ಕನ್ನಡ ಸುದ್ದಿ  /  Entertainment  /  Sandalwood News Karnataka Ratna Power Star Puneeth Rajkumar Starrer Jackie Movie Re Released All Over State Mnk

‘ಜಾಕಿ’ಯಾಗಿ ಪುನೀತ್‌ ರಾಜ್‌ಕುಮಾರ್‌ ಪ್ರತ್ಯಕ್ಷ, ಕಣ್ಣೀರಾದ ಅಶ್ವಿನಿ; ಚಿತ್ರಮಂದಿರದ ಮುಂದೆ ಹಬ್ಬ ಮಾಡಿದ ದೊಡ್ಮನೆ ಫ್ಯಾನ್ಸ್‌

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇಗೆ ಇನ್ನೆರಡು ದಿನಗಳಷ್ಟೇ ಬಾಕಿ. ಆ ಸಂಭ್ರಮದ ಪ್ರಯುಕ್ತ 14 ವರ್ಷಗಳ ಹಿಂದೆ ರಿಲೀಸ್‌ ಆಗಿ ದಾಖಲೆ ಬರೆದಿದ್ದ ಜಾಕಿ ಚಿತ್ರ ಇಂದು (ಮಾ. 15) ಮರು ಬಿಡುಗಡೆ ಆಗಿದೆ. ಅಪ್ಪುವನ್ನು ಮತ್ತೆ ತೆರೆಮೇಲೆ ಕಂಡು ದೊಡ್ಮನೆ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

‘ಜಾಕಿ’ಯಾಗಿ ಪುನೀತ್‌ ರಾಜ್‌ಕುಮಾರ್‌ ಪ್ರತ್ಯಕ್ಷ, ಕಣ್ಣೀರಾದ ಅಶ್ವಿನಿ; ಚಿತ್ರಮಂದಿರದ ಮುಂದೆ ಹಬ್ಬ ಮಾಡಿದ ದೊಡ್ಮನೆ ಫ್ಯಾನ್ಸ್‌
‘ಜಾಕಿ’ಯಾಗಿ ಪುನೀತ್‌ ರಾಜ್‌ಕುಮಾರ್‌ ಪ್ರತ್ಯಕ್ಷ, ಕಣ್ಣೀರಾದ ಅಶ್ವಿನಿ; ಚಿತ್ರಮಂದಿರದ ಮುಂದೆ ಹಬ್ಬ ಮಾಡಿದ ದೊಡ್ಮನೆ ಫ್ಯಾನ್ಸ್‌

Jackie Re- Release: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನಗಲಿ ಎರಡೂವರೆ ವರ್ಷವಾದ್ರೂ ಅವರು ಇಂದಿಗೂ ಕೂಡ ಕನ್ನಡಿಗರ ಮನದಲ್ಲಿ ಜೀವಂತವಾಗಿದ್ದಾರೆ. ಅಪ್ಪು ಅವರ ಹುಟ್ಟುಹಬ್ಬಕ್ಕೆ ಅಪ್ಪು ಅಭಿನಯದ ಸೂಪರ್ ಹಿಟ್ ಸಿನಿಮಾ ಜಾಕಿ ಮತ್ತೆ ರಿಲೀಸ್ ಆಗಿದೆ. ಹದಿನಾಲ್ಕು ವರ್ಷಗಳ ಹಿಂದೆ ರಿಲೀಸ್ ಆಗಿ ಎಲ್ಲರ ಮನ ಗೆದ್ದಿದ್ದ ಜಾನಕಿ ರಾಮ ಅಲಿಯಾಸ್ ಜಾಕಿ ಈಗ ಮತ್ತೆ ಥಿಯೇಟರ್‌ನಲ್ಲಿ ಅಬ್ಬರಿಸುತ್ತಿದ್ದಾನೆ.

ಅಪ್ಪು ಅಭಿಮಾನಿಗಳು ಈ ಸಿನಿಮಾ ಮರು ಬಿಡುಗಡೆಯನ್ನು ದೊಡ್ಡ ಹಬ್ಬದಂತೆ ಆಚರಿಸುತ್ತಿದ್ದಾರೆ. ಮಧ್ಯರಾತ್ರಿಯೇ ಥಿಯೇಟರ್ ಮುಂದೆ ಅಪ್ಪು ಅವರ ಬೃಹತ್‌ ಕಟೌಟ್ ನಿಲ್ಲಿಸಿ, ಅಪ್ಪು ಕಟೌಟ್‌ಗೆ ಹಾರ ಹಾಕಿ ಸಂಭ್ರಮಿಸಿದ್ದಾರೆ. ಇನ್ನೂ ಥಿಯೇಟರ್ ಮುಂದೆ ಹೊಸ ಸಿನಿಮಾ ರಿಲೀಸ್ ಆದಾಗ ಯಾವ ಮಟ್ಟಿಗೆ ಸಂಭ್ರಮ ಇರುತ್ತೋ ಅದಕ್ಕಿಂತ ಹೆಚ್ಚಿನ ಸಂಭ್ರಮ ಜಾಕಿ ಸಿನಿಮಾ ಮರು ಬಿಡುಗಡೆಯಾದಾಗ ಕಾಣಿಸುತ್ತಿತ್ತು. ‌ಅಪ್ಪು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಖತ್ತಾಗಿರೋ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು.

ಬೆಳಗಿನ 4:30ಕ್ಕೆ ಫಸ್ಟ್‌ ಶೋ..

ಥಿಯೇಟರ್‌ಗಳಲ್ಲಿ ಜಾಕಿ ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ಸಖತ್ತಾಗಿಯೇಯಿದೆ. ಬೆಳ್ಳಂಬೆಳಗ್ಗೆ 4.30ಕ್ಕೆ ಫಸ್ಟ್ ಶೋ ಆರಂಭ ಆಗಿತ್ತು. ಮರುಬಿಡುಗಡೆಯಾಗುತ್ತಿರೋ ಸಿನಿಮಾಗೆ ಬೆಳಗಿನ ಜಾವ ಶೋ ಆಗ್ತಾಯಿರೋದು ಇತಿಹಾಸದಲ್ಲೇ ಇದೇ ಮೊದಲು. ಬೆಳಗಿನ ಜಾವದ ಶೋಗೆ ಜನರು ಕಿಕ್ಕಿರಿದು ಸೇರಿದ್ದರು. ಇವತ್ತಿನ ಇಡೀ ದಿನದ ಟಿಕೆಟ್‌ಗಳೂ ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಲ್ಲಿ ಬೆಳಗ್ಗೆ 4.30ಕ್ಕೆ ಮೊದಲ ಶೋ ಇಡಲಾಗಿತ್ತು. ಅದೂ ಕೂಡ ಕಿಕ್ಕಿರಿದು ಸೇರಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಸಂಭ್ರಮ

ಇಷ್ಟೆಲ್ಲಾ ಸಂಭ್ರಮದ ನಡುವೆಯೂ ಕೂಡ ಅಪ್ಪು ನಮ್ಮೊಂದಿಗಿಲ್ಲ ಅನ್ನೋ ಸತ್ಯವನ್ನ ಮಾತ್ರ ಆಗಾಗ ಅಭಿಮಾನಿಗಳಿಗೆ ಅರಗಿಸಿಕೊಳ್ಳೋಕೆ ಆಗ್ತಾಯಿರಲಿಲ್ಲ. ‌ಅಪ್ಪು ಅವರ ಕೆಲವು ಸೀನ್‌ಗಳನ್ನು ನೋಡಿ ಅಭಿಮಾನಿಗಳು ಆಗಾಗ ಭಾವುಕರಾಗುತ್ತಿದ್ರು. ವಿಶೇಷ ಅಂದ್ರೆ, ಬೆಳಗಿನ ಶೋಗಳಿಗೆ ಮಹಿಳೆಯರು ಹಾಗೂ ಕುಟುಂಬದವರು ಆಗಮಿಸಿ, ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪತಿಯ ಸಿನಿಮಾ ನೋಡಿ ಕಣ್ಣೀರಿಟ್ಟ ಅಶ್ವಿನಿ

ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಜಾಕಿ ಸಿನಿಮಾವನ್ನು ಅಭಿಮಾನಿಗಳ ಜೊತೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ವೀಕ್ಷಿಸಿದ್ರು. ಈ ವೇಳೆ ಅಪ್ಪು ಅವರನ್ನು ನೋಡಿ ಆಗಾಗ ಅಶ್ವಿನಿ ಕಣ್ಣೀರು ಹಾಕುತ್ತಿರೋ ದೃಶ್ಯ ಅಭಿಮಾನಿಗಳ ಕರುಳು ಹಿಂಡುತ್ತಿತ್ತು.‌ ಅಪ್ಪು ಅವರ ದೃಶ್ಯ ತೆರೆಯ ಮೇಲೆ ಬಂದಾಗ ಅವರು ನಮ್ಮ ಜೊತೆಗೆ ಇಲ್ಲ ಅನ್ನೋ ಭಾವನೆ ಮೂಡೋದೇ ಇಲ್ಲ ಆದರು ಸತ್ಯವನ್ನು ಒಪ್ಪಿಕೊಳ್ಳಲೇಬೇಕು ಅನ್ನೋ ತರ ಇತ್ತು ಅಶ್ವಿನಿ ಅವರ ಕಣ್ಣೀರು.

ಅಪ್ಪು ನಿಧನದ ನಂತ್ರ ನಾವು ಬೇರೆ ಹೀರೊಗಳ ಅಭಿಮಾನಿಗಳ ಥರಹ ಪ್ರತೀ ವರ್ಷ ಹೇಗೆ ಥಿಯೇಟರ್‌ನಲ್ಲಿ ಸಂಭ್ರಮಿಸಬೇಕು ಅನ್ನೋ ಕೊರಗು ಅಭಿಮಾನಿಗಳಿಗೆ ಕಾಡಿತ್ತು. ಆದರೆ ಅವರ ಹಳೆಯ ಸಿನಿಮಾಗಳು ಪ್ರತೀ ವರ್ಷ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗುತ್ತಿರೋದು ಅಪ್ಪು ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ತಂದಿದೆ ಅಂದ್ರೇ ತಪ್ಪಾಗೋದಿಲ್ಲ.

ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಜಾಕಿ ಚಿತ್ರಕ್ಕೆ ಪಾರ್ವತಮ್ಮ ರಾಜ್‌ಕುಮಾರ್‌ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದರು. ಅಪ್ಪು ಜತೆಗೆ ಬಾವನಾ ನಾಯಕಿಯಾಗಿ ನಟಿಸಿದ್ದರೆ, ಇನ್ನುಳಿದಂತೆ, ರಂಗಾಯಣ ರಘು, ಸುಮಿತ್ರಾ, ಹರ್ಷಿಕಾ ಪೂಣಚ್ಚ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಸತ್ಯ ಹೆಗ್ಡೆ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿತ್ತು.

ವರದಿ: ಮನೋಜ್ ವಿಜಯೀಂದ್ರ, ಬೆಂಗಳೂರು