Rishab shetty: ಕನ್ನಡ ಬಿಟ್ಟು ಪರಭಾಷೆ ಸಿನಿಮಾಗಳಲ್ಲಿ ನಟಿಸುವ ವಿಚಾರ; ನಿಮಗಾದ್ರೂ ಅರ್ಥವಾಯ್ತಲ್ಲ, ಮೌನ ಮುರಿದ ಕಾಂತಾರ ನಟ ರಿಷಬ್‌ ಶೆಟ್ಟಿ
ಕನ್ನಡ ಸುದ್ದಿ  /  ಮನರಂಜನೆ  /  Rishab Shetty: ಕನ್ನಡ ಬಿಟ್ಟು ಪರಭಾಷೆ ಸಿನಿಮಾಗಳಲ್ಲಿ ನಟಿಸುವ ವಿಚಾರ; ನಿಮಗಾದ್ರೂ ಅರ್ಥವಾಯ್ತಲ್ಲ, ಮೌನ ಮುರಿದ ಕಾಂತಾರ ನಟ ರಿಷಬ್‌ ಶೆಟ್ಟಿ

Rishab shetty: ಕನ್ನಡ ಬಿಟ್ಟು ಪರಭಾಷೆ ಸಿನಿಮಾಗಳಲ್ಲಿ ನಟಿಸುವ ವಿಚಾರ; ನಿಮಗಾದ್ರೂ ಅರ್ಥವಾಯ್ತಲ್ಲ, ಮೌನ ಮುರಿದ ಕಾಂತಾರ ನಟ ರಿಷಬ್‌ ಶೆಟ್ಟಿ

Kannada Actor Rishab Shetty: ರಿಷಬ್‌ ಶೆಟ್ಟಿಯವರು ಒಂದು ಕನ್ನಡ ಹಿಟ್‌ ಸಿನಿಮಾ ನೀಡಿದ ಬಳಿಕ ಪರಭಾಷೆಗೆ ಹೋಗುವವನು ನಾನಲ್ಲ ಎಂದು ಹೇಳಿದ್ದಾರೆಯೇ ಹೊರತು ಇತರರಂತೆ ಕನ್ನಡ ಉದ್ಯಮ ಬಿಡುವವನು ನಾನಲ್ಲ ಎಂದುq ಟ್ವಿಟ್ಟರ್‌ ಬಳಕೆದಾರರು ಮಾಡಿರುವ ಟ್ವೀಟ್‌ಗೆ ರಿಷಬ್‌ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

Rishab shetty: ಕನ್ನಡ ಬಿಟ್ಟು ಪರಭಾಷೆ ಸಿನಿಮಾಗಳಲ್ಲಿ ನಟಿಸುವ ವಿಚಾರ; ಮೌನ ಮುರಿದ ಕಾಂತಾರ ನಟ ರಿಷಬ್‌ ಶೆಟ್ಟಿ
Rishab shetty: ಕನ್ನಡ ಬಿಟ್ಟು ಪರಭಾಷೆ ಸಿನಿಮಾಗಳಲ್ಲಿ ನಟಿಸುವ ವಿಚಾರ; ಮೌನ ಮುರಿದ ಕಾಂತಾರ ನಟ ರಿಷಬ್‌ ಶೆಟ್ಟಿ

ಬೆಂಗಳೂರು: ರಿಷಬ್‌ ಶೆಟ್ಟಿಯವರು ಏನಾದರೂ ಹೇಳಿಕೆ ನೀಡಿದರೆ ಅದರಲ್ಲಿ ನಾನಾರ್ಥ ಹುಡುಕುವವರು ಹೆಚ್ಚಾಗಿದ್ದಾರೆ. ವಿಶೇಷವಾಗಿ, ಅವರ ಹೇಳಿಕೆಗಳು ಕಿರಿಕ್‌ ಪಾರ್ಟಿ ನಟಿ ರಶ್ಮಿಕಾ ಮಂದಣ್ಣರಿಗೆ ನೀಡಿರುವಂತೆ ಇರುವುದೇ ಎಂದು ಫ್ಯಾನ್ಸ್‌ ಆಲೋಚಿಸುತ್ತ ಇರುತ್ತಾರೆ. ಇತ್ತೀಚೆಗೆ ಚಿತ್ರೋತ್ಸವಕ್ಕೆ ಸಂಬಂಧಪಟ್ಟ ಸಂದರ್ಶನಗಳಲ್ಲಿ ಇವರು ನೀಡಿದ ಹೇಳಿಕೆಯೂ ಇದೇ ರೀತಿಯ ತಪ್ಪು ಅಭಿಪ್ರಾಯಗಳಿಗೆ ಕಾರಣವಾಗಿತ್ತು. ಇದೀಗ ಟ್ವಿಟ್ಟರ್‌ನಲ್ಲಿ ಅಭಿಮಾನಿಯೊಬ್ಬರು ರಿಷಬ್‌ ಶೆಟ್ಟಿ ಹೇಳಿದ್ದು ಹೀಗಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಒಬ್ಬರಿಗಾದರೂ ನನ್ನ ಹೇಳಿಕೆ ಅರ್ಥವಾಯ್ತಲ್ಲ ಎಂದು ಆ ಟ್ವೀಟ್‌ ಅನ್ನು ರಿಷಬ್‌ ಶೆಟ್ಟಿ ಮತ್ತೆ ಹಂಚಿಕೊಂಡಿದ್ದಾರೆ. ಇದನ್ನು ಓದಿ: Rishab Shetty: ‘ಬೇರೆ ಭಾಷೆಗೆ ಹೋಗಲ್ಲ, ಕನ್ನಡದ ಚಿತ್ರವನ್ನೇ ಡಬ್‌ ಮಾಡಿ ಅಲ್ಲಿಗೆ ಕೊಂಡೊಯ್ಯುವೆ’; ರಿಷಬ್‌ ಶೆಟ್ಟಿ

ಕಾಂತಾರ ನಟ ರಿಷಬ್‌ ಶೆಟ್ಟಿಯವರಿಗೆ ಇತ್ತೀಚೆಗೆ ಸಿಲ್ವರ್‌ ಪಿಕಾಕ್‌ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು, ಗೌರವಗಳು ದೊರಕಿವೆ. ಯೂಟ್ಯೂಬ್‌, ಟೀವಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ರಿಷಬ್‌ ಶೆಟ್ಟಿ ಸಂದರ್ಶನಗಳೂ ಪ್ರಕಟವಾಗಿವೆ. ಇಂತಹ ಸಂದರ್ಶನಗಳಲ್ಲಿ ರಿಷಬ್‌ ಶೆಟ್ಟಿಯವರು ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗುತ್ತಾರೆಯೇ ಎಂಬ ಪ್ರಶ್ನೆಯೂ ಬಂದಿತ್ತು. ನಾನು ಎಲ್ಲೂ ಹೋಗೋದಿಲ್ಲ. ಕನ್ನಡಕ್ಕೆ ಮೊದಲ ಆದ್ಯತೆ ನೀಡುವೆ ಎಂದು ರಿಷಬ್‌ ಶೆಟ್ಟಿ ಹೇಳಿದ್ದರು. ಇದನ್ನು ಓದಿ: ಶಂಕರ್‌ ನಾಗ್‌ ಬಳಿಕ ಚಂದನವನಕ್ಕೆ ಸಿಲ್ವರ್‌ ಪಿಕಾಕ್‌ ಪ್ರಶಸ್ತಿ ತಂದ ರಿಷಬ್‌ ಶೆಟ್ಟಿ

ನಾನು ಕನ್ನಡ ಸಿನಿಮಾ ನಟಿಸುವೆ. ಕನ್ನಡ ಸಿನಿಮಾಗಳೇ ಬೇರೆ ಭಾಷೆಗೆ ಡಬ್‌ ಆಗಿ ಕನ್ನಡವನ್ನೇ ಬೇರೆ ಕಡೆಗೆ ಕೊಂಡೊಯ್ಯುವೆ ಎಂಬ ಅರ್ಥದಲ್ಲಿ ಅವರು ಉತ್ತರಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಟ್ವಿಟ್ಟರ್‌ ಬಳಕೆದಾರರು ಹೀಗೆಂದು ಟ್ವೀಟ್‌ ಮಾಡಿದ್ದಾರೆ. "ರಿಷಬ್‌ ಶೆಟ್ಟಿಯವರಿಗೆ ನನ್ನ ಪ್ರಾಮಾಣಿಕ ಕ್ಷಮೆ ಯಾಚನೆಗಳು. ಅವರು ನಿಜಕ್ಕೂ ಹೇಳಿರುವುದು ಈ ರೀತಿ. ಒಂದು ಹಿಟ್‌ ಸಿನಿಮಾ ನೀಡಿದ ಬಳಿಕ ಉದ್ಯಮವನ್ನು ತೊರೆಯುವ ವ್ಯಕ್ತಿ ಎಂದು ಕರೆಯಲು ನಾನು ಬಯಸುವುದಿಲ್ಲ ಎಂದು ರಿಷಬ್‌ ಶೆಟ್ಟಿ ಹೇಳಿದ್ದರು. "ನಾನು ಇತರರಂತೆ ಕನ್ನಡ ಇಂಡಸ್ಟ್ರಿ ತೊರೆಯುವುದಿಲ್ಲ" ಎಂದು ಅವರು ಹೇಳಿಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ" ಎಂದು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಅನ್ನು ರಿಷಬ್‌ ಶೆಟ್ಟಿ ಹಂಚಿಕೊಂಡಿದ್ದಾರೆ. "ಪರವಾಗಿಲ್ಲ, ಕೊನೆಗಾದರೂ ಕೆಲವರಿಗಾದರೂ ನಾನು ನಿಜಕ್ಕೂ ಏನು ಹೇಳಿದೆ ಎಂದು ಅರ್ಥವಾಗಿದೆ" ಎಂದು ರಿಷಬ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ. ಇವರ ಪ್ರತಿಕ್ರಿಯೆಗೆ ಸಾಕಷ್ಟು ಫ್ಯಾನ್ಸ್‌ ಪ್ರತಿಕ್ರಿಯೆ ನೀಡಿದ್ದಾರೆ. "ನೀವು ಸ್ಪಷ್ಟನೆ ನೀಡದೆ ಇದ್ದರೂ ನಮಗೆ ವಿಷಯ ಏನೆಂದು ಗೊತ್ತಾಗಿದೆ ಅಣ್ಣಾ" "ಇಂತಹ ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳಬೇಡಿ, ಕಲ್ಲು ಯಾವತ್ತಿಗಾದರೂ ಕಲ್ಲೇ, ಇಂತಹ ಟೀಕೆಗಳಿಗೆ ಹೆದರದಿರಿ" "ನೀವು ನಮ್ಮ ಹೆಮ್ಮೆ, ಕನ್ನಡಿಗರು ನಿಮ್ಮನ್ನು ಯಾವತ್ತೂ ಕೈಬಿಡೋದಿಲ್ಲ" ಇತ್ಯಾದಿ ಹಲವು ಕಾಮೆಂಟ್‌ಗಳು ಬಂದಿವೆ.

ಕಿರಿಕ್‌ ಪಾರ್ಟಿ ಬಳಿಕ ಕನ್ನಡ ತೊರೆದ ರಶ್ಮಿಕಾ ಮಂದಣ್ಣರನ್ನು ಗುರಿಯಾಗಿಸಿಕೊಂಡು ಈ ಮಾತು ಹೇಳಲಾಗಿದೆ ಎಂದು ಕೆಲವರು ತಪ್ಪಾಗಿ ಅರ್ಥೈಸಿದ್ದರು. ಇನ್ನು ಕೆಲವರು ಇವರು ಇತರೆ ನಟಿಯರು ಅಥವಾ ನಟರನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡುತ್ತಿದ್ದಾರೆ" ಎಂಬರ್ಥದಲ್ಲಿ ಟ್ರೋಲ್‌ ಮಾಡಿದ್ದರು.

Whats_app_banner