ನನಗೆ ಇಬ್ಬರು ಹೆಣ್ಣು ಮಕ್ಕಳು, ಕೊನೆಯ ಹತ್ತು ನಿಮಿಷ ಕಣ್ಣಲ್ಲಿ ನೀರು ಬಂತು; ನಾನಿ ಸಿನಿಮಾ ಹೃದಯಕ್ಕೆ ಟಚ್ಚಿಂಗ್ ಎಂದ ಶಿವಣ್ಣ
ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ಹಾಯ್ ನಾನ್ನ’ ಸಿನಿಮಾದ ಕುರಿತು ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ನನಗೂ ಬೇಗ ಕನೆಕ್ಟ್ ಆಯ್ತು ಎಂದು ಹಾಯ್ ನಾನ್ನ ಸಿನಿಮಾದ ಕುರಿತು ಶಿವರಾಜ್‌ಕುಮಾರ್ ವಿಮರ್ಶೆ ಮಾಡಿದ್ದಾರೆ.
ಮೈಸೂರು: ಹಾಯ್ ನಾನ್ನ ತುಂಬ ಅದ್ಭುತ ಸಿನಿಮಾ. ಎಮೋಷನ್, ಸೆಂಟಿಮೆಂಟ್ ಬೇಗ ಕನೆಕ್ಟ್ ಆಗುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಇದ್ದರೆ ಬೇಗ ಇಷ್ಟವಾಗುತ್ತದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ನನಗೂ ಬೇಗ ಕನೆಕ್ಟ್ ಆಯ್ತು. ಮ್ಯೂಸಿಕ್ ತುಂಬಾ ಚೆನ್ನಾಗಿದೆ. ನಾನಿ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲರ ಅಭಿಯನ ಅದ್ಭುತವಾಗಿದೆ. ನನಗೆ ಬಹಳ ಟಚ್ ಆಯ್ತು ಸಿನಿಮಾ. ಕೊನೆ ಹತ್ತು ನಿಮಿಷ ಕಣ್ಣಲ್ಲಿ ನೀರು ಬಂತು. ನಾನಿ ನಾನು ನಿಮ್ಮ ಅಭಿಮಾನಿಯಾಗಿದ್ದೇನೆ ಎಂದು ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ಹಾಯ್ ನಾನ್ನ’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಎಮೋಷನಲ್ ಕಥಾಹಂದರಕ್ಕೆ ಸಿನಿರಸಿಕರು ಮಾತ್ರವಲ್ಲ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಮನೆ ದೊರೆ ಶಿವಣ್ಣ ನಾನಿ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಹಾಯ್ ನಾನ್ನ’ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ನಾನಿ, ಚಿತ್ರ ಬಿಡುಗಡೆಗೂ ಮುನ್ನ ಶಿವಣ್ಣ ಅವರನ್ನು ಭೇಟಿಯಾಗಿದ್ದರು. ಈಗ ಮೈಸೂರಿಯಲ್ಲಿ ಶಿವರಾಜ್‌ಕುಮಾರ್ ಅವರು ‘ಹಾಯ್ ನಾನ್ನ’ ಚಿತ್ರ ವೀಕ್ಷಿಸಿ, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಅಪ್ಪ-ಮಗಳ ಬಾಂಧವ್ಯ 'ಹಾಯ್ ನಾನ್ನ' ಸಿನಿಮಾದ ಕಥೆಯಾಗಿದೆ. ನಾಯಕಿ ಮೃಣಾಲ್ ಠಾಕೂರ್ ಜೊತೆ ನಾನಿ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. 'ಹಾಯ್ ನಾನ್ನ'ಗೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಣ್ಣದ ಲೋಕದಲ್ಲಿ ನಿರ್ದೇಶಕನಾಗಿ ಇದು ಇವರ ಚೊಚ್ಚಲ ಚಿತ್ರ.
ಇತ್ತೀಚಿಗೆ ‘ಹಾಯ್ ನಾನ್ನ’ ಸಿನಿಮಾ ನೋಡಿ ಅಲ್ಲು ಅರ್ಜುನ್ ಕೂಡ ಭಾವುಕರಾಗಿದ್ದಾರೆ. ಈ ಸಿನಿಮಾದಲ್ಲಿ ಅಪ್ಪ-ಮಗಳ ಸೆಂಟಿಮೆಂಟ್ ನನ್ನ ಮನ ಮುಟ್ಟಿದೆ ಎಂದು ಬನ್ನಿ ಬರೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ನಾನಿ ಮತ್ತು ಇತರ ನಟರಿಗೆ ಸ್ಪೆಷಲ್ ಥ್ಯಾಂಕ್ಸ್ ಎಂದು ಪತ್ರ ಬರೆದಿದ್ದಾರೆ.
'ಹಾಯ್ ನಾನ್ನ' ಚಿತ್ರವನ್ನು ವೈರ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ನಿರ್ಮಾಣ ಮಾಡಿದ್ದು, ಶೌರ್ಯುವ್ ನಿರ್ದೇಶಿಸಿದ್ದಾರೆ. ಸಾನು ಜಾನ್ ವಗೀಸ್ ಐಎಸ್ಸಿ ಕ್ಯಾಮರಾ ವರ್ಕ್, ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿದೆ. ನಾನಿ, ಮೃಣಾಲ್ ಜೊತೆ ಶ್ರುತಿ ಹಾಸನ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಲಯಾಳಂ ನಟ ಜಯರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಂಡ ಚಿತ್ರ ಪಂಚ ಭಾಷೆಗಳಲ್ಲಿ ತೆರೆಕಂಡಿದೆ.