ಕನ್ನಡ ಸುದ್ದಿ  /  ಮನರಂಜನೆ  /  ಜಾರಾಂದಾಯ, ಪರಿವಾರ ದೈವಗಳ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಭಾಗಿ; ಕಿಚ್ಚ ಸುದೀಪ್‌ ಜತೆ ಕೆಜಿಎಫ್‌ ನಟಿಯ ಮುಂದಿನ ಸಿನಿಮಾ

ಜಾರಾಂದಾಯ, ಪರಿವಾರ ದೈವಗಳ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಭಾಗಿ; ಕಿಚ್ಚ ಸುದೀಪ್‌ ಜತೆ ಕೆಜಿಎಫ್‌ ನಟಿಯ ಮುಂದಿನ ಸಿನಿಮಾ

ಮಂಗಳೂರಿನ ಹೊರವಲಯದಲ್ಲಿರುವ ಕಿನ್ನಿಗೋಳಿ ಸಮೀಪದ ತಾಳಿಪಾಡಿಗುತ್ತುವಿನಲ್ಲಿ ಸ್ಯಾಂಡಲ್‌ವುಡ್‌ ನಟಿ ಶ್ರೀನಿಧಿ ಶೆಟ್ಟಿಯ ಕುಟುಂಬದ ಮನೆಯಲ್ಲೂ ಇತ್ತೀಚೆಗೆ ನೇಮೋತ್ಸವ ನಡೆದಿದೆ. ಕೆಜಿಎಫ್‌ ನಟಿ ಈ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಜಾರಾಂದಾಯ, ಪರಿವಾರ ದೈವಗಳ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಭಾಗಿ
ಜಾರಾಂದಾಯ, ಪರಿವಾರ ದೈವಗಳ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಭಾಗಿ

ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು ಸೇರಿದಂತೆ ದೈವಾರಾಧನೆ ಅನುಸರಿಸುವ ಕಡೆಗಳಲ್ಲಿ ಈಗ ನೇಮೋತ್ಸವದ ಸಂಭ್ರಮ. ಅಲ್ಲಲ್ಲಿ ಹರಕೆ ಅಥವಾ ವಾರ್ಷಿಕ ನೇಮೋತ್ಸವ ನಡೆಯುತ್ತಿರುತ್ತದೆ. ಮಂಗಳೂರಿನ ಹೊರವಲಯದಲ್ಲಿರುವ ಕಿನ್ನಿಗೋಳಿ ಸಮೀಪದ ತಾಳಿಪಾಡಿಗುತ್ತುವಿನಲ್ಲಿ ಸ್ಯಾಂಡಲ್‌ವುಡ್‌ ನಟಿ ಶ್ರೀನಿಧಿ ಶೆಟ್ಟಿಯ ಕುಟುಂಬದ ಮನೆಯಲ್ಲೂ ಇತ್ತೀಚೆಗೆ ನೇಮೋತ್ಸವ ನಡೆದಿದೆ. ಕೆಜಿಎಫ್‌ ನಟಿ ಈ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವರದಿಗಳ ಪ್ರಕಾರ ಶ್ರೀನಿಧಿ ಶೆಟ್ಟಿಯವರು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತಿದ್ದು, ಈಗ ಹರಕೆ ತೀರಿಸಿದ್ದಾರೆ. ತಾಳಿಪಾಡಿಗುತ್ತುವಿನಲ್ಲಿರುವ ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನೆರವೇರಿಸಿದ್ದಾರೆ. ಈ ನೇಮೋತ್ಸವದಲ್ಲಿ "ನೀನು ಇನ್ನಷ್ಟು ಎತ್ತರಕ್ಕೆ ಏರುತ್ತೀಯಾ" ಎಂದು ಭೂತ ಅಭಯ ನೀಡಿದೆ ಎನ್ನಲಾಗಿದೆ. ಶ್ರೀನಿಧಿ ಶೆಟ್ಟಿಯ ಕುಟುಂಬಸ್ಥರು, ಸಂಬಂಧಿಕರು, ಸ್ಥಳೀಯರು ಈ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ದೈವಕೋಲಕ್ಕೆ ಇವರು ಕಿತ್ತಲೆ ಬಣ್ಣದ ಸೀರೆಯುಟ್ಟು ಆಗಮಿಸಿದ್ದರು.

ನಟಿ ಶ್ರೀನಿಧಿ ಶೆಟ್ಟಿ ಪರಿಚಯ

ಶ್ರೀನಿಧಿ ಶೆಟ್ಟಿ ಕೆಜಿಎಫ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಪ್ಯಾನ್‌ ಇಂಡಿಯಾ ಸಿನಿಮಾ ವೀಕ್ಷಕರ ಗಮನ ಸೆಳೆದಿದ್ದಾರೆ. ಶ್ರೀನಿಧಿ ರಮೇಶ್‌ ಶೆಟ್ಟಿ ಅವರು 1992ರ ಅಕ್ಟೋಬರ್‌ 21ರಂದು ಜನಿಸಿದ್ದಾರೆ. ಮಿಸ್‌ ಸುಪ್ರನೇಷನಲ್‌ 2016ರಲ್ಲಿ ಗೆಲುವು ಪಡೆದಿದ್ದರು. ಈ ಪ್ರಶಸ್ತಿ ಪಡೆದ ಎರಡನೇ ಭಾರತೀಯ ವ್ಯಕ್ತಿ ಇವರಾಗಿದ್ದಾರೆ. ಶ್ರೀನಿಧಿ ಶೆಟ್ಟಿ ಅವರು ಫಿಲ್ಮ್‌ಫೇರ್‌ ಅವಾರ್ಡ್ಸ್‌ ಸೌತ್‌ಗೆ ನಾಮನಿರ್ದೇಶನಗೊಂಡಿದ್ದರು. ಸೈಮಾ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಕನ್ನಡದ ಬಹುಜನಪ್ರಿಯ ಸಿನಿಮಾ ಕೆಜಿಎಫ್‌ ಚಾಪ್ಟರ್‌ 1 ಮತ್ತು ಕೆಜಿಎಫ್‌ ಚಾಪ್ಟರ್‌ 2ನಲ್ಲಿ ಇವರು ಗೆಲುವು ಪಡೆದಿದ್ದರು. ಈ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗಾಗಿ ಸೈಮಾ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಮಂಗಳೂರು ಬಂಟ್‌ ಕುಟುಂಬದ ಇವರು ಶ್ರೀ ನಾರಾಯಣ ಗುರು ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಮತ್ತು ಸೇಂಟ್‌ ಅಲೋಸಿಯಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ.

ಕೆಜಿಎಫ್‌ ಸಿನಿಮಾದ ಬಳಿಕ ತಮಿಳಿನ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನ ತೆಲುಸು ಕದಾದಲ್ಲಿ ನಟಿಸುತ್ತಿದ್ದಾರೆ. ವಿಕ್ರಮ್‌ ನಟನೆಯ ಕೋಬ್ರಾ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 59 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶ್ರೀನಿಧಿ ಶೆಟ್ಟಿಯವರ ಮುಂದಿನ ಸಿನಿಮಾ ಕಿಚ್ಚ ಸುದೀಪ್‌ ಜತೆಗಿರಲಿದೆ. ಸದ್ಯ ಸುದೀಪ್‌ ಮ್ಯಾಕ್ಸ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ನಂತರದ ಸಿನಿಮಾ ಅಂದರೆ ಕಿಚ್ಚ 47 ಸಿನಿಮಾಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ.

ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point