ಕನ್ನಡ ಸುದ್ದಿ  /  ಮನರಂಜನೆ  /  Actor Vinod Raj: ಸ್ಯಾಂಡಲ್‌ವುಡ್‌ ನಟ ವಿನೋದ್ ರಾಜ್‌ಗೆ ಅನಾರೋಗ್ಯ; ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲು

Actor Vinod Raj: ಸ್ಯಾಂಡಲ್‌ವುಡ್‌ ನಟ ವಿನೋದ್ ರಾಜ್‌ಗೆ ಅನಾರೋಗ್ಯ; ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲು

Kannada Actor Vinod Raj Health: ಕನ್ನಡ ಚಿತ್ರರಂಗದ ಹಿರಿಯ ನಟಿ ದಿವಂಗತ ಲೀಲಾವತಿ ಪುತ್ರ, ನಟ ವಿನೋದ್‌ ರಾಜ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Actor Vinod Raj: ಸ್ಯಾಂಡಲ್‌ವುಡ್‌ ನಟ ವಿನೋದ್ ರಾಜ್‌ಗೆ ಅನಾರೋಗ್ಯ
Actor Vinod Raj: ಸ್ಯಾಂಡಲ್‌ವುಡ್‌ ನಟ ವಿನೋದ್ ರಾಜ್‌ಗೆ ಅನಾರೋಗ್ಯ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ದಿವಂಗತ ಲೀಲಾವತಿ ಪುತ್ರ, ನಟ ವಿನೋದ್‌ ರಾಜ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಕರುಳಿನ ಸಮಸ್ಯೆಯಿಂದ ಇವರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಸದ್ಯ ಇವರಿಗೆ ಕರುಳಿನ ಆಪರೇಷನ್‌ ಮಾಡಲಾಗಿದೆ. ವಿನೋದ್‌ ರಾಜ್‌ ಆರೋಗ್ಯದ ಕುರಿತು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಕನ್ನಡ ನಟ ವಿನೋದ್‌ ರಾಜ್‌ ಪರಿಚಯ

ಕನ್ನಡ ನಟ ವಿನೋದ್‌ ರಾಜ್‌ ಖ್ಯಾತ ನಟಿ ಡಾ. ಲೀಲಾವತಿ ಅವರ ಪುತ್ರ. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂಬರೀಶ್, ಅರ್ಜುನ್ ಸರ್ಜಾ, ರಮೇಶ್ ಅರವಿಂದ್, ಶ್ರೀನಿವಾಸ್ ಮೂರ್ತಿ ಮುಂತಾದ ಖ್ಯಾತ ನಟರೊಂದಿಗೆ ನಟಿಸಿದ್ದಾರೆ. ಡ್ಯಾನ್ಸ್ ರಾಜಾ ಡ್ಯಾನ್ಸ್, ಶ್ರೀ ವೆಂಕಟೇಶ್ವರ ಮಹಿಮೆ , ಕೃಷ್ಣಾ ನೀ ಕುಣಿದಾಗ, ಕಾಲೇಜ್ ಹೀರೋ , ನನಗು ಹೆಂಡ್ತಿ ಬೇಕು , ಯುದ್ಧ ಪರ್ವ , ನಾಯಕ, ಬನ್ನಿ ಒಂದ್ಸಲಾ ನೋಡಿ, ಗಿಳಿ ಬೇಟೆ , ನಂಜುಂಡ, ಕ್ಯಾಪ್ಟನ್, ಬೊಂಬಾಟ್ ರಾಜ ಬಂಡಲ್ ರಾಣಿ., ರಂಭಾ ರಾಜ್ಯದಲ್ಲಿ ರೌಡಿ, ಮಹಾಭಾರತ, ರಾಜಣ್ಣ , ದಳವಾಯಿ, ಸ್ನೇಹಲೋಕ , ಓಂ ಶಕ್ತಿ , ಬ್ರಹ್ಮ ವಿಷ್ಣು, ವಂದೇ ಮಾತರಂ, ರಾಷ್ಟ್ರಗೀತೆ, ಶ್ರೀ ಮಂಜುನಾಥ , ನಮ್ಮ ಸಂಸಾರ ಆನಂದ ಸಾಗರ, ಪಾಂಡವ , ಕನ್ನಡದ ಕಂದ, ಶುಕ್ರ ಮತ್ತು ಯಾರದು ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.