Kichcha Sudeep: ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಕೇಸ್, 10 ಕೋಟಿ ಪರಿಹಾರ ಕೇಳಿದ ಸುದೀಪ್; ಲೀಗಲ್ ನೋಟೀಸ್ ಕಾಪಿ ಇಲ್ಲಿದೆ
ಮುಂಗಡ ಹಣ ಪಡೆದು ಕಾಲ್ ಶೀಟ್ ನೀಡದೇ ನಟ ಸುದೀಪ್ ಸತಾಯಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಆರೋಪ ಮಾಡಿದ್ದ ನಿರ್ಮಾಪಕ ಎಂ.ಎನ್ ಕುಮಾರ್ ವಿರುದ್ಧ ಇದೀಗ ಕಿಚ್ಚ ಸುದೀಪ್, ಲೀಗಲ್ ಸ್ ರವಾನಿಸಿದ್ದಾರೆ. ಮಾನ ಹಾನಿ ಮಾಡಿದ್ದಕ್ಕೆ ಪರಿಹಾರ ರೂಪದಲ್ಲಿ 10 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.
Kichcha Sudeep: ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್ ಕುಮಾರ್ ನಡುವೆ ಸದ್ಯಕ್ಕೆ ಯಾವುದೂ ಸರಿಯಿಲ್ಲ. ಒಟ್ಟಿಗೆ ಈ ನಟ ಮತ್ತು ನಿರ್ಮಾಪಕ ಜೋಡಿ ಹಲವು ಸಿನಿಮಾ ಮಾಡಿದ್ದರೂ, ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವಿಚಾರವಾಗಿ ಎನ್ ಕುಮಾರ್, ಸುದೀಪ್ ವಿರುದ್ಧ ತಿರುಗಿ ಬಿದ್ದಿದ್ದರು. ಬಹಿರಂಗವಾಗಿ ಸುದ್ದಿಗೋಷ್ಠಿ ಆಯೋಜಿಸಿ ಮುಂಗಡ ಹಣ ಪಡೆದು, ಸಿನಿಮಾ ಕಾಲ್ ಶೀಟ್ ನೀಡುತ್ತಿಲ್ಲ ಎಂದು ಆರೋಪಗಳ ಸುರಿಮಳೆಗೆರೆದಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್, ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪ ಮಾಡಿರುವ ನಿರ್ಮಾಪಕ ಎಂ.ಎನ್ ಕುಮಾರ್ ಮತ್ತು ಎಂ.ಎನ್ ಸುರೇಶ್‌ಗೆ ಸುದೀಪ್ ಪರ ವಕೀಲರು ನೋಟೀಸ್ ರವಾನಿಸಿದ್ದಾರೆ. ನೋಟಿಸ್‌ನಲ್ಲಿ ಸುದೀಪ್ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡಿದ್ದು, ಈ ಕೂಡಲೇ ಕ್ಷಮೆ ಕೇಳಿ, 10 ಕೋಟಿ ಪರಿಹಾರ ಒದಗಿಸಬೇಕು ಎಂದು ನೋಟಿಸ್ ರವಾನಿಸಿದ್ದಾರೆ.
ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಎಲ್ಲ ಸುದ್ದಿಗಳನ್ನು ತೆಗೆಸುವುದರ ಜತೆಗೆ ಬೇಷರತ್ ಕ್ಷಮೆಯಾಚಿಸಬೇಕು. ಜತೆಗೆ 10 ಕೋಟಿ ಪರಿಹಾರವನ್ನೂ ನೀಡಬೇಕು. ಒಂದು ಪಕ್ಷ ಇಲ್ಲವಾದರೆ, ಈ ಕೂಡಲೇ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮತ್ತು ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ನಿರ್ಮಾಪಕ ಎಂ.ಎನ್ ಕುಮಾರ್ ಮತ್ತು ಎಂ.ಎನ್ ಸುರೇಶ್ ವಿರುದ್ಧ ನೋಟೀಸ್‌ನಲ್ಲಿ ನಮೂದಿಸಲಾಗಿದೆ.
ನೋಟೀಸ್‌ನಲ್ಲೇನಿದೆ?
ಅಪಾರ ಅಭಿಮಾನಿ ಬಳಗವನ್ನು ಹೊಂದಿ, ತಮ್ಮ ವ್ಯಕ್ತಿತ್ವ ಮೂಲಕವೇ ಇತರರಿಗೂ ಸ್ಫೂರ್ತಿಯಾಗಿರುವ ಶ್ರೀ ಸುದೀಪ್ ಅವರು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 2 ದಶಕ ಪೂರೈಸಿದ್ದಾರೆ. ತಮ್ಮ ಅತ್ಯುತ್ತಮ ಕೆಲಸಗಳಿಂದಲೇ ನಾಡಿನ ಪ್ರತಿ ಮನೆಮನಗಳಲ್ಲೂ ಜನಜನಿತರಾಗಿದ್ದಾರೆ. ಇವರ ಈ ವೃತ್ತಿ ಬದುಕಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಸಮ್ಮಾನಗಳೂ ಲಭಿಸಿವೆ. ಹೀಗಿರುವಾಗ ನೀವು ನಮ್ಮ ಕಕ್ಷಿದಾರರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಅವರ ಘನತೆಗೆ ಧಕ್ಕೆ ತಂದಿದ್ದೀರಿ.
ಕಿಚ್ಚನ ಸಿನಿಮಾದಿಂದ ಹಿಂದೆ ಸರಿದ್ರಾ ನಿರ್ಮಾಪಕರು?
ಪ್ರೆಸ್ ಮೀಟ್ ಮೂಲಕ ಸುದೀಪ್ ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿದ್ದರಿಂದ, ಇದು ಕೇವಲ ಅವರ ಕುಟುಂಬ ಮೇಲೆ ಮಾತ್ರವಲ್ಲದೆ, ಅವರ ಅಪಾರ ಅಭಿಮಾನಿಗಳಿಗೂ ಇದು ಬೇಸರ ಉಂಟು ಮಾಡಿದೆ. ಸಾಮಾಜಿಕ ಜೀವನದಲ್ಲಿ ಇರುವವ ವ್ಯಕ್ತಿಯ ಮಾನವನ್ನು ಬಹಿರಂಗವಾಗಿ ಹರಾಜು ಹಾಕಿದ್ದೀರಿ. ಇದರಿಂದ ಅವರ ಸಿನಿಮಾ ವೃತ್ತಿ ಮತ್ತು ವೈಯಕ್ತಿಕ ಜೀವನದ ಮೇಲೆಯೂ ಗಂಭೀರ ಪರಿಣಾಮ ಬೀರಿದೆ. ಈ ಪ್ರಕರಣದಿಂದ ಮಾನಸಿಕವಾಗಿಯೂ ಕುಗ್ಗಿದ್ದಾರೆ.
ಈಗಾಗಲೇ ಸಿನಿಮಾ ವಿಚಾರಕ್ಕೆ ಸುದೀಪ್ ಅವರೊಂದಿಗೆ ಚರ್ಚೆ ಮಾಡಿದ್ದ ಒಂದಷ್ಟು ನಿರ್ಮಾಪಕರು, ಇದೀಗ ಈ ಪ್ರಕರಣದಿಂದ ಹೆದರಿ, ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ. ಇದೆಲ್ಲದಕ್ಕೂ ಈ ನಿಮ್ಮ ಸುಳ್ಳು ಆರೋಪಗಳೇ ಕಾರಣ. ಈ ಹಿನ್ನೆಲೆಯಲ್ಲಿ ನಮ್ಮ ಕಕ್ಷಿದಾರರ ಮಾನ ಹಾನಿ ಮಾಡಿದ್ದಕ್ಕೆ ಮತ್ತು ಸುಳ್ಳು ಆರೋಪಗಳನ್ನು ಹೊರಿಸಿದ್ದಕ್ಕೆ ಪರಿಹಾರದ ರೂಪದಲ್ಲಿ 10 ಕೋಟಿ ನೀಡಿ ಹಾನಿಯನ್ನು ತುಂಬಿಕೊಡಬೇಕು ಎಂದು ನೋಟಿಸ್‌ನಲ್ಲಿ ನಮೂದಿಸಲಾಗಿದೆ.
ನಿರ್ಮಾಪಕ ಎಂ.ಎನ್. ಕುಮಾರ್ ಮತ್ತು ಎಂ.ಎನ್ ಸುರೇಶ್‌ಗೆ ಕಳುಹಿಸಿದ ಲೀಗಲ್ ನೋಟೀಸ್‌ನ ಪಿಡಿಎಫ್ ಕಾಪಿ
ವಿಭಾಗ