ಕನ್ನಡ ಸುದ್ದಿ  /  ಮನರಂಜನೆ  /  Max Movie: ಮ್ಯಾಕ್ಸ್‌ ಸಿನಿಮಾ ರಿಲೀಸ್‌ ಯಾವಾಗ? ಇನ್‌ಸ್ಪೆಕ್ಟರ್‌ ಅರ್ಜುನ್‌ ಮಹಾಕ್ಷಯ್‌ ಸಾಹಸ ನೋಡಲು ಕಾತರಗೊಂಡ ಕಿಚ್ಚ ಸುದೀಪ್‌ ಫ್ಯಾನ್ಸ್‌

Max Movie: ಮ್ಯಾಕ್ಸ್‌ ಸಿನಿಮಾ ರಿಲೀಸ್‌ ಯಾವಾಗ? ಇನ್‌ಸ್ಪೆಕ್ಟರ್‌ ಅರ್ಜುನ್‌ ಮಹಾಕ್ಷಯ್‌ ಸಾಹಸ ನೋಡಲು ಕಾತರಗೊಂಡ ಕಿಚ್ಚ ಸುದೀಪ್‌ ಫ್ಯಾನ್ಸ್‌

Kiccha Sudeep Max Movie: ಸ್ಯಾಂಡಲ್‌ವುಡ್‌ ಬಾದ್‌ಶಾ ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದ ಸ್ಟಂಟ್‌ ಮಾಸ್ಟರ್‌ ಚೇತನ್‌ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ ಬಳಿಕ ಮ್ಯಾಕ್ಸ್‌ ಬಿಡುಗಡೆ ಕುರಿತು ಕಿಚ್ಚನ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ.

ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ರಿಲೀಸ್‌ ಯಾವಾಗ?
ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ರಿಲೀಸ್‌ ಯಾವಾಗ?

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಮ್ಯಾಕ್ಸ್‌ ಸಿನಿಮಾದ ಕುರಿತು ಕಿಚ್ಚನ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ. ಇತ್ತೀಚೆಗೆ ಸ್ಟಂಟ್‌ ಮಾಸ್ಟರ್‌ ಚೇತನ್‌ ಡಿಸೋಜಾ ಅವರು ಕ್ಲೈಮ್ಯಾಕ್ಸ್‌ ಮತ್ತು ಇಂಟ್ರೋ ಮತ್ತು ಇತರೆ ಸೀನ್‌ಗಳ 43 ದಿನಗಳ ಶೂಟಿಂಗ್‌ ಮುಗಿಸಿರುವ ಕುರಿತು ಅಪ್‌ಡೇಟ್‌ ನೀಡಿದ್ದಾರೆ. ಮ್ಯಾಕ್ಸ್‌ನ ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಇತ್ಯಾದಿ ಕೆಲಸಗಳಲ್ಲಿ ಚಿತ್ರತಂಡ ಬಿಝಿಯಾಗಿದ್ದು, ಸದ್ಯದಲ್ಲಿಯೇ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಚಿತ್ರದಲ್ಲಿ ಸುದೀಪ್‌ ಇನ್‌ಸ್ಪೆಕ್ಟರ್‌ ಅರ್ಜುನ್‌ ಮಹಾಕ್ಷಯ್‌ ಪಾತ್ರದಲ್ಲಿ ನಟಿಸಿದ್ದಾರೆ. ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಅರ್ಜುನ್‌ ಮಹಾಕ್ಷಯ್‌ನ ಸಾಹಸವನ್ನು ಕಣ್ತುಂಬಿಕೊಳ್ಳಲು ಕಾತರಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅರ್ಜುನ್‌ ಮಹಾಕ್ಷಯ್‌ ಸಾಹಸ ನೋಡಲು ಕಾತರ

ಕಿಚ್ಚ ಸುದೀಪ್‌ ಅವರ ಸಿನಿಮಾವೊಂದು ಬಿಡುಗಡೆಯಾಗಿ ಸುಮಾರು ಎರಡು ವರ್ಷ ಕಳೆದಿದೆ. ಈ ನಡುವೆ ಕೆಲವೊಂದು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ವಿಕ್ರಾಂತ್‌ ರೋಣಾದ ಬಳಿಕ ಸುದೀಪ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ರಿಲೀಸ್‌ ಆಗಿರಲಿಲ್ಲ. ಬಿಗ್‌ಬಾಸ್‌ ಮತ್ತು ಇತರೆ ಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ಮ್ಯಾಕ್ಸ್‌ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದರು. ಜತೆಗೆ, ಮ್ಯಾಕ್ಸ್‌ ಪ್ಯಾನ್‌ ಇಂಡಿಯಾ ಸಿನಿಮಾ. ದೊಡ್ಡ ಮಟ್ಟದ ಹಿಟ್‌ ನಿರೀಕ್ಷೆಯನ್ನಿಟ್ಟುಕೊಂಡು ಮ್ಯಾಕ್ಸ್‌ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಈ ಸಿನಿಮಾದ ಮೂಲಕ ಕಿಚ್ಚ ಸುದೀಪ್‌ ದೇಶಾದ್ಯಾಂತ ಮತ್ತೆ ಮನೆಮಾತಾಗುವ ನಿರೀಕ್ಷೆಯಲ್ಲಿ ಫ್ಯಾನ್ಸ್‌ ಇದ್ದಾರೆ.

ಸುದೀಪ್‌ ಅವರ ಮುಂದಿನ ಸಿನಿಮಾದ ಕುರಿತೂ ವದಂತಿಗಳಿವೆ. ವೆಂಕಟ ಪ್ರಭು, ನಂದಕಿಶೋರ್‌, ಆರ್‌ ಚಂದ್ರು ಮುಂತಾದವರ ಜತೆ ಸಿನಿಮಾ ಮಾಡುವ ಸೂಚನೆಗಳಿದ್ದವು. ಇದೇ ಸಮಯದಲ್ಲಿ ಸಿನಿಮಾವೊಂದಕ್ಕೆ ಸುದೀಪ್‌ ಆಕ್ಷನ್‌ ಕಟ್‌ ಹೇಳುವ ಸೂಚನೆಗಳೂ ಇವೆ. ನಿರ್ಮಾಪಕ ಕಲೈಪುಲಿ ತನು ಅವರು ತನ್ನ ಮುಂದಿನ ಸಿನಿಮಾಖ್ಕೆ ಸುದೀಪ್‌ ಹೀರೋ ಎಂದು ಹೇಳಿದ್ದಾರೆ. ಈ ಸಿನಿಮಾವನ್ನು ವಿಜಯ್‌ ಕಾರ್ತಿಕೇಯ ನಿರ್ದೇಶಿಸಲಿದ್ದಾರೆ.

ಕಳೆದ ಹಲವು ದಿನಗಳಿಂದ ಸುದೀಪ್‌ ಮ್ಯಾಕ್ಸ್‌ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದರು. ಹಲವು ತಿಂಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಇದೇ ಸಮಯದಲ್ಲಿ ಕಿಚ್ಚನ ಅಭಿಮಾನಿಗಳು ತುಸು ತಾಳ್ಮೆ ಕಳೆದುಕೊಂಡಿದ್ದಾರೆ. ಮ್ಯಾಕ್ಸ್‌ ಬಗ್ಗೆ ಏನಾದರೂ ಅಪ್‌ಡೇಟ್‌ ನೀಡುವಂತೆ ಕೇಳಿಕೊಳ್ಳುತ್ತಿದರು. ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತ ಸುದೀಪ್‌ ಅಭಿಮಾನಿಗಳನ್ನು ಕೂಲ್‌ ಆಗಿಡಲು ಪ್ರಯತ್ನಿಸುತ್ತಿದ್ದಾರೆ.

ಚಿತ್ರತಂಡ ಇಲ್ಲಿಯವರೆಗೆ ಕಿಚ್ಚನ ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸಿಲ್ಲ. ಕಿಚ್ಚನ ಹುಟ್ಟುಹಬ್ಬದಂದು ಬಿಡುಗಡೆ ಮಾಡಿರುವ ಫಸ್ಟ್‌ ಲುಕ್‌ ಹೊರತುಪಡಿಸಿ ಬೇರಾವುದೇ ಪ್ರಮುಖ ಗ್ಲಿಂಪ್ಸ್‌ ಬಿಡುಗಡೆ ಮಾಡಿಲ್ಲ. ಇದೀಗ ಸ್ಟಂಟ್‌ ಕೊರಿಯೊಗ್ರಾಫರ್‌ ಚೇತನ್‌ ಡಿಸೋಜಾ ಮ್ಯಾಕ್ಸ್‌ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ. ಮ್ಯಾಕ್ಸ್‌ನ ಪ್ರಮುಖ ಸಾಹಸ ದೃಶ್ಯಗಳ 43 ದಿನಗಳ ಶೂಟಿಂಗ್‌ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.

"ಅಕ್ಟೋಬರ್‌ 23ರಿಂದ ಈ ಪ್ರಾಜೆಕ್ಟ್‌ ವೇಗಗೊಂಡಿದೆ. ಸಾಕಷ್ಟು ವಿಷಯಗಳನ್ನು ಕಲಿಸಿದೆ. ಈ ಸಿನಿಮಾದ ಪಾತ್ರಗಳ ಇಂಟ್ರೋ ಮತ್ತು ಪ್ರಮುಖ ಕ್ಲೈಮ್ಯಾಕ್ಸ್‌ ಹಾಗೂ ಕೆಲವು ಇತರೆ ದೃಶ್ಯಗಳ ಶೂಟಿಂಗ್‌ ಪೂರ್ಣಗೊಂಡಿದೆ" ಎಂದು ಅವರು ಹೇಳಿದ್ದಾರೆ. "ಸುದೀಪ್‌ ಸರ್‌ ಜತೆ ಕೆಲಸ ಮಾಡುವುದು ಅನನ್ಯ ಅನುಭವ. ರನ್ನ (2014) ಹಾಡಿನಿಂದ ಈಗಿನ ಸಾಹಸ ನಿರ್ದೇಶನದವರೆಗೆ ಅದ್ಭುತ ಪ್ರಯಾಣ ಇದಾಗಿದೆ" ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ಈ ಅಪ್‌ಡೇಟ್‌ ದೊರಕಿದ ತಕ್ಷಣ ಕಿಚ್ಚನ ಫ್ಯಾನ್ಸ್‌ ಮತ್ತೆ ಆಕ್ಟಿವ್‌ ಆಗಿದ್ದಾರೆ. "ಮ್ಯಾಕ್ಸ್‌ ತೂಫಾನ್‌ಗೆ ಸಜ್ಜಾಗಿ" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. "ಮತ್ತೊಂದು ಬ್ಲಾಕ್‌ಬಸ್ಟರ್‌ ಸಿನಿಮಾ ಸದ್ಯದಲ್ಲಿಯೇ" "ಅರ್ಜುನ್‌ ಮಹಾಕ್ಷಯ್‌ನ ನೋಡಲು ಕಾಯುತ್ತಿದ್ದೇವೆ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

IPL_Entry_Point