ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡ ನಟಿ ವಿದ್ಯಾ ನಂದೀಶ್‌ ಭೀಕರ ಕೊಲೆ ಪೂರ್ವ ನಿರ್ಧರಿತವೇ? ಮೈಸೂರಿನಲ್ಲಿ ತಲೆಗೆ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಂದ ಪ್ರಕರಣ

ಕನ್ನಡ ನಟಿ ವಿದ್ಯಾ ನಂದೀಶ್‌ ಭೀಕರ ಕೊಲೆ ಪೂರ್ವ ನಿರ್ಧರಿತವೇ? ಮೈಸೂರಿನಲ್ಲಿ ತಲೆಗೆ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಂದ ಪ್ರಕರಣ

ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ತುರಗನೂರಿನಲ್ಲಿ ಕನ್ನಡ ನಟಿ, ಕಾಂಗ್ರೆಸ್‌ ನಾಯಕಿ ವಿದ್ಯಾ ನಂದೀಶ್‌ ಕೊಲೆ ಪ್ರಕರಣ ಪೂರ್ವ ನಿರ್ಧರಿತವೇ? ಆಸ್ತಿ ಸಂಬಂಧಿತ ಕೊಲೆ ನಡೆದಿದೆಯೇ? ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಈ ಭೀಕರ ಕೊಲೆಯ ಕುರಿತು ಹೆಚ್ಚಿನ ವಿವರ ನೀಡಿದ್ದಾರೆ.

ಕನ್ನಡ ನಟಿ ವಿದ್ಯಾ ನಂದೀಶ್‌ ಭೀಕರ ಕೊಲೆ ಪೂರ್ವ ನಿರ್ಧರಿತವೇ?
ಕನ್ನಡ ನಟಿ ವಿದ್ಯಾ ನಂದೀಶ್‌ ಭೀಕರ ಕೊಲೆ ಪೂರ್ವ ನಿರ್ಧರಿತವೇ?

ಬೆಂಗಳೂರು: ಮೈಸೂರಿನಲ್ಲಿ ನಿನ್ನೆ ವರದಿಯಾದ ನಟಿ ವಿದ್ಯಾ ನಂದೀಶ್‌ ಕೊಲೆ ಪ್ರಕರಣದ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಯೊಬ್ಬರು ಈ ಪ್ರಕರಣದ ಇಂಚಿಂಚು ವಿವರ ನೀಡಿದ್ದಾರೆ. ಭಜರಂಗಿ, ಜೈ ಮಾರುತಿ 800 ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಸಹನಟಿ ವಿದ್ಯಾ ನಂದೀಶ್‌ ಕಾಂಗ್ರೆಸ್‌ ರಾಜಕಾರಣಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಇವರ ಕೊಲೆಗೆ ಆಸ್ತಿ, ಡಿವೋರ್ಸ್‌ ಇತ್ಯಾದಿ ಅಂಶಗಳು ಕಾರಣವಾಗಿರಬಹುದು. ಈ ಹತ್ಯೆ ಪೂರ್ವ ನಿರ್ಧರಿತ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ತುರಗನೂರಿನಲ್ಲಿ ಈ ಘಟನೆ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ವಿದ್ಯಾ ನಂದೀಶ್‌ ಅವರ ಸಾವಿನ ಸಂದರ್ಭದಲ್ಲಿ ಜತೆಗಿದ್ದ ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಇದು ಪೂರ್ವ ಯೋಜಿತ ಕೃತ್ಯ. ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಅವರು ಘಟನೆಯ ಕುರಿತು ಈ ರೀತಿ ಹೇಳಿದ್ದಾರೆ. "ಗಂಡ ಹೆಂಡತಿ ನಡುವೆ ಏನು ಜಗಳವಾಗಿತ್ತು ತಿಳಿದಿಲ್ಲ. ಈ ಜಗಳ ಇತ್ಯರ್ಥ ಮಾಡಬೇಕೆಂದು ವಿದ್ಯಾ ಅವರು ರಾತ್ರಿ ಹೋಗೋಣ ಎಂದರು. ಬೆಳಗ್ಗೆ ಹೋಗೋಣ ಬಿಡಕ್ಕ ಅಂದ್ರೂ ಈಗಲೇ ಹೋಗೋಣ ಎಂದು ಹೇಳಿದರು. ಹೋಗಲೇಬೇಕು, ಡ್ರೈವರ್‌ಗೆ ಹೇಳಿದ್ದೀನಿ ಎಂದ್ರು. ಹೋಗೋಣ ಅಂದ್ರು. ಒಬ್ಳೆ ಹೋಗಬೇಡಿ, ನಾನೂ ಬರ್ತಿನಿ ಅಂತ ಹೊರಟ್ವಿ" ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಸುತ್ತಿಗೆಯ ಹೊಡೆದು ಕೊಲೆ

"ಮನೆಗೆ ಹೋದ ತಕ್ಷಣ ಜಗಳ ಆರಂಭವಾಯ್ತು. ಅವರು ವಿಡಿಯೋ ಮಾಡ್ತಾ ಇದ್ರು. ನನಗೂ ವಿಡಿಯೋ ಮಾಡಲು ಹೇಳಿದ್ರು. ಅರ್ಧ ತನಕ ವಿಡಿಯೋ ಇದೆ. ಆ ವಿಡಿಯೋ ಪೊಲೀಸ್‌ ಸ್ಟೇಷನ್‌ನಲ್ಲಿದೆ. ಸೀಝ್‌ ಮಾಡಿದ್ದಾರೆ. ಆಮೇಲೆ ಅವನು ಜುಟ್ಟು ಪೂರ್ತಿ ಹಿಡಿದುಕೊಂಡು ಒಳಗೆ ಎಳೆದುಕೊಂಡು ಸುತ್ತಿಗೆಯಿಂದ ಹೊಡೆದಿದ್ದಾನೆ. ಇದು ಪ್ರೀ ಪ್ಲ್ಯಾನ್‌ ಆಗಿತ್ತು. ಸುತ್ತಿಗೆ ರೆಡಿಯಾಗಿತ್ತು. ಅವರಮ್ಮ, ಅವರಪ್ಪ, ಅವರು ಮೂವರು ಪ್ರೀ ಪ್ಲ್ಯಾನ್‌ ಮಾಡಿದ್ದರು. ಅವರಪ್ಪ ಮೂಕ ಪ್ರೇಕ್ಷಕ. ಸುತ್ತಿಗೆಯಿಂದ ಹೊಡೆದ ತಕ್ಷಣ ಅವರಪ್ಪ ಅಲ್ಲಿಂದ ಎಸ್ಕೇಪ್‌ ಆಗಿ ಈಚೆ ಬಂದು ಕೂತ್ರು" ಎಂದು ಘಟನೆಯ ಸಂದರ್ಭವನ್ನು ವಿವರಿಸಿದ್ದಾರೆ.

"ಮಾತಿಗೆ ಮಾತು ಬೆಳೆದಾಗ ಆಕೆಯ ಜುಟ್ಟು ಎಳೆದುಕೊಂಡು ಒಳಕ್ಕೆ ಹೋದ. ನನ್ನನ್ನು ಒಳಗೆ ಹೋಗಲು ಅವರ ಅಮ್ಮ ಬಿಡಲಿಲ್ಲ. ಆದ್ರೂ ಒಳಕ್ಕೆ ಹೋದಾಗ ಸುತ್ತಿಗೆಯಿಂದ ತಲೆಗೆ ಎರಡು ಏಟು ಬಿದ್ದಾಗಿತ್ತು. ಹೊಡೆಯಬೇಡ ಎಂದರೂ ಕೇಳಲಿಲ್ಲ. ನನ್ನ ಕಣ್ಣಮುಂದೆಯೇ ಹೊಡೆದ. ನೆತ್ತಿಗೆ ಹೊಡೆಯುತ್ತಿದ್ದ. ಅಲ್ಲೇ ಸ್ಪಾಟ್‌ ಆದ್ರು ವಿದ್ಯಾ" ಎಂದು ಘಟನೆಯ ಕುರಿತು ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ಟಿವಿ ಚಾನೆಲ್‌ಗಳು ಪ್ರಸಾರ ಮಾಡಿವೆ.

"ದಂಪತಿ ನಡುವೆ ವೈಮನಸ್ಸು ಇತ್ತು. ಅವನು ಏನೂ ಕೆಲಸ ಮಾಡೋಲ್ಲ. ಕೇಸು ನಡೀತಾ ಇತ್ತು. ಆಸ್ತಿ ವಿಚಾರವಾಗಿ, ಡಿವೋರ್ಸ್‌ ವಿಚಾರವಾಗಿ ಕೇಸ್‌ ನಡೀತಾ ಇತ್ತು. ಡಿವೋರ್ಸ್‌ ಪಿಟಿಷನ್‌ ಆದ ಬಳಿಕ ಇವರು ಮತ್ತೆ ಒಂದಾಗಬೇಕೆಂದುಕೊಂಡರು. ನಾನು ಡ್ರೈವರ್‌, ವಿದ್ಯಾ ಮೇಡಂ ಮೂವರು ರಾತ್ರಿ ಹೋದ್ವಿ. ಘಟನೆ ನಡೆದಾಗ ಡ್ರೈವರ್‌ಗೆ ತಿಳಿಸಿದಾಗ ಡ್ರೈವರ್‌ ಪೊಲೀಸರಿಗೆ ಹೇಳ್ತಿನಿ ಅಂದ. ನಾನೇ ಫೋನ್‌ ಮಾಡ್ತಿನಿ ಅಂತ ನಂದೀಶ್‌ ತನ್ನ ಆಯುಧದ ಜತೆಗೆ ಹೊರಕ್ಕೆ ಹೋಗಿ ನಾಪತ್ತೆಯಾದ" ಎಂದು ಘಟನೆಯ ಇಂಚಿಂಚು ಮಾಹಿತಿ ನೀಡಿದ್ದಾರೆ.

ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌, ಹೆಚ್ಚುವರಿ ಎಸ್‌ಪಿ ಡಾ ನಂದಿನಿ, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಘಟನೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟಿ20 ವರ್ಲ್ಡ್‌ಕಪ್ 2024