ಬೆಂಗಳೂರು ಜಯನಗರ ಮೈದಾನದಲ್ಲಿ ಕಿಚ್ಚನ ಭರ್ಜರಿ ಹುಟ್ಟುಹಬ್ಬ, ಅಭಿಮಾನಿಗಳ ಮುಂದೆ ಸುದೀಪ್‌ ಉದುರಿಸಿದ ಅಣಿಮುತ್ತುಗಳಿವು
ಕನ್ನಡ ಸುದ್ದಿ  /  ಮನರಂಜನೆ  /  ಬೆಂಗಳೂರು ಜಯನಗರ ಮೈದಾನದಲ್ಲಿ ಕಿಚ್ಚನ ಭರ್ಜರಿ ಹುಟ್ಟುಹಬ್ಬ, ಅಭಿಮಾನಿಗಳ ಮುಂದೆ ಸುದೀಪ್‌ ಉದುರಿಸಿದ ಅಣಿಮುತ್ತುಗಳಿವು

ಬೆಂಗಳೂರು ಜಯನಗರ ಮೈದಾನದಲ್ಲಿ ಕಿಚ್ಚನ ಭರ್ಜರಿ ಹುಟ್ಟುಹಬ್ಬ, ಅಭಿಮಾನಿಗಳ ಮುಂದೆ ಸುದೀಪ್‌ ಉದುರಿಸಿದ ಅಣಿಮುತ್ತುಗಳಿವು

Sudeep Birthday Event jayanagar: ಕಿಚ್ಚ ಸುದೀಪ್‌ಗೆ ಸೆಪ್ಟೆಂಬರ್‌ 2 ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಅವರು ತನ್ನ ಮನೆಯ ಮುಂದೆ ದಟ್ಟಣೆ ಆಗಬಾರದೆಂಬ ಉದ್ದೇಶದಿಂದ ಜಯನಗರದ ಎಂಇಎಸ್ ಮೈದಾನದಲ್ಲಿ ತನ್ನ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚನ ಬಾಯಿಂದ ಉದುರಿದ ಅಣಿಮುತ್ತುಗಳು ಇಲ್ಲಿವೆ.

ಬೆಂಗಳೂರು ಜಯನಗರ ಮೈದಾನದಲ್ಲಿ ಕಿಚ್ಚ ಸುದೀಪ್‌ ಹುಟ್ಟುಹಬ್ಬ
ಬೆಂಗಳೂರು ಜಯನಗರ ಮೈದಾನದಲ್ಲಿ ಕಿಚ್ಚ ಸುದೀಪ್‌ ಹುಟ್ಟುಹಬ್ಬ

ಬೆಂಗಳೂರು: ಕಿಚ್ಚ ಸುದೀಪ್‌ಗೆ ಸೆಪ್ಟೆಂಬರ್‌ 2 ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಅವರು ತನ್ನ ಮನೆಯ ಮುಂದೆ ದಟ್ಟಣೆ ಆಗಬಾರದೆಂಬ ಉದ್ದೇಶದಿಂದ ಜಯನಗರದ ಎಂಇಎಸ್ ಮೈದಾನದಲ್ಲಿ ತನ್ನ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇವರು ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಅಭಿಮಾನಿಗಳ ಜತೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚನ ಬಾಯಿಂದ ಉದುರಿದ ಅಣಿಮುತ್ತುಗಳು ಇಲ್ಲಿವೆ.

ಪ್ರತಿಹುಟ್ಟುಹಬ್ಬದ ದಿನ ಬಾಗಿಲು ಓಪನ್‌ ಮಾಡ್ತಾ ಇದ್ದಂತೆ ನೀವು ಎಷ್ಟು ಕ್ಯಾಮೆರಾ ಇಟ್ಟಿದ್ದೀರೋ ಅದರಲ್ಲಿ ನಮಗೆ ಗೊತ್ತಾಗ್ತಾ ಇತ್ತು. ಇನ್ನೂ ಚಾಲ್ತಿಯಲ್ಲಿ ಇದ್ದೇನೆ ಎಂದು. ನಿಮ್ಮೆಲ್ಲರಿಗೂ ಧನ್ಯವಾದ. ಈ ಹುಟ್ಟುಹಬ್ಬ ಆಚರಣೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ. ನನ್ನ ಎಲ್ಲಾ ಸಂಘದ ಮಿತ್ರರಿಗೂ ಧನ್ಯವಾದ. ಕಾರ್ಪೊರೇಟರ್‌ಗಳಿಗೂ ಧನ್ಯವಾದ. ನೀವಿಲ್ಲದೆ ನಾವಿಲ್ಲ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಮೇಡಂ ನೀವು ಹೇಳಿದ್ರಿ ನನ್ನಲ್ಲಿರುವ ಶಿಸ್ತು ನಿಮ್ಮಲ್ಲಿ ಒಂದು ಪರ್ಸೆಂಟ್‌ ಬೇಕಿತ್ತು ಎಂದು. ಆದರೆ, ಇದು ಅಭಿಮಾನಿಗಳ ಪ್ರತಿಬಿಂಬ. ನಾವು ಹೋದಲೆಲ್ಲ ತಲೆ ಎತ್ತಿಕೊಂಡು ಓಡಾಡಿಕೊಂಡು ಇರಲು ಆಗತ್ತದೆ ಎಂದರೆ ಅದಕ್ಕೆ ಅಭಿಮಾನಿಗಳೇ ಕಾರಣ. ನಾವು ಸಂಪಾದನೆ ಮಾಡಿರುವ ನಮ್ಮ ಹೆಸರಿಗೆ ಕಳಂಕ ತರುವ ಯಾವುದೇ ಕೆಲಸವನ್ನು ಇವರು ಮಾಡಿಲ್ಲ, ಮಾಡುವುದಿಲ್ಲ. ಅದು ಬಹಳಷ್ಟು ಮುಖ್ಯವಾಗುತ್ತದೆ. ಇದನ್ನು ಪದೇ ಪದೇ ಹೇಳಲು ಕಾರಣ, ಸಿನಿಮಾ ನಾವೆಲ್ಲರೂ ಮಾಡುತ್ತೇವೆ. ಪ್ರತಿಯೊಬ್ಬ ಕಲಾವಿದರು ದೊಡ್ಡದೊಡ್ಡ ಸಿನಿಮಾ ಮಾಡ್ತಾರೆ. ವ್ಯಕ್ತಿತ್ವದಲ್ಲಿ ದೊಡ್ಡವರಾಗಲು ಬರೀ ಸಿನಿಮಾ ಸಾಕಾಗೋದಿಲ್ಲ. ನಮ್ಮ ಅಕ್ಕಪಕ್ಕ ಇರುವ ನಮ್ಮ ಸ್ನೇಹಿತರು, ನಮ್ಮ ಕುಟುಂಬ, ನಮ್ಮ ಮಾಧ್ಯಮ ಮಿತ್ರರು.. .ಇವರೆಲ್ಲರೂ ನನ್ನ ಜೀವನದಲ್ಲಿ ಚೆನ್ನಾಗಿದ್ದಾರೆ ಮೇಡಂ, ಅದಕ್ಕೆ ನಾನು ಚೆನ್ನಾಗಿದ್ದೇನೆ ಎಂದು ಸುದೀಪ್‌ ಹೇಳಿದ್ದಾರೆ.

ಮನೆಯ ಹತ್ರ ಹುಟ್ಟುಹಬ್ಬ ಬೇಡ ಎಂದು ಇಲ್ಲಿಗೆ ಬಂದೆ: ಸುದೀಪ್‌

ಕ್ಷಮಿಸಿಬಿಡಿ ಎಲ್ಲರೂ, ಮನೆ ಹತ್ರ ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗಲಿಲ್ಲ. ನನ್ನ ತಂದೆಗೆ ತಾಯಿಗೆ 85 ಮತ್ತು 86 ವರ್ಷ. ನಮ್ಮ ಸುತ್ತಮುತ್ತ ಇರುವ ಮನೆಯವರಿಗೂ ತೊಂದರೆಯಾಗಬಾರದು. ಬ್ಯಾರಿಕೇಡ್‌ ಎಲ್ಲಾ ಮುರಿದು ನನ್ನ ಪ್ರೀತಿಯ ಪೊಲೀಸ್‌ ಸಿಬ್ಬಂದಿಗಳಿಗೆ ಆದ ತೊಂದರೆಯಿಂದಾಗಿ... ಎಲ್ಲರೂ ಕೇಳಿಕೊಂಡದ್ದು.. ಮನೆಯ ಹತ್ರ ಬೇಡ ಎಂದು. ಅದಕೋಸ್ಕರ ಇಲ್ಲಿಗೆ ಬಂದೆ. ತಮ್ಮನ್ನು ಭೇಟಿ ಮಾಡಬಾರದು ಎಂದಲ್ಲ. ಆ ಕ್ಷಮೆ ನಿಮ್ಮಲ್ಲಿ ಇರಲಿ. ಎಲ್ಲರಿಗೂ ಧನ್ಯವಾದ" ಎಂದು ಸುದೀಪ್‌ ಹೇಳಿದ್ದಾರೆ.

"ನಿಮ್ಮ ತರಹನೇ ನಾನು ಕೂಡ ನಿಮ್ಮಲ್ಲಿ ಪ್ರೀತಿ ಇಟ್ಟಿದ್ದೇನೆ. ನಾವು ಬೆಳಗ್ಗೆ ಎದ್ದು ಮುಖಕ್ಕೆ ಮೇಕಪ್‌ ಹಾಕುವುದು ನಿಮಗೋಸ್ಕರ. ನೀವು ಎಷ್ಟು ದಿನ ನೋಡಲು ಬಯಸುವಿರೋ ಅಷ್ಟು ದಿನ ನಟಿಸ್ತಾ ಇರುತ್ತೇನೆ. ಹುಟ್ಟುಹಬ್ಬದಂದು ರಾತ್ರಿ 12 ಗಂಟೆಗೆ ಬರುವ ಕೂಗು... ನನ್ನನ್ನು ತಗ್ಗಿ ಬಗ್ಗಿ ಇರುವಂತೆ ಮಾಡುತ್ತದೆ. ಎಲ್ಲರಿಗೂ ಥ್ಯಾಂಕ್ಸ್‌. ಥ್ಯಾಂಕ್‌ ಯು ಸೋ ಮಚ್‌" ಎಂದು ಸುದೀಪ್‌ ಹೇಳಿದ್ದಾರೆ.

ಅಭಿಮಾನಿಗಳ ಒಳ್ಳೆಯತನಕ್ಕೆ ವಾತಾವರಣ ಕಾರಣ

"ಅಭಿಮಾನಿಗಳ ಎಲ್ಲರ ಒಳ್ಳೆಯ ಕೆಲಸ ನನ್ನಿಂದಾಗಿ ಆಗುತ್ತದೆ ಎಂದಲ್ಲ. ಆ ಒಳ್ಳೆಯ ಕೆಲಸಕ್ಕೆ ಅವರ ತಂದೆ ತಾಯಿಗೆ ಸಲ್ಲುತ್ತದೆ. ಅವರ ಊರಿಗೆ, ವಾತಾವರಣಕ್ಕೆ ಸಲುತ್ತದೆ. ಅವರು ಯಾವ ವಾತಾವರಣದಲ್ಲಿ ಬೆಳೆಯುತ್ತಾರೆ ಅದು ಕಾರಣ. ನನ್ನ ಫ್ಯಾನ್ಸ್‌ನಲ್ಲಿ ಒಳ್ಳೆಯತನ ಇದೆ ಮೇಡಂ. ಅದಕ್ಕೆ ನಾವು ಇಷ್ಟು ಒಳ್ಳೆಯವರು. ಅದರಲ್ಲಿ ಡೌಟೇ ಇಲ್ಲ" ಎಂದು ಸುದೀಪ್‌ ಹೇಳಿದ್ದಾರೆ.

ಮ್ಯಾಕ್ಸ್‌ ಸಿನಿಮಾ ರಿಲೀಸ್‌ ಯಾವಾಗ?

ಸುದೀಪ್‌ಗೆ ಮ್ಯಾಕ್ಸ್‌ ಸಿನಿಮಾದ ಅಪ್‌ಡೇಟ್‌ ಕುರಿತು ಪ್ರಶ್ನೆ ಕೇಳಿದಾಗ "ತಾಳಿದವನು ಬಾಳಿಯನು" ಎಂದು ಹೇಳಿದ ಸುದೀಪ್‌ "ಸಿನಿಮಾ ಮಾಡೋದಷ್ಟೇ ನನ್ನ ಕೆಲಸ ಮೇಡಂ. ಯಾವುದೇ ಅಹಂ ಇಲ್ಲ. ಆ ಸಿನಿಮಾದಲ್ಲಿ ತುಂಬಾ ಜನ ಇನ್‌ವಾಲ್ವ್‌ ಆಗಿರುತ್ತಾರೆ. ತಡ ಆಗಿರುತ್ತದೆ. ಸಿನಿಮಾ ಬರುವ ಟೈಮ್‌ನಲ್ಲಿ ಬರುತ್ತದೆ. ಅಲ್ಲಿಯವರೆಗೆ ನಮ್ಮ ಎಲ್ಲಾ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾ ಇರಿ" ಎಂದು ಸುದೀಪ್‌ ಹೇಳಿದ್ದಾರೆ.

Whats_app_banner