Kichcha Sudeep: ನೆನಪಿರಲಿ, ಇಬ್ರೂ ನನ್ನ ನಿರ್ಧಾರಕ್ಕೆ ಬೆಲೆಕೊಟ್ಟರೆ ಮಾತ್ರ ಮುಂದುವರಿಯುವೆ; ಸುದೀಪ್‌- ಕುಮಾರ್‌ ಬಗ್ಗೆ ರವಿಚಂದ್ರನ್‌ ಮಾತು
ಕನ್ನಡ ಸುದ್ದಿ  /  ಮನರಂಜನೆ  /  Kichcha Sudeep: ನೆನಪಿರಲಿ, ಇಬ್ರೂ ನನ್ನ ನಿರ್ಧಾರಕ್ಕೆ ಬೆಲೆಕೊಟ್ಟರೆ ಮಾತ್ರ ಮುಂದುವರಿಯುವೆ; ಸುದೀಪ್‌- ಕುಮಾರ್‌ ಬಗ್ಗೆ ರವಿಚಂದ್ರನ್‌ ಮಾತು

Kichcha Sudeep: ನೆನಪಿರಲಿ, ಇಬ್ರೂ ನನ್ನ ನಿರ್ಧಾರಕ್ಕೆ ಬೆಲೆಕೊಟ್ಟರೆ ಮಾತ್ರ ಮುಂದುವರಿಯುವೆ; ಸುದೀಪ್‌- ಕುಮಾರ್‌ ಬಗ್ಗೆ ರವಿಚಂದ್ರನ್‌ ಮಾತು

ಕಿಚ್ಚ ಸುದೀಪ್‌ ಮತ್ತು ಎಂ. ಎನ್‌ ಕುಮಾರ್‌ ಹಣಕಾಸಿನ ವಿಚಾರಕ್ಕೆ ನಟ ರವಿಚಂದ್ರನ್‌ ಮಧ್ಯಪ್ರವೇಶಿಸಿದ್ದಾರೆ. ಈಗಾಗಲೇ ಕುಮಾರ್‌ ಅವರ ಮಾತನ್ನು ಕೇಳಿರುವ ಅವರು, ಶೀಘ್ರದಲ್ಲಿ ಸುದೀಪ್‌ ಅವರನ್ನೂ ಭೇಟಿ ಮಾಡಲಿದ್ದಾರೆ.

ನೆನಪಿರಲಿ, ಇಬ್ರೂ ನನ್ನ ನಿರ್ಧಾರಕ್ಕೆ ಬೆಲೆಕೊಟ್ಟರೆ ಮಾತ್ರ ಮುಂದುವರಿಯುವೆ; ಸುದೀಪ್‌- ಕುಮಾರ್‌ ಬಗ್ಗೆ ರವಿಚಂದ್ರನ್‌ ಮಾತು
ನೆನಪಿರಲಿ, ಇಬ್ರೂ ನನ್ನ ನಿರ್ಧಾರಕ್ಕೆ ಬೆಲೆಕೊಟ್ಟರೆ ಮಾತ್ರ ಮುಂದುವರಿಯುವೆ; ಸುದೀಪ್‌- ಕುಮಾರ್‌ ಬಗ್ಗೆ ರವಿಚಂದ್ರನ್‌ ಮಾತು

Kichcha Sudeep: ಕಳೆದ 15 ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದಿಗೆ ಕಾರಣವಾದ ಸುದೀಪ್‌ ಮತ್ತು ನಿರ್ಮಾಪಕ ಎನ್‌ ಕುಮಾರ್‌ ಹಣಕಾಸಿನ ವ್ಯವಹಾರ ಇದೀಗ ಕ್ರೇಜಿಸ್ಟಾರ್‌ ರವಿಚಂದ್ರನ್‌ ಮನೆಯಂಗಳ ತಲುಪಿದೆ. ಒಟ್ಟಿಗೆ ಕುಳಿತು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ಬಂದ ಬಳಿಕ ರವಿಚಂದ್ರನ್‌ ಮತ್ತು ಶಿವರಾಜ್‌ಕುಮಾರ್‌ ಮಧ್ಯಸ್ಥಿಕೆ ವಹಿಸಿದ್ದಾರೆ. ಅದರಂತೆ ರವಿಚಂದ್ರನ್‌ ನಿವಾಸಕ್ಕೆ ತೆರಳಿದ ಕುಮಾರ್‌, ತಮ್ಮ ವರ್ಷನ್‌ ಏನೆಂಬುದನ್ನು ಅವರ ಮುಂದಿಟ್ಟಿದ್ದಾರೆ.

ನನ್ನ ಮಾತಿಗೆ ಇಬ್ಬರೂ ಬದ್ಧರಾಗಬೇಕು

ರವಿಚಂದ್ರನ್‌ ಜತೆಗೆ ಸುದೀರ್ಘವಾಗಿ ಮಾತುಕತೆ ನಡೆಸಿರುವ ಕುಮಾರ್‌, ಎಲ್ಲವನ್ನೂ ಎಳೆ ಎಳೆಯಾಗಿ ವಿವರಿಸಿದ್ದಾರೆ. ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರವಿಚಂದ್ರನ್‌, "ಸದ್ಯಕ್ಕೆ ಪರಿಸ್ಥಿತಿ ತಣ್ಣಗಾಗಬೇಕು. ಏನೆಲ್ಲ ನಡೆದಿದೆ ಎಂಬುದನ್ನು ಕುಮಾರ್‌ ವಿವರಿಸಿದ್ದಾರೆ. ಈ ಬಗ್ಗೆ ನಾನು ಸುದೀಪ್‌ ಜತೆಗೂ ಮಾತನಾಡಬೇಕಿದೆ. ಇಬ್ಬರ ಕಥೆಯನ್ನೂ ಕೇಳುತ್ತೇನೆ. ಹಾಗೆ ಕೇಳಿದ ಬಳಿಕ ನನ್ನ ನಿರ್ಧಾರಕ್ಕೆ ಇಬ್ಬರೂ ಬದ್ಧರಾಗಬೇಕು. ನನ್ನ ಮೇಲೆ ಇಬ್ಬರಿಗೂ ನಂಬಿಕೆ ಇರಬೇಕು" ಎಂದಿದ್ದಾರೆ ರವಿಚಂದ್ರನ್‌.

ಇದು 20 ವರ್ಷದ ಕಥೆಯಂತಿದೆ..

"ಕುಮಾರ್‌ ಹೇಳುವುದನ್ನೆಲ್ಲ ಕೇಳುತ್ತಿದ್ದರೆ 20 ವರ್ಷದ ಕಥೆಯಂತಿದೆ. ಆದರೆ, ನಾನು ಸುದೀಪ್‌ ಜತೆಗೂ ಮಾತನಾಡುತ್ತೇನೆ. ಕುಮಾರ್‌ ಜತೆಗೆ ಮಾತನಾಡಿದಂತೆ, ಸುದೀಪ್‌ ವಿವರವನ್ನೂ ಕೇಳುತ್ತೇನೆ. ಈ ವಿಚಾರವಾಗಿ ಇಬ್ಬರೂ ನೊಂದಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರೂ ಸರಿಯಾಗಿರಬೇಕು, ಒಕ್ಕೂಟದಲ್ಲಿ ಒಗ್ಗಟ್ಟಿರಬೇಕು. ಸಮಸ್ಯೆ ಪರಿಹಾರಕ್ಕೆ ಬಗೆಹರಿಸುತ್ತೇನೆ. ಪರಿಹಾರ ಹುಡುಕುತ್ತೇನೆ. ಒಬ್ಬರಿಗೊಬ್ಬರು ಟೀಕೆ ಮಾಡುವುದನ್ನು ನಿಲ್ಲಿಸಿ. ನಾನು ನನ್ನ ತೀರ್ಮಾನ ಹೇಳಿದ ಮೇಲೂ ಇಬ್ಬರೂ ಇದನ್ನೇ ಮುಂದುವರಿಸಿಕೊಂಡು ಹೋದರೆ, ನಾನೂ ಇದರಲ್ಲಿ ಎಂಟ್ರಿಯಾಗುವುದಿಲ್ಲ. ಈ ತಮಾಷೆ ನೋಡಲು ನನಗೆ ಸಮಯವಿಲ್ಲ" ಎಂದಿದ್ದಾರೆ.

ಇಲ್ಲಿಗೆ ಇದೆಲ್ಲ ಮುಗೀಬೇಕು

"ಚಿತ್ರರಂಗದಲ್ಲಿ ಜಗಳ ಎಂಬುದು ಹೊಸದೇನಲ್ಲ. ಹಾಗೆಂದ ಮಾತ್ರಕ್ಕೆ ಹಳೆಯದನ್ನು ಕೆದಕಬಾರದು. ಇಬ್ಬರ ನಡುವಿನ ಸಮಸ್ಯೆಗೆ ಮುಕ್ತಿ ನೀಡುವ ಉದ್ದೇಶ ನನ್ನದು. ಅದು ಜಾಸ್ತಿ ಆಗಬಾರದು. ಎಲ್ಲರೂ ಒಟ್ಟಿಗೆ, ಒಗ್ಗಟ್ಟಾಗಿ ಹೋಗಬೇಕು" ಎಂದೂ ಹೇಳಿದ್ದಾರೆ ರವಿಚಂದ್ರನ್.‌

Whats_app_banner