ಲಂಬೋರ್ಗಿನಿ ಹೊಂದಿರುವ ಕನ್ನಡ ನಟರು: ದಿ ಪುನೀತ್ ರಾಜ್‌ಕುಮಾರ್ ಕಾರು ಈಗ ಎಲ್ಲಿದೆ, ಇಂಥ ಬಂಡಿ ಹೊಂದಿರುವ ಇನ್ನಿಬ್ಬರು ಯಾರು?
ಲಂಬೋರ್ಗಿನಿ ಹೊಂದಿರುವ ಸ್ಯಾಂಡಲ್‌ವುಡ್ ನಟರು: ಕನ್ನಡದ ಇಬ್ಬರು ನಟರು ಈಗ ಲಂಬೋರ್ಗಿನಿ ಕಾರುಗಳನ್ನು ಹೊಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಈ ಕಾರನ್ನು ತನ್ನ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಮಹಿಳಾದಿನದ ಉಡುಗೊರೆಯಾಗಿ ನೀಡಿದ್ದರು. ಆದರೆ, ಈಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ತನ್ನಲ್ಲಿ ಈ ಕಾರನ್ನು ಇಟ್ಟುಕೊಂಡಿಲ್ಲ.

ಲಂಬೋರ್ಗಿನಿ ಹೊಂದಿರುವ ಸ್ಯಾಂಡಲ್‌ವುಡ್ ನಟರು: ಲಂಬೋರ್ಗಿನಿ ವೇಗದ ಆವೇಗಕ್ಕೆ ಹೆಸರುವಾಸಿಯಾದ ವಿಲಾಸಿ, ದುಬಾರಿ ಕಾರು. ಈ ಕಾರು ಹೊಂದುವುದು ಪ್ರತಿಷ್ಠೆಯ ವಿಷಯವೂ ಹೌದು. ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಮೂವರು ನಟರಲ್ಲಿ ಮಾತ್ರ ಈ ಕಾರಿದೆ. ಪುನೀತ್ ರಾಜ್‌ಕುಮಾರ್ ಈ ಕಾರನ್ನು ತನ್ನ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಮಹಿಳಾದಿನದ ಉಡುಗೊರೆಯಾಗಿ ನೀಡಿದ್ದರು. ಆದರೆ, ಈಗ ಇವರು ತನ್ನಲ್ಲಿ ಈ ಕಾರನ್ನು ಇಟ್ಟುಕೊಂಡಿಲ್ಲ.
ಲಂಬೋರ್ಗಿನಿ ಇಟಲಿಯ ಕಾರು ಕಂಪನಿಯ ಕಾರು. ಇದು ತನ್ನ ಐಕಾನಿಕ್ ವಿನ್ಯಾಸಕ್ಕೆ ಹೆಸರುವಾಸಿ. ಇದರ ಪರ್ಫಾಮೆನ್ಸ್ ಅಮೋಘ. ಇದರೊಂದಿಗೆ ಲಗ್ಷುರಿ ವಿಷಯಕ್ಕೂ ಫೇಮಸ್. ಟ್ರ್ಯಾಕ್ಟರ್ ಉತ್ಪಾದಿಸುತ್ತಿದ್ದ ಈ ಕಂಪನಿ ಸೂಪರ್‌ಕಾರ್ ಪವರ್‌ಹೌಸ್ ಆಗಿರೋದು ಇತಿಹಾಸ. ಈಗ ಇದು ನಂಬಿಕಸ್ಥ ಮತ್ತು ಪ್ರತಿಷ್ಠಿತ ಕಾರು ಕಂಪನಿಯಾಗಿ ಜನಪ್ರಿಯತೆ ಪಡೆದಿದೆ. ಭಾರತದ ಹಲವು ಕಲಾವಿದರು, ಬಿಸ್ನೆಸ್‌ಮ್ಯಾನ್‌ಗಳು ಈ ಕಾರು ಹೊಂದಿದ್ದಾರೆ. ಈ ಪವರ್‌ಫುಲ್ ಕಾರನ್ನು ಸ್ಯಾಂಡಲ್‌ವುಡ್‌ನ ಬೆರಳೆಣಿಕೆಯ ನಟರು ಮಾತ್ರ ಹೊಂದಿದ್ದಾರೆ.
ದಿವಂಗತ ಪುನೀತ್ ರಾಜ್‌ಕುಮಾರ್ ಬಳಿಯಿತ್ತು ಲಂಬೋರ್ಗಿನಿ
ಪುನೀತ್ ರಾಜ್‌ಕುಮಾರ್ ಅವರು ತನ್ನ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ 2019ರಲ್ಲಿ ಮಹಿಳಾದಿನದ ಉಡುಗೊರೆಯಾಗಿ ಲಂಬೋರ್ಗಿನಿ ಕಾರನ್ನು ನೀಡಿದ್ದರು. ಇದು ಪತ್ನಿಗೆ ಉಡುಗೊರೆಯಾಗಿ ನೀಡಿದ್ದರೂ ಅಪ್ಪು ಕಾರು ಎನ್ನುವುದು ಸುಳ್ಳಲ್ಲ. ಹೆಚ್ಚಾಗಿ ಈ ಕಾರನ್ನು ಪುನೀತ್ ರಾಜ್‌ಕುಮಾರ್ ಅವರೇ ಬಳಸುತ್ತಿದ್ದರು. ಅಪ್ಪು ಮರೆಯಾದ ಬಳಿಕ ಈ ಕಾರನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ದುಬೈನಲ್ಲಿರುವ ತಮ್ಮ ಸಹೋದರನಿಗೆ ನೀಡಿದ್ದಾರೆ. ಈ ಕಾರನ್ನು ಇಲ್ಲಿ ಯಾರೂ ಬಳಸದೆ ಇದ್ದ ಕಾರಣ ಸಹೋದರಿಗೆ ನೀಡಿದ್ದರು. ಹೀಗಾಗಿ, ಸ್ಯಾಂಡಲ್‌ವುಡ್‌ನಲ್ಲಿ ಈಗ ಲಂಬೋರ್ಗಿನಿ ಹೊಂದಿರುವುದು ಕೇವಲ ಇಬ್ಬರು ಮಾತ್ರ. ಒಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇನ್ನೊಬ್ಬರು ನಿಖಿಲ್ ಕುಮಾರಸ್ವಾಮಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್‌ನಲ್ಲಿದೆ ಲಂಬೋರ್ಗಿನಿ ಕಾರು
ನಟ ದರ್ಶನ್ ಬಳಿ ದುಬಾರಿ ಕಾರುಗಳು ಸಾಕಷ್ಟು ಇವೆ. ಅವುಗಳಲ್ಲಿ ಲಂಬೋರ್ಗಿನಿ ಅವೆಂಟೊಡೊರ್ ಸ್ಪೈಡರ್ ಕೂಡ ಒಂದು. ಇವರು ಹೊಂದಿರುವ ಲಂಬೋರ್ಗಿನಿ (ಲ್ಯಾಂಬೋರ್ಗಿನಿ) ಕಾರು ಆರಂಭದಲ್ಲಿ ಬಿಳಿ ಬಣ್ಣದಲ್ಲಿತ್ತು. ಬಳಿಕ ಬೂದು ಬಣ್ಣಕ್ಕೆ ಬದಲಾಯಿಸಿಕೊಂಡಿದ್ದರು. ದರ್ಶನ್ ಬಳಿ ಹಲವು ಕಾರುಗಳು ಇವೆ. ಫೋರ್ಡ್ ಕಂಪನಿಯ ದುಬಾರಿ ಕಾರುಗಳನ್ನು ಇವರು ಹೊಂದಿದ್ದಾರೆ. ಲ್ಯಾಂಡ್ ರೋವರ್ ಡಿಫೆಂಡರ್ ಕೂಡ ಹೊಂದಿದ್ದಾರೆ. ಲ್ಯಾಂಡ್ ರೋವರ್ ರೇಂಜ್ ರೋವರ್, ಪೋರ್ಷೆ ಕಯೆನ್ನೆ, ಟೊಯೊಟಾ ವೆಲ್‌ಫೈರ್, ಟೊಯೊಟಾ ಫಾರ್ಚ್ಯುನರ್, ಬಿಎಂಡಬ್ಲ್ಯು ಸೇರಿದಂತೆ ಹಲವು ವಿಲಾಸಿ ಕಾರುಗಳನ್ನು ಇವರು ಹೊಂದಿದ್ದಾರೆ.
ನಿಖಿಲ್ ಕುಮಾರಸ್ವಾಮಿಯಲ್ಲಿಯೂ ಇದೆ ಲಂಬೋರ್ಗಿನಿ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಮಗ ನಿಖಿಲ್ ಕುಮಾರಸ್ವಾಮಿ ಬಳಿಯೂ ಲಂಬೋರ್ಗಿನಿ ಕಾರಿದೆ. ಹೀಗೆ, ಕರ್ನಾಟಕದಲ್ಲಿ ಸದ್ಯ ದರ್ಶನ್ ಮತ್ತು ನಿಖಿಲ್ ಕುಮಾರಸ್ವಾಮಿ ಬಳಿ ಲಂಬೋರ್ಗಿನಿ ಕಾರು ಇದೆ.
ವಿಭಾಗ