ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಚಿತ್ರಯಾನಕ್ಕೆ 38 ವರ್ಷ, ಆನಂದ್‌ ಸಿನಿಮಾದಿಂದ ಕ್ಯಾಪ್ಟನ್‌ ಮಿಲ್ಲರ್‌ವರೆಗೆ
ಕನ್ನಡ ಸುದ್ದಿ  /  ಮನರಂಜನೆ  /  ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಚಿತ್ರಯಾನಕ್ಕೆ 38 ವರ್ಷ, ಆನಂದ್‌ ಸಿನಿಮಾದಿಂದ ಕ್ಯಾಪ್ಟನ್‌ ಮಿಲ್ಲರ್‌ವರೆಗೆ

ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಚಿತ್ರಯಾನಕ್ಕೆ 38 ವರ್ಷ, ಆನಂದ್‌ ಸಿನಿಮಾದಿಂದ ಕ್ಯಾಪ್ಟನ್‌ ಮಿಲ್ಲರ್‌ವರೆಗೆ

Shivarajkumar Movie List: ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಸಿನಿ ಪ್ರಯಾಣಕ್ಕೆ ಭರ್ತಿ 38 ವರ್ಷಗಳಾಗಿವೆ. ಆನಂದ್‌ ಸಿನಿಮಾದಿಂದ ಇತ್ತೀಚಿನ ಕ್ಯಾಪ್ಟನ್‌ ಮಿಲ್ಲರ್‌ವರೆಗೆ ಇವರದ್ದು ದಣಿವರಿಯದ ಪ್ರಯಾಣ. ಶಿವಣ್ಣನ ಸಿನಿ ಜರ್ನಿಯನ್ನು ನೆನಪಿಸಿಕೊಳ್ಳೋಣ ಬನ್ನಿ.

ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಸಿನಿ ಪ್ರಯಾಣಕ್ಕೆ 38 ವರ್ಷ
ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಸಿನಿ ಪ್ರಯಾಣಕ್ಕೆ 38 ವರ್ಷ

ಬೆಂಗಳೂರು: ಶಿವರಾಜ್‌ ಕುಮಾರ್‌ ಚಂದನವನಕ್ಕೆ ಕಾಲಿಟ್ಟು 38 ವರ್ಷಗಳಾಗಿವೆ. ಇವರು 1986ರಲ್ಲಿ ಆನಂದ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರು. ಇದಕ್ಕೂ ಮೊದಲು 1974ರಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣದಲ್ಲಿ ಪದ್ಮಾವತಿ ಸಹೋದರನಾಗಿ, ಮಾಸ್ಟರ್‌ ಪುಟ್ಟಸ್ವಾಮಿ ಹೆಸರಿನಲ್ಲಿ ಅತಿಥಿ ಪಾತ್ರದಲ್ಲಿ ಮಗುವಾಗಿ ಕಾಣಿಸಿಕೊಂಡಿದ್ದರು. ಆದರೆ, ಶಿವಣ್ಣನ ಸಿನಿ ಜರ್ನಿಗೆ ಆನಂದ್‌ ಸಿನಿಮಾದಿಂದ ಲೆಕ್ಕ ಹಾಕಲಾಗುತ್ತದೆ. ಇಂದು ಸೋಷಿಯಲ್‌ ಮೀಡಿಯಾದಲ್ಲಿ ಶಿವಣ್ಣನ ಸಿನಿ ಜರ್ನಿ #38YearsOfShivannaLegacy ವೈರಲ್‌ ಆಗುತ್ತಿದೆ.

ಶಿವಣ್ಣನ ಅಭಿಮಾನಿಗಳ ಹರ್ಷ

ಸೋಷಿಯಲ್‌ ಮೀಡಿಯಾದಲ್ಲಿ ಶಿವಣ್ಣನ ಅಭಿಮಾನಿಗಳು ಶಿವರಾಜ್‌ ಕುಮಾರ್‌ ನಟನೆಯ ಪ್ರಮುಖ ಚಿತ್ರಗಳ ಕ್ಲಿಪ್‌ಗಳನ್ನು, ಹಾಡುಗಳ ತುಣುಕುಗಳನ್ನು ಹಂಚಿಕೊಂಡು ಶಿವಣ್ಣನ 38 ವರ್ಷದ ಸಿನಿ ಜರ್ನಿಗೆ ಶುಭಾಶಯ ಹೇಳುತ್ತಿದ್ದಾರೆ. ಕೆಲವರು "ಶಿವರಾಜ್‌ ಕುಮಾರ್‌ ನಟನೆಯ ಫೇವರಿಟ್‌ ಸೀನ್‌ಗಳನ್ನು" ಹಂಚಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್‌ ಕುಮಾರ್‌ ನಟನೆಯ ಕೆಲವು ಸಿನಿಮಾಗಳನ್ನು ನೆನಪಿಸಿಕೊಳ್ಳೋಣ.

ಶಿವರಾಜ್‌ ಕುಮಾರ್‌ ನಟನೆಯ ಸಿನಿಮಾಗಳು

ಶ್ರೀ ಶ್ರೀನಿವಾಸ ಕಲ್ಯಾಣ, ಆನಂದ್‌, ರಥ ಸಪ್ತಮಿ, ಮನಮೆಚ್ಚಿದ ಹೆಂಡತಿ, ಶಿವ ಮೆಚ್ಚಿದ ಕಣ್ಣಪ್ಪ, ಸಂಯುಕ್ತ, ರಣರಂಗ, ಇನ್‌ಸ್ಪೆಕ್ಟರ್‌ ವಿಕ್ರಮ್‌, ಅದೇ ರಾಘ, ಅದೇ ಹಾಡು ಚಿತ್ರಗಳಲ್ಲಿ ಶಿವಣ್ಣ ನಟಿಸಿದ್ದಾರೆ.

1990ರ ದಶಕದಲ್ಲಿ ಆಸೆಗೊಬ್ಬ ಮೀಸೆಗೊಬ್ಬ, ಮೃತ್ಯುಂಜಯ, ಅರಳಿದ ಹೂವುಗಳು, ಮೋಡದ ಮರೆಯಲ್ಲಿ, ಮಿಡಿದ ಶೃತಿ, ಪುರುಷೋತ್ತಮ್ಮ, ಮಾವನಿಗೆ ತಕ್ಕ ಅಳಿಯ, ಬೆಳ್ಳಿಯಪ್ಪ ಬಂಗಾರಪ್ಪ, ಜಗ ಮೆಚ್ಚಿದ ಹುಡುಗ, ಚಿರಬಾಂಧವ್ಯ, ಆನಂದ ಜ್ಯೋತಿ, ಗಂಧದ ಗುಡಿ ಭಾಗ 2, ಮುತ್ತಣ್ಣ, ಗಂಡುಗಲಿ, ಗಡಿಬಿಡಿ ಅಳಿಯ, ಸವ್ಯಸಾಚಿ, ಓಂ, ಮನ ಮಿಡಿಯಿತು, ಸಮರ, ದೊರೆ, ಇಬ್ಬರ ನಡುವೆ ಮುದ್ದಿನ ಆಟ, ಗಾಜನೂರ ಗಂಡು, ಶಿವ ಸೈನ್ಯ, ಅಣ್ಣಾವ್ರ ಮಕ್ಕಳು, ನಮ್ಮೂರ ಮಂದಾರ ಹೂವೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆದಿತ್ಯ, ಜನುಮದ ಜೋಡಿ, ಗಂಗಾ ಯಮುನಾ, ಸಿಂಹದ ಮರಿ, ಅಮ್ಮಾವ್ರ ಗಂಡ, ಮುದ್ದಿನ ಕಣ್ಮಣಿ, ರಾಜ, ಜೋಡಿ ಹಕ್ಕಿ, ಪ್ರೇಮ ರಾಗ ಹಾಡು ಗೆಳತಿ, ನಮ್ಮೂರ ಹುಡುಗ, ಕುರುಬನ ರಾಣಿ, ಅಂಡಮಾನ್‌, ಮಿಸ್ಟರ್‌ ಪುಟ್ಸಾಮಿ, ಭೂಮಿ ತಾಯಿಯ ಚೊಚ್ಚಲ ಮಗ, ಗಡಿಬಿಡಿ ಕೃಷ್ಣ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜನುಮದಾತ, ಚಂದ್ರೋದಯ, ಎಕೆ 47, ವಿಶ್ವ, ಹೃದಯ ಹೃದಯ ಇವರ ಇನ್ನಿತರ ಚಿತ್ರಗಳು.

2000ರಲ್ಲಿ ಯಾರೇ ನೀ ಅಭಿಮಾನಿ, ಪ್ರೀತ್ಸೆ, ಹಗಲು ವೇಷ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಸುರ, ಯುವರಾಜ, ಡಾನ್‌, ಕೋದಂಡ ರಾಮ, ನಂಜುಡಿ, ಚಿಗುರಿದ ಕನಸು, ರೌಡಿ ಅಜಯ್‌, ವಾಲ್ಮಿಕಿ, ಜೋಗಿ ಹೀಗೆ ಶಿವಣ್ಣ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಡ್ಡಿಪುಡಿ, ಭಜರಂಗಿ, ಕಿಲ್ಲಿಂಗ್‌ ವೀರಪ್ಪನ್‌, ಮಫ್ತಿ ಇವರ ಇನ್ನಿತರ ಸಿನಿಮಾಗಳು.

ಇತ್ತೀಚಿನ ವರ್ಷಗಳಲ್ಲಿ ಟಗರು, ದಿ ವಿಲನ್‌, ಕವಚ, ರುಸ್ತುಂ, ಆಯುಷ್ಮಾನ್‌ ಭವ, ಡ್ರೋಣ, ಭಜರಂಗಿ 2, ಜೇಮ್ಸ್‌, ಬೈರಾಗಿ, ವೇದಾ, ಕಬ್ಜಾ, ಜೈಲರ್‌, ಘೋಸ್ಟ್‌, ಕ್ಯಾಪ್ಟನ್‌ ಮಿಲ್ಲರ್‌ವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರಟಕ ಧಮನಕ, ಭೈರತಿ ರಣಗಲ್‌ ಶಿವರಾಜ್‌ ಕುಮಾರ್‌ ನಟನೆಯ ಮುಂಬರುವ ಸಿನಿಮಾಗಳು.

Whats_app_banner