Chaitra J Achar: ಜಗತ್ತಿನ ಖ್ಯಾತ ನಿಯತಕಾಲಿಕೆಯ ಮುಖಪುಟದಲ್ಲಿ ಚೈತ್ರಾ ಜೆ ಆಚಾರ್‌; ಸಖತ್‌ ಫೇಮಸ್‌ ಕಣ್ರೀ ಸಪ್ತ ಸಾಗರದಾಚೆ ಎಲ್ಲೋ ಬೆಡಗಿ
ಕನ್ನಡ ಸುದ್ದಿ  /  ಮನರಂಜನೆ  /  Chaitra J Achar: ಜಗತ್ತಿನ ಖ್ಯಾತ ನಿಯತಕಾಲಿಕೆಯ ಮುಖಪುಟದಲ್ಲಿ ಚೈತ್ರಾ ಜೆ ಆಚಾರ್‌; ಸಖತ್‌ ಫೇಮಸ್‌ ಕಣ್ರೀ ಸಪ್ತ ಸಾಗರದಾಚೆ ಎಲ್ಲೋ ಬೆಡಗಿ

Chaitra J Achar: ಜಗತ್ತಿನ ಖ್ಯಾತ ನಿಯತಕಾಲಿಕೆಯ ಮುಖಪುಟದಲ್ಲಿ ಚೈತ್ರಾ ಜೆ ಆಚಾರ್‌; ಸಖತ್‌ ಫೇಮಸ್‌ ಕಣ್ರೀ ಸಪ್ತ ಸಾಗರದಾಚೆ ಎಲ್ಲೋ ಬೆಡಗಿ

Chaitra J Achar: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ನಟಿ ಚೈತ್ರಾ ಜೆ ಆಚಾರ್‌ ಜನಪ್ರಿಯ ನಿಯತಕಾಲಿಕೆಯ ಮುಖಪುಟ ಅಲಂಕರಿಸುತ್ತಿದ್ದಾರೆ. ವೋಗ್‌ ಇಂಡಿಯಾದ ಮುಖಪುಟದಲ್ಲಿ ಚೈತ್ರಾ ಜೆ ಆಚಾರ್‌ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಬ್ಲಿಂಕ್‌ ನಟಿ ಸುಳಿವು ನೀಡಿದ್ದಾರೆ.

Chaitra J Achar: ಜಗತ್ತಿನ ಖ್ಯಾತ ನಿಯತಕಾಲಿಕೆಯ ಮುಖಪುಟದಲ್ಲಿ ಚೈತ್ರಾ ಜೆ ಆಚಾರ್‌
Chaitra J Achar: ಜಗತ್ತಿನ ಖ್ಯಾತ ನಿಯತಕಾಲಿಕೆಯ ಮುಖಪುಟದಲ್ಲಿ ಚೈತ್ರಾ ಜೆ ಆಚಾರ್‌

ಬೆಂಗಳೂರು: ವೋಗ್‌ ಇಂಡಿಯಾ (vogue india) ದೇಶದ ಜನಪ್ರಿಯ ನಿಯತಕಾಲಿಕೆ. ಜಗತ್ತಿನ ಜನಪ್ರಿಯ ನಿಯತಕಾಲಿಕೆಯ ಭಾರತೀಯ ಸಂಚಿಕೆಯಾದ ವೋಗ್‌ನ ಮುಖಪುಟದಲ್ಲಿ ಕಾಣಿಸಿಕೊಳ್ಳುವುದು ಸೆಲೆಬ್ರಿಟಿಗಳಿಗೆ ಹೆಮ್ಮೆಯ ವಿಷಯ. ಈ ಅವಕಾಶ ಎಲ್ಲರಿಗೂ ದೊರಕುವುದಿಲ್ಲ. ಇದೀಗ ಈ ಅವಕಾಶವನ್ನು ಪಡೆದಿರುವ ಸುಳಿವನ್ನು ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಮೂಲಕ ಪ್ಯಾನ್‌ ಇಂಡಿಯಾ ಪ್ರೇಕ್ಷಕರನ್ನು ಸೆಳೆದಿರುವ ಚೈತ್ರಾ ಜೆ ಆಚಾರ್‌ ನೀಡಿದ್ದಾರೆ. ಇದಕ್ಕಾಗಿ ಕೊರ್ನಾಡ್‌ ಬೆಂಗಳೂರಿನಲ್ಲಿ (conradbengaluru) ಸಖತ್‌ ಫೋಟೋಶೂಟ್‌ ಮಾಡಿಸಿದ್ದಾರೆ.

ನಿಯತಕಾಲಿಕೆಯ ಮುಖಪುಟದಲ್ಲಿ ಚೈತ್ರಾ ಜೆ ಆಚಾರ್‌

ಕನ್ನಡ ನಟಿ ಚೈತ್ರಾ ಜೆ ಆಚಾರ್‌ ವೋಗ್‌ ಇಂಡಿಯಾದ ಮುಖಪುಟ ಅಲಂಕರಿಸುತ್ತಿದ್ದಾರೆ. ಈ ಕುರಿತು ಚೈತ್ರಾ ಜೆ ಆಚಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಸುಳಿವು ನೀಡಿದ್ದಾರೆ. ಈ ಸಂದರ್ಭದ ಫೋಟೋಶೂಟ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಇದಕ್ಕಾಗಿ ನಾನು ಬಹುಹಿಂದೆಯೇ ರೆಡಿಯಾಗಿದ್ದೆ. ಈಗ ವೋಗ್‌ ಇಂಡಿಯಾ, ವೋಗ್‌ ಮ್ಯಾಗಜಿನ್‌ಗಾಗಿ ಕಾಯುತ್ತಿದ್ದೇನೆ" ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಸದ್ಯ ಚೈತ್ರಾ ಜೆ ಆಚಾರ್‌ ಇಷ್ಟೇ ಅಪ್‌ಡೇಟ್‌ ನೀಡಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಜನರು ಲೈಕ್‌ಗಳ ಸುರಿಮಳೆಯನ್ನೇ ನೀಡಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ನಟಿ ರುಕ್ಮಿಣಿ ವಸಂತ್‌ "ಲವ್‌ ದೀಸ್‌" ಎಂದು ಕಾಮೆಂಟ್‌ ಮಾಡಿದ್ದಾರೆ. ಚೈತ್ರಾ ಜೆ ಆಚಾರ್‌ ಇತ್ತೀಚೆಗೆ ನೆಟ್ಟಿಗರ ಅಶ್ಲೀಲ, ನಿಂದನಾತ್ಮಕ ಕಾಮೆಂಟ್‌ಗಳಿಂದಾಗಿ ಹೆಚ್ಚು ಜನರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಲು ಅವಕಾಶ ನೀಡುವುದಿಲ್ಲ. ಕೇವಲ ತನ್ನ ಆಪ್ತರ ಗುಂಪಿಗೆ ಮಾತ್ರ ಕಾಮೆಂಟ್‌ ಮಾಡುವ ಆಕ್ಸೆಸ್‌ ನೀಡಿದ್ದಾರೆ. ಕಿಶನ್‌ ಬಿಳಗಲಿ, ಸೋನು ಗೌಡ, ಮೇಘನಾ ಸರ್ಜಾ ಸೇರಿದಂತೆ ಸಾಕಷ್ಟು ಜನರು ಈ ಫೋಟೋಗಳಿಗೆ ಲೈಕ್‌ ಬಟನ್‌ ಒತ್ತಿದ್ದಾರೆ.

ಚೈತ್ರಾ ಜೆ ಆಚಾರ್‌ ಅವರು ಕನ್ನಡ ನಟಿ ಮಾತ್ರವಲ್ಲದೆ ಹಾಡುಗಾರ್ತಿಯೂ ಹೌದು. ಬೆಂಗಳೂರು ಮೂಲದ ಇವರು 2019ರಲ್ಲಿ ಮಹಿರಾ ಸಿನಿಮಾದ ಮೂಲಕ ಸಿನಿಜಗತ್ತಿಗೆ ಕಾಲಿಟ್ಟರು. ಬೆಂಗಳೂರು ಕ್ವೀನ್ಸ್‌ ಎಂಬ ಕನ್ನಡ ವೆಬ್‌ ಸರಣಿ ಮೂಲಕ ತನ್ನ ನಟನಾ ಕ್ಷೇತ್ರದಲ್ಲಿ ಕರಿಯರ್‌ ಆರಂಭಿಸಿದರು.

ಚೈತ್ರಾ ಜೆ ಆಚಾರ್‌
ಚೈತ್ರಾ ಜೆ ಆಚಾರ್‌

ಗಿಲ್ಕಿ, ತಲೆಂದಂಡ, ಆ ದೃಶ್ಯ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಇವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜ್‌ ಬಿ ಶೆಟ್ಟಿ ನಟನೆಯ ಟೋಬಿ ಮತ್ತು ರಕ್ಷಿತ್‌ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರಗಳು. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ರಕ್ಷಿತ್‌ ಶೆಟ್ಟಿಯ ಪ್ರೇಯಸಿ "ಸುರಭಿ"ಯಾಗಿ ನಟಿಸಿದ್ದರು. ಇತ್ತೀಚೆಗೆ ಚೈತ್ರಾ ಜೆ ಆಚಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಬ್ಲಿಂಕ್‌ ಸಿನಿಮಾ ಬಿಡುಗಡೆಯಾಗಿತ್ತು. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಸಿನಿಮಾ ವೀಕ್ಷಕರ ಮೆಚ್ಚುಗೆ ಪಡೆದಿತ್ತು. ಬ್ಲಿಂಕ್‌ ಸಿನಿಮಾ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಚೈತ್ರಾ ಜೆ ಆಚಾರ್‌ ನಟನೆಯ ಹಲವು ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ರಕ್ಷಿತ್‌ ಶೆಟ್ಟಿ ಸ್ಟುಡಿಯೋದ ಸ್ಟ್ರಾಬೆರಿ, ರಾಕೇಶ್‌ ಕದ್ರಿಯವರ ಹ್ಯಾಪಿ ಬರ್ತ್‌ಡೇ ಟು ಮಿ, ಶಿವ ಗಣೇಶನ್‌ ಅವರ ಯಾರಿಗೂ ಹೇಳ್ಬೆಡಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಬಿಡುಗಡೆಗೆ ಕಾಯುತ್ತಿವೆ. ಇದೇ ಸಮಯದಲ್ಲಿ ಶಿವರಾಜ್‌ ಕುಮಾರ್‌ ಮತ್ತು ಡಾಲಿ ಧನಂಜಯ್‌ ನಟನೆಯ ಉತ್ತರಕಾಂಡ ಸಿನಿಮಾದಲ್ಲಿಯೂ ಚೈತ್ರಾ ಜೆ ಆಚಾರ್‌ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್‌ ಪ್ರೇಯಸಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Whats_app_banner