ಕನ್ನಡ ಸುದ್ದಿ  /  ಮನರಂಜನೆ  /  ಹುಚ್ಚ, ಕೆಂಪೇಗೌಡದಂತೆ ಗೂಸ್‌ಬಂಪ್ಸ್‌ ನೀಡುತ್ತೆ ಮ್ಯಾಕ್ಸ್‌; ಸುದೀಪ್‌ ಸಿನಿಮಾದ ವಿಡಿಯೋ ನೋಡಿ ಅಚ್ಚರಿಗೊಂಡ ಇಂದ್ರಜಿತ್‌ ಲಂಕೇಶ್‌

ಹುಚ್ಚ, ಕೆಂಪೇಗೌಡದಂತೆ ಗೂಸ್‌ಬಂಪ್ಸ್‌ ನೀಡುತ್ತೆ ಮ್ಯಾಕ್ಸ್‌; ಸುದೀಪ್‌ ಸಿನಿಮಾದ ವಿಡಿಯೋ ನೋಡಿ ಅಚ್ಚರಿಗೊಂಡ ಇಂದ್ರಜಿತ್‌ ಲಂಕೇಶ್‌

Max Sudeep Movie: ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮಹಾಬಲಿಪುರಂನಲ್ಲಿ ಮ್ಯಾಕ್ಸ್‌ ಫೈಟಿಂಗ್‌ ಸೀನ್‌ ಶೂಟಿಂಗ್‌ ನಡೆಯುತ್ತಿದೆ. ಇದೀಗ ಮ್ಯಾಕ್ಸ್‌ ಸಿನಿಮಾದ 10 ನಿಮಿಷದ ಶೋ ರೀಲ್‌ ನೋಡಿರುವ ಇಂದ್ರಜಿತ್‌ ಲಂಕೇಶ್‌ ಆ ಅನುಭವ ಹಂಚಿಕೊಂಡಿದ್ದಾರೆ.

ಸುದೀಪ್‌ ಮತ್ತು ಇಂದ್ರಜಿತ್‌ ಲಂಕೇಶ್‌
ಸುದೀಪ್‌ ಮತ್ತು ಇಂದ್ರಜಿತ್‌ ಲಂಕೇಶ್‌

ಬೆಂಗಳೂರು: ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಯಾವಾಗ ರಿಲೀಸ್‌ ಆಗಲಿದೆ? ಟ್ರೇಲರ್‌, ಗ್ಲಿಂಪ್ಸ್‌ ಏನಾದರೂ ರಿಲೀಸ್‌ ಆಗುತ್ತಾ ಎಂದು ಫ್ಯಾನ್ಸ್‌ ಕಾಯುತ್ತಿದ್ದಾರೆ. ಆದರೆ, ಚಿತ್ರತಂಡವು ಮ್ಯಾಕ್ಸ್‌ ಶೂಟಿಂಗ್‌ ವಿಷಯಗಳನ್ನು ಸಾಕಷ್ಟು ಗೌಪ್ಯವಾಗಿ ಇಟ್ಟಿದೆ. ಇದೀಗ ಮ್ಯಾಕ್ಸ್‌ ಸಿನಿಮಾದ ಹತ್ತು ನಿಮಿಷದ ಶೋ ರೀಲ್‌ ಅನ್ನು ಇಂದ್ರಜಿತ್‌ ಲಂಕೇಶ್‌ ನೋಡಿದ್ದಾರೆ. ಈ ರೀಲ್‌ ನೋಡಿದಾಗ ನಿಜಕ್ಕೂ ಆಶ್ಚರ್ಯವಾಯಿತು. ಸುದೀಪ್‌ ಸೂಪರ್‌ ಆಗಿ ನಟಿಸಿದ್ದಾರೆ ಎಂದು ಇಂದ್ರಜಿತ್‌ ಲಂಕೇಶ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮ್ಯಾಕ್ಸ್‌ ಸಿನಿಮಾದಲ್ಲಿ ಗೂಸ್‌ಬಂಪ್‌ ಗ್ಯಾರಂಟಿ

"ಬಹುದಿನಗಳ ನಂತರ ಗೆಳೆಯ ಸುದೀಪ್‌ರನ್ನು ಭೇಟಿ ಮಾಡಿದ್ದು ತುಂಬಾ ಖುಷಿ ಆಯ್ತು. ಮಹಾಬಲಿಪುರಂನಲ್ಲಿ ಶೂಟಿಂಗ್ ನಡೆಯುತ್ತಿದ್ದ ಜಾಗದಿಂದ ಸುದೀಪ್ ಉಳಿದುಕೊಂಡಿದ್ದ ಹೋಟೆಲ್‌ವರೆಗೆ ಎರಡೂವರೆ ಗಂಟೆಗಳ ನಮಿಬ್ಬರ ಪಯಣ. ಈ ಪಯಣದುದ್ದಕ್ಕೂ ಹರಟೆ, ತಮಾಷೆ, ಹೊಟ್ಟೆ ಹುಣ್ಣಾಗುವಷ್ಟು ನಗು. ತಡ ರಾತ್ರಿ 3 ಗಂಟೆವರೆಗೂ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ" ಎಂದು ಇಂದ್ರಜಿತ್‌ ಲಂಕೇಶ್‌ ಹೇಳಿದ್ದಾರೆ.

"ಅಲ್ಲಿಂದ ಹೊರಡುವಾಗ ಗೆಳೆಯ ಸುದೀಪ್ ಮ್ಯಾಕ್ಸ್ ಚಿತ್ರದ 10 ನಿಮಿಷಗಳ ಶೋ ರೀಲ್ ತೋರಿಸಿದರು. ನಿಜಕ್ಕೂ ಅದ್ಭುತವಾಗಿತ್ತು. ಅಲ್ಲಿಂದ ಬೆಂಗಳೂರಿಗೆ ಬರುವಾಗ ನನ್ನ ಕಣ್ಣೆದುರು ಮ್ಯಾಕ್ಸ್‌ನ ಒಂದೊಂದು ಶಾಟ್ಸ್ ಗಳು ಕಾಡತೊಡಗಿದವು. ಸುದೀಪ್ ಅವರ ಆಕ್ಷನ್, ಆಟಿಟ್ಯೂಡ್‌, ಬಾಡಿ ಲ್ಯಾಂಗ್ವೇಜ್‌ಸೂಪರ್. ಸುದೀಪ್ ನಿಜಕ್ಕೂ ಪ್ಯಾನ್‌ ಇಂಡಿಯಾ ಮಾಸ್‌ ಹೀರೋ! ಹುಚ್ಚ , ಕೆಂಪೇಗೌಡ ಸಿನೆಮಾವಷ್ಟೇ ಆಕರ್ಷಣೆ ಗೋಸ್‌ಬಂಪ್ಸ್‌ ನೀಡಿದ್ದು ಮ್ಯಾಕ್ಸ್! MAX ಸಿನಿಮಾ is a real mass maximum!" ಎಂದು ಇಂದ್ರಜಿತ್‌ ಲಂಕೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ಮಹಾಬಲಿಪುರಂನಲ್ಲಿ ಶೂಟಿಂಗ್‌

ಸದ್ಯ ಮ್ಯಾಕ್ಸ್‌ ಸಿನಿಮಾದ ಆಕ್ಷನ್‌ ಶೂಟಿಂಗ್‌ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿದೆ. ಕಳೆದ ಹತ್ತು ದಿನಗಳಿಂದ ಈ ಶೂಟಿಂಗ್‌ ನಡೆಯುತ್ತಿದೆ. ದ್ವಾರಕೀಶ್‌ ನಿಧನಗೊಂಡ ಸಮಯದಲ್ಲಿ ಸುದೀಪ್‌ ಶೂಟಿಂಗ್‌ಗೆ ಬ್ರೇಕ್‌ ಹಾಕಿ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಮತ್ತೆ ಮಹಾಬಲಿಪುರಂಗೆ ಹೋಗಿ ಶೂಟಿಂಗ್‌ ಮುಂದುವರೆಸಿದ್ದಾರೆ. ಇಲ್ಲಿಯವರೆಗೆ ಮ್ಯಾಕ್ಸ್‌ನ ಫಸದ್ಟ್‌ ಲುಕ್‌ ಮತ್ತು ಎರಡು ಟೀಸರ್‌ ರಿಲೀಸ್‌ ಆಗಿದೆ. ಶೂಟಿಂಗ್‌ ಸೆಟ್‌ನಲ್ಲಿ ಫೋಟೋ, ವಿಡಿಯೋ ತೆಗೆಯುವಂತೆ ಇಲ್ಲ. ಚಿತ್ರತಂಡವು ಮ್ಯಾಕ್ಸ್‌ನ ಯಾವುದೇ ವಿಷಯ ಲೀಕ್‌ ಆಗದಂತೆ ಎಚ್ಚರಿಕೆ ವಹಿಸಿದೆ. ಇದೀಗ ಸುದೀಪ್‌ ಅವರು ತಮ್ಮ ಗೆಳೆಯ ಇಂದ್ರಜಿತ್‌ ಲಂಕೇಶ್‌ಗೆ ಶೋ ರೀಲ್ಸ್‌ ತೋರಿಸಿದ್ದಾರೆ. ಈ ಶಾಟ್ಸ್‌ಗಳನ್ನು ನೋಡಿ ಇಂದ್ರಜಿತ್‌ ನಿಜಕ್ಕೂ ಥ್ರಿಲ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಆ ಖುಷಿಯನ್ನು ಹಂಚಿಕೊಂಡಿದ್ದಾರೆ.

ಮ್ಯಾಕ್ಸ್‌ ಪ್ಯಾನ್‌ ಇಂಡಿಯಾ ಸಿನಿಮಾ

ಮ್ಯಾಕ್ಸ್‌ ಸಿನಿಮಾದ ಶೂಟಿಂಗ್‌ ಅಂತಿಮ ಹಂತದಲ್ಲಿದೆ. ಇದು ಒಂದು ಪಕ್ಕಾ ಕಮರ್ಷಿಯಲ್‌ ಬ್ಯಾಕ್‌ಡ್ರಾಪ್‌ನಲ್ಲಿ ನಿರ್ಮಾಣವಾಗುತ್ತಿರುವ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ. ಇದು ಪ್ಯಾನ್‌ ಇಂಡಿಯ ಚಿತ್ರವೂ ಹೌದು. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ಮ್ಯಾಕ್ಸ್‌ ನಿರ್ಮಾಣವಾಗುತ್ತಿದೆ. ಸಿನಿಮಾ ಶೂಟಿಂಗ್‌ ಸಹ ಸಮರೋಪಾದಿಯಲ್ಲಿ ನಡೆಯುತ್ತಿದೆ. ಕಿಚ್ಚನ ಹುಟ್ಟುಹಬ್ಬದಂದು ಮ್ಯಾಕ್ಸ್‌ ಸಿನಿಮಾದ ಟೀಸರ್‌ ರಿಲೀಸ್‌ ಆಗಿತ್ತು.

ತಮಿಳಿನಲ್ಲಿ ತುಪಾಕಿ, ಕಬಾಲಿ, ಕರ್ಣನ್‌, ಅಸುರನ್‌ ಸೇರಿ ದೊಡ್ಡ ದೊಡ್ಡ ಹಿಟ್‌ ಮತ್ತು ಹೈ ಬಜೆಟ್‌ ಸಿನಿಮಾಗಳನ್ನು ನೀಡಿದ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ವಿ ಕ್ರಿಯೆಷನ್ಸ್‌ ಬ್ಯಾನರ್‌ನಲ್ಲಿ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ರೆಡಿಯಾಗುತ್ತಿದೆ. ಮ್ಯಾಕ್ಸ್‌ಗೆ ಕಲೈಪುಲಿ ಎಸ್‌ ಧಾನು ನಿರ್ಮಾಫಕರು. ವಿಜಯ್‌ ಕಾರ್ತಿಕೇಯ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತವಿದೆ.

IPL_Entry_Point