ಕೆಎಸ್‌ ಚಿತ್ರಾ ಮತ್ತು ಮನೋ ಧ್ವನಿಯಾಗಿದ್ದಾರೆ.

Whats_app_banner