Chow Chow Bath: ಚೌ ಚೌ ಬಾತ್ ಸಿನಿಮಾದಲ್ಲಿ ಹೈಪರ್‌ ಲಿಂಕ್‌ ಶೈಲಿಯ ಪ್ರಯೋಗ; ಹೊಸಬರ ಹೊಸ ಪ್ರಯತ್ನ ತೆರೆಗೆ ಬರಲು ರೆಡಿ-sandalwood news kenja chethan directs chow chow bath movie release date locked mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Chow Chow Bath: ಚೌ ಚೌ ಬಾತ್ ಸಿನಿಮಾದಲ್ಲಿ ಹೈಪರ್‌ ಲಿಂಕ್‌ ಶೈಲಿಯ ಪ್ರಯೋಗ; ಹೊಸಬರ ಹೊಸ ಪ್ರಯತ್ನ ತೆರೆಗೆ ಬರಲು ರೆಡಿ

Chow Chow Bath: ಚೌ ಚೌ ಬಾತ್ ಸಿನಿಮಾದಲ್ಲಿ ಹೈಪರ್‌ ಲಿಂಕ್‌ ಶೈಲಿಯ ಪ್ರಯೋಗ; ಹೊಸಬರ ಹೊಸ ಪ್ರಯತ್ನ ತೆರೆಗೆ ಬರಲು ರೆಡಿ

ಹೊಸಬರ ಚೌ ಚೌ ಬಾತ್‌ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಈಗಾಗಲೇ ಟ್ರೇಲರ್‌ ಮೂಲಕ ಎಲ್ಲರ ಗಮನ ಸೆಳೆದ ಈ ಸಿನಿಮಾದಲ್ಲಿ ಹೈಪರ್‌ ಲಿಂಕ್‌ ಶೈಲಿಯ ಮೂಲಕ ಕಥೆಯನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕ ಕೇಂಜ ಚೇತನ್‌ ಕುಮಾರ್.

Chow Chow Bath: ಚೌ ಚೌ ಬಾತ್ ಸಿನಿಮಾದಲ್ಲಿ ಹೈಪರ್‌ ಲಿಂಕ್‌ ಶೈಲಿಯ ಪ್ರಯೋಗ; ಹೊಸಬರ ಹೊಸ ಪ್ರಯತ್ನ ತೆರೆಗೆ ಬರಲು ರೆಡಿ
Chow Chow Bath: ಚೌ ಚೌ ಬಾತ್ ಸಿನಿಮಾದಲ್ಲಿ ಹೈಪರ್‌ ಲಿಂಕ್‌ ಶೈಲಿಯ ಪ್ರಯೋಗ; ಹೊಸಬರ ಹೊಸ ಪ್ರಯತ್ನ ತೆರೆಗೆ ಬರಲು ರೆಡಿ

Chow Chow Bath: ಈ ವರೆಗೂ ತನ್ನೊಳಗಿನ ಹೊಸತನದ ಸುಳಿವುಗಳ ಮೂಲಕವೇ ಸದ್ದು ಮಾಡುತ್ತಾ, ಪ್ರೇಕ್ಷಕ ವಲಯದಲ್ಲೊಂದು ಕುತೂಹಲವನ್ನು ಚಾಲ್ತಿಯಲ್ಲಿರುವಂತೆ ಮಾಡಿದ್ದ ಚಿತ್ರ `ಚೌ ಚೌ ಬಾತ್’. ಕೇಂಜ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಭರವಸೆ ಮೂಡಿಸಿತ್ತು. ಈಗ ಹೇಳಿ ಕೇಳಿ ಹೊಸಾ ಬಗೆಯ ಚಿತ್ರಗಳು ಮಿರುಗುವ ಕಾಲಮಾನವೊಂದು ಚಾಲ್ತಿಯಲ್ಲಿದೆ. ಆ ಸಾಲಿನಲ್ಲಿ ದಾಖಲಾಗಬಹುದಾದ ಸ್ಪಷ್ಟ ಲಕ್ಷಣಗಳನ್ನು ಹೊಂದಿರುವ `ಚೌ ಚೌ ಬಾತ್’ ಈ ವಾರ ಬಿಡುಗಡೆಗೊಳ್ಳಲಿದೆ.

ಚೌ ಚೌ ಬಾತ್ ಎಂಬುದು ಪರಿಚಿತ ಶೀರ್ಷಿಕೆಯಂತೆ ಭಾಸವಾಗುತ್ತದೆ. ಆದರೆ, ಸಲೀಸಾಗಿ ಅಂದಾಜಿಸಲಾಗದ ಕಥೆ ಇದರೊಳಗಿದೆ ಎಂಬ ಭರವಸೆಯನ್ನು ನಿರ್ದೇಶಕ ಕೇಂಜ ಚೇತನ್ ಕುಮಾರ್ ಈ ಹಿಂದೆಯೇ ಕೊಟ್ಟಿದ್ದರು. ಹಾಗಾದರೆ, ಚೌ ಚೌ ಬಾತ್ ನ ಅಸಲೀ ಸ್ವಾದವೇನು ಎಂಬ ಪ್ರಶ್ನೆ ಮೂಡಿಳ್ಳುತ್ತೆ. ಮೂರು ಬಗೆಯ ಪ್ರೇಮ ಕಥಾನಕಗಳ ಬಿಂದುವಿನಿಂದ ಇದರ ಕಥೆ ಚಲಿಸುತ್ತದೆಯಂತೆ. ಪ್ರೇಮ ಕಥೆ ಎಂದಾಕ್ಷಣ ಒಂದು ಚೌಕಟ್ಟಿನಲ್ಲಿ ಚೌ ಚೌ ಬಾತ್ ಅನ್ನು ಬಂಧಿಸುವಂತಿಲ್ಲ. ಯಾಕೆಂದರೆ, ಅಂಥಾ ವಿಶೇಷತೆಗಳೊಂದಿಗೆ ಚೇತನ್ ಈ ಚಿತ್ರವನ್ನು ರೂಪಿಸಿದ್ದಾರಂತೆ. ಅದರ ಛಾಯೆ ಈಗಾಗಲೇ ಹಾಡು, ಟ್ರೈಲರ್ ಮೂಲಕ ಕಾಣಿಸಿದೆ.

ಹೈಪರ್ ಲಿಂಕ್ ರೊಮ್ಯಾಂಟಿಕ್ ಕಾಮಿಡಿ ಎಂಬ ಹೊಸಾ ಜಾನರಿನಡಿಯಲ್ಲಿ ಈ ಚಿತ್ರ ತಯಾರುಗೊಂಡಿದೆ. ತಮಿಳು ಮುಂತಾದ ಭಾಷೆಗಳಲ್ಲಿ ಸಣ್ಣಗೆ ಕಾಣಿಸಿಕೊಂಡಿದ್ದ ಈ ಜಾನರ್, ಕನ್ನಡದ ಪ್ರೇಕ್ಷಕರಿಗೆ ತೀರಾ ಹೊಸತೆನ್ನಿಸಲಿದೆ ಎಂಬ ಭರವಸೆ ಚಿತ್ರತಂಡದಲ್ಲಿದೆ. ಅಂದಹಾಗೆ, ಚೌ ಚೌ ಬಾತ್ ನಲ್ಲಿ ಮೂವರು ನಾಯಕರು ಮತ್ತು ನಾಯಕಿಯರಿದ್ದಾರೆ. ಆ ಪ್ರತೀ ಜೋಡಿಗಳ ಸುತ್ತ ಚಲಿಸುವ ಕಥೆ ಎಲ್ಲರೊಂದಿಗೂ ಲಿಂಕು ಹೊಂದಿರುತ್ತದಂತೆ. ಕ್ಷಣ ಕ್ಷಣವೂ ಎದುರಾಗೋ ತಿರುವುಗಳು, ಅಚ್ಚರಿಗಳ ಮೂಲಕ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಈ ಚಿತ್ರ ಮೂಡಿ ಬಂದಿದೆಯಂತೆ.

ಸನಾತನಯ್ ಪಿಕ್ಚರ್ಸ್ ಮತ್ತು ಕಾಮನಧೇನು ಫಿಲಂಸ್ ಅರ್ಪಿಸುವ ಈ ಚಿತ್ರ ಹಾರಿಜಾನ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮೂರ್ತಿ ಬೆಳಗೆರೆ ಛಾಯಾಗ್ರಹಣ, ಪ್ರಮೋದ್ ಮರವಂತೆ ಗೀತ ಸಾಹಿತ್ಯವಿರುವ ಈ ಚಿತ್ರದ ಸಂಕಲನದ ಜವಾಬ್ದಾರಿಯನ್ನು ಖುದ್ದು ಕೇಂಜ ಚೇತನ್ ಕುಮಾರ್ ಅವರೇ ನಿಭಾಯಿಸಿದ್ದಾರೆ. ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಶ್ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ಮುಂತಾದವರ ತಾರಾಗಣವನ್ನು ಈ ಸಿನಿಮಾ ಒಳಗೊಂಡಿದೆ. ಸತೀಶ್ ಎಸ್.ಬಿ, ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣದೊಂದಿಗೆ ಮೂಡಿ ಬಂದಿರುವ `ಚೌ ಚೌ ಬಾತ್’ ಈ ವಾರ ತೆರೆಗಾಣಲಿದೆ.

mysore-dasara_Entry_Point