ಚಿತ್ರರಂಗದಿಂದ ಬ್ಯಾನ್ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವುದು ಮುಖ್ಯ; ದರ್ಶನ್ ಪ್ರಕರಣದ ಬಗ್ಗೆ ಸುದೀಪ್ ಹೇಳಿಕೆ
ಕನ್ನಡ ಸುದ್ದಿ  /  ಮನರಂಜನೆ  /  ಚಿತ್ರರಂಗದಿಂದ ಬ್ಯಾನ್ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವುದು ಮುಖ್ಯ; ದರ್ಶನ್ ಪ್ರಕರಣದ ಬಗ್ಗೆ ಸುದೀಪ್ ಹೇಳಿಕೆ

ಚಿತ್ರರಂಗದಿಂದ ಬ್ಯಾನ್ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವುದು ಮುಖ್ಯ; ದರ್ಶನ್ ಪ್ರಕರಣದ ಬಗ್ಗೆ ಸುದೀಪ್ ಹೇಳಿಕೆ

ಸೆಲೆಬ್ರಿಟಿಗಳು ದೇವರಲ್ಲ, ಅವರನ್ನೂ ಒಬ್ಬರಂತೆ ನಡೆಸಿಕೊಳ್ಳಬೇಕು ಎಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ ಬಂಧನ ಆಗಿರುವ ಬಗ್ಗೆ ಕಿಚ್ಚ ಸುದೀಪ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಚಿತ್ರರಂಗದಿಂದ ಬ್ಯಾನ್ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವುದು ಮುಖ್ಯ; ದರ್ಶನ್ ಪ್ರಕರಣದ ಬಗ್ಗೆ ಸುದೀಪ್ ಹೇಳಿಕೆ
ಚಿತ್ರರಂಗದಿಂದ ಬ್ಯಾನ್ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವುದು ಮುಖ್ಯ; ದರ್ಶನ್ ಪ್ರಕರಣದ ಬಗ್ಗೆ ಸುದೀಪ್ ಹೇಳಿಕೆ

ಬೆಂಗಳೂರು: ಚಿತ್ರರಂಗದಿಂದ ಬ್ಯಾನ್ ಮಾಡುವುದರಿಂದ ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸುವುದು ಮುಖ್ಯವಾಗಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಹೇಳಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder case) ನಟ ದರ್ಶನ್ ಬಂಧನದ (Actor Darshan Arrest) ಬಗ್ಗೆ ಇದೇ ಮೊದಲ ಬಾರಿಗೆ ನಟ ಸುದೀಪ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಸೆಲೆಬ್ರಿಟಿಗಳು ದೇವರಲ್ಲ, ಅಲ್ಲದೆ, ಒಬ್ಬರು ದೇವರಂತೆ ಇರಬೇಕೆಂದು ಒತ್ತಡ ಹೇರಬಾರದು. ಏಕೆಂದರೆ ಮನುಷ್ಯರು ತಪ್ಪು ಮಾಡುತ್ತಾರೆ. ಹೀರೋಗಳು ಸಹ ಫ್ಲಾಪ್ ಆಗುತ್ತಾರೆ ಎಂದು ಹೇಳಿದ್ದಾರೆ. ಒಂದು ಕಾಲದಲ್ಲಿ ತಮ್ಮ ಆಪ್ತ ಸ್ನೇಹಿತರಾಗಿದ್ದ ದರ್ಶನ್ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಪ್ರಶ್ನೆಗೆ ಉತ್ತರಿಸಿರುವ ಸುದೀಪ್, ನ್ಯಾಯವೇ ಬೇರೆ, ಸ್ನೇಹ, ಸಂಬಂಧಗಳೇ ಬೇರೆಯಾಗಿರುತ್ತದೆ ಎಂದಿದ್ದಾರೆ.

ಏನಾದರೂ ಪತ್ತೆಯಾದಾಗ ಚಿಕಿತ್ಸೆ ಮಾತ್ರ ಪರಿಹಾರ

ಕೆಲವೊಮ್ಮೆ ನಮ್ಮಿಂದ ಏನೂ ತಪ್ಪಿಲ್ಲ ಎಂದು ನಾವು ವೈದ್ಯರ ಬಳಿಗೆ ಹೋಗುತ್ತೇವೆ. ಆದರೆ ಏನಾದರೂ ಪತ್ತೆಯಾದಾಗ ಚಿಕಿತ್ಸೆ ಮಾತ್ರ ಪರಿಹಾರವಾಗಿದೆ. ನ್ಯಾಯಾಧೀಶರು ದರ್ಶನ್ ಪ್ರಕರಣದಲ್ಲಿ ಅಂತಿಮವಾಗಿ ತೀರ್ಪು ನೀಡುತ್ತಾರೆ. ಅದಕ್ಕೆ ತಲೆಬಾಗಬೇಕು. ಇದೀಗ ನನ್ನ ನೆನಪಿಗೆ ಬರುವುದು ಮೃತ ರೇಣುಕಾಸ್ವಾಮಿ ಕುಟುಂಬ ಮಾತ್ರ. ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಬೀದಿ ಹೆಣವಾಗಿದ್ದಕ್ಕೆ ಆತನ ಹೆಂಡತಿಗೆ, ಮುಂದೆ ಹುಟ್ಟಿ ಬರುವ ಮಗುವಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳು, ಪೊಲೀಸರು, ಮಾಧ್ಯಮದವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಂದರೆ ನಾನು ಅದನ್ನು ಬೆಂಬಲಿಸುತ್ತೇನೆ. ನನ್ನ ಅಭಿಪ್ರಾಯ ವ್ಯಕ್ತಪಡಿಸಲು ನಾನು ಯಾರ ಪರವಾಗಿಯೋ ಅಥವಾ ವಿರೋಧಿಯೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು, ಇಲ್ಲಿ ಆರೋಪಿ ಯಾರು, ಯಾಕೆ ಈ ಕೃತ್ಯ ಮಾಡಿದ್ದಾನೆ ಎಂಬ ಸತ್ಯಾಂಶ ಹೊರಬಂದು, ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ. ಚಿತ್ರದುರ್ಗ, ಶಿವಮೊಗ್ಗ ಅಂತ ಅಲ್ಲ, ಕರ್ನಾಟಕದ ಯಾವುದೇ ಮೂಲೆಯಲ್ಲೂ ಅನ್ಯಾಯವಾದರೆ ಅವರಿಗೆ ಸೂಕ್ತ ನ್ಯಾಯ ಸಿಗಬೇಕೆಂಬುದು ನನ್ನ ವಾದವಾಗಿದೆ ಎಂದು ಸುದೀಪ್ ಹೇಳಿದ್ದಾರೆ.

ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂಬ ಏಕೈಕ ಆರೋಪದ ಮೇಲೆ ನಟ ದರ್ಶನ್ ಅಂಡ್ ಗ್ಯಾಂಗ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಬೆಂಗಳೂರಿಗೆ ಕರೆತಂದು ಅಮಾನುಷವಾಗಿ ಹತ್ಯೆ ಮಾಡಿದ್ದರು. ಪ್ರಕರಣದಲ್ಲಿ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ 16 ಮಂದಿಯನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣ ಪೊಲೀಸರು ಬಂಧಿಸಿದ್ದಾರೆ. ಜೂನ್ 15ರ ಶನಿವಾರ ಆರೋಪಿಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಕೋರ್ಟ್ ಮತ್ತೆ 5 ದಿನಗಳ ಕಾಲ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದೆ. ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಿರುವ ಪೊಲೀಸರು ಕೃತ್ಯಕ್ಕೆ ಸಂಬಂಧಿಸಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಮೃತ ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner