ರಕ್ಷಿತ್‌ ಶೆಟ್ಟಿ ಸಿನಿಮಾ ಇಬ್ಬನಿ ತಬ್ಬಿದ ಇಳೆಯಲಿ ಸೆ. 05ರಂದು ಬಿಡುಗಡೆ; ಗೌರಿ ಗಣೇಶ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ನವಿರಾದ ಪ್ರೇಮಕಾವ್ಯ-sandalwood news kannada movie ibbani tabbida ileyali release sept 05 chandrajith belliappa direction film pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ರಕ್ಷಿತ್‌ ಶೆಟ್ಟಿ ಸಿನಿಮಾ ಇಬ್ಬನಿ ತಬ್ಬಿದ ಇಳೆಯಲಿ ಸೆ. 05ರಂದು ಬಿಡುಗಡೆ; ಗೌರಿ ಗಣೇಶ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ನವಿರಾದ ಪ್ರೇಮಕಾವ್ಯ

ರಕ್ಷಿತ್‌ ಶೆಟ್ಟಿ ಸಿನಿಮಾ ಇಬ್ಬನಿ ತಬ್ಬಿದ ಇಳೆಯಲಿ ಸೆ. 05ರಂದು ಬಿಡುಗಡೆ; ಗೌರಿ ಗಣೇಶ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ನವಿರಾದ ಪ್ರೇಮಕಾವ್ಯ

Ibbani tabbida ileyali Kannada Movie: ಸೆಪ್ಟೆಂಬರ್‌ 5ರಿಂದ ಚಿತ್ರಮಂದಿರಗಳಲ್ಲಿ ರಕ್ಷಿತ್‌ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್‌ ನಿರ್ಮಾಣ ಮಾಡಿರುವ ಇಬ್ಬನಿ ತಬ್ಬಿದ ಇಳೆಯಲಿ ಎಂಬ ಪ್ರೇಮಕಾವ್ಯ ಆರಂಭವಾಗಲಿದೆ.ಈ ಸಿನಿಮಾದಲ್ಲಿ ಚಂದ್ರಜಿತ್‌ ಬೆಳ್ಯಪ್ಪ ನಿರ್ದೇಶನವಿರುವ ಈ ಸಿನಿಮಾದಲ್ಲಿ ವಿಹಾನ್‌, ಅಂಕಿತಾ, ಅಮರ್‌ ಮತ್ತು ಮಯೂರಿ ನಟರಾಜ್‌ ನಟಿಸಿದ್ದಾರೆ.

ರಕ್ಷಿತ್‌ ಶೆಟ್ಟಿ ಸಿನಿಮಾ ಇಬ್ಬನಿ ತಬ್ಬಿದ ಇಳೆಯಲಿ ಸೆ. 05ರಂದು ಬಿಡುಗಡೆ
ರಕ್ಷಿತ್‌ ಶೆಟ್ಟಿ ಸಿನಿಮಾ ಇಬ್ಬನಿ ತಬ್ಬಿದ ಇಳೆಯಲಿ ಸೆ. 05ರಂದು ಬಿಡುಗಡೆ

Ibbani tabbida ileyali Kannada Movie: ಗೌರಿ ಗಣೇಶ ಹಬ್ಬದ ಸಮಯದಲ್ಲಿ ಚಿತ್ರಮಂದಿರದಲ್ಲಿ ಹೊಸ ಸಿನಿಮಾವೊಂದು ಬಿಡುಗಡೆಯಾಗಿದೆ. ಸೆಪ್ಟೆಂಬರ್‌ 5ರಿಂದ ಚಿತ್ರಮಂದಿರಗಳಲ್ಲಿ ರಕ್ಷಿತ್‌ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್‌ ನಿರ್ಮಾಣ ಮಾಡಿರುವ ಇಬ್ಬನಿ ತಬ್ಬಿದ ಇಳೆಯಲಿ ಎಂಬ ಪ್ರೇಮಕಾವ್ಯ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೇಯ್ಡ್‌ ಪ್ರಿಮಿಯರ್‌ ಶೋ ನೋಡಿರುವವರು ಈ ಹೃದಯಸ್ಪರ್ಶಿ ಪ್ರೇಮಕಥೆಯನ್ನು ಕಣ್ತುಂಬಿಕೊಂಡು ಪಾಸಿಟಿವ್ಯೂ ರಿವ್ಯೂ ನೀಡುತ್ತಿದ್ದಾರೆ. ಚಂದ್ರಜಿತ್‌ ಬೆಳ್ಯಪ್ಪ ನಿರ್ದೇಶನವಿರುವ ಈ ಸಿನಿಮಾದಲ್ಲಿ ವಿಹಾನ್‌, ಅಂಕಿತಾ, ಅಮರ್‌ ಮತ್ತು ಮಯೂರಿ ನಟರಾಜ್‌ ನಟಿಸಿದ್ದಾರೆ.

ಸಿನಿಮಾವೊಂದು ಕಾದಂಬರಿ ಓದಿದ ಅನುಭವ ನೀಡಬೇಕು. ಚಿತ್ರದ ಪೋಸ್ಟರ್‌, ಸಂಗೀತ, ಛಾಯಾಗ್ರಹಣ ಎಲ್ಲವನ್ನೂ ಭಿನ್ನವಾಗಿ ಮಾಡಿದೆವೆ. ಗೀತಾಂಜಲಿ ಚಿತ್ರದಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಇಪ್ಪತ್ತು ವರ್ಷದ ಬಳಿಕ ಇವರು ಚಿತ್ರರಂಗಕ್ಕೆ ಮರಳಿದ್ದಾರೆ ಎಂದು ಚಿತ್ರದ ನಿರ್ದೇಶಕ ಚಂದ್ರಜಿತ್‌ ಬೆಳ್ಯಪ್ಪ ಇತ್ತಿಚೇಗೆ ಹೇಳಿದ್ದಾರೆ. ಈ ಸಿನಿಮಾಕ್ಕೆ ಗಗನ್‌ ಬಡೇರಿಯಾ ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಶ್ರೀವತ್ಸನ್‌ ಸೆಲ್ವರಾಜನ್‌ ಕ್ಯಾಮೆರಾ, ರಕ್ಷಿತ್‌ ಕಾಪು ಎಡಿಟಿಂಗ್‌ ಕೆಲಸ ಮಾಡಿದ್ದಾರೆ.

ಬ್ಲಾಗ್‌ ಬರಹವೇ ಸಿನಿಮಾವಾಯ್ತು

ಈ ಚಿತ್ರದ ಕುರಿತು ರಕ್ಷಿತ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ. "ಬ್ಲಾಗ್‌ ಬರವಣಿಗೆಯ ಕಾಲದಲ್ಲಿ ಒಂಬತ್ತು ವರ್ಷಗಳ ಹಿಂದೆ ಚಂದ್ರಜಿತ್‌ ನೀಡಿದ್ದ ಲಿಂಕ್‌ ಇಂದು ಸಿನಿಮಾವಾಗಿದೆ. ಆ ಬರಹ ತುಂಬಾ ವಿಶೇಷವಾಗಿತ್ತು. ಅದೇ ಬ್ಲಾಗ್‌ ಕಥೆ ಇಂದು ಸಿನಿಮಾವಾಗಿದೆ. ಈ ರೀತಿಯ ಕಥೆ ಇರುವ ಸಿನಿಮಾ ಈ ಹಿಂದೆ ಬಂದಿರಬಹುದು. ಆದರೆ, ಇಂತಹ ನಿರೂಪಣೆಯ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಬಂದಿಲ್ಲ. ವಿಹಾನ್‌ ಮತ್ತು ಅಂಕಿತಾ ಅದ್ಭುತವಾಗಿ ನಟಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಮಾತ್ರ ಬರುವ ಮಯೂರಿ ನಟನೆಯೂ ಆಪ್ತವಾಗಿದೆ" ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

ಇಬ್ಬನಿ ತಬ್ಬಿದ ಇಳೆಯಲಿ ಪಾತ್ರವರ್ಗ

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದಲಿ ಸಿದ್ಧಾರ್ಥ್‌ ಅಶೋಕ್‌ ಆಗಿ ವಿಹಾನ್‌ ಗೌಡ, ಅನಹಿತಳಾಗಿ ಅಂಕಿತಾ ಅಮರ್‌, ಮಧುಮಿತಳಾಗಿ ಗಿರಿಜಾ ಶೆಟ್ಟರ್‌, ರಾಧಾ ಪಾತ್ರದಲ್ಲಿ ಮಯೂರಿ ನಟರಾಜ ನಟಿಸಿದ್ದಾರೆ. ಫರ್ಹಾನ್‌ ಆಗಿ ಶಂಕರ್‌ ಮೂರ್ತಿ ಎಸ್‌ಆರ್‌, ಅಶೋಕ್‌ ನಾಚಪ್ಪ ಪಾತ್ರದಲ್ಲಿ ಸಲ್ಮಿನ್‌ ಶೆರಿಫ್‌ ನಟಿಸಿದ್ದಾರೆ. ಈ ಚಿತ್ರಕ್ಕೆ ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನ ಮತ್ತು ಕಥೆ ಬರೆದಿದ್ದಾರೆ. ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದು, ಜಿಎಸ್‌ ಗುಪ್ತಾ ನಿರ್ಮಾಪಕರು. ಗಗನ್‌ ಬಡೇರಿಯಾ ಸಂಗೀತ, ಶಶಿ ಕುಮಾರ್‌ ಪಿ ಈ ಸಿನಿಮಾದ ಎಕ್ಸಿಕ್ಯುಟಿವ್‌ ನಿರ್ದೇಶಕರಾಗಿದ್ದಾರೆ. ಶ್ರೀನಿವಾಸನ್‌ ಸೆಲ್ವರಾಜನ್‌ ಕ್ಯಾಮೆರಾ, ರಕ್ಷಿತ್‌ ಕಾಪು ಸಂಕಲನ, ಶರತ್‌ ಕೆವಿ ಪ್ರೊಡಕ್ಷನ್‌ ಡಿಸೈನರ್‌ ಆಗಿದ್ದಾರೆ. ನವ್ಯಾ ಬಿಆರ್‌ ಕಾಸ್ಟ್ಯುಮ್‌ ಡಿಸೈನರ್‌ ಆಗಿದ್ದಾರೆ.

ಇಬ್ಬನಿ ತಬ್ಬಿದ ಇಳೆಯಲಿ ಟ್ರೇಲರ್‌

ಕೆಲವು ದಿನಗಳ ಹಿಂದೆಯೇ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಯುವಕರ ಕ್ರಿಕೆಟ್‌ ಕಥೆ, ಪ್ರೇಮಕಥೆಯ ಸುಳಿವು ದೊರಕಿತ್ತು. ಇದರೊಂದಿಗೆ ಈ ಸಿನಿಮಾದ ಸಂಗೀತ, ಕ್ಯಾಮೆರಾ ವರ್ಕ್‌ ಕೂಡ ಸೆಳೆದಿತ್ತು.