C ಸಿನಿಮಾದ ಟ್ರೇಲರ್‌ನಲ್ಲಿ ಹೊಸಬರಿಂದ ಮೆಡಿಕಲ್‌ ಮಾಫಿಯಾದ ಕರಾಳ ಮುಖ ತೆರೆದಿಡುವ ಪ್ರಯತ್ನ; ಆ. 23ಕ್ಕೆ ಚಿತ್ರ ತೆರೆಗೆ-sandalwood news kannada c movie trailer released by actor rajavardhan movie will hit the theatres soon mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  C ಸಿನಿಮಾದ ಟ್ರೇಲರ್‌ನಲ್ಲಿ ಹೊಸಬರಿಂದ ಮೆಡಿಕಲ್‌ ಮಾಫಿಯಾದ ಕರಾಳ ಮುಖ ತೆರೆದಿಡುವ ಪ್ರಯತ್ನ; ಆ. 23ಕ್ಕೆ ಚಿತ್ರ ತೆರೆಗೆ

C ಸಿನಿಮಾದ ಟ್ರೇಲರ್‌ನಲ್ಲಿ ಹೊಸಬರಿಂದ ಮೆಡಿಕಲ್‌ ಮಾಫಿಯಾದ ಕರಾಳ ಮುಖ ತೆರೆದಿಡುವ ಪ್ರಯತ್ನ; ಆ. 23ಕ್ಕೆ ಚಿತ್ರ ತೆರೆಗೆ

ಮೆಡಿಕಲ್‌ ಮಾಫಿಯಾ ಹಿನ್ನೆಲೆಯಲ್ಲಿ ಮೂಡಿಬಂದಿರುವ ಸಿ ಹೆಸರಿನ ಸಿನಿಮಾ ಇದೀಗ ಟ್ರೇಲರ್‌ ಮೂಲಕ ಆಗಮಿಸಿದೆ. ಕಿರಣ್ ಸುಬ್ರಮಣಿ ಈ ಚಿತ್ರದ ನಿರ್ದೇಶಕ ಮತ್ತು ನಾಯಕ ನಟ. ಇನ್ನೇನು ಇದೇ ತಿಂಗಳ 23ಕ್ಕೆ ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಆಗಲಿದೆ.

C ಸಿನಿಮಾದ ಟ್ರೇಲರ್‌ನಲ್ಲಿ ಹೊಸಬರಿಂದ ಮೆಡಿಕಲ್‌ ಮಾಫಿಯಾದ ಕರಾಳ ಮುಖ ತೆರೆದಿಡುವ ಪ್ರಯತ್ನ; ಆ. 23ಕ್ಕೆ ಚಿತ್ರ ತೆರೆಗೆ
C ಸಿನಿಮಾದ ಟ್ರೇಲರ್‌ನಲ್ಲಿ ಹೊಸಬರಿಂದ ಮೆಡಿಕಲ್‌ ಮಾಫಿಯಾದ ಕರಾಳ ಮುಖ ತೆರೆದಿಡುವ ಪ್ರಯತ್ನ; ಆ. 23ಕ್ಕೆ ಚಿತ್ರ ತೆರೆಗೆ

C Kannada Movie Trailer: ಸಿ.. ಹಾಡುಗಳು ಮತ್ತು ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ. ಹೊಸಬರ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸಿನಿಮಾ ತಂಡ ಟ್ರೇಲರ್ ಮೂಲಕ ನೋಡುಗರ ಮುಂದೆ ಬಂದಿರುವ ಸಿ ಸಿನಿಮಾ ಇದೆ 23ಕ್ಕೆ ಚಿತ್ರಮಂದಿರಕ್ಕೂ ಎಂಟ್ರಿ ಕೊಡುತ್ತಿದೆ. ಅಂದಹಾಗೆ ಸಿ ಸಿನಿಮಾದ ಟ್ರೇಲರ್‌ಅನ್ನು ನಟ ರಾಜವರ್ಧನ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಟ್ರೇಲರ್‌ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿ ಮೂಡಿ ಬಂದಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಕಿರಣ್ ಸುಬ್ರಮಣಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಕಿರಣ್ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕನಾಗಿ ಮಿಂಚಿದ್ದಾರೆ. ಮೊದಲ ಬಾರಿಗೆ ನಾಯಕನಟನಾಗಿ ಬೆಳ್ಳಿ ತೆರೆಮೇಲೆ ಅಬ್ಬರಿಸುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತು ಕೊಂಡಿರುವುದು ಅವರ ಹೆಚ್ಚುಗಾರಿಕೆಯಾಗಿದೆ.

ಟ್ರೇಲರ್ ರಿಲೀಸ್ ಮಾಡಿ ಮಾತನಾಡಿದ ನಟ ರಾಜವರ್ಧನ್, 'ಟ್ರೇಲರ್ ಎಮೋಷನಲ್ ಆಗಿದೆ. ಇದ್ರಲ್ಲಿ ಏನೋ ವಿಷಯವನ್ನು ಹೇಳುತ್ತಿದ್ದಾರೆ. ಎಲ್ಲರೂ ಸಿನಿಮಾ ನೋಡಿ' ಎಂದು ಹೇಳಿದರು. ನಿರ್ಮಾಪಕ ಕೃಷ್ಣೇಗೌಡ ಅವರು ಮಾತನಾಡಿ, 'ಎಲ್ಲರೂ ಸಿನಿಮಾ ನೋಡಿ, ನಿರ್ಮಾಪಕರನ್ನು ಉಳಿಸಿ' ಎಂದರು.

ಸಿನಿಮಾದ ನಿರ್ದೇಶಕ ಹಾಗೂ ನಟ ಕಿರಣ್ ಮಾತನಾಡಿ 'ಸಿ' ಎಂದರೆ ಸಿನಿಮಾದಲ್ಲಿ ಮೂರು ಅರ್ಥವಿದೆ. ಆದರೆ ಟ್ರೇಲರ್‌ನಲ್ಲಿ ಒಂದು ಸಿ ಬಗ್ಗೆ ಮಾತ್ರ ಬಿಟ್ಟುಕೊಟ್ಟಿದ್ದೇವೆ. ಮತ್ತೆರಡು ಸಿ ಏನ್ ಹೇಳುತ್ತೆ ಎಂದು ಥಿಯೇಟರ್‌ನಲ್ಲೇ ನೋಡಬೇಕು. ಸಿನಿಮಾ ಪ್ರಾರಂಭವಾದಾಗ ಎಂಟು ಜನ ಪ್ರೊಡ್ಯೂಸರ್ ಇದ್ದರು ಆದರೆ ಕಾರಣಾಂತರಗಳಿಂದ ಎಲ್ಲರೂ ಹೊರಟುಹೋದರು. ಎಲ್ಲರೂ ಸಿನಿಮಾ ನೋಡಿ' ಎಂದರು.

ನಟ ಪ್ರಶಾಂತ್ ನಟನ ಅವರು ಮಾತನಾಡಿ, 'ಈ ಸಿನಿಮಾ ಮಗ ಅಪ್ಪನಿಗಾಗಿ ಮಾಡಿದ್ದು. ಈ ಸಿನಿಮಾದಲ್ಲಿ ನಾನು ವಿಭಿನ್ನವಾದ ಪಾತ್ರ ಮಾಡಿದ್ದೇನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎಂದರು. ಸದ್ಯ ರಿಲೀಸ್ ಆಗಿರುವ ಟ್ರೇಲರ್ ಅಪ್ಪ-ಮಗಳ ಬಾಂಧವ್ಯದ ಕಥೆ ಹೇಳುತ್ತದೆ. ಮೆಡಿಕಲ್ ಮಾಫಿಯಾದ ಬಗ್ಗೆಯೂ ಸಿನಿಮಾದಲ್ಲಿ ತೋರಿಸಲಾಗಿದೆ. ಕಣ್ಣು ಕಾಣದ ಮಗಳ ಆಸೆಯನ್ನು ಈಡೇರಿಸಲು ಹೋರಾಡುವ ಅಪ್ಪನ ಪಾತ್ರದಲ್ಲಿ ಸುಬ್ರಮಣಿ ಕಾಣಿಸಿಕೊಂಡಿದ್ದಾರೆ. ಮಗಳ ಪಾತ್ರದಲ್ಲಿ ಬಾಲ ನಟಿ ಸಾನ್ವಿತಾ ಅಭಿನಯಿಸಿದ್ದಾರೆ. ಪ್ರಶಾಂತ್ ನಟನ, ಶ್ರೀಧರ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

ಹಾಡು ಬಿಡುಗಡೆ ಮಾಡಿದ್ದ ಯೋಗಿ

'ಇದು ಎ ಅಲ್ಲ ಬಿ ಅಲ್ಲ ಸಿ...' ಎನ್ನುವ ಟೈಟಲ್ ಟ್ರ್ಯಾಕ್ ಹಾಡನ್ನು ಲೂಸ್ ಮಾದ ನಟ ಯೋಗಿ ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದ. ಹಾಡನ್ನು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದರು. ಖ್ಯಾತ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಕೂಡ ಸಿ ಸಿನಿಮಾದ ಹಾಡಿನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇಡೀ ಸಿನಿಮಾಗೆ ಒಳ್ಳೆದಾಗಲಿ ಕನ್ನಡ ಚಿತ್ರರಂಗ ಬೆಳೆಯಲಿ ಎಂದು ಹಾರೈಸಿದ್ದಾರೆ. ಇದೀಗ ಇದೇ ಚಿತ್ರದ ಟ್ರೇಲರ್‌ಅನ್ನು ರಾಜವರ್ಧನ್‌ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.