ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ -ಭುವನ್ ಪೊನ್ನಣ್ಣ ದಂಪತಿ; ಕೊಡವ ಸ್ಟೈಲ್‌ನಲ್ಲಿಯೇ ಘೋಷಣೆ

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ -ಭುವನ್ ಪೊನ್ನಣ್ಣ ದಂಪತಿ; ಕೊಡವ ಸ್ಟೈಲ್‌ನಲ್ಲಿಯೇ ಘೋಷಣೆ

ಸಿಹಿ ಸುದ್ದಿ ಕೊಟ್ಟ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಭುವನ್, ತಾಯಿ ಆಗುತ್ತಿರುವ ಸಂಭ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ. ಪೋಷಕರಾಗುತ್ತಿರುವ ಸುದ್ದಿಯನ್ನ ವಿಭಿನ್ನವಾಗಿ ಅನೌನ್ಸ್ ಮಾಡಿದ ಹರ್ಷಿಕಾ- ಭುವನ್. ಅಕ್ಟೋಬರ್ ನಲ್ಲಿ ಭುವನ್- ಹರ್ಷಿಕಾ ಮನೆಗೆ ಹೊಸ ಅತಿಥಿಯ ಆಗಮನ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ -ಭುವನ್ ಪೊನ್ನಣ್ಣ ದಂಪತಿ; ಕೊಡವ ಸ್ಟೈಲ್‌ನಲ್ಲಿಯೇ ಘೋಷಣೆ
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ -ಭುವನ್ ಪೊನ್ನಣ್ಣ ದಂಪತಿ; ಕೊಡವ ಸ್ಟೈಲ್‌ನಲ್ಲಿಯೇ ಘೋಷಣೆ

Harshika Poonacha Pregnant: ಸ್ಯಾಂಡಲ್‌ವುಟಡ್‌ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ತಾಯಿಯಾಗುತ್ತಿದ್ದಾರೆ‌. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಈ ಸಂಭ್ರಮವನ್ನು ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ. 2023, ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮದುವೆಯಾಗಿ ವರ್ಷದೊಳಗೆ ಗುಡ್ ನ್ಯೂಸ್ ನೀಡಿದ್ದಾರೆ.

ಹರ್ಷಿಕಾ‌ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ವರ್ಷ ಹಸೆಮಣೆ ಏರಿದರು. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರ ಮದುವೆಗೆ ಸ್ಯಾಂಡಲ್‌ವುಡ್‌ನ ಅನೇಕ ಗಣ್ಯರು ಕೂಡ ಸಾಕ್ಷಿಯಾಗಿದ್ರು.

ಟ್ರೆಂಡಿಂಗ್​ ಸುದ್ದಿ

ನಟ ಭುವನ್ ಹಾಗೂ ಹರ್ಷಿಕಾ ಇಬ್ಬರು ತಂದೆ ತಾಯಿ ಆಗುತ್ತಿದ್ದಾರೆ. ತಾವು ಪೋಷಕರಾಗುತ್ತಿರೋ ವಿಚಾರ ಭುವನ್ ಮತ್ತು ಹರ್ಷಿಕಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಹರ್ಷಿಕಾ ಐದು ತಿಂಗಳ ಗರ್ಭಿಣಿ ಆಗಿದ್ದು, ಈ ಖುಷಿ ವಿಚಾರವನ್ನ ವಿಭಿನ್ನ ರೀತಿಯಲ್ಲಿ ಫೋಟೋ ಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರೆಗ್ನೆನ್ಸಿ ಶೂಟ್ ಅಂದ ತಕ್ಷಣ ಎಲ್ಲರೂ ಹೊಸ ಹೊಸ ಕಾನ್ಸೆಪ್ಟ್ ನಲ್ಲಿ ಶೂಟ್ ಮಾಡಲು ಇಷ್ಟ ಪಡ್ತಾರೆ. ಆದ್ರೆ ಹರ್ಷಿಕಾ ಮತ್ತು ಭುವನ್ ಮಾತ್ರ ತಮ್ಮ ಕೊಡವ ಶೈಲಿ ಹಾಗೂ ಸಂಪ್ರದಾಯವನ್ನ ಬಿಟ್ಟು ಕೊಡಬಾರದು ಅನ್ನೋ ಹಿನ್ನಲೆಯಲ್ಲಿ ಅದ್ರದ್ದೇ ಆದ ಶೈಲಿಯಲ್ಲಿ ಫೋಟೋ ಶೂಟ್ ಮಾಡುವ ಮೂಲಕ ಖುಷಿಯ ವಿಚಾರವನ್ನ ಹಂಚಿಕೊಂಡಿದ್ದಾರೆ.

ತಮ್ಮ ಚೊಚ್ಚಲ ಮಗುವಿನ ಆಗಮನದ ವಿಚಾರ ತಿಳಿಸಲು ಪುರಾತನ ಕೊಡವ ಸಾಂಪ್ರದಾಯ, ಉಡುಪು, ಕೊಡಗಿನ 'ಐನ್ ಮನೆ' (ದೊಡ್ಡಮನೆ), ಕೋವಿ, ಉಪಕರಣಗಳು, ಜೀವನಶೈಲಿ ಎಲ್ಲವನ್ನು ಬಿಂಬಿಸುವ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸುವ ಮೂಲಕ ಸಿಹಿ ಸುದ್ದಿಯನ್ನ ರಾಜ್ಯದ ಜನತೆಗೆ ಹಾಗೂ ಅಭಿಮಾನಿಗಳಿಗೆ ತಿಳಿಸಿದೆ ಈ ಜೋಡಿ.

ಅದರ ಜೊತೆಯಲ್ಲಿ ಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲು ಇರಲಿ. ಅಕ್ಟೋಬರ್ ಗೆ ಕಾತುರದಿಂದ ಕಾಯುತ್ತಿದ್ದೇವೆ" ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ ಭುವನ್ ಮತ್ತು ಹರ್ಷಿಕಾ.