Kichcha Sudeep: ರವಿಚಂದ್ರನ್‌ ನನಗಿಂತ ಸೀನಿಯರ್‌, ಸುದೀಪ್‌ ವಿಚಾರವಾಗಿ ಅವರೇ ನಿರ್ಧಾರ ತೆಗೆದುಕೊಳ್ಳಲಿ; ಶಿವಣ್ಣ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ಮನರಂಜನೆ  /  Kichcha Sudeep: ರವಿಚಂದ್ರನ್‌ ನನಗಿಂತ ಸೀನಿಯರ್‌, ಸುದೀಪ್‌ ವಿಚಾರವಾಗಿ ಅವರೇ ನಿರ್ಧಾರ ತೆಗೆದುಕೊಳ್ಳಲಿ; ಶಿವಣ್ಣ ಪ್ರತಿಕ್ರಿಯೆ

Kichcha Sudeep: ರವಿಚಂದ್ರನ್‌ ನನಗಿಂತ ಸೀನಿಯರ್‌, ಸುದೀಪ್‌ ವಿಚಾರವಾಗಿ ಅವರೇ ನಿರ್ಧಾರ ತೆಗೆದುಕೊಳ್ಳಲಿ; ಶಿವಣ್ಣ ಪ್ರತಿಕ್ರಿಯೆ

ಸುದೀಪ್‌ ವಿಚಾರವಾಗಿ ಶಿವರಾಜ್‌ಕುಮಾರ್‌ ಸಹ ಮಾತನಾಡಲಿ ಎಂದು ರವಿಚಂದ್ರನ್‌ ಹೇಳುತ್ತಿದ್ದಂತೆ, ಅದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಚಿತ್ರರಂಗದಲ್ಲಿ ರವಿಚಂದ್ರನ್‌ ನನಗಿಂತ ನಾಲ್ಕು ವರ್ಷ ಸೀನಿಯರ್.‌ ಈ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳಲಿ ಎಂದಿದ್ದಾರೆ.

ರವಿಚಂದ್ರನ್‌ ನನಗಿಂತ ಸೀನಿಯರ್‌, ಸುದೀಪ್‌ ವಿಚಾರವಾಗಿ ಅವರೇ ನಿರ್ಧಾರ ತೆಗೆದುಕೊಳ್ಳಲಿ; ಶಿವರಾಜ್‌ಕುಮಾರ್‌ ಪ್ರತಿಕ್ರಿಯೆ
ರವಿಚಂದ್ರನ್‌ ನನಗಿಂತ ಸೀನಿಯರ್‌, ಸುದೀಪ್‌ ವಿಚಾರವಾಗಿ ಅವರೇ ನಿರ್ಧಾರ ತೆಗೆದುಕೊಳ್ಳಲಿ; ಶಿವರಾಜ್‌ಕುಮಾರ್‌ ಪ್ರತಿಕ್ರಿಯೆ

Kichcha Sudeep: ಕಿಚ್ಚ ಸುದೀಪ್‌ ಮತ್ತು ನಿರ್ಮಾಪಕ ಎಂ.ಎನ್‌. ಕುಮಾರ್‌ ನಡುವಿನ ಹಣಕಾಸಿನ ವಿಚಾರ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಸುದೀಪ್‌ ಒಂದು ಹೆಜ್ಜೆ ಮುಂದೆ ಹೋಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇತ್ತ ಕುಮಾರ್‌ ಸಹ ವಕೀಲರನ್ನು ನೇಮಿಸಿಕೊಂಡು, ಕಾನೂನು ಮೂಲಕವೇ ಇತ್ಯರ್ಥ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಹೀಗಿರುವಾಗಲೇ ಈ ಮುಸುಕಿನ ಗುದ್ದಾಟದ ನಡುವೆ ಇದೀಗ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪ್ರವೇಶಿಸಿದ್ದಾರೆ. ಈಗಾಗಲೇ ಕುಮಾರ್‌ ಜತೆಗೂ ಮಾತುಕತೆ ನಡೆಸಿ ಸಮಸ್ಯೆ ಆಲಿಸಿದ್ದಾರೆ.

ರವಿಚಂದ್ರನ್‌ ಅವರ ದೊಡ್ಡಗುಣವಿದು

ಹೀಗೆ ಸಮಸ್ಯೆ ಎದುರಾಗಿದ್ದೇ ತಡ ಇತ್ಯರ್ಥಕ್ಕೆ ಮುಂದಾಗಿರುವ ರವಿಚಂದ್ರನ್‌, ಶಿವರಾಜ್‌ಕುಮಾರ್‌ ಅವರನ್ನೂ ಈ ವಿಚಾರವಾಗಿ ಭೇಟಿಯಾಗಿ. ಅವರ ಜತೆಗೂ ಮಾತನಾಡಿ. ಅದು ದೊಡ್ಮನೆ ಎಂದು ಹೇಳಿದ್ದರು. ರವಿಚಂದ್ರನ್‌ ಅವರ ಈ ಮಾತಿಗೆ ಪ್ರತಿಕ್ರಿಯಿಸಿರುವ ಶಿವಣ್ಣ, ಈ ನಡುವೆ ಸುದೀಪ್‌ ಮತ್ತು ನನ್ನ ನಡುವೆ ಒಳ್ಳೆಯ ಸ್ನೇಹವಿದೆ. ನಾವು ಫ್ಯಾಮಿಲಿ ಫ್ರೆಂಡ್ಸ್‌ ರೀತಿಯಿದ್ದೇವೆ. ಇಬ್ಬರ ನಡುವೆ ಏನೇನು ಘಟಿಸಿದೆಯೋ ಅದು ಸುದೀಪ್‌ಗೂ ಮತ್ತು ಕುಮಾರ್‌ಗೂ ಗೊತ್ತಿರುತ್ತದೆ. ಹೀಗಿರುವಾಗ ರವಿಚಂದ್ರನ್‌ ನನ್ನ ಜತೆ ಮಾತನಾಡಿ ಎಂದಿದ್ದಾರೆ. ಅದು ಅವರ ದೊಡ್ಡಗುಣ ತೋರಿಸುತ್ತೆ" ಎಂದಿದ್ದಾರೆ.

ರವಿ ನನಗಿಂತ ಸೀನಿಯರ್‌ ಅವರೇ ನಿರ್ಧರಿಸಲಿ

ಸುದೀಪ್‌ ಮತ್ತು ಕುಮಾರ್‌ ನಡುವಿನ ಈ ವಿಚಾರ ನನಗಿಂತ ಹೆಚ್ಚಾಗಿ ರವಿಚಂದ್ರನ್‌ಗೆ ಗೊತ್ತಿರುತ್ತದೆ. ಅದೂ ಅಲ್ಲದೆ ರವಿಚಂದ್ರನ್‌ ನನಗಿಂತ ಅವರೇ ಸೀನಿಯರ್. ನನಗಿಂತ ನಾಲ್ಕು ವರ್ಷ ಮುಂಚಿತವಾಗಿಯೇ ಚಿತ್ರರಂಗಕ್ಕೆ ಅವರು ಆಗಮಿಸಿದ್ದಾರೆ. ಅವರು ಏನು ಹೇಳುತ್ತಾರೋ ಅದನ್ನು ಕೇಳಬೇಕು. ನಾನು ಏನನ್ನೂ ಹೇಳೋಕೆ ಆಗಲ್ಲ. ಕೋರ್ಟ್‌ ಕಟಕಟೆ ಎನ್ನದೆ ಕುಳಿತು ಮಾತನಾಡಿ ಇದನ್ನು ಬಗೆಹರಿಸಿಕೊಳ್ಳೋಣ. ಏಕೆಂದರೆ ಇಡೀ ಚಿತ್ರರಂಗ ಒಂದು ಕುಟುಂಬ ಇದ್ದಂತೆ. ಕಲಾವಿದರೆಲ್ಲ ಒಂದೇ ಕುಟುಂಬ. ನಾವು ಕಲಾವಿದರೆಲ್ಲ ಒಂದೆಡೆ ಸೇರಿದಾಗ ಬೇರೆ ಬೇರೆ ಮಾತನಾಡಿದರೂ, ದುಡ್ಡಿನ ವಿಚಾರ ಮಾತನಾಡಲ್ಲ" ಎಂದಿದ್ದಾರೆ ಶಿವಣ್ಣ.

ರವಿಚಂದ್ರನ್‌ ಪ್ರತಿಕ್ರಿಯೆ

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರವಿಚಂದ್ರನ್‌ ಸಹ ಮಾತನಾಡಿದ್ದರು. "ಸದ್ಯಕ್ಕೆ ಪರಿಸ್ಥಿತಿ ತಣ್ಣಗಾಗಬೇಕು. ಏನೆಲ್ಲ ನಡೆದಿದೆ ಎಂಬುದನ್ನು ಕುಮಾರ್‌ ವಿವರಿಸಿದ್ದಾರೆ. ಈ ಬಗ್ಗೆ ನಾನು ಸುದೀಪ್‌ ಜತೆಗೂ ಮಾತನಾಡಬೇಕಿದೆ. ಇಬ್ಬರ ಕಥೆಯನ್ನೂ ಕೇಳುತ್ತೇನೆ. ಹಾಗೆ ಕೇಳಿದ ಬಳಿಕ ನನ್ನ ನಿರ್ಧಾರಕ್ಕೆ ಇಬ್ಬರೂ ಬದ್ಧರಾಗಬೇಕು. ನನ್ನ ಮೇಲೆ ಇಬ್ಬರಿಗೂ ನಂಬಿಕೆ ಇರಬೇಕು"

"ನಿರ್ಮಾಪಕ ಕುಮಾರ್‌ ಹೇಳುವುದನ್ನೆಲ್ಲ ಕೇಳುತ್ತಿದ್ದರೆ 20 ವರ್ಷದ ಕಥೆಯಂತಿದೆ. ಆದರೆ, ನಾನು ಸುದೀಪ್‌ ಜತೆಗೂ ಮಾತನಾಡುತ್ತೇನೆ. ಸುದೀಪ್‌ ವಿವರವನ್ನೂ ಕೇಳುತ್ತೇನೆ. ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರೂ ಸರಿಯಾಗಿರಬೇಕು, ಸಮಸ್ಯೆ ಪರಿಹಾರಕ್ಕೆ ಬಗೆಹರಿಸುತ್ತೇನೆ. ಪರಿಹಾರ ಹುಡುಕುತ್ತೇನೆ. ಒಬ್ಬರಿಗೊಬ್ಬರು ಟೀಕೆ ಮಾಡುವುದನ್ನು ನಿಲ್ಲಿಸಿ. ನಾನು ನನ್ನ ತೀರ್ಮಾನ ಹೇಳಿದ ಮೇಲೂ ಇಬ್ಬರೂ ಇದನ್ನೇ ಮುಂದುವರಿಸಿಕೊಂಡು ಹೋದರೆ, ನಾನೂ ಇದರಲ್ಲಿ ಎಂಟ್ರಿಯಾಗುವುದಿಲ್ಲ" ಎಂದಿದ್ದರು.

Whats_app_banner