ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ನಟ ನಟಿಯರ ಹೋಟೆಲ್‌ ಬಿಸ್ನೆಸ್‌: ಸೃಜನ್‌ ಲೋಕೇಶ್‌ ಕೋಕು, ಶೈನ್‌ ಶೆಟ್ಟಿ ಗಲ್ಲಿ ಕಿಚನ್‌, ಮೈಸೂರು ಮಿರ್ಚಿ ನಡೆಸುತ್ತಿದ್ದಾರೆ ಶೃತಿ

ಕನ್ನಡ ನಟ ನಟಿಯರ ಹೋಟೆಲ್‌ ಬಿಸ್ನೆಸ್‌: ಸೃಜನ್‌ ಲೋಕೇಶ್‌ ಕೋಕು, ಶೈನ್‌ ಶೆಟ್ಟಿ ಗಲ್ಲಿ ಕಿಚನ್‌, ಮೈಸೂರು ಮಿರ್ಚಿ ನಡೆಸುತ್ತಿದ್ದಾರೆ ಶೃತಿ

  • Kannada Celebrity Hotels: ಸೃಜನ್‌ ಲೋಕೇಶ್‌, ಶೈನ್‌ ಶೆಟ್ಟಿ, ಅಕುಲ್‌ ಬಾಲಾಜಿ, ಕಿರಣ್‌ ರಾಜ್‌, ಚಂದನ್‌ ಕುಮಾರ್‌, ಶೃತಿ ನಾಯ್ಡು, ವೈಜಯಂತಿ ಅಡಿಗ ಸೇರಿದಂತೆ ಕನ್ನಡದ ಹಲವು ಸೆಲೆಬ್ರಿಟಿಗಳು ಸ್ವಂತ ಹೋಟೆಲ್‌, ರೆಸ್ಟೂರೆಂಟ್‌ ಬಿಸ್ನೆಸ್‌ ನಡೆಸುತ್ತಿದ್ದಾರೆ.

ಕನ್ನಡದ ಕೆಲವು ನಟನಟಿಯರು ಚಿತ್ರರಂಗ, ಕಿರುತೆರೆಯಲ್ಲಿ ನಟಿಸುವುದರ ಜತೆಗೆ ಹೋಟೆಲ್‌ ಬಿಸ್ನೆಸ್‌, ರೆಸ್ಟೂರೆಂಟ್‌, ರೆಸಾರ್ಟ್‌ ಇತ್ಯಾದಿಗಳನ್ನು ನಡೆಸಿ ಸೈ ಎಣಿಸಿಕೊಂಡಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಸೃಜನ್‌ ಲೋಕೇಶ್‌ ಕೋಕು ಎಂಬ ಹೋಟೆಲ್‌ ಹೊಂದಿದ್ದಾರೆ. ಗಲ್ಲಿ ಕಿಚನ್‌ ಮೂಲಕ ಶೈನ್‌ ಶೆಟ್ಟಿ ಶೈನ್‌ ಆಗಿದ್ದಾರೆ. ಇದೇ ರೀತಿ ಇನ್ನೂ ಹಲವು ನಟ-ನಟಿಯರು ಹೋಟೆಲ್‌ ಬಿಸ್ನೆಸ್‌ ಮಾಡುತ್ತಿದ್ದಾರೆ. ಕೆಲವು ನಟನಟಿಯರಿಗೆ ಅಡುಗೆ ಮಾಡುವುದೆಂದರೆ ಅಚ್ಚುಮೆಚ್ಚು. ಸಮಯ ಸಿಕ್ಕಾಗ ತಮ್ಮ ಹೋಟೆಲ್‌ಗೆ ಹೋಗಿ ತಾವೇ ಶೆಫ್‌ ಆಗುತ್ತಾರೆ. 
icon

(1 / 10)

ಸೃಜನ್‌ ಲೋಕೇಶ್‌: ಸೃಜನ್‌ ಲೋಕೇಶ್‌ ಎಂದಾಗ ಅವರ ಹಲವು ಸಿನಿಮಾಗಳು, ಮಜಾ ಟಾಕೀಸ್‌ ಇತ್ಯಾದಿಗಳು ನೆನಪಿಗೆ ಬರಬಹುದು. ಸೃಜನ್‌ ಲೋಕೇಶ್‌ ಮನೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿದೆ. ತನ್ನ ಮನೆಯ ಪಕ್ಕದ ರಸ್ತೆಯಲ್ಲಿ, ಕತ್ರಿಗುಪ್ಪೆಯ ಪ್ರಮುಖ ರಸ್ತೆಯಲ್ಲಿ ಕೋಕು ಎಂಬ ಹೋಟೆಲ್‌ ಅನ್ನು ಸೃಜನ್‌ ಲೋಕೇಶ್‌ ಹೊಂದಿದ್ದಾರೆ. ಹೋಟೆಲ್‌ ಒಳಗೆ ಲೈವ್‌ ಕ್ರಿಕೆಟ್‌  ಇತ್ಯಾದಿ ನೋಡಲು ದೊಡ್ಡ ಟೀವಿ ಇದೆ. ಮೆಲುವಾದ ಸಂಗೀತ ಕಿವಿಗೆ ಕೇಳಿಬರುತ್ತದೆ. 
icon

(2 / 10)

ಶೈನ್‌ ಶೆಟ್ಟಿ: ಬಿಗ್‌ಬಾಸ್‌ ಕನ್ನಡ ಸೀಸನ್‌ 7ರಲ್ಲಿ ಗೆಲುವು ಪಡೆದ ಶೈನ್‌ ಶೆಟ್ಟಿಯು ಬೆಂಗಳೂರಿನಲ್ಲಿ ಗಲ್ಲಿ ಕಿಚನ್‌ ಹೊಂದಿದ್ದಾರೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ ಸಮೀಪದಲ್ಲಿರುವ ಇವರ ಗಲ್ಲಿ ಕಿಚನ್‌ ಈಗ ಸಾಕಷ್ಟು ಜನಪ್ರಿಯತೆ ಪಡೆದಿದೆ. ರುಚಿಶುಚಿಯಾದ ಅಡುಗೆಗೆ ಇವರ ಗಲ್ಲಿ ಕಿಚನ್‌ ಫೇಮಸ್‌. ಆರಂಭದಲ್ಲಿ ಇವರು ಒಂದು ಗಲ್ಲಿ ಕಿಚನ್‌ ಹೊಂದಿದ್ದಾರೆ. ಈಗ ಇವರ ಗಲ್ಲಿ ಕಿಚನ್‌ ಸಂಖ್ಯೆ ಮೂರಕ್ಕೆ ತಲುಪಿದೆ.
icon

(3 / 10)

ಅಕುಲ್‌ ಬಾಲಾಜಿ: ಸಿನಿಮಾ ನಟನೆಗಿಂತಲೂ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಅಕುಲ್‌ ಬಾಲಾಜಿ ಅವರು ಸ್ವಂತ ರೆಸಾರ್ಟ್‌ ಹೊಂದಿದ್ದಾರೆ. ಬಹುಕಾಲದಿಂದ ಇವರು ರೆಸ್ಟೂರೆಂಟ್‌ ಬಿಸ್ನೆಸ್‌ ಹೊಂದಿದ್ದಾರೆ. ಇವರಿಗೆ ಅಡುಗೆ ಮಾಡೋದೆಂದ್ರೆ ಅಚ್ಚುಮೆಚ್ಚು.
icon

(4 / 10)

ಚೈತ್ರಾ ವಾಸುದೇವನ್‌: ಕೇವಲ ನಟರು ಮಾತ್ರವಲ್ಲ ಹಲವು ನಟಿಯರು ಕೂಡ ಸ್ವಂತ ಹೋಟೆಲ್‌, ರೆಸ್ಟೂರೆಂಟ್‌ ಉದ್ಯಮ ಹೊಂದಿದ್ದಾರೆ. ಚೈತ್ರಾ ವಾಸುದೇವನ್‌ ಅವರ ಕುಟುಂಬದ ಹೋಟೆಲ್‌ ಬೆಂಗಳೂರಿನಲ್ಲಿದೆ. ಇವರ ಹೋಟೆಲ್‌ ಫ್ರಾಂಚೈಸಿ ಬೆಂಗಳೂರಿನ ವಿವಿಧೆಡೆ ಇದೆ. ಚೈತ್ರಾ ಕೂಡ ಈ ಹೋಟೆಲ್‌ ಬಿಸ್ನೆಸ್‌ನಲ್ಲಿ ಕೈಜೋಡಿಸಿದ್ದಾರೆ.
icon

(5 / 10)

ಕಿರಣ್‌ ರಾಜ್‌: ಕನ್ನಡ ನಟ ಕಿರಣ್‌ ರಾಜ್‌ ಕೂಡ ಸ್ವಂತ ರೆಸ್ಟೂರೆಂಟ್‌ ಹೊಂದಿದ್ದಾರೆ. ಜತೆಗೆ ಸ್ವಂತ ಬಟ್ಟೆ ಬ್ರಾಂಡ್‌ ಕೂಡ ಹೊಂದಿದ್ದಾರೆ. 
icon

(6 / 10)

ಚಂದನ್‌ ಕುಮಾರ್‌: ಕನ್ನಡ ನಟ ಚಂದನ್‌ ಕುಮಾರ್‌ ಅವರು ವೆಜ್‌ ಮತ್ತು ನಾನ್‌ ವೆಜ್‌ ಬಿರಿಯಾನಿ ಹೋಟೆಲ್‌ ಹೊಂದಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಇವರ ಹೋಟೆಲ್‌ ವ್ಯವಹಾರವಿದೆ. 
icon

(7 / 10)

ಶೃತಿ ನಾಯ್ಡು : ಕನ್ನಡ ಕಿರುತೆರೆ ನಟಿ ಶೃತಿ ನಾಯ್ಡು ಅವರು ಮೈಸೂರಿನಲ್ಲಿ ಮೈಸೂರು ಮಿರ್ಚಿ ಎಂಬ ಹೋಟೆಲ್‌ ಹೊಂದಿದ್ದಾರೆ. ಇವರ ರೆಸ್ಟೂರೆಂಟ್‌ ದಕ್ಷಿಣ ಭಾರತದ ಆಹಾರಕ್ಕೆ ಜನಪ್ರಿಯತೆ ಪಡೆದಿದೆ. 
icon

(8 / 10)

ಕಿಶನ್ ಬಿಲಗಲಿ: ಡ್ಯಾನ್ಸ್‌ ಮೂಲಕ ಜನಪ್ರಿಯತೆ ಪಡೆದಿರುವ ಕಿಶನ್‌ ಬೆಂಗಳೂರಿನಲ್ಲಿ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಹೊಂದಿದ್ದಾರೆ. ಇವರು ಆಗಾಗ ತನ್ನ ಹೋಟೆಲ್‌ಗೆ ಭೇಟಿ ನೀಡುತ್ತಾರೆ. ಕಿಶನ್‌ ಬಿರಿಯಾನಿ ಮಾಡುತ್ತಿರುವ ವಿಡಿಯೋವೊಂದು ಈ ಹಿಂದೆ ವೈರಲ್‌ ಆಗಿತ್ತು.
icon

(9 / 10)

ವೈಜಯಂತಿ ಅಡಿಗ: ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಸ್ಪರ್ಧಿಯಾಗಿದ್ದ ವೈಜಯಂತಿ ಅಡಿಗ ಅವರು ತನ್ನ ಕುಟುಂಬದ ಹೋಟೆಲ್‌ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. 
icon

(10 / 10)

ವೈಜಯಂತಿ ಅಡಿಗ: ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಸ್ಪರ್ಧಿಯಾಗಿದ್ದ ವೈಜಯಂತಿ ಅಡಿಗ ಅವರು ತನ್ನ ಕುಟುಂಬದ ಹೋಟೆಲ್‌ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. 

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು