ಬಿಲ್ಲ ರಂಗ ಭಾಷಾ ಸಿನಿಮಾದ ವಿಡಿಯೋ ಬಿಡುಗಡೆ, ಹುಟ್ಟುಹಬ್ಬದಂದು ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಹೊಸ ಅಪ್‌ಡೇಟ್‌-sandalwood news kiccha sudeep birthday billa ranga baasha movie official title logo and concept video released pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಲ್ಲ ರಂಗ ಭಾಷಾ ಸಿನಿಮಾದ ವಿಡಿಯೋ ಬಿಡುಗಡೆ, ಹುಟ್ಟುಹಬ್ಬದಂದು ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಹೊಸ ಅಪ್‌ಡೇಟ್‌

ಬಿಲ್ಲ ರಂಗ ಭಾಷಾ ಸಿನಿಮಾದ ವಿಡಿಯೋ ಬಿಡುಗಡೆ, ಹುಟ್ಟುಹಬ್ಬದಂದು ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಹೊಸ ಅಪ್‌ಡೇಟ್‌

Sudeep Billa Ranga Baasha Movie: ಕಿಚ್ಚ ಸುದೀಪ್‌ ತನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ಬಿಲ್ಲ ರಂಗ ಭಾಷಾ ಸಿನಿಮಾದ ಟೈಟಲ್‌ ಲೋಗೋ ಮತ್ತು ಪರಿಕಲ್ಪನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹನುಮಾನ್‌ ನಿರ್ಮಾಪಕರು, ವಿಕ್ರಾಂತ್‌ ರೋಣ ನಿರ್ದೇಶಕರ ಸಿನಿಮಾ ಇದಾಗಿದೆ.

Sudeep Birthday:  ಕಿಚ್ಚ ಸುದೀಪ್‌ಬಿಲ್ಲಾ ರಂಗ ಭಾಷಾ ಸಿನಿಮಾದ ವಿಡಿಯೋ ಬಿಡುಗಡೆ
Sudeep Birthday: ಕಿಚ್ಚ ಸುದೀಪ್‌ಬಿಲ್ಲಾ ರಂಗ ಭಾಷಾ ಸಿನಿಮಾದ ವಿಡಿಯೋ ಬಿಡುಗಡೆ

ಬೆಂಗಳೂರು: ಕಿಚ್ಚ ಸುದೀಪ್‌ ತನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ಬಿಲ್ಲ ರಂಗ ಭಾಷಾ ಸಿನಿಮಾದ ಟೈಟಲ್‌ ಲೋಗೋ ಮತ್ತು ಪರಿಕಲ್ಪನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಕ್ರಾಂತ್‌ ರೋಣ ಸಿನಿಮಾದ ಬಳಿಕ ಅಭಿನಯ ಚಕ್ರವರ್ತಿಯವರ ಜತೆ ಅನೂಪ್‌ ಭಂಡಾರಿಯವರ ಮುಂದಿನ ಸಿನಿಮಾ ಬಿಲ್ಲ ರಂಗ ಭಾಷಾ. "ಬಿ ಗಿಯಾಗ್ ಕೂತ್ಕೋಳಿ, ರಂಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು. ಬಾಡೂಟದ್ ಜೊತೆ ಬರ್ತೀವಿ. ಅಲ್ಲಿವರ್ಗು ಎಂದಿನ ಹಾಗೆ ತಾಳ್ಮೆ ಇರ್ಲಿ" ಎಂದು ಇತ್ತೀಚೆಗೆ ಅನೂಪ್‌ ಭಂಡಾರಿ ಅಪ್‌ಡೇಟ್‌ ನೀಡಿದ್ದರು. ಇದೀಗ ಕಿಚ್ಚ ಸುದೀಪ್‌ ತನ್ನ ಹುಟ್ಟುಹಬ್ಬದಂದು ಈ ಸಿನಿಮಾದ ಕುರಿತು ಹೆಚ್ಚಿನ ವಿವರ ನೀಡಿದ್ದಾರೆ.

ಸುದೀಪ್‌ ನಟನೆಯ ಬಿಲ್ಲಾ ರಂಗ ಭಾಷಾ ಸಿನಿಮಾ

"ಎ ಟೇಲ್ ಫ್ರಮ್ ದಿ ಫ್ಯೂಚರ್". ಬಿಲ್ಲ ರಂಗ ಭಾಷಾ- ಫಸ್ಟ್‌ ಬ್ಲಡ್‌ ಸಿನಿಮಾದ ಆಫೀಶಿಯಲ್‌ ಟೈಟಲ್‌ ಲೋಗೊ ಮತ್ತು ಕಾನ್ಸೆಪ್ಟ್‌ ವಿಡಿಯೋ ಇಲ್ಲಿದೆ" ಎಂದು ಸುದೀಪ್‌ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸುದೀಪ್‌ ಪ್ರೊಫೈಲ್‌ನಡಿ ಅಭಿಮಾನಿಗಳು "ಅಪ್‌ಡೇಟ್‌ ಬೇಕು ಬಾಸ್‌" ಎಂದು ಹೇಳುತ್ತಿದ್ದಾರೆ. "ಬಾಸ್‌ ಅಪ್‌ಡೇಟ್‌ ಬಾಸ್‌" "ಅಪ್‌ಡೇಟ್‌ ಬೇಕು ಬಾಸ್‌" ಎಂದೆಲ್ಲ ಧ್ವನಿ ಕೇಳುತ್ತಾರೆ. ತಕ್ಷಣ ವಿಡಿಯೋದಲ್ಲಿ ಅನೂಪ್‌ ಭಂಡಾರಿ ಅವರು ಪುಸ್ತಕ ಓದುವಂತೆ ಆ ಪುಸ್ತಕದಲ್ಲಿ ಬಿಲ್ಲ ರಂಗ ಭಾಷಾದ ಟೀಮ್‌ ಕುರಿತು ವಿವರವೂ ದೊರಕುತ್ತದೆ. "ಹನುಮಾನ್‌ ನಿರ್ಮಾಪಕರಿಂದ, ರಂಗಿತರಂಗ, ರಾಜರಥ ವಿಕ್ರಾಂತ್‌ ರೋಣ ನಿರ್ದೇಶಕರಿಂದ ಬಿಲ್ಲಾ ರಂಗ ಭಾಷಾ ಸಿನಿಮಾ" ಎಂಬ ಅಪ್‌ಡೇಟ್‌ ಅನ್ನು ಹಂಚಿಕೊಳ್ಳಲಾಗಿದೆ.

ಒಂದಾನೊಂದು ಕಾಲದಲ್ಲಿ ಕ್ರಿ.ಶಕ 2209ರಲ್ಲಿ ಎಂದು ಆರಂಭವಾಗುವ ವಿಡಿಯೋದಲ್ಲಿ ಬಿಲ್ಲಾ ರಂಗ ಭಾಷಾ ಎಂಬ ಮೂವರ ಕಥೆಯನ್ನು ಹೊಂದಿರುವ ಸೂಚನೆಯನ್ನು ಈ ವಿಡಿಯೋ ನೀಡಿದೆ.

ಮ್ಯಾಕ್ಸ್‌ ಬಳಿಕ ಬಿಲ್ಲ ರಂಗ

ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಬಿಲ್ಲ ರಂಗ ಭಾಷಾ ಸಿನಿಮಾದ ಅಪ್‌ಡೇಟ್‌ ದೊರಕಿರುವುದರಿಂದ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಈ ಸಿನಿಮಾಗಳೆರಡರ ನಡುವೆ ಸುದೀಪ್‌ ಅವರು ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಹೋಸ್ಟಿಂಗ್‌ ಮಾಡಬೇಕಿದೆ. ಬಿಲ್ಲಾ ರಂಗ ಭಾಷಾ ಸಿನಿಮಾ ಅನೂಪ್‌ ಭಂಡಾರಿ ಅವರ ಕನಸಿನ ಕೂಸು. ಈ ಸಿನಿಮಾದ ಕಥೆ ಚಿತ್ರಕಥೆ ಇವರದ್ದೇ. ಸುದೀಪ್‌ ಹುಟ್ಟುಹಬ್ಬದಂದು ಈ ಸಿನಿಮಾದ ಕುರಿತು ಅಪ್‌ಡೇಟ್‌ ವಿಡಿಯೋ ದೊರಕಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಇತ್ತೀಚೆಗೆ ಈ ಸಿನಿಮಾದ ಕುರಿತು ಬಾ ರಾಜಾ ಬಾ ಎಂಬ ಸಣ್ಣ ಹಾಡಿನ ತುಣುಕು ಕೇಳಿಸಿದ್ದರು. ಇದೀಗ ಹುಟ್ಟುಹಬ್ಬದಂದು ಈ ವಿಡಿಯೋ ಬಿಡುಗಡೆ ಮಾಡಿ ಅಭಿಮಾನಿಗಳ ಕುತೂಹಲ ತಣಿಸುವ ಯತ್ನ ಮಾಡಿದ್ದಾರೆ.