Yugadi Songs: ಯುಗಾದಿ ಸಂಭ್ರಮ ಹೆಚ್ಚಿಸುವ ಸಿನಿಮಾ ಹಾಡುಗಳು, ಯುಗ ಯುಗಾದಿ ಕಳೆದರೂ, ಜೇನಿನ ಗೂಡು ನಾವೆಲ್ಲ ಹಾಡುಗಳ ಲಿರಿಕ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  Yugadi Songs: ಯುಗಾದಿ ಸಂಭ್ರಮ ಹೆಚ್ಚಿಸುವ ಸಿನಿಮಾ ಹಾಡುಗಳು, ಯುಗ ಯುಗಾದಿ ಕಳೆದರೂ, ಜೇನಿನ ಗೂಡು ನಾವೆಲ್ಲ ಹಾಡುಗಳ ಲಿರಿಕ್ಸ್‌

Yugadi Songs: ಯುಗಾದಿ ಸಂಭ್ರಮ ಹೆಚ್ಚಿಸುವ ಸಿನಿಮಾ ಹಾಡುಗಳು, ಯುಗ ಯುಗಾದಿ ಕಳೆದರೂ, ಜೇನಿನ ಗೂಡು ನಾವೆಲ್ಲ ಹಾಡುಗಳ ಲಿರಿಕ್ಸ್‌

Yugadi Kannada Movie Songs: ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಕನ್ನಡ ಸಿನಿಮಾ ಹಾಡುಗಳ ಲಿರಿಕ್ಸ್‌ ಇಲ್ಲಿದೆ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಮತ್ತು ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ ಹಾಡುಗಳನ್ನು ನೆನಪಿಸಿಕೊಳ್ಳೋಣ ಬನ್ನಿ.

ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಕನ್ನಡ ಹಾಡುಗಳು
ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುವ ಕನ್ನಡ ಹಾಡುಗಳು

ಯುಗಾದಿ ಹಬ್ಬ ಬಂದಿದೆ. ತಕ್ಷಣ ಕನ್ನಡಿಗರಿಗೆ "ಯುಗ ಯುಗಗಳೇ ಕಳೆದರೂ" ಎಂಬ ಹಾಡು ನೆನಪಾಗಬಹುದು. ಯುಗಾದಿ ಸಂಭ್ರಮ ಹೆಚ್ಚಿಸುವ ಹಲವು ಹಾಡುಗಳು ಕನ್ನಡದಲ್ಲಿವೆ. ಬಾಳಿನ ಕಹಿ-ಸಿಹಿ ನೆನಪಿಸುವ ಈ ಹಬ್ಬವು ಹಳೆಬೇರು ಹೊಸ ಚಿಗುರಿನ ಸಮಯವೂ ಹೌದು. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎಂಬ ಹಾಡು ಮಾತ್ರವಲ್ಲದೆ ಹಲವು ಕನ್ನಡ ಚಿತ್ರಗಳಲ್ಲಿ ಯುಗಾದಿ ಹಬ್ಬದ ಸೊಗಡಿದೆ. ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಜೇನಿಲ್ಲ ಎಂಬ ಹಾಡು ಕೂಡ ಇದನ್ನೇ ಹೇಳುತ್ತದೆ. ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ ಎಂಬ ಹಾಡಿನಲ್ಲೂ ಯುಗಾದಿಯದ್ದೇ ಸಡಗರ. ದೂರದ ಬೆಟ್ಟ ಚಿತ್ರದಲ್ಲಿ ಪ್ರೀತಿನೇ ಆ ದ್ರಾವ್ಯ ತಂದ ಆಸ್ತಿ ನಮ್ಮ ಪಾಲಿಗೆ ಎಂಬ ಹಾಡಿನ ಹಿನ್ನೆಲೆಯಲ್ಲೂ ಯುಗಾದಿ ಹಬ್ಬದ ಸಡಗರವಿದೆ.

ಯುಗ ಯುಗಾದಿ ಕಳೆದರೂ ಹಾಡಿನ ಲಿರಿಕ್ಸ್‌

ಕುಲವಧು ಸಿನಿಮಾದಲ್ಲಿ ಈ ಹಾಡಿದೆ. ಎಸ್‌ ಜಾನಕಿ ಮಧುರ ಕಂಠದಲ್ಲಿ ಹಾಡಿದ್ದಾರೆ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹಾಡಿನ ಕನ್ನಡ ಲಿರಿಕ್ಸ್‌ ಇಲ್ಲಿ ನೀಡಲಾಗಿದೆ. ದ.ರಾ. ಬೇಂದ್ರೆ ಸಾಹಿತ್ಯದ ಈ ಹಾಡು ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸುತ್ತದೆ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಳಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ
ಒಂದೆ ಒಂದು ಜನ್ಮದಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ
ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವ ನಿನಗೆ ಲೀಲೆ ಸೇರದೋ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನಮ್ಮನಷ್ಟೆ ಮರೆತಿದೆ.

ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಜೇನಿಲ್ಲ ಹಾಡಿನ ಲಿರಿಕ್ಸ್‌

ಹಬ್ಬ ಎಂಬ ಸಿನಿಮಾದ ಈ ಹಾಡನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ, ಚಿತ್ರಾ ತನ್ನ ಮಧುರ ಕಂಠದಲ್ಲಿ ಹಾಡಿದ್ದಾರೆ. ಈ ಹಾಡಿನ ಲಿರಿಕ್ಸ್‌ ಇಲ್ಲಿದೆ.

ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ
ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ
ಮನಗಳು ಸೇರಿದರೇ ತುಂಬಿದ ಮನೆಯಂತೇ ಮನಗಳು ಸೇರಿದರೇ ತುಂಬಿದ ಮನೆಯಂತೇ ತುಂಬಿದ ಮನೆಯವನೇ ಧರೆಯಲಿ ನಗುವಿನ ದೊರೆಯಂತೇ
ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ
ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ

ಬದುಕಿನಾ ಬಡಿಗೇ ಅಂಟಿರೋ ಜೋಳದಾ ಕಾಳುಗಳಾ ನೋಡು ಹೌದಪ್ಪಾ
ಸಿಪ್ಪೆಯಾ ಸೂರಿನಲ್ಲಿ ಸಹಜೀವನ ಮಾಡೋ ಅವರೆ ಕಾಳುಗಳಾ ನೋಡು
ಶಹಬ್ಬಾಸ್ ಭೂಮಿಗೇ ಒಟ್ಟಿಗೇ ಬಂದು, ಬೆಂದರೇ ಒಟ್ಟಿಗೇ ಬೆಂದು
ಆಹಾ ಬಾಳೋ ದವಸದಂತೆ ನಾವೂಊಊ ಅದಪ್ಪಾ ಬಾಳೆಯಂತೆ, ಹಲಸಿನಂತೆ,
ದಾಳಿಂಬೆಯಂತೆ ನಾವುಉಉ ವಾರೆ ವಾಹ್ ಒಗ್ಗಟ್ಟೆ ಸೃಷ್ಟಿ ನಿಯಮಾ
ರುಚಿಗಳು ಸೇರಿದರೇ ಅಭಿರುಚಿ ಇದೆಯಂತೇ
ರುಚಿಗಳು ಸೇರಿದರೇ ಅಭಿರುಚಿ ಇದೆಯಂತೇ
ಅಭಿರುಚಿ ಬೆರೆತವರೇ, ಬಾಳಿನ ಅಡುಗೆಯ ದೊರೆಯಂತೇ

ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ
ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ

ಕಹಿಯನ್ನೆಲ್ಲಾ ಮರೆಯಬೇಕಯ್ಯಾ ಅದ ಮರೆಯೋದಕ್ಕೂ ಮರೆವು ಬೇಕಯ್ಯಾ
ಮರೆಯೋ ವರವೇ ಇಲ್ಲದಿದ್ದರೇ ಮನಸ್ಸೇ ಕುಡಿದಾ ಮಂಗನಂತಯ್ಯಾ
ಕೆದಕಿ ಕೆದಕಿ, ಕೆದಕಿ ಕೆದಕಿ, ದ್ವೇಷ ಬರಿಸುವುದಂತಯ್ಯಾ
ಮನಸ್ಸು ಮುರಿದು ಹೋಗಲು ಕಹಿಯೇ ಮೂಲವಯ್ಯಾ
ತುಂಬಿದ ಮನೆಯು ಒಡೆದುಹೋಗಲೂ ಕಹಿ ನೆನಪೇ ನೆಪವಯ್ಯಾ

ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೇ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೇ
ಕ್ಷಮಿಸಲು ಕಲಿತವನೇ ಕಹಿಯನು ಸಿಹಿ ಎನ್ನುವನಂತೆ

ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ
ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ

ಮನೆಯೆ ನಮ್ಮ ಜೀವಾ, ಗುರು ಹಿರಿಯರೆನ್ನ ದೈವಾ
ದೈವ ಪಾದಗಳಿಗೇ ನಮ್ಮ ಪ್ರೀತಿಯೆಂಬ ಹೂವಾ
ಹಳೆಯ ಬೇರಿನ ಮಡಿಲಲ್ಲಿ, ಹೊಸ ಚಿಗುರುಗಳು ಚಿಗುರೊಡೆವಂತೆ ನಡೆಯಬೇಕು
ಎಲ್ಲಾ ಕಿರಿಯರು, ಹಿರಿಯರು ಹೇಳಿದ ನುಡಿಯಂತೆ
ಉಲ್ಲಾಸಾ, ಉಲ್ಲಾಸಾ, ಹಿರಿಯರ ನೆರಳಲಿ

ಮನಗಳು ಸೇರಿದರೇ ತುಂಬಿದ ಮನೆಯಂತೇ
ಮನಗಳು ಸೇರಿದರೇ ತುಂಬಿದ ಮನೆಯಂತೇ
ತುಂಬಿದ ಮನೆಯವನೇ ಧರೆಯಲಿ ನಗುವಿನ ದೊರೆಯಂತೇ
ಪ್ರೀತಿಯ ಗೂಡು ನಾವೆಲ್ಲಾ ಬೇರೇ ಆದರೆ ಒಲವಿಲ್ಲಾ
ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ
ಜೇನಿನಗೂಡು ನಾವೆಲ್ಲಾ ಬೇರೇ ಆದರೆ ಜೇನಿಲ್ಲಾ

Whats_app_banner