ಕನ್ನಡ ಸುದ್ದಿ  /  ಮನರಂಜನೆ  /  Rachita Ram: ದರ್ಶನ್‌ ಸರ್‌ ನನಗೆ ಗುರು ಸಮಾನರು, ಧರ್ಮೋ ರಕ್ಷತಿ ರಕ್ಷಿತಃ; ನಟಿ ರಚಿತಾ ರಾಮ್‌ ಪೋಸ್ಟ್‌

Rachita Ram: ದರ್ಶನ್‌ ಸರ್‌ ನನಗೆ ಗುರು ಸಮಾನರು, ಧರ್ಮೋ ರಕ್ಷತಿ ರಕ್ಷಿತಃ; ನಟಿ ರಚಿತಾ ರಾಮ್‌ ಪೋಸ್ಟ್‌

Rachita Ram: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರಚಿತಾ ರಾಮ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ದರ್ಶನ್‌ ನನಗೆ ಗುರು ಸಮಾನರು ಎಂದು ಅವರು ಹೇಳಿದ್ದಾರೆ.

Rachita Ram: ದರ್ಶನ್‌ ಸರ್‌ ನನಗೆ ಗುರು ಸಮಾನರು, ನಂಬಲು ಕಷ್ಟವಾಗುತ್ತಿದೆ; ರಚಿತಾ ರಾಮ್‌
Rachita Ram: ದರ್ಶನ್‌ ಸರ್‌ ನನಗೆ ಗುರು ಸಮಾನರು, ನಂಬಲು ಕಷ್ಟವಾಗುತ್ತಿದೆ; ರಚಿತಾ ರಾಮ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರಚಿತಾ ರಾಮ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. "ನಮಸ್ಕಾರ, ಈ ನೋಟ್‌ ಅನ್ನು ನಾನು ನಟಿಯಾಗಿ ಅಲ್ಲ ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ. ತನ್ನ ಪೋಸ್ಟ್‌ಗೆ ಧರ್ಮೋ ರಕ್ಷತಿ ರಕ್ಷಿತಃ ಎಂದು ಶೀರ್ಷಿಕೆ ನೀಡಿದ್ದಾರೆ.

ರಚಿತಾ ರಾಮ್‌ ಏನಂದ್ರು?

"ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು. ಮೊದಲನೆಯದಾಗಿ ರೇಣುಕಾ ಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನಮಗಿದೆ" ಎಂದು ರಚಿತಾ ರಾಮ್‌ ಪೋಸ್ಟ್‌ ಮಾಡಿದ್ದಾರೆ.

"ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ದರ್ಶನ್‌ ಸರ್‌ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತದೆ" ಎಂದು ರಚಿತಾ ರಾಮ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಏನಿದ್ದರೂ ಸತ್ಯ ಪೊಲೀಸ್‌ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತಿರಿ ಎಂದು ಆಶಿಸುತ್ತೇನೆ" ಎಂದು ರಚಿತಾ ರಾಮ್‌ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ಇನ್ನೊಂದೆಡೆ ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಪೊಲೀಸರು ನಡೆಸುತ್ತಿದ್ದ ಸ್ಥಳ ಮಹಜರು ಮುಕ್ತಾಯಗೊಂಡಿದೆ. ಸತತ ಎರಡು ಗಂಟೆಗೂ ಹೆಚ್ಚಿನ ಸಮಯ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ನಟ ದರ್ಶನ್ ಉಳಿದುಕೊಂಡಿದ್ದ ಹೋಟೆಲ್ ನ ಕೊಠಡಿಯಲ್ಲಿ ಇಂಚಿಂಚು ಶೋಧಕಾರ್ಯ ನಡೆಸಿದ್ದಾರೆ. ಆರೋಪಿಗಳನ್ನು ಕರೆತಂದ ಸುದ್ದಿ ತಿಳಿದು ನಟ ದರ್ಶನ್‌ರನ್ನೇ ಕರೆ ತಂದಿರಬಹುದು ಎಂದುಕೊಂಡಿದ್ದ ಅಭಿಮಾನಿಗಳು ಹೋಟೆಲ್‌ ಆಸುಪಾಸಿನಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಸ್ಥಳ ಮಹಜರಿಗೆ ಆರೋಪಿ ಎ11 ನಾಗರಾಜ ಅಲಿಯಾಸ್ ನಾಗ ಹಾಗೂ ಆರೋಪಿ ಲಕ್ಷ್ಮಣ್ ಎ12 ಕರೆದುಕೊಂಡು ಪೊಲೀಸರು ಬಂದಿದ್ದರು. ದರ್ಶನ್ ಕಾರ್ ಡ್ರೈವರ್ ಆಗಿರುವ ಲಕ್ಷ್ಮಣ್ ಮತ್ತು ದರ್ಶನ್ ರ ಅನಧಿಕೃತ ಮ್ಯಾನೇಜರ್ ಆಗಿದ್ದ ನಾಗರಾಜ್ ಅವರನ್ನು ಕರೆತಂದಿದ್ದರು. ಹೋಟೆಲ್ ಬಳಿ ಜನ ಹೆಚ್ಚಾಗಿ ಸೇರುವ ಕಾರಣದಿಂದ ಪೊಲೀಸರು ನಟ ದರ್ಶನ್‌ರನ್ನು ಇಂದು ಕರೆತಂದಿರಲಿಲ್ಲ.

ನಟಿ ರಚಿತಾ ರಾಮ್‌ ಸಿನಿಮಾಗಳು

ಇವರ ಮೂಲ ಹೆಸರು ಬಿಂದ್ಯಾ ರಾಮ್. ಮೊದಲಿಗೆ ಅರಸಿ ಎಂಬ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಇದಾದ ಬಳಿಕ ಬುಲ್‌ ಬುಲ್‌ ಸಿನಿಮಾದಲ್ಲಿ ದರ್ಶನ್‌ ಜತೆ ನಾಯಕಿಯಾಗಿ ನಟಿಸಿದರು. ಇದಾದ ಬಳಿಕ ದಿಲ್‌ ರಂಗೀಲಾ, ಅಂಬರೀಶಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬುಲ್‌ ಬುಲ್‌, ದಿಲ್‌ ರಂಗೀಲಾ, ಅಂಬರೀಶಾ, ರನ್ನ, ರಥಾವರ, ಚಕ್ರವ್ಯೂಹ, ಭರ್ಜರಿ, ಪುಷ್ಪಕ ವಿಮಾನ, ಸೀತಾರಾಮ ಕಲ್ಯಾಣ, ನಟ ಸಾರ್ವಭೌಮ, ಆಯುಷ್ಮಾನ್‌ ಭವ ಮುಂತಾದ ಸಿನಿಮಾಗಳಲ್ಲಿ ನಟಿ ರಚಿತಾ ರಾಮ್‌ ನಟಿಸಿದ್ದಾರೆ.